ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಮಣಿಪಾಲ: ಪಿರ್ಯಾದಿ ಆ್ಯಂಡ್ರೋ ಎ ಬಾರ್ನಸ್ ಇವರು ಮಣಿಪಾಲದ ವಿದ್ಯಾರತ್ನ ನಗರ ಎಂಬಲ್ಲಿರುವ  ಪೆಟ್‌ ಸ್ಟೋರ್‌ ನ ಮಾಲೀಕರಾಗಿದ್ದು, ದಿನಾಂಕ: 21.05.2022 ರಂದು ಸಂಜೆ ಸುಮಾರು 4:10 ಗಂಟೆ ಸಮಯಕ್ಕೆ ಪಿರ್ಯಾದಿದಾರರು  ಪೆಟ್‌ ಸ್ಟೋರ್‌ ನಲ್ಲಿ ಕುಳಿತ್ತಿದ್ದಾಗ ಆಪಾದಿತ ರಾಘವೇಂದ್ರ ಎಂಬಾತನು ಏಕಾಏಕಿ ಅಂಗಡಿಯೊಳಗೆ ಬಂದು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ  ಕೈಯಿಂದ ಹೊಡೆದು ಬಾಕಿ ಇರುವ ಹಣ ಕೇಳಿದರೆ  ನಿನ್ನನ್ನುಕೊಲೆ ಮಾಡಿ ಬಿಸಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಆಪಾದಿತ ರಾಘವೇಂದ್ರನು ಪಿರ್ಯಾದಿದಾರರ ಅಂಗಡಿಯಿಂದ ನಾಯಿಯ ಆಹಾರವನ್ನು ಪಡೆದು ಅದರ ಮೊತ್ತವನ್ನು ಬಾಕಿಯಿರಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಬಾಕಿ ಮೊತ್ತ ನೀಡುವಂತೆ ಕೇಳಿಕೊಂಡಿರುವುದೇ ಘಟನೆಗೆ ಕಾರಣವಾಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ 341, 323, 504, 506 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ: ಪಿರ್ಯಾದಿ ಜಯಾನಂದ ಕಾಮತ್ ಇವರು ತನ್ನ ಪತ್ನಿ ಅಮಿತಾ ಕಾಮತ್ ಮತ್ತು ಮಗ ದೀಕ್ಷಿತ್ ನೊಂದಿಗೆ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆ ಎಂಬಲ್ಲಿ ವಾಸವಾಗಿದ್ದು. ಪಿರ್ಯಾದಿದಾರರ ಹೆಸರಿನಲ್ಲಿ ಪೆರ್ಡೂರು ಎಂಬಲ್ಲಿ  ಜಾಗವಿದ್ದು. ಸದ್ರಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ಅಮಿತಾ ಕಾಮತ್ ಪಿರ್ಯಾದಿದಾರರಲ್ಲಿ ತಕರಾರು ಮಾಡುತ್ತಿದ್ದು. ಈ ವಿಚಾರದಲ್ಲಿ ಅಪಾದಿತೆ ಅಮಿತಾ ಕಾಮತ್ ಇವರಿಗೆ ತನ್ನ ಗಂಡನ ಮೇಲೆ ದ್ವೇಷ ಇರುತ್ತದೆ. ಸುಮಾರು 3 ದಿನದಿಂದ ಅಮಿತಾ ಕಾಮತ್ ಇವರ ಸ್ನೇಹಿತ ಮಂಜುನಾಥ ಈತನು ಸದ್ರಿ ಮನೆಗೆ ಬಂದು ಉಳ್ಳಕೊಂಡಿದ್ದು. ದಿನಾಂಕ; 21/05/2022 ರಂದು ರಾತ್ರಿ 2-00 ಗಂಟೆಗೆ ಪಿರ್ಯಾದಿದಾರರು ರೂಮ್ ನಲ್ಲಿ ಮಲಗಿಕೊಂಡಿರುವಾಗ ಅಲ್ಲಿಗೆ ಅವರ ಪತ್ನಿ ಮಗ ದೀಕ್ಷಿತ್ ಮತ್ತು ಮಂಜುನಾಥ ಇವರು ಬಂದು ಪಿರ್ಯಾದಿದಾರರಲ್ಲಿ ಸದ್ರಿ ಜಾಗವನ್ನು ತನ್ನ ಹೆಸರಿಗೆ ಬರೆದು ಕೊಡುವುದಿಲ್ಲವಾ ಎಂದು ಅವಾಚ್ಯಶಬ್ದದಿಂದ ಬೈದ್ದು. ಬೈರಾಸಿನಿಂದ ಪಿರ್ಯಾದಿದಾರರ ಕಾಲು ಮತ್ತು ಕೈಗಳನ್ನು ಕಟ್ಟಿ ಅವರು ಅಲುಗಾಡದಂತೆ ಬಿಗಿಯಾಗಿ ಹಿಡಿದು ಕೊಂಡಿದ್ದು. ಅವರು ಬೊಬ್ಬೆ ಹಾಕಲು ಪ್ರಯತ್ನಿಸಿದಾಗ ಅಪಾದಿತರಗಳು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯನ್ನು ಕೈಯಿಂದ ಉಸಿರಾಡಲು ಅಗದ ರೀತಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಅಲ್ಲಿಯೇ ಇದ್ದ ಬಟ್ಟೆಯ ದಿಂಬಿನಿಂದ ಅವರು ಉಸಿರಾಡಲು ಅಗದ ರೀತಿಯಲ್ಲಿ ಮುಖಕ್ಕೆ ಒತ್ತಿ ಹಿಡಿದು ಸಾಯಿಸಲು ಪ್ರಯತ್ನಿಸಿದಲ್ಲದೇ ಅಪಾದಿತ ಮಂಜುನಾಥ ಮತ್ತು ದೀಕ್ಷಿತ್ ನ್ನು ಪಿರ್ಯಾದಿದಾರರಿಗೆ ನೋವಾಗುವ ರೀತಿಯಲ್ಲಿ  ಎದೆಯ ಮೇಲೆ ಕುಳಿತು ಕೊಂಡಿದ್ದು. ಅಗ ಪಿರ್ಯಾದಿದಾರರು ಅಪಾದಿತೆ ಪತ್ನಿಯಲ್ಲಿ ಜಾಗವನ್ನು ನಿನ್ನ ಹೆಸರಿಗೆ ಬರೆದು ಕೊಡುತ್ತೇನೆಂದು ಹೇಳಿದಾಗ ಪತ್ನಿಯು ಪಿರ್ಯಾದಿದಾರರ ಸಹಿಯನ್ನು ಒಂದು ಖಾಲಿ ಪೇಪರ್ ನಲ್ಲಿ ಪಡಕೊಂಡಿರುವುದಲ್ಲದೇ ಅಪಾದಿತರುಗಳು ಪಿರ್ಯಾದಿದಾರರಲ್ಲಿ ಏನಾದರೂ ಅಟವಾಡಿದರೆ ಇಲ್ಲಿಯೇ ಕೊಂದು ಬಿಡುತ್ತೆನೆಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ ಈ ಘಟನೆಯಿಂದ ಪಿರ್ಯಾದಿದಾರರಿಗೆ ತುಟಿಯ ಬಳಿ ಮತ್ತು ಎದೆಯ ಬಳಿ ನೋವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ:504,323,324,243,307,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.   

 ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಅಮೃತ ಬಲ್ಲಾಳ  ಇವರ ಮಗ ಪ್ರಮೋದ ಬಲ್ಳಾಳ್ ಪ್ರಾಯ 50 ವರ್ಷ ಎಂಬಾತನಿಗೆ ಕುಡಿತದ ಚಟ ಇದ್ದು  ಬಿ ಪಿ ಮತ್ತು ಶುಗರ್ ಕಾಯಿಲೆ ಇದ್ದು ಅದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಸುತ್ತಿರಲಿಲ್ಲ. ದಿನಾಂಕ 20-05-2022 ರಂದು ಮಧ್ಯಾಹ್ನ 2 ಗಂಟೆಗೆ ನಿಂಜೂರಿನಲ್ಲಿ ಮನೆಯಲ್ಲಿದ್ದಾಗ ತಲೆ ತಿರುಗಿದಂತಾಗುತ್ತದೆ ಎಂದು ತಿಳಿಸಿದ್ದು ಸಂಜೆ 4 ಗಂಟೆಗೆ  ಆರೋಗ್ಯದ ಸಮಸ್ಯೆ ಜಾಸ್ತಿಯಾಗಿದ್ದು  108 ಅಂಬುಲೆನ್ಸಗೆ ಫೋನ್ ಮಾಡಿ ಅಂಬುಲೆನ್ಸನಲ್ಲಿ  ಕಾರ್ಕಳ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ನಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ರಾತ್ರಿ 20-10 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ತಲುಪಿದಾಗ ಪರೀಕ್ಷಿಸಿದ ವೈದ್ಯರು ಪ್ರಮೋದ ಬಲ್ಳಾಳ್ ಮೃತಪಟ್ಟಿದ್ದಾಗಿ ತಿಳಿಸಿದ್ದು ಆತನು ಬಿ ಪಿ ಮತ್ತು ಶುಗರ್ಗೆ  ಚಿಕಿತ್ಸೆ ಮಾಡಿಸದೇ ಆರೋಗ್ಯದ ಸಮಸ್ಯೆಯಿಂದ ಮೃತಪಟ್ಟಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 22-05-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080