ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಸುಭಾಶ್ ಪ್ರವೀಣ್ ಉಳ್ಳಾಲ (23) ತಂದೆ : ಪ್ರವೀಣ ಕುಮಾರ ವಾಸ : ಮನೆ ನಂಬ್ರ 4-131/1, ಶ್ರೀ ಉಳಿಯತ್ತಾಯ ಕೃಪಾ,  ಮುಖ್ಯ ರಸ್ತೆ ಉಳ್ಳಾಲ, ಉಳ್ಳಾ ಲ ತಾಲ್ಲೂಕು ಇವರು ದಿನಾಂಕ 22/05/2023 ರಂದು ತನ್ನ ಕೆಎ-19 ಎಮ್.ಜಿ- 1763 ನೇ ಕಾರನ್ನು  ರಾ ಹೆ 66 ರ ಉಡುಪಿ ಮಂಗಳೂರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 09:20 ಗಂಟೆಗೆ ಕಟಪಾಡಿ ಜಂಕ್ಷನ್‌ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಕೆ.ಎ-20 ಎಮ್.ಎ- 9295 ನೇದರ ಕಾರಿನ ಚಾಲಕ ಎಮ್.ಎ. ಬಾವು ರವರು ತನ್ನ ಕಾರನ್ನು ಅತೀ ವೇಗ ಹಾಗೂ ತೀವ್ರ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರವೀಣ್ ಉಳ್ಳಾಲ ರವರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಪ್ರವೀಣ್ ಉಳ್ಳಾಲ ರವರ ಕಾರಿನ ಹಿಂಭಾಗ, ಢಿಕ್ಕಿ ಹೊಡೆದ ಕಾರಿನ ಮುಂಭಾಗ ಜಖಂ ಗೊಂಡಿರುತ್ತದೆ. ಈ ಅಪಘಾತದಿಂದ ಯಾರಿಗೂ ಗಾಯಗಳಾಗಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2023 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 22/05/2023 ರಂದು ಮದ್ಯಾಹ್ನ 12:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಭ್ರಮರಿ ಬಳಿ  ಹಾದು ಹೋಗುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ  KA-20-AB-4152 ನೇ ನಂಬ್ರದ ರಿಕ್ಷಾ ಚಾಲಕ ಹರೀಶ್ ಕೋಟ್ಯಾನ್ ಎಂಬಾತನು ತನ್ನ ರಿಕ್ಷಾವನ್ನು ಲೆಮಿನಾ ಕಡೆಯಿಂದ ಭ್ರಮರಿ  ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ KA-20-EU-9304 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ವಿಶ್ವಾಸ್ ಆತನ ಮೋಟಾರ್ ಸೈಕಲ್ ನ್ನು ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆದಿಂದ  ಬೇರೊಂದು ವಾಹನವನ್ನು ಓವರ್ ಟೇಕ್ ಮಾಡಿ ಎದುರುಗಡೆ ಹೋಗುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ   ಮೋಟಾರ್ ಸೈಕಲ್  ಹಾಗೂ ರಿಕ್ಷಾ ರಸ್ತೆಗೆ ಬಿದ್ದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬೇಬಿ ಪೂಜಾರ್ತಿರವರ ಮುಖ ಹಾಗೂ ತಲೆಗೆ,ಶಾಲಿನಿರವರ ಎಡ ಕೈಗೆ ಪೆಟ್ಟಾಗಿದ್ದು, ಸುಲೋಚನಿ ಎಂಬವರಿಗೆ ಗುದ್ದಿದ್ದ ನೋವಾಗಿದ್ದು,ರಿಕ್ಷಾ ಚಾಲಕನ ಕಾಲಿಗೆ ಮತ್ತು ತಲೆಗೆ ಗುದ್ದಿದ್ದ ನೋವಾಗಿದ್ದು  ಮತ್ತು ಮೋಟಾರ್ ಸೈಕಲ್ ಸವಾರನ ಕಾಲು ಮತ್ತು ಕೈಗೆ ಗುದ್ದಿದ್ದ ನೋವಾಗಿದ್ದು, ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಎಂಬುದಾಗಿ ಸುದೇಶ್ ಶೆಟ್ಟಿ (36), ತಂದೆ: ಮಧು ಶೆಟ್ಟಿ ವಾಸ: ಕೆಳಗಿನ ಮನೆ ನಿಟ್ಟೆ ಗರಡಿ ನಿಟ್ಟೆ ಗ್ರಾಮ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 67/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರವೀಣ್ ಕುಮಾರ್  ಶೆಟ್ಟಿ (51) ತಂದೆ: ಸುಧಾಕರ ಶೆಟ್ಟಿ ವಾಸ: ಜ್ಯೋತಿ ಕಿರಣ  ದೇವಸ್ಥಾನ ಬೆಟ್ಟು ಅಂಚೆ ಬೇಳೂರು ಗ್ರಾಮ ಕುಂದಾಪುರ ಇವರು PWD  ಕಂಟ್ರಾಕ್ಟರ್ ಆಗಿದ್ದು ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ಅಜ್ರಿ ನೇರಳಕಟ್ಟೆ ಮುಖ್ಯ ರಸ್ತೆಯಿಂದ ಚಿತ್ತೇರಿ ಗಣಪತಿ ದೇವಸ್ಥಾನ ನಾರು ಮಕ್ಕಿ ಕೂಡು ರಸ್ತೆಯ ಕಾಮಗಾರಿ ಚಾಲನೆಯಲ್ಲಿರುತ್ತದೆ. ಸದ್ರಿ ಕಾಮಗಾರಿಗೆ  ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಶೇಳ್ಕೋಡುನ ರಸ್ತೆ ಬದಿಯಲ್ಲಿ ಶೇಖರಿಸಿ ಸ್ಥಳದಲ್ಲಿಇರಿಸಿದ್ದು ದಿನಾಂಕ 20/05/2023 ರಂದು ಸಂಜೆ  ಸುಮಾರು 18:00 ಘಂಟೆಗೆ ಕಾರ್ಮಿಕರು ಕೆಲಸ ಮುಗಿಸಿ ಹೋಗಿದ್ದು ನಂತರ ಮರು ದಿನ ದಿನಾಂಕ 21/05/2023 ರಂದು ಬೆಳಿಗ್ಗೆ 8:15  ಸಮಯಕ್ಕೆ ಕಾರ್ಮಿಕರು ಸ್ಥಳಕ್ಕೆ ಹೋದಾಗ ಸಿಮೆಂಟ್ ಕಳ್ಳತನವಾಗಿದ್ದು ಸ್ಥಳದಲ್ಲಿ ವಾಹನ ಚಕ್ರದ ಕುರುಹು ಇರುವುದು ಕಂಡು ಬಂದಿರುತ್ತದೆ ಯಾರೋ ಕಳ್ಳರು ಯಾವುದೋ ವಾಹನದಲ್ಲಿ ಬಂದು ಸುಮಾರು 80 ಚೀಲ J.K.Non Trade ಸಿಮೆಂಟ್ ಕಳವು ಮಾಡಿಕೊಂಡು ಹೋಗಿದ್ದು. ಕಳುವಾದ ಸಿಮೆಂಟ್ ಮೌಲ್ಯ ಸುಮಾರು 27,200/- ಅಗಬಹುದುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023  ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಉದಯ ಜೆ ಬಂಗೇರ(39) ತಂದೆ:  ದಿ/ ಗುರುವ ತಿಂಗಳಾಯ ವಾಸ: ಗುರುಜ್ಯೋತಿ ಚರ್ಚ್‌ರೋಡ್‌ ತೊಟ್ಟಂ, ಕೊಡವೂರು ಇವರು ದಿನಾಂಕ 21/05/2023 ರಂದು  ತೊಟ್ಟಂ ಪೊಟ್ಟಳಿವೆ ಎಂಬಲ್ಲಿ ಸಮುದ್ರ ಕಿನಾರೆಯಲ್ಲಿ  ಸಂಜೆ 5:30 ಗಂಟೆಗೆ ವಾಕಿಂಗ್‌ಮಾಡುತ್ತಿರುವಾಗ  ಅಪರಿಚಿತ ಗಂಡಸಿನ  ಮೃತದೇಹ ಇರುವುದನ್ನು ನೋಡಿ ಈಶ್ವರ ಮಲ್ಪೆ ರವರಿಗೆ ತಿಳಿಸಿದ್ದು, ಅವರು ಸಹ ಅಲ್ಲಿಗೆ ಬಂದಿರುತ್ತಾರೆ.  ಸದ್ರಿ ಮೃತದೇಹವು ಸುಮಾರು 25 ರಿಂದ 30 ವರ್ಷದ  ಅಪರಿಚಿತ ಗಂಡಸಿನ ಮೃತದೇಹವಾಗಿದ್ದು ಮೃತದೇಹದ ಮೇಲೆ ಕಪ್ಪು ಪ್ಯಾಂಟ್‌ಇರುತ್ತದೆ.  ಮೃತ ದೇಹದ ಎದೆಯ ಮೇಲೆ  ಅಶ್ಮಿತ ಹರಿ  ಎಂದು ಹಚ್ಚೆ ಇರುತ್ತದೆ.  ಮೃತದೇಹದ ಕೈಯ ಹಸ್ತದಿಂದ  ಮೇಲೆ ತ್ರಿಶೂಲ ಹಾಗೂ ನಾಗ ದೇವರ ಹಚ್ಚೆ  ಇರುತ್ತದೆ ಈ ದಿನ ಆಕಸ್ಮಿಕವಾಗಿಯೂ ಅಥವಾ ಇನ್ಯಾವುದೋ ಕಾರಣದಿಂದ ಸಮುದ್ರದ ನೀರಿಗೆ  ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಅನಿತಾ ಜಿ ವಿ (29) ತಂದೆ: ವೆಂಕಟೇಶನ್ ವಾಸ: D No(G3), 3rd Floor , ಗ್ರೀನ್ ವ್ಯೂ ಅಪಾರ್ಟಮೆಂಟ್ ಮಣಿಪಾಲ ಇವರ  ತಂದೆಯಾದ ವೆಂಕಟೇಶನ್ (55) ಇವರು ಮಣಿಪಾಲದ  ಗ್ರೀನ್ ವ್ಯೂ ಅಪಾರ್ಟಮೆಂಟ್ ಕೆಲಸಮಾಡುತ್ತಿದ್ದು, ಇವರಗೆ ಸುಮಾರು 10 ವರ್ಷಗಳ ಹಿಂದೆ ಪಾರ್ಶ್ವ ರೋಗಕ್ಕೆ ತುತ್ತಾಗಿದ್ದರು, ದಿನಾಂಕ 21/05/2023 ರಂದು ಸಂಜೆ 06:15 ಗಂಟೆಗೆ ಒಮ್ಮೇಲೆ ಕುಸಿದು ಬಿದ್ದಿದ್ದು ಕೂಡಲೇ ಅನಿತಾ ಜಿ ವಿ ರವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆತಂದವರನ್ನು ಪರೀಕ್ಷಿಸಿದ ವೈದ್ಯರು ಅನಿತಾ ಜಿ ವಿ ರವರ ತಂದೆಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ, ದಿನಾಂಕ 21/05/2023 ರಂದು ಸಂಜೆ 06:15 ಗಂಟೆಯಿಂದ 06:40 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2023  ಕಲಂ:  174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 21/05/2023 ರಂದು 21:15 ಗಂಟೆಗೆ ಪಿರ್ಯಾದಿದಾರರಾದ ದೀಪಕ್‌ (22) ತಂದೆ: ಉಮೇಶ್‌ ಮೆಂಡನ್‌ ವಾಸ: ಅಮ್ಮ ನಿಲಯ, ಶಾಂತಿನಗರ, ಕೊಳಂಬೆ 3ನೇ ಅಡ್ಡರಸ್ತೆ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಅಣ್ಣ ಶರತ್‌ನು ಆತನ ಕೆಲಸದ ಹುಡುಗ ಚರಣ್‌ಎಂಬಾತನೊಂದಿಗೆ ಬೈಕ್‌ನಲ್ಲಿ ಉಡುಪಿ ತಾಲೂಕು ಪುತ್ತೂರು ಬಬ್ಬುಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿರುವಾಗ ಆಪಾದಿತರಾದ ನಾಗರಾಜ್‌, ಕಾರ್ತಿಕ್‌, ದೇಶರಾಜು ಮತ್ತು ಇತರರು ಸಮಾನ ಉದ್ದೇಶದಿಂದ 3 ಬೈಕ್‌ಗಳಲ್ಲಿ ಬಂದು, ಶರತ್‌ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಕೊಲ್ಲುವ ಉದ್ದೇಶದಿಂದ ಅವರು ತಂದಿದ್ದ ಚೂರಿಗಳಿಂದ ಏಕಾಏಕಿ ಶರತ್‌ನ ಬಲಹಣೆಗೆ, ಎಡಭುಜಕ್ಕೆ, ಬೆನ್ನಿನ ಭಾಗಗಳಿಗೆ ಮತ್ತು ಬಲಗಾಲಿಗೆ ತಿವಿದು ಗಾಯಗೊಳಿಸಿದ್ದಲ್ಲದೆ ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹೆಲ್ಮೆಟ್‌ನಿಂದ ಹೊಡೆದಿರುತ್ತಾರೆ. ಆಪಾದಿತರು ತಿವಿದ ಚಾಕು ಶರತ್‌ನ ದೇಹದಲ್ಲಿಯೇ ಇದ್ದು, ಚರಣ್‌ ಹಾಗೂ ಇತರರು ಶರತ್‌ನನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುವುದಾಗಿದೆ. ಸುಮಾರು 15 ದಿನಗಳ ಹಿಂದೆ ಆಪಾದಿತರು ದೀಪಕ್‌ ರವರಿಗೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇವರ ಅಣ್ಣ ಶರತ್‌ನು ಆಪಾದಿತರಿಗೆ ಗದರಿಸಿರುವುದೇ ಈ ಕೃತ್ಯಕ್ಕೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 71/2023 ಕಲಂ: 143, 147, 148, 341, 323, 324, 307 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-05-2023 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080