ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಪಿರ್ಯಾದಿ ಮೊಸೆಸ್ ರೊಡ್ರಿಗಸ್ ಇವರು ನಿನ್ನೆ ದಿನಾಂಕ 21/05/2022 ರಂದು  ಸಾಸ್ತಾನ ಚರ್ಚ ನಲ್ಲಿ ನಡೆಯುವ ಮದುವೆಗೆಂದು ರಾತ್ರಿ 9.15 ಗಂಟೆಗೆ ಹೊರಟು ಸಾಸ್ತಾನ ಜಂಕ್ಷನ್  ಬಳಿ ಬರುವಾಗ  ಪಿರ್ಯಾದಿದಾರರ ಎದುರಿನಿಂದ ಪಿರ್ಯಾದಿದಾರರ ಪರಿಚಯದ ಸೊಲೊಮನ್ ಬಾಂಜ್ ರವರು ತನ್ನ ಬಾಬ್ತು KA20 EM5342 ಮೋಟಾರ್ ಸೈಕಲಿನಲ್ಲಿ ಸಹಸವಾರನನ್ನಾಗಿ ಜೆರಾಲ್ಡ ರೋಡ್ರಿಗಸ್ ರವರನ್ನು   ಕುಳ್ಳಿರಿಸಿ ಕೊಂಡು ಕೋಡಿ ರಸ್ತೆಯಿಂದ  ಸಾಸ್ತಾನ ಜಂಕ್ಷನ್ ಗೆ ಬಂದು ಉಡುಪಿ -ಕುಂದಾಪುರ ರಾ ಹೆ 66 ರಲ್ಲಿ ಕುಂದಾಪುರದ  ಕಡೆಗೆ ಹೋಗಲು  ರಸ್ತೆಯ ಎಡಕ್ಕೆ  ಸಾಸ್ತಾನ ಜಂಕ್ಷನ್ ನಲ್ಲಿ  ಮೋಟಾರ್ ಸೈಕಲ್ ತಿರುಗಿಸುವಾಗ ರಾತ್ರಿ ಸುಮಾರು 9.30 ಗಂಟೆಯ ಸಮಯಕ್ಕೆ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚವರ್ ಲೆಟ್ ಕಂಪೆನಿಯ KL59C5003 ಟವೆರಾ ವಾಹನದ ಚಾಲಕ ಸಂತೋಷ  ಎಂಬಾತನು ತನ್ನ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡ ಭಾಗಕ್ಕೆ ಬಂದು ಮೊಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲಿ ನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದಿರುತ್ತಾರೆ . ಢಿಕ್ಕಿ ಹೊಡೆದ ಟವೆರಾ ವಾಹನವು ರಸ್ತೆಯಿಂದ ಬಲ ಬದಿಗೆ ಕುಂದಾಪುರ ಉಡುಪಿ  ರಸ್ತೆಗೆ ಹೋಗಿ ಅಲ್ಲಿಂದ ರಸ್ತೆಯ  ಪಕ್ಕದಲ್ಲಿರುವ  ಗೂಡಂಗಡಿಯ ಬಳಿ ಹೋಗಿ ನಿಂತಿರುತ್ತದೆ.  ಪರಿಣಾಮ ಮೋಟಾರ್ ಸೈಕಲ್ ಸವಾರನ ಬಾಯಿ ಹಾಗೂ ಮೂಗಿನಲ್ಲಿ ರಕ್ತ  ಬರುತ್ತಿದ್ದು   ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಸಹ ಸವಾರ ಜೆರಾಲ್ಡ ರೋಡ್ರಿಗಸ್ ಮುಖದ ಬಳಿ ರಕ್ತಗಾಯವಾಗಿರುತ್ತದೆ ಇಬ್ಬರನ್ನು ಕೂಡಲೇ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಸೊಲೊಮನ್ ಬಾಂಜ್ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಿಸದೇ ದಿ:22/05/2022 ರಂದು ಬೆಳಿಗ್ಗೆ 4.52 ಗಂಟೆಗೆ ಮೃತ ಪಟ್ಟಿರತ್ತಾರೆ. ಟವೆರಾ ವಾಹನದಲ್ಲಿದ್ದ 9 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ:279.337, 338, 304(A) ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.   

 

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಎಂ. ನಾಗರಾಜ್‌ ಭಟ್‌ ಇವರು ಉಡುಪಿ ತಾಲೂಕು ತೆಂಕಪೇಟೆ ವಿ.ಟಿ ರಸ್ತೆಯಲ್ಲಿರುವ ಮನೆ ನಂಬ್ರ: 9-2-47ಎ ರಲ್ಲಿ ವಾಸವಿದ್ದು, ದಿನಾಂಕ: 19/05/2022 ರಂದು ಮನೆಯಲ್ಲಿ ಪಿರ್ಯಾದುದಾರರ ಅಕ್ಕ ಒಬ್ಬರೇ ಇರುವಾಗ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ 12:00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಮುಚ್ಚಿದ ಬಾಗಿಲನ್ನು ತಳ್ಳಿಕೊಂಡು ಮನೆಯ ಒಳಪ್ರವೇಶಿಸಿ, ಪಿರ್ಯಾದುದಾರರ ಅಕ್ಕನ ಗಮನಕ್ಕೆ ಬಾರದಂತೆ ಮನೆಯ ಬೆಡ್‌ ರೂಮ್‌ನಲ್ಲಿ ಟೇಬಲ್‌ ಮೇಲೆ ಇಟ್ಟಿದ್ದ ಡೆಲ್‌ ಕಂಪೆನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಲ್ಯಾಪ್‌ಟಾಪ್‌ನ ಮೌಲ್ಯ ರೂ. 35,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ : 454, 380 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ಪಿರ್ಯಾದಿ ಶಾಂತಾ ಆಚಾರ್ಯ ಇವರು ಮುಂಬೈ ವಾಸಿಯಾಗಿದ್ದು, ಉಡುಪಿಯ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಉಡುಪಿಗೆ ಆಗಮಿಸಿದ್ದು, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕೃಷ್ಣ ಮಠದ ಬಳಿ ಇರುವ ಪೇಜಾವರ ಅಧೋಕ್ಷಜ ಗೆಸ್ಟ್‌ ಹೌಸ್‌ ನ ರೂಮ್‌ ನಂಬ್ರ: 9 ರಲ್ಲಿ ಉಳಕೊಂಡಿದ್ದು, ದಿನಾಂಕ 17/05/2022 ರಂದು 22:30 ಗಂಟೆಯಿಂದ ದಿನಾಂಕ 18/05/2022 ರಂದು ಬೆಳಿಗ್ಗೆ 06:00 ಗಂಟೆ ಮಧ್ಯಾವಧಿಯಲ್ಲಿ ಪಿರ್ಯಾದುದಾರರು ತಂಗಿದ್ದ ರೂಮಿನ ಕಿಟಕಿ ಪಕ್ಕದಲ್ಲಿರುವ ಟೇಬಲ್‌ ಮೇಲೆ ಇರಿಸಿದ್ದ 10 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು ರೂ. 10,000/- ನಗದು ಇರುವ ಪರ್ಸ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 50,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ 87/2022 ಕಲಂ : 457, 380 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ  ತಾಲೂಕು ಹೆಗ್ಗುಂಜೆ ಗ್ರಾಮದ, ಕೊತ್ತೂರು, ಮಕ್ಕಿಮನೆ ಎಂಬಲ್ಲಿ  ದಿನಾಂಕ 22.05.2022 ರಂದು ಬೆಳಗ್ಗಿನ ಜಾವ ಸುಮಾರು 3:00 ಗಂಟೆಗೆ ಪಿರ್ಯಾದಿ ಗಣೇಶ್‌ ಶೆಟ್ಟಿ ಇವರ ಮನೆಯಿಂದ ಪೂರ್ವ ಭಾಗಕ್ಕೆ ಇರುವ ಬಾವಿ ತಡೆ ಮನೆಗೆ ಹೋಗುವ ಡಾಮರು ರಸ್ತೆಯಲ್ಲಿ ಒಂದು ಕಾರು ಪೂರ್ಣ ಹೊತ್ತಿ ಉರಿಯುತ್ತಿದ್ದು, ಅಲ್ಲದೇ ಕಾರಿನ ಹಿಂದಿನ ಬಲಭಾಗದ ಬಾಗಿಲು ತೆರೆದಿದ್ದು, ಎರಡು ಮೃತ ಶರೀರ ಒಂದರ ಮೇಲೆ ಒಂದು ಇದ್ದು ಸುಟ್ಟು ಕರಕಲಾಗಿ, ಮೃತ ಶರೀರವನ್ನು ಗುರುತಿಸಲು ಅಸಾಧ್ಯವಾಗಿರುತ್ತದೆ. ಮೇಲ್ನೋಟಕ್ಕೆ ನೋಡುವಾಗ ಒಂದು ಹುಡುಗ ಹಾಗೂ ಇನ್ನೊಂದು ಹುಡುಗಿಯಂತೆ ಹಾಗೂ ಕಾರಿನ ಮುಂಭಾಗದಲ್ಲಿ ಸುಟ್ಟು ಕರಕಲಾದ KA.19.MJ.9534 ನೇ ನಂಬರ್‌ ಪ್ಲೇಟ್‌  ಕಂಡು ಬಂದಿರುತ್ತದೆ.ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು KA.19.MJ.9534 ನೇ ಕಾರಿನಲ್ಲಿ ಎಲ್ಲಿಂದಲೋ ಬಂದು ಕಾರಿನಲ್ಲಿ ಕುಳಿತು ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಲ್ಲದೇ ಮೃತದೇಹಗಳು ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಫಿರ್ಯಾದಿ ಶಾಂತಿ ಇವರ ಜೊತೆಯಲ್ಲಿ ವಾಸವಾಗಿರುವ ಅವರ ತಂದೆ ದೊರೆಸ್ವಾಮಿ ಸುಮಾರು 1 ವರ್ಷದಿಂದ ಮೂಲವ್ಯಾದಿ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತಿದ್ದು ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಈ ಹಿಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅನಾರೋಗ್ಯ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ದಿನಾಂಕ:21/05/2022  ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ  22/05/2022 ರಂದು ಬೆಳೀಗ್ಗೆ 05:30 ಗಂಟೆಯ  ಮಧ್ಯಾವದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ಗಿರೀಶ್ ಉಪಾಧ್ಯಾಯ ಇವರ  ಮಗ ರಾಘವ (7ವರ್ಷ)  3  ನೇ ತರಗತಿಯ ವಿದ್ಯಾಭ್ಯಾಸ  ಮಾಡುತ್ತಿದ್ದು , ದಿನಾಂಕ: 21-05-2022  ರಂದು ಬೆಳಿಗ್ಗೆ  ಶಾಲೆಗೆ ಹೋಗಿದ್ದು  ಮಧ್ಯಾಹ್ನ ಮನೆಯಲ್ಲಿ ಇದ್ದು  ಸಂಜೆ  ಸುಮಾರು 5:30 ಗಂಟೆಗೆ ಆಟ ಆಡಲು ಮನೆಯಿಂದ ಕೆರೆಮಠದ ಸಮೀಪ ಹೋಗಿರುತ್ತಾನೆ, ಸಂಜೆ  7:30 ಗಂಟೆ ಆದರೂ ಪಿರ್ಯಾದಿದಾರರ ಮಗ ರಾಘವ ಮನೆಗೆ  ಬಾರದ ಕಾರಣ  ಪಿರ್ಯಾದಿದಾರರ  ಹೆಂಡತಿ ಪಿರ್ಯಾದಿದಾರರಿಗೆ ತಿಳಿಸಿದ್ದು , ಪಿರ್ಯಾಧಿದಾರರು ಸಹ ಕೆಲಸದಿಂದ ಬಂದು ಮನೆಯ ಹತ್ತಿರದ ಪರಿಸರದಲ್ಲಿ ಹುಡಕಾಡಿರುತ್ತಾರೆ. ದಿನಾಂಕ: 22-05-2022 ರಂದು  ಕೆರೆಮಠದ ಕೆರೆಯ ಹತ್ತಿರ ಪಿರ್ಯಾಧಿದಾರ ಮಗನ ಬಟ್ಟೆ ಮತ್ತು ಚಪ್ಪಲಿ ಇದ್ದಿರುವುದು ನೋಡಿ ಮಲ್ಪೆ ಯ ಮುಳುಗು ತಜ್ಞ ಈಶ್ವರ ಮಲ್ಪೆ ರವರನ್ನು ಕರೆಯಿಸಿ ಕೆರೆಯಲ್ಲಿ ಹುಡುಕಾಡಿಸಿದ್ದು ಸುಮಾರು ಬೆಳಿಗ್ಗೆ 10:30   ಗಂಟೆಗೆ  ಪಿರ್ಯಾದಿದಾರರ ಮಗ ರಾಘವನ ಮೃತದೇಹ ದೊರಕಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 22-05-2022 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080