ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ 20/06/2022 ರಂದು ರಾತ್ರಿ 9:45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ  ಲೀಲಾ(55), ಗಂಡ:  ಜಯಕರ ಪೂಜಾರಿ ,ವಾಸ: ಮನೆ ನಂಬ್ರ 19-55 ಮದ್ವನಗರ  ಮೂಡುಬೆಟ್ಟು  ಕೊಡವೂರು ಗ್ರಾಮ ಇವರ ನೆರೆಮನೆಯ ಯೋಗೀಶ ಎಂಬುವವರು ಕರೆ ಮಾಡಿ  ಪಿರ್ಯಾದಿದಾರರ ತಮ್ಮ ಶಂಕರ ಮೂಡುಬೆಟ್ಟುವಿನ ನಾಗನಕಟ್ಟೆ  ರಸ್ತೆ ಬದಿಯಲ್ಲಿ  ಮನೆಗೆ ನಡೆದುಕೊಂಡು  ಬರುತ್ತಿರುವಾಗ ರಾತ್ರಿ 9:00 ಗಂಟೆಗೆ  ಉಡುಪಿ ಕಡೆಯಿಂದ  ಮೂಡುಬೆಟ್ಟು ಕಡೆಗೆ ಮಾರುತಿ  ಓಮಿನಿ  ಕಾರು  ಅತಿವೇಗ  ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಎಡಬದಿಗೆ  ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಮ್ಮ ಶಂಕರ ರವರಿಗೆ  ಢಿಕ್ಕಿ ಹೊಡೆದ ಪರಿಣಾಮ  ಶಂಕರ ರವರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು ,ಮುಖ,ಕೈ,ಕಾಲುಗಳಿಗೆ  ರಕ್ತಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿರುತ್ತಾರೆ. ಅಪಘಾತಗೊಳಿಸಿದ ಓಮಿನಿ ಕಾರ ನಂಬ್ರ KA-19-P-1556  ಆಗಿದ್ದು, ಈ ಅಪಘಾತಕ್ಕೆ  KA-19-P-1556 ಕಾರಿನ ಚಾಲಕನ ಅತೀವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯೆ ಕಾರಣವಾಗಿರುತ್ತದೆ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಪಿ ಸುಭಾಷ್ ಕಾಮತ್ (52), ತಂದೆ: ದಿ. ಪಿ ಸದಾನಂದ ಕಾಮತ್, ವಾಸ: ಗಣೇಶ ಕೃಪಾ, ಪುಲ್ಕೇರಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 21/06/2022 ರಂದು ಸಾಣೂರಿನಿಂದ ಕಾರಿನಲ್ಲಿ ಕಾರ್ಕಳಕ್ಕೆ ಬರುತ್ತಿದ್ದು ಬೆಳಗ್ಗೆ 09:00 ಗಂಟೆಗೆ ಸಾಣೂರು ಗ್ರಾಮದ ಮಠದಬೆಟ್ಟು ಬಸ್ಟ್ಯಾಂಡ್ ಹತ್ತಿರ ತಲುಪುವಾಗ ಕಾರ್ಕಳ ಕಡೆಯಿಂದ ಸಾಣೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ KA-20-AB-3742 ನೇ ನೋಂದಣಿ ಸಂಖ್ಯೆಯ ಮಹೇಂದ್ರ ಪಿಕಪ್ ವಾಹನವನ್ನು ಸಿಬಿಲ್ ಜೋಶ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ಸೈಕಲ್ ನ್ನು ದೂಡಿಕೊಂಡು ಹೋಗುತ್ತಿದ್ದ ಸತೀಶ್ ಪೈ (70) ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ನೊಂದಿಗೆ ಸತೀಶ್ ಪೈ ರವರು ರಸ್ತೆಗೆ ಬಿದ್ದಿದ್ದು, ತಲೆಗೆ ರಕ್ತ ಬರುವ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಸತೀಶ್ ಪೈ ರವರನ್ನು ಕಾರ್ಕಳ ನಿಟ್ಟೆ ಗಾಜರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2022  ಕಲಂ:  279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀವತ್ಸ ರಾವ್ (25), ತಂದೆ: ಕೃಷ್ಣಮೂರ್ತಿ  ರಾವ್, ವಾಸ: ಯಶೋಧ ನಿಲಯ ,ಪಡುಬೈಲೂರು, 76 ಬಡಗುಬೆಟ್ಟು ,  ಗ್ರಾಮ , ಕಿನ್ನಿಮುಲ್ಕಿ ರೋಡು ಉಡುಪಿ ಇವರ ತಂದೆ ಕೃಷ್ಣಮೂರ್ತಿರಾವ್ (56) ರವರು ಕೈಮೂಳೆ ಮುರಿತವಾಗಿ ಇನ್ನು ಮುಂದಕ್ಕೆ ಕೆಲಸ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕಾಗಿ  ಅಥಾವ ಇನ್ನಾವುದೋ ತನ್ನ ವೈಯಕ್ತಿಕ ಕಾರಣದಿಂದಾಗಿ ಮಾನಸಿಕವಾಗಿ ನೊಂದು ದಿನಾಂಕ 17/06/2022 ರಂದು  ಮಧ್ಯಾಹ್ನ 3:00 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ಎಂಬಲ್ಲಿ  ವಿಷ ಕುಡಿದಿದ್ದು ಅಲ್ಲಿನ ಅಕ್ಕಪಕ್ಕದವರು ಕೆಎಂಸಿ ಮಣಿಪಾಲ ಅಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21/06/2022 ರಂದು ಮಧ್ಯಾಹ್ನ 3:05 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಬ್ದುಲ್ ಖಾದರ್ ( 57) , ತಂದೆ: ಅಜುಬುದ್ದಿನ್, ವಾಸ: ಜುವಾ ಮೆನ್ಷನ್ 8ನೇ ಕ್ರಾಸ್, ಪೆರ್ವಾಜೆ ಪತ್ತೊಂಜಿಕಟ್ಟೆ ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ಇವರು  ದಿನಾಂಕ 21/06/2022 ರಂದು ಎಂದಿನಂತೆ ಕಾರ್ಕಳದ ಪೇಟೆಗೆ ಕಾರ್ಕಳ ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಜುವಾ ಮೆನ್ಷನ್ 8ನೇ ಕ್ರಾಸ್ ನಲ್ಲಿರುವ ತಮ್ಮ ಮನೆಯಿಂದ ನಡೆದುಕೊಂಡು ಹೊರಟು ಸಂಜೆ 4:00 ಗಂಟೆಗೆ ಮನೆಯ ಎದುರುಗಡೆ ತೋಡಿನ ಬಳಿ ಬರುತ್ತಾ  ಹರಿಯುವ ತೋಡಿನ ಕೆಳಗಡೆ ನೀರಿನ ಬಳಿ ನೋಡಿದಾಗ ಒಂದು ನವಜಾತ ಶಿಶುವಿನ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು,  ಯಾರೋ ಅಪಚಿತರು ಮಗು ಹುಟ್ಟಬಾರದೆಂಬ ಉದ್ದೇಶದಿಂದಲೋ ಅಥವಾ ಮಗು ಹುಟ್ಟಿದ ಬಳಿಕ ಸಾಯುವ ಉದ್ದೇಶದಿಂದಲೋ ಅಥವಾ ಹುಟ್ಟಿದ ಮಗುವಿನ ಜನನದ ರಹಸ್ಯವನ್ನು  ಬಚ್ಚಿಡುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿ ಬಳಿಕ ಸಾಕ್ಷ್ಯಾಧಾರವನ್ನು ನಾಶ ಮಾಡುವ ಉದ್ದೇಶದಿಂದ ನವಜಾತಶಿಶುವಿನ ಮೃತದೇಹವನ್ನು ಪಿರ್ಯಾದಿದಾರರ ಮನೆಯ ಬಳಿ ಹರಿಯುವ ನೀರಿನ ತೋಡಿಗೆ  ಬಿಸಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2022  ಕಲಂ: 316, 318, 201 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ದಯಕರಗೌಡ (54), ತಂದೆ:ದಿ.ಬಾಬಗೌಡ, ವಾಸ: ಬಲ್ಚಾರ ಮನೆ ಕಬ್ಬಿನಾಲೆ ಗ್ರಾಮ ಹೆಬ್ರಿ ತಾಲೂಕು ಇವರು  ಹೈನುಗಾರಿಕೆ ಕೃಷಿ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ದಿನಾಂಕ 21/06/2022 ರಂದು ಮುಂಜಾನೆ 4:00 ಗಂಟೆ ಸಮಯಕ್ಕೆ ಕಬ್ಬಿನಾಲೆ ಗ್ರಾಮದ ಬಾಲ್ಚಾರು ಎಂಬಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳು ಕೂಗುತ್ತಿರುವುದನ್ನು ಗಮನಿಸಿ ಪಿರ್ಯಾದಿದಾರರು ಮತ್ತು ಅವರ ಅಳಿಯ ಪ್ರಸಾದ ರವರು ಎದ್ದು ಮನೆಯಿಂದ ದನದ ಕೊಟ್ಟಿಗೆಯ ಬಳಿ ಬಂದು ಟಾರ್ಚ್ ಲೈಟ್ ನ್ನು ಬಿಟ್ಟು ನೋಡಿದಾಗ ದನದ ಕೊಟ್ಟಿಗೆಯ ಬಳಿ ಒಂದು ಕಾರು ನಿಂತುಕೊಂಡಿದ್ದು. ನಂತರ ದನದ ಕೊಟ್ಟಿಗೆಗೆ ಟಾರ್ಚ್ ನ್ನು ಬಿಟ್ಟು ನೋಡಿದಾಗ ಯಾರೋ ಮೂರು ಜನರು ಮನೆಯ ಹತ್ತಿರದ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ದನಗಳ ಪೈಕಿ ಎರಡು ದನಗಳನ್ನು ಕಳವು ಮಾಡಿ ಎಳೆದುಕೊಂಡು ಹೋಗುವಾಗ ಪಿರ್ಯಾದಿದಾರರು ಮತ್ತು ಪ್ರಸಾದ ರವರು ಜೋರಾಗಿ ಬೊಬ್ಬೆ ಹಾಕಿ ದನಗಳನ್ನು ಬಿಡಿಸಿಕೊಳ್ಳಲು ಅವರ ಸಮೀಪ ಹೋಗುತ್ತಿರುವಾಗ ಆರೋಪಿತರುಗಳು ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಹೆದರಿಸಿ ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಕಳವು ಮಾಡಿದ ಎರಡು ದನಗಳನ್ನು ವಧೇ ಮಾಡುವ ಬಗ್ಗೆ ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಅವುಗಳನ್ನು ಕಾರಿನಲ್ಲಿ ಹಿಂಸೆ ಆಗುವ ರೀತಿಯಲ್ಲಿ ಯದ್ವಾತದ್ವಾವಾಗಿ ತುಂಬಿಸಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರು ಮತ್ತು ಪ್ರಸಾದ ರವರು ಓಡಿ ಬಂದು ಕಾರನ್ನು ಹಿಂದೆಯಿಂದ  ನೋಡಿದಾಗ ಅದರ ನಂಬ್ರ KA-20-Z -6798 Ritz ಎಂದು ಬರೆದಿರುತ್ತದೆ. ಕಳುವಾದ ಎರಡು ದನಗಳ ಮೌಲ್ಯ 30,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ:379, 506 ಜೊತೆಗೆ 34 ಐಪಿಸಿ, ಕಲಂ: 4,5,7,12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯಿದೆ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬೈಂದೂರು: ಪಿರ್ಯಾದಿದಾರರಾದ ಭವ್ಯ (32), ಗಂಡ: ವಿನೋಧ ಖಾರ್ವಿ, ವಾಸ:ಮುರ್ಡೆಶ್ವರ ಮನೆ ಮಯ್ಯರಕೇರಿ, ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ ಗಂಡ ವಿನೋದ ಖಾರ್ವಿ ರವರು ಮೋಟಾರು ಸೈಕಲ್ ನಲ್ಲಿ  ದಿನಾಂಕ 13/06/2022 ರಂದು ಉಪ್ಪುಂದ ಪೇಟೆಗೆ ಹೋಗಿದ್ದ ಸಮಯ ಆರೋಪಿಗಳಾದ ಚೋಣನ ಮಂಜುನಾಥ ಖಾರ್ವಿ ಮತ್ತು ಅಜ್ಜಯ್ಯನ ಮಂಜುನಾಥ ಖಾರ್ವಿ  ಎಂಬವರು  ಮೋಟಾರು ಸೈಕಲ್ ನಲ್ಲಿ ಉಪ್ಪುಂದ ಪೇಟೆಯಲ್ಲಿ ಕಾಣ ಸಿಕ್ಕಿದ ಸಮಯ ಪಿರ್ಯಾದಿದಾರರ ಗಂಡ ಆರೋಪಿಗಳಲ್ಲಿ ನಮ್ಮ ಮನೆಗೆ ಬರುವ ರಸ್ತೆಯಲ್ಲಿ ನೀರು ತುಂಬಿದೆ, ನೀವುಗಳು ಪಂಚಾಯತ್ ಮುಖಾಂತರ ರಸ್ತೆಗೆ ಮಣ್ಣು ಹಾಕಿಸಿ ಕೊಡುತ್ತೇವೆ ಎಂದು ಹೇಳಿರುತ್ತೀರಿ 6 ತಿಂಗಳು ಕಳೆದರೂ ರಸ್ತೆಗೆ ಮಣ್ಣನ್ನು  ತಂದು ಹಾಕಿರುವುದಿಲ್ಲ ಎಂದು ಹೇಳಿದಾಗ ಆರೋಪಿಗಳು ಏರು ಧ್ವನಿಯಲ್ಲಿ ಮಾತಾಡಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಹೆದರಿಸಿ ಹೋಗಿದ್ದು ರಾತ್ರಿ 8:45 ಗಂಟೆಗೆ  ಪಿರ್ಯಾದಿದಾರರ ಗಂಡ  ವಾಪಾಸ್ಸು ಉಪ್ಪುಂದ ಪೇಟೆಯಿಂದ ಮನೆ ಕಡೆಗೆ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ಉಪ್ಪುಂದ ಗ್ರಾಮದ ಮಯ್ಯರಕೇರಿಯ ಎಸ್ ವಿ ಎಂ ಎಸ್ ಕಂಪೌಂಡ್ ಹತ್ತಿರದ ರಸ್ತೆಯಲ್ಲಿ ಆರೋಪಿಗಳು ಮೋಟಾರು ಸೈಕಲ್ ನಲ್ಲಿ  ಬಂದು ಪಿರ್ಯಾದಿದಾರರ ಗಂಡನನ್ನು ಅಡ್ಡಹಾಕಿ ಅವಾಚ್ಯವಾಗಿ ಬೈದು ಬೈಕಿನಿಂದ ಇಳಿದು ಕೈಗಳಿಂದ ಹೊಡೆದು, ಕಾಲಿನಿಂದ ಹೊಟ್ಟೆಗೆ ತುಳಿದು ಇನ್ನು ಮುಂದಕ್ಕೆ ನಮ್ಮಲ್ಲಿ ಮಣ್ಣನ್ನು ಹಾಕಲು ಹೇಳಿದರೆ  ನಿನ್ನನ್ನುಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು ,  ಹಲ್ಲೆಗೊಳಗಾದ ವಿನೋದ ಖಾರ್ವಿಯವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, 2 ದಿನಗಳ ನಂತರ ವಿನೋದ ಖಾರ್ವಿ ಯವರಿಗೆ ಹಲ್ಲೆಯಿಂದಾಗಿ ಹೊಟ್ಟೆಯಲ್ಲಿ ನೋವು ಜಾಸ್ತಿ ಕಾಣಿಸಿಕೊಂಡಿರುವುದರಿಂದ ವಿನೋದ ಖಾರ್ವಿ ಯವರನ್ನು ದಿನಾಂಕ 15/06/2022 ರಂದು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2022 ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 22-06-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080