ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 17/06/2021 ರಂದು ಸಂಜೆ 17:15 ಗಂಟೆಗೆ ಪಿರ್ಯಾದಿದಾರರಾದ ಶಿವರಾಜ್ (28), ತಂದೆ: ಗಣಪತಿರಾವ್, ವಾಸ: ಪ್ರಗತಿನಗರ 1ನೇ ಕ್ರಾಸ್ ಮಣಿಪಾಲ ಅಲೆವೂರು ಗ್ರಾಮ ಇವರು ತನ್ನ KA-20-EF-9456 ನೇ ಮೊಟಾರು ಸೈಕಲಿನಲ್ಲಿ ಜೊಮ್ಯಾಟೊ ಆರ್ಡರ್ ಪಾರ್ಸಲ್ ತಗೆದುಕೊಂಡು ಪೆರಂಪಳ್ಳಿ ಕಡೆಯಿಂದ ಕಾಯಿನ್ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಪ್ಲಾಟೆನ್ ಕೆಫೆ ಹತ್ತಿರ ಬಂದಾಗ KA-20-EU-6000 ನೇ ಮೊಟಾರು ಸೈಕಲನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿನ  ಹಿಂದಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೊಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಪ್ರಜ್ಞಾಹೀನರಾಗಿದ್ದು ಅವರ ವಾಹನ ಕೂಡಾ ಸಂಪೂರ್ಣವಾಗಿ ಜಖಂಗೊಂಡಿದ್ದು ಅವರು ಚೇತರಿಕೆ ವಿಳಂಬವಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 20/06/2021 ರಂದು ಕುರುಂಬಿಲ ಪೂಜಾರಿ ಎಂಬುವವರು ತನ್ನ ಸೈಕಲ್ ನಲ್ಲಿ ಕರಾವಳಿ ಕಡೆಯಿಂದ ಅಂಬಾಗಿಲು ಕಡೆಗೆ    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 1:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಬಾಳಿಗಾ ಜಂಕ್ಷನ್ ತಲುಪುವಾಗ ಹಿಂದಿನಿಂದ ಕರಾವಳಿ ಕಡೆಯಿಂದ KA-06-M-3083ನೇ ಕಾರಿನ ಚಾಲಕ ನಿಧೀಶ್ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಎದುರಿನಿಂದ ಕುರುಂಬಿಲ ಪೂಜಾರಿಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್ ಗೆ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಕುರುಂಬಿಲ ಪೂಜಾರಿಯವರು ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 20/06/2021 ರಂದು  ಬೆಳ್ಳಗಿನ ಜಾವ 5:00 ಗಂಟೆಗೆ ಪಿರ್ಯಾದಿದಾರರಾದ ರಾಜೀವ ಕುಲಾಲ್ (48), ತಂದೆ: ಗೋವಿಂದ  ಕುಲಾಲ್, ವಾಸ: ನುಕ್ಕಿ ಬಚ್ಚಲು ಶೇಡಿಮನೆ ಗ್ರಾಮ ಕುಂದಾಪುರ  ತಾಲೂಕು ಇವರು KA-20-AA-9535  ನೇ  ನಂಬ್ರದ    ಆಟೋರಿಕ್ಷಾದಲ್ಲಿ ಗೋಳಿಯಂಗಡಿಯಿಂದ ಪೇಪರ್ ತೆಗೆದುಕೊಂಡು ಶೇಡಿಮನೆಗೆ  ಹೋಗಲು ಕುಂದಾಪುರ  ತಾಲೂಕಿನ ಹೆಂಗವಳ್ಳಿ ಗ್ರಾಮದ  ಟಿನ್‌ಟಾನ್ ರೆಸಾರ್ಟ ಎದುರುಗಡೆ ಹೋಗುತ್ತಿರುವಾಗ ಆರೋಪಿಯು KA-19-MD-1468ನೇ ನಂಬ್ರದ  ಕಾರನ್ನು ಹೆಂಗವಳ್ಳಿ  ಪೇಟೆ  ಕಡೆಯಿಂದ  ಅತೀವೇಗ ಹಾಗೂ  ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಆಟೋ ರಿಕ್ಷಾ   ರಸ್ತೆಯ ಬದಿಯ ಚರಂಡಿಗೆ  ಬಿದ್ದಿದ್ದು ಆಗ ಪಿರ್ಯಾದಿದಾರರು ಸಹ ರಸ್ತೆಯ ಬದಿಯ ಚರಂಡಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆ  , ಬೆನ್ನಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ದಿನಾಂಕ 29/05/2021 ರಂದು ಶೇಖರ ಮರಕಾಲ(47), ವಾಸ; ಮೂಡು ಬಾರಾಳಿ ಮಂದಾರ್ತಿ ಹೆಗ್ಗುಂಜೆ ಗ್ರಾಮ ಬ್ರಹ್ಮಾವರ ತಾಲೂಕು ಇವರು ತನ್ನ ತಾಯಿ ಮನೆಯಾದ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಸಕ್ಕಟ್ಟ ಎಂಬಲ್ಲಿಗೆ ಬಂದಿದ್ದು, ರಾತ್ರಿ ಅಲ್ಲೆ ಉಳಿದುಕೊಂಡು ಬೆಳಿಗ್ಗೆ 06:30 ಗಂಟೆಗೆ ತಾಯಿಯ ಮನೆಯಲ್ಲಿರುವ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿಯನ್ನು ಕಿತ್ತು ವಾಪಾಸು ಮರದಿಂದ ಕೆಳಗಡೆ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದುದರಿಂದ ಶೇಖರ ಮರಕಾಲರವರ ಕುತ್ತಿಗೆ ಮತ್ತು ಬೆನ್ನಿಗೆ ತೀವೃ ಪೆಟ್ಟಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಒಂದು ಅಂಬುಲೆನ್ಸ್‌ ವಾಹನದಲ್ಲಿ ಮಣೆಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ದಿನಾಂಕ 31/05/2021 ರಂದು ಸಂಜೆ 4:30 ಗಂಟೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು, ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 20/06/2021 ರಂದು ರಾತ್ರಿ 9:11 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಕಾವ್ಯ ರಾಜರಾಮ್‌, ಗಂಡ: ಬಿ ಧನರಾಜ್‌ ನಾಯ್ಕ್‌, ವಾಸ: ಮಂಜುನಾಥ ನಾಗಪ್ಪಯ್ಯ ಭಟ್‌ ಮನೆ, ಮೂಡಕಳಿ ಹತ್ತಿರ, ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ಮರವಂತೆ ಗ್ರಾಮದ ಮೂಡಕಳಿ ಎಂಬಲ್ಲಿ ತನ್ನ ಅಜ್ಜಿ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ದಿನಾಂಕ 27/08/2019 ರಂದು ಬಿ.ಧನಂಜಯ ನಾಯ್ಕ್ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ನಂತರ  ಗಂಡನ ಮನೆಯಲ್ಲಿ ಸಂಸಾರ ನಡೆಸಿಕೊಂಡಿದ್ದು ದಿನಾಂಕ 19/06/2020 ರಂದು ಹೆಣ್ಣು ಮಗು ಜನಿಸಿರುತ್ತದೆ.  ಆ ಬಳಿಕ ಪಿರ್ಯಾದುದಾರರ ಗಂಡನು ಪಿರ್ಯಾದುದಾರರಿಗೆ ಸಣ್ಣಪುಟ್ಟ ವಿಚಾರದಲ್ಲಿ  ಮಾನಸಿಕ ಹಿಂಸೆ ಕಿರುಕುಳ ನೀಡುತ್ತಿದ್ದನು. ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಆಪಾದಿತನು ಮಧ್ಯ ವ್ಯಸನಿ ಆಗಿರುತ್ತಾನೆ. .ಹೆಂಡತಿ ಮಗುವನ್ನು ಸರಿಯಾಗಿ ನೋಡಿಕೊಳ್ಳದೇ ಹೊಟೇಲು ಊಟ ಮಾಡಿಕೊಂಡು ಇದ್ದನು. ದಿನಾಂಕ 05/04/2021 ರಂದು ಪಿರ್ಯಾದಿದಾರರು ಹಾಗೂ ಮಗುವನ್ನು ಮನೆಯಿಂದ ಹೊರಹಾಕಿದ್ದು, ಪಿರ್ಯಾದಿದಾರರು  ದಾರಿ ತೋಚದೆ  ಮರವಂತೆಯ ಮೂಡುಕಳಿ ಎಂಬಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು. ಆಪಾದಿತನು ಅಲ್ಲಿಗೆ  ಬಂದು ಪಿರ್ಯಾದಿದಾರರ ತಂದೆಯ ಆಸ್ತಿಯಲ್ಲಿ ಪಾಲನ್ನು ತೆಗೆದುಕೊಂಡು ತನ್ನ ಹೆಸರಿಗೆ ಮಾಡಿಕೊಡುವಂತೆಯೂ ವರದಕ್ಷಿಣೆಗಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 57/2021 ಕಲಂ: 498(ಎ), 504, 506 ಐಪಿಸಿ ಮತ್ತು ಕಲಂ: 3, 4, 6 ಡಿ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಂಕರನಾರಾಯಣ: ದಿನಾಂಕ 21/06/2021 ರಂದು 18:10 ಗಂಟೆಗೆ ಆರೋಪಿ ಸುರೇಶ ಹೆಗ್ಡೆ (47), ತಂದೆ: ಶೇಖರ ಹೆಗ್ಡೆ,  ವಾಸ: ಹೆಗ್ಗೋಡ್ಲು ಕುಳ್ಳುಂಜೆ ಗ್ರಾಮ ಕುಂದಾಪುರ ತಾಲೂಕು ಎಂಬಾತ ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಮಾವಿನಕೊಡ್ಲು ಎಂಬಲ್ಲಿ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗಡೆ  ಸಾರ್ವಜನಿಕ   ಸ್ಥಳದಲ್ಲಿ   ಶರಾಬು  ಸ್ಯಾಚೆಟ್  ಹಾಗೂ   ನೀರಿನ ಬಾಟಲಿ   ಮತ್ತು  ಪ್ಲಾಸ್ಟಿಕ್   ಗ್ಲಾಸ್   ಇಟ್ಟುಕೊಂಡು   ಶರಾಬು ಸೇವನೆ ಮಾಡಿರುವುದಾಗಿದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: KARNATAKA EXCISE ACT, 1965 ರಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 22-06-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080