ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಅನಿಲ ಕುಮಾರ್ ಇವರು 12ನೇ ಹೆಗ್ಗುಂಜೆ ಗ್ರಾಮ ಪಂಚಾಯತ್‌ನ, ಪಂಚಾಯತ್ ಅಭಿವೃಧ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ,  ಸದ್ರಿ ಗ್ರಾಮ ಪಂಚಾಯತ್ ವತಿಯಿಂದ  ಸಾಯಿಬ್ರಕಟ್ಟೆ, - ಶಿರೂರು ಮೂರುಕೈ ಮುಖ್ಯ ರಸ್ತೆಯಿಂದ ಜಮ್ಕಲ್ ಹೊಸ್ಮಕ್ಕಿ ಪ.ಜಾತಿ ಕಾಲೋನಿಗೆ ಹೋಗುವ ಕಾಂಕ್ರೀಟ್ ರಸ್ತೆಯ ಬಲ ಭಾಗದಲ್ಲಿ ಅಳವಡಿಸಿದ ಸೋಲಾರ್ ಕಂಬ, ಬ್ಯಾಟರಿ ಹಾಗೂ ಲೈಟ್‌ನ್ನು ಯಾರೋ ಕಳ್ಳರು ದಿನಾಂಕ: 18.06.2021 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ: 19/06/2021 ರಂದು ಬೆಳಿಗ್ಗೆ 06:00  ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸದ್ರಿ ಸ್ವತ್ತುಗಳ ಅಂದಾಜು ಮೌಲ್ಯ ರೂ. 19,775/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ತರುಣ್ ಇವರು ಅವರ ತಂದೆ ಜಯಂತ್ ರವರ ಜೊತೆ  ಹೆಜಮಾಡಿ ಗ್ರಾಮದ ಶಾಂಭವಿ ನದಿಯಲ್ಲಿ ಮೀನುಗಾರಿಗೆ ಮಾಡಲು ದಿನಾಂಕ 22-06-2021 ರಂದು ಸಮಯ ಬೆಳಿಗ್ಗೆ 04:00 ಗಂಟೆಗೆ ಹೊರಟು ಹೆಜಮಾಡಿ ಕಿರು ಬಂದರಿಗೆ ತಲುಪಿ ಅಲ್ಲಿ  ನಿಲ್ಲಿಸಿದ್ದ  ಹುಟ್ಟು ಹಾಕುವ ಫೈಬರ್ ದೋಣಿಯಲ್ಲಿ ಪಿರ್ಯಾದುದಾರರು ತಂದೆಯ ಜೊತೆ ಹೊರಟು ಶಾಂಭವಿ ನದಿಯಲ್ಲಿ ಪಿರ್ಯಾದಯದಾರರ ತಂದೆ ಜಯಂತ್ ರವರು ದೋಣಿಯನ್ನು ಹುಟ್ಟು ಹಾಕುತ್ತಾ ಶಾಂಭವಿ ನದಿಯ ಅಳವೆ ಬಾಗಿಲು ಎಂಬಲ್ಲಿಗೆ ತಲುಪಿ ಬಲೆ ಹಾಕುವ ಸಮಯದಲ್ಲಿ 04:45 ಗಂಟೆಗೆ ಜೋರಾಗಿ ಗಾಳಿ ಬಿಸಿ ಒಂದೇ ಸಮನೆ  ಹೊಳೆಯಲ್ಲಿ ತೆರ ಎದ್ದು ದೋಣಿಗೆ ಅಪ್ಪಳಿಸಿದ ರಭಸಕ್ಕೆ ದೋಣಿ ಅಯತಪ್ಪಿ ಪಿರ್ಯಾದುದಾರರು ಮತ್ತು ಪಿರ್ಯಾದುರಾರರ ತಂದೆ ಹಾಗೂ ದೋಣಿಯಲ್ಲಿದ್ದ ಬಲೆ ಸಮೇತ  ನೀರಿಗೆ ಬಿದ್ದ ಪರಿಣಾಮ ಪಿರ್ಯಾದುದಾರರ ತಂದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿ ಚಂದ್ರ ಪೂಜಾರಿ ಇವರ ತಮ್ಮ ಶ್ಯಾಮರವರು ಪ್ರಾಯ 49 ವರ್ಷ, ಹನ್ನೆರಡು ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಗಂಡು ಮಗುವಿರುತ್ತದೆ. ಶ್ಯಾಮನ ವಿಪರೀತ ಕುಡಿತದ ಚಟದಿಂದ ಆತನ ಹೆಂಡತಿ ಮತ್ತು ಮಗ ಸುಮಾರು ಹತ್ತು ವರ್ಷದ ಹಿಂದೆ ಆತನನ್ನು ಬಿಟ್ಟು ಬೇರೆ  ಕಡೆ ವಾಸವಾಗಿರುತ್ತಾರೆ. ಮೃತ ಶ್ಯಾಮ ಮೂಲ ಮನೆಯಲ್ಲಿ ಒಬ್ಬನೇ ವಾಸವಾಗಿರುತ್ತಾನೆ.ದಿನಾಂಕ: 22-06-2021 ರಂದು ಬೆಳಿಗ್ಗೆ 10:00 ಘಂಟೆಗೆ  ಪಿರ್ಯಾದಿದಾರರು ಮೂಲ ಮನೆಗೆ ಬಂದಾಗ ಶ್ಯಾಮ ಮನೆಯಲ್ಲಿ ಕಾಣದೇ ಇದ್ದು ಹುಡುಕಾಡಿದಲ್ಲಿ ಮನೆಯ ಆವರಣವಿಲ್ಲದ ಬಾವಿಯೊಳಗೆ ಬಿದ್ದು ಮೃತಪಟ್ಟು ತೇಲುತ್ತಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ತಮ್ಮ ತನ್ನ ವಿಪರೀತ ಕುಡಿತದ ಚಟದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ದಿನಾಂಕ: 21-06-2021  ರ ಸಂಜೆ 06:00 ಘಂಟೆಯಿಂದ  ದಿನಾಂಕ: 22-06-2021 ರ ಬೆಳಿಗ್ಗೆ 10:00 ಘಂಟೆ ನಡುವೆ  ಆಕಸ್ಮಿಕವಾಗಿ  ಕಾಲು ಜಾರಿ  ಬಾವಿಗೆ ಬಿದ್ದಿರಬಹುದು ಆಥವಾ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-06-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ