ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಉಮೇಶ (43),ತಂದೆ ದಿ. ಸಂಜೀವ ಮರಕಾಲ, ಹೆರ್ ಕಲ್,  ನಂಚಾರು   ಗ್ರಾಮ  ಬ್ರಹ್ಮಾವರ  ತಾಲೂಕು ಇವರು ದಿನಾಂಕ  20/05/2023 ರಂದು 17:30  ಗಂಟೆಗೆ ತನ್ನ KA-20-EQ-0329 ಟಿವಿಎಸ್ ಮೋಟಾರು ಸೈಕಲ್‌‌‌‌ನಲ್ಲಿ  ನಂಚಾರಿನಿಂದ ಆವರ್ಸೆ ಕಡೆಗೆ ಹೋಗುವಾಗ ನಂಚಾರು ಗ್ರಾಮದ ಪ್ರೀಯಾಂಕ ಜನರಲ್ ಸ್ಟೋರ್ ಬಳಿ ತಲುಪಿದಾಗ ಅದೇ ಮಾರ್ಗದಲ್ಲಿ ಹಿಂದಿನಿಂದ ನಂಬ್ರ KA-53-Z-5016 ಕ್ರೇನ್ ಚಾಲಕ ಅಕ್ಬರ್ ಅತೀವೇಗ  ಹಾಗೂ  ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರ ಟಿವಿಎಸ್ ಮೋಟಾರ್ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಎಡಬದಿಯ ಕಾಲಿನ ಗಂಟಿನ ಕೆಳಭಾಗ ಜಖಂಗೊಂಡು ತೀವ್ರ ತರಹದ ಗಾಯವಾಗಿರುವುದಲ್ಲದೇ ಬಲಕೈ ಬೆರಳಿನ ಬಳಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಅನ್ವೇಷ್‌ ಶೆಟ್ಟಿ (19), ತಂದೆ: ಬಾಬು ಶೆಟ್ಟಿ, ವಾಸ: ಮ.ನಂ. 2-267, ಚಂದಮ್ಮ ನಿಲಯ, ಬೆನಗಲ್‌ತೋಟ, ಕೊಳ್ಕೆಬೈಲು, ಶಿರಿಯಾರ ಗ್ರಾಮ, ಬ್ರಹ್ಮಾವರ ಇವರು ದಿನಾಂಕ 21/05/2023 ರಂದು ಬೆಳಿಗ್ಗೆ 11:45 ಗಂಟೆಗೆ ಅಮರನಾಥ ಸವಾರಿ ಮಾಡಿಕೊಂಡಿದ್ದ ನಂಬ್ರ KA-20-HA-2508 ನೇ ಟಿವಿಎಸ್‌ ಜುಪಿಟರ್‌ ಸ್ಕೂಟಿಯಲ್ಲಿ ಹಿಂಬದಿ ಕುಳಿತು ತೆಂಕಬೆಟ್ಟು ರಸ್ತೆಯಲ್ಲಿ ಹೋಗುತ್ತಿದ್ದವರು, ತೆಂಕಬೆಟ್ಟು ರಸ್ತೆಯು ರಾಷ್ಟ್ರೀಯ ಹೆದ್ದಾರಿ 66 ಉಡುಪಿ - ಕುಂದಾಪುರ ಮುಖ್ಯರಸ್ತೆಗೆ ಸಂಪರ್ಕ ಹೊಂದುವ ಜಂಕ್ಷನ್‌ ಬಳಿ ಬಂದಾಗ, ಕುಂದಾಪುರ ಕಡೆಯಿಂದ ನೀಲಿ ಬಣ್ಣದ  KL-13-AV-9970 ನೇ ಸ್ವಿಫ್ಟ್‌ ಕಾರನ್ನು ಅದರ ಚಾಲಕ ರಾಹುಲ್‌ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ತನ್ನ ಎಡಬದಿಗೆ ಚಲಾಯಿಸಿ, ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಅಮರನಾಥ ಹಾಗೂ ಹಿಂಬದಿ ಕುಳಿತ ಪಿರ್ಯಾದಿದಾರರು ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದು, ಆ ಪೈಕಿ ಪಿರ್ಯಾದಿದಾರರ ಎಡತೊಡೆ, ಬೆನ್ನಿನ ಬಲಭಾಗ, ಎಡಕೈಗೆ ತರಚಿದ ಸಣ್ಣಪುಟ್ಟ ರಕ್ತಗಾಯಗಳು ಹಾಗೂ ಸ್ಕೂಟಿ ಸವಾರ ಅಮರನಾಥ ರವರ  ಎಡತೊಡೆಯ ಮೂಳೆಮುರಿತ ತೀವ್ರ ಗಾಯ, ಎಡಭುಜ, ಎಡಕಾಲಿನ ಮೊಣಗಂಟಿಗೆ ಹಾಗೂ ಸೊಂಟಕ್ಕೆ ಗುದ್ದಿದ ತೀವ್ರ ಒಳಜಖಂ ಆಗಿರುತ್ತದೆ. ಗಾಯಗೊಂಡ ಸಹಸವಾರನಾದ ಪಿರ್ಯಾದಿದಾರರು ತೆಕ್ಕಟ್ಟೆ ಕುಸುಮಾಕರ ಶೆಟ್ಟಿ ರವರ ಕ್ಲಿನಿಕ್‌ಗೆ ಹೋಗಿ ಹೊರ ರೋಗಿಯಾಗಿಯೂ ಹಾಗೂ ಸ್ಕೂಟಿ ಸವಾರ ಅಮರನಾಥ ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 20/05/2023 ರಂದು ಪಿರ್ಯಾದಿದಾರರಾದ ರಮೇಶ್‌ (50), ತಂದೆ: ಪಾಂಡುರಂಗ ಆಚಾರ್ಯ, ವಾಸ: ಪ್ರಸಾದ, ನರ್ನಾಡು, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ,  ಬ್ರಹ್ಮಾವರ ತಾಲೂಕು ಇವರು  ತನ್ನ KA-20-EQ-7808  ನೇ Suzuki Access 125 ನೇ ಸ್ಕೂಟರ್‌ನಲ್ಲಿ ಮಗಳು ನವ್ಯಳನ್ನು ಸಹಸವಾರಿಣಿಯಳನ್ನಾಗಿ ಕುಳ್ಳಿರಿಸಿಕೊಂಡು ಚಾಂತಾರುವಿನಿಂದ ತನ್ನ ಮನೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಚಾಂತಾರು ಗ್ರಾಮದ ನಂದಿ ಗುಡ್ಡೆ ಬಬ್ಬು ಸ್ವಾಮಿ ದೇವಸ್ಥಾನದ ಎದುರು ಮಟಪಾಡಿ – ಬ್ರಹ್ಮಾವರ ರಸ್ತೆಯಲ್ಲಿ ಸಂಜೆ 6:00 ಗಂಟೆಗೆ ತಲುಪುವಾಗ ನಂದಿಗುಡ್ಡೆ ದೇವಸ್ಥಾನದ ಕಡೆಯಿಂದ ಆರೋಪಿ  KA-20-B-5216  ನೇ ಪಿಕ್‌ಅಪ್‌ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಟಪಾಡಿ – ಬ್ರಹ್ಮಾವರ ರಸ್ತೆಗೆ ಒಮ್ಮೇಲೆ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ನವ್ಯ ಸ್ಕೂಟರ್‌ಸಮೇತ ರಸ್ತೆಗೆ ಬಿದ್ದು, ನವ್ಯಳ ಎಡಕಾಲಿನ ಕೊಲು ಕಾಲಿಗೆ ಮೂಳೆ  ಮುರಿತದ ಜಖಂ ಹಾಗೂ ಮೇಲ್ಭಾಗದ 3 ಮೇಲ್ಬಾಗದ ಹಲ್ಲುಗಳು ತುಂಡಾಗಿರುತ್ತದೆ. ಅಲ್ಲದೇ ಪಿರ್ಯಾದಿದಾರರ ಎಡಸೊಂಟದ ಹಿಂಭಾಗ ಗುದ್ದಿದ ಒಳನೋವು ಉಂಟಾಗಿರುತ್ತದೆ. ಗಾಯಾಗೊಂಡ ನವ್ಯಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2023 : ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ  ನೊವೆಲ್‌ ಟೊಪೊ (26), ತಂದೆ: ಪಿತ್ರುಸ್ ಟೊಪೊ, ವಾಸ:  ದುರ್ಗಾಂಬಾ ಶಿಲ್ಪಕಲ, ಪೊಸನೊಟ್ಟು, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು  ಮೂಲತಃ ಆಸ್ಸಾಂ ರಾಜ್ಯದವರಾಗಿದ್ದು ಪ್ರಸ್ತುತ  ಕಾರ್ಕಳದಲ್ಲಿ ಹೆಂಡತಿ ಸುಶ್ಮಿತಾ ಮಿಂಜಳಾ ಮತ್ತು ಹೆಂಡತಿಯ ತಮ್ಮ ಅಮಿತ್‌ ಮಿಂಜುರವರೊಂದಿಗೆ ವಾಸವಾಗಿದ್ದು ಕಲ್ಲು ಕಟ್ಟಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಅಮಿತ್‌ ಮಿಂಜು (20) ಇವರು 6 ತಿಂಗಳಿನಿಂದ ಎನ್‌ ಅಶೋಕ್‌ ರವರ ಮಾಲೀಕತ್ವದ ಶ್ರೀದೇವಿ ಶಿಲ್ಪಕಲಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/05/2023 ರಂದು ಅಶೋಕರವರ ಮಾಲೀಕತ್ವದ ಪೊಸನೊಟ್ಟುನಲ್ಲಿರುವ ಮೊದಲನೇ ಮಹಡಿಯ ಕಟ್ಟಡದಲ್ಲಿ 10 ಗಂಟೆಗೆ ಮಲಗಿದ್ದು ದಿನಾಂಕ 21/05/2023 ರಂದು ಬೆಳಿಗ್ಗೆ ಸಮಯ 6 ಗಂಟೆಗೆ ನೋಡಿದಾಗ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 19/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-05-2023 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080