ಅಭಿಪ್ರಾಯ / ಸಲಹೆಗಳು

22-05-2021 ದೈನಂದಿನ ಅಪರಾಧ ವರದಿ - ಪೂರ್ವಾಹ್ನ

ಇತರ ಪ್ರಕರಣಗಳು

  • ಮಲ್ಪೆ: ದಿನಾಂಕ:21-05-2021 ರಂದು ಬೆಳಿಗ್ಗೆ 08:15 ಗಂಟೆಗೆ ಪಿರ್ಯಾದಿ ಸಕ್ತಿವೇಲು ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಮಲ್ಪೆಯ ಯುಬಿಎಂಸಿ ಚರ್ಚ್‌ ಹತ್ತಿರ ರೌಂಡ್ಸ್ ನಲ್ಲಿ ಇರುವಾಗ ಮಲ್ಪೆ ಚರ್ಚ್‌ ನ ಪಕ್ಕದಲ್ಲಿರುವ ದೇವರಾಜ್ ರವರಿಗೆ ಸೇರಿದ ತರಕಾರಿ ಅಂಗಡಿಯಲ್ಲಿ ಮುಂಜಾಗೃತ ಕ್ರಮವಾಗಿ ಯಾವುದೇ ಮಾಸ್ಕ್‌, ಗ್ಲೌಸ್‌, ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ತರಕಾರಿಯನ್ನು ಗ್ರಾಹಕರುಗಳಿಗೆ ಮಾರಾಟ ಮಾಡುತ್ತಿದ್ದರು. ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದರು ಸಹಾ ತರಕಾರಿ ಅಂಗಡಿಯ ಒಳಗೆ ಗ್ರಾಹಕರೇ ತರಕಾರಿಯನ್ನು ಆಯ್ದುಕೊಳ್ಳುತ್ತಿದ್ದು ಮಾರಾಣಾಂತಿಕ ಕರೋನಾ ಸೋಂಕು ತಡೆಗಟ್ಟುವಲ್ಲಿ ಗ್ರಾಹಕರಿಗೆ ಅಂಗಡಿಯ ಹೊರಭಾಗದಲ್ಲಿ ಯಾವುದೇ ಪ್ರತ್ಯೇಕ ವ್ಯವಸ್ಥೆ ಮಾಡದೆ ಒಳಭಾಗದಲ್ಲಿ ಗ್ರಾಹಕರುಗಳಿಗೆ ಅನುವು ಮಾಡಿ ಸೋಂಕು ಹರಡುವಲ್ಲಿ ತೀವ್ರ ನಿರ್ಲಕ್ಷತನ ವಹಿಸಿದ ಅಂಗಡಿಯ ಮಾಲಿಕರಾದ ಆರೋಪಿ ದೇವರಾಜ್ ನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 55/2021  ಕಲಂ.269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ: ದಿನಾಂಕ:21-05-2021 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿ ಸಕ್ತಿವೇಲು ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ  ಹೂಡೆಯ ಅಬ್ದುಲ್ ಸಮೀರ್(41) ಎಂಬುವರ ಅಮ್ಚಿ ಚಿಕನ್ ಸೆಂಟರ್‌ ನಲ್ಲಿ ಮುಂಜಾಗೃತ ಕ್ರಮವಾಗಿ ಯಾವುದೇ ಮಾಸ್ಕ್‌, ಗ್ಲೌಸ್‌, ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಚಿಕನ್‌ ಸೆಂಟರ್ ನಲ್ಲಿ ಗ್ರಾಹಕರರಿಗೆ ಚಿಕನ್‌ ಕಟ್‌ ಮಾಡಿ ಮಾರಾಟ ಮಾಡುತ್ತಿದ್ದರು. ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದರು ಸಹಾ  ಚಿಕನ್ ಸೆಂಟರ್ ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೇ ಗ್ರಾಹಕರನ್ನು ಚಿಕನ್ ಸೆಂಟರ್ ಒಳಗೆ ನಿಲ್ಲಿಸಿಕೊಂಡು ಚಿಕನ್ ಕಟ್‌ ಮಾಡಿ ಗ್ರಾಹಕರಿಗೆ ನೀಡುತ್ತಿದ್ದು  ಮಾರಾಣಾಂತಿಕ ಕರೋನಾ ಸೋಂಕು ತಡೆಗಟ್ಟುವಲ್ಲಿ ಗ್ರಾಹಕರಿಗೆ ಅಂಗಡಿಯ ಹೊರಭಾಗದಲ್ಲಿ ಯಾವುದೇ ಪ್ರತ್ಯೇಕ ವ್ಯವಸ್ಥೆ ಮಾಡದೆ ಒಳಭಾಗದಲ್ಲಿ ಗ್ರಾಹಕರುಗಳಿಗೆ ಅನುವು ಮಾಡಿ ಸೋಂಕು ಹರಡುವಲ್ಲಿ ತೀವ್ರ ನಿರ್ಲಕ್ಷತನ ವಹಿಸಿದ ಚಿಕನ್‌ ಸೆಂಟರ್‌ನ ಮಾಲಿಕರಾದ ಆರೋಪಿ ಅಬ್ದುಲ್ ಸಮೀರ್‌ ನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 56/2021 ಕಲಂ.269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ : ದಿನಾಂಕ: 21-05-2021 ರಂದು ಪಿರ್ಯಾದಿ ಸಕ್ತಿವೇಲು ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಹೂಡೆ ಜಂಕ್ಷನ್ ಹತ್ತಿರ ರೌಂಡ್ಸ್ ಸಮಯ 10:30 ಗಂಟೆಗೆ ಕೃತಿ ಹೋಟೆಲ್ ನಲ್ಲಿ ಮುಂಜಾಗೃತಾ ಕ್ರಮವಾಗಿ ಯಾವುದೇ ಮಾಸ್ಕ, ಗ್ಲೌಸ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಹೋಟೆಲ್ ನಲ್ಲಿ ಗ್ರಾಹಕರಿಗೆ ಸರ್ವೀಸ್ ಮಾಡಬಾರದಾಗಿ ಆದೇಶವಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಸರ್ವೀಸ್ ಮಾಡುತ್ತಿವುದು ಕಂಡು ಬರುವುದನ್ನು ಗಮನಿಸಿದ ಪಿರ್ಯಾದಿದಾರರು ಹೋಟೆಲ್ ಒಳಗಡೆ ತೆರಳಿ ಹೋಟೆಲ್ ನ ಒಳಗಡೆ ಉಪಾಹಾರ ಮಾಡುತ್ತಿದ್ದವರನ್ನು   ವಿಚಾರಿಸಲಾಗಿ  1) ಹರೀಶ್,  2) ಪಾಂಡುರಂಗ ಎಂಬುದಾಗಿ ತಿಳಿಸಿದ್ದು ಹಾಗೂ ಗ್ರಾಹಕರಿಗೆ ಹೋಟೆಲ್ ಒಳಗಡೆ  ಮುಖಕ್ಕೆ ಮಾಸ್ಕ ಧರಿಸದೇ, ನಿಷೇದಾಜ್ಞೆ ಯನ್ನು ಉಲ್ಲಂಘಿಸಿ ತಿಂಡಿ ಚಾ ವನ್ನು ಹೋಟೆಲ್ ನ ಒಳಗಡೆ ಗ್ರಾಹಕರಿಗೆ ಸರ್ವೀಸ್ ಮಾಡುತ್ತಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ ದಿನಕರ ಸುವರ್ಣ ಎಂದು ತಿಳಿಸಿದ್ದು, ಸದ್ರಿ ವ್ಯಕ್ತಿ ಮಾರಣಾಂತಿಕ ಕೋವಿಡ್ 19 ಸೋಂಕನ್ನು ಸಾರ್ವಜನಿಕರಿಗೆ ಹರಡುವ ಸಂಭವ ವಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರದ ಸ್ವಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಸ್ವೆಚ್ಛಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಹೋಟೆಲ್ ನಲ್ಲಿ ಮಾಸ್ಕ  ಹಾಗೂ ಗ್ಲೌಸ್ ಧರಿಸದೇ  ಸರ್ವೀಸ್ ಮಾಡಿ, ಕಾನೂನು ಉಲ್ಲಂಘಿಸಿದ್ದು, ಸದ್ರಿ ಆರೋಪಿ ದಿನಕರ ಸುವರ್ಣನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 57/2021 ಕಲಂ.269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ: ದಿನಾಂಕ:21 -05-2021 ರಂದು ಪಿರ್ಯಾದಿ ಸಕ್ತಿವೇಲು ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಹಳೆ ಬಂದರು ರಸ್ತೆಯಲ್ಲಿ ರೌಂಡ್ಸ್ ಸಮಯ 12:15  ಗಂಟೆಗೆ ಶ್ರೀ ದುರ್ಗಾ ಪ್ರಸಾದ್ ಹೋಟೆಲ್ ನಲ್ಲಿ ಮುಂಜಾಗೃತಾ ಕ್ರಮವಾಗಿ ಯಾವುದೇ ಮಾಸ್ಕ, ಗ್ಲೌಸ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಹೋಟೆಲ್ ನಲ್ಲಿ ಗ್ರಾಹಕರಿಗೆ ಸರ್ವೀಸ್ ಮಾಡಬಾರದಾಗಿ ಆದೇಶವಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಸರ್ವೀಸ್ ಮಾಡುತ್ತಿವುದು ಕಂಡು ಬರುವುದನ್ನು ಗಮನಿಸಿದ ಹೋಟೆಲ್ ಒಳಗಡೆ ತೆರಳಿ ಹೋಟೆಲ್ ನ  ಒಳಗಡೆ ಉಪಾಹಾರ ಮಾಡುತ್ತಿದ್ದವರನ್ನು ವಿಚಾರಿಸಲಾಗಿ 1) ಉದಯ ಸಿ ಸುವರ್ಣ, 2) ಪ್ರಶೋಬ್, ಎಂಬುದಾಗಿ ತಿಳಿಸಿದ್ದು ಹಾಗೂ ಗ್ರಾಹಕರಿಗೆ ಹೋಟೆಲ್ ಒಳಗಡೆ ಮುಖಕ್ಕೆ ಮಾಸ್ಕ ಧರಿಸದೇ, ನಿಷೇದಾಜ್ಞೆ ಯನ್ನು ಉಲ್ಲಂಘಿಸಿ ತಿಂಡಿ ಚಾ ವನ್ನು ಹೋಟೆಲ್ ನಲ್ಲಿ ಮೂವರು ಗ್ರಾಹಕರಿಗೆ ಸರ್ವೀಸ್ ಮಾಡುತ್ತಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1) ರಾಮಕೃಷ್ಣ ನಾಯ್ಕ 2)  ಉದಯ, 3) ಶ್ರೀಮತಿ ಜಯಂತಿ ಎಂದು ತಿಳಿಸಿದ್ದು,ಸದ್ರಿ ವ್ಯಕ್ತಿಯು ಮಾರಣಾಂತಿಕ ಕೋವಿಡ್ 19 ಸೋಂಕನ್ನು ಸಾರ್ವಜನಿಕರಿಗೆ ಹರಡುವ ಸಂಭವ ವಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರದ ಸ್ವಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಸ್ವೆಚ್ಛಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಹೋಟೆಲ್ ನಲ್ಲಿ ಮಾಸ್ಕ ಹಾಗೂ ಗ್ಲೌಸ್ ಧರಿಸದೇ ಸರ್ವೀಸ್ ಮಾಡಿ, ಕಾನೂನು ಉಲ್ಲಂಘಿಸಿದ್ದು, ಸದ್ರಿ ಆರೋಪಿತರಾದ ರಾಮಕೃಷ್ಣ ನಾಯ್ಕ, ಉದಯ ,ಶ್ರೀಮತಿ ಜಯಂತಿ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 58/2021  ಕಲಂ.269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ : ದಿನಾಂಕ:21-05-2021 ರಂದು 16:00 ಗಂಟೆಗೆ ಪಿರ್ಯಾದಿ ಸಕ್ತಿವೇಲು ಈ, ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಮಲ್ಪೆ ಜಂಕ್ಷನ್ ಹತ್ತಿರ ರೌಂಡ್ಸ್ ಸಮಯ  KA -20-EQ7689ನೇ ಸ್ಕೂಟರ್, ಹಾಗೂ KA-20-ET-9129ನೇ ಡಿಯೋ ಸ್ಕೂಟರ್ ಸವಾರರುಗಳು ಸ್ಕೂಟರನ್ನು ಚಲಾಯಿಸಿಕೊಂಡು ಉಡುಪಿ ಕಡೆಯಿಂದ ಮಲ್ಪೆ ಬಂದರು ಕಡೆಗೆ ಬರುತ್ತಿದ್ದರು. ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತರು ಕೊರೊನಾ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ ಸ್ಕೂಟರ್ ಸವಾರಿ ಮಾಡಿಕೊಂಡಿದ್ದ ಅನ್ವಾಜ್ ಹಾಗೂ ಇನ್ನೊಂದು ಸ್ಕೂಟರ್ ಸವಾರ ಮನೋಜ್ ಎಂ ಸುವರ್ಣ ಇವರುಗಳಿಂದ ಕೊವಿಡ್ 19 ಸೋಂಕು ಸಾರ್ವಜನಿಕರಿಗೆ ಹರಡುವ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಸ್ಪಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದರಿಂದ ಇಬ್ಬರೂ  ತಿರುಗಾಡಲು ಉಪಯೋಗಿಸಿದ 2 ಸ್ಕೂಟರ್ ನ್ನು ಸ್ವಾಧೀನಪಡಿಸಿಕೊಂಡು ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 59 /2021 ಕಲಂ. 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 23/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಠಾಣೆ ಇವರು ದಿನಾಂಕ 21/05/2021 ರಂದು ಬೆಳಿಗ್ಗೆ 10.30 ಗಂಟೆಯ ಸಮಯಕ್ಕೆ ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನದ ಪೇಟೆ ಬಳಿಯಲ್ಲಿ KA20EG4301ನೇ ನಂಬ್ರದ ಮೋಟಾರ್ ಸೈಕಲ್ ಸವಾರ ತೇಜಸ್ ಪ್ರಾಯ 25 ವರ್ಷ ತಂದೆ: ಶಂಕರ ವಾಸ: ಸಾಸ್ತಾನ ಟೋಲ್ ಬಳಿ ಗುಂಡ್ಮಿ ಗ್ರಾಮ ಬ್ರಹ್ಮಾವರ ತಾಲೂಕು ಈತನು ತನ್ನ ಸಹ ಸವಾರನಾಗಿ ವಿಶ್ವನಾಥ ಪ್ರಾಯ 22 ವರ್ಷ ತಂದೆ:ಮಂಜುನಾಥ ವಾಸ:ದೊಡ್ಮನೆಬೆಟ್ಟು ಗುಂಡ್ಮಿ ಗ್ರಾಮ ಬ್ರಹ್ಮಾವರ ತಾಲೂಕು ಎಂಬವರೊಂದಿಗೆ ಯಾವುದೇ ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು,. ಸದ್ರಿಯವರಿಗೆ ಈ ಬಗ್ಗೆ ನೋಟಿಸ್ ಜ್ಯಾರಿ ಮಾಡಿ , ಮೋಟಾರ್ ಸೈಕಲನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ಆರೋಪಿ ಶೇಖರ ಶೆಟ್ಟಿ ಪ್ರಾಯ 60 ವರ್ಷ ತಂದೆ, ಸಂಜೀವ ಶೆಟ್ಟಿ ವಾಸ,ಮೂಡಬಗೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಈತನು ದಿನಾಂಕ.21.05.2021 ರಂದು 12;10  ಘಂಟೆಗೆ  ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ ಎಂಬಲ್ಲಿ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗಡೆ ಕೋವಿಡ್ -19 ಸಾಂಕ್ರಾಮಿಕ ಕರೋನಾ ಸೊಂಕನ್ನು ತಡೆಗಟ್ಟಲು ಜಿಲ್ಲಾಡಳಿತ ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ ಸರಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ  ಅಕ್ರಮವಾಗಿ ಶರಾಬು ಸೇವನೆ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 58/2021 ಕಲಂ. KARNATAKA EXCISE ACT 1965 U/s 15(A) 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 21-05-2021 ರಂದು 10:00 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹೋಂ ಕ್ವಾರೈಂಟೈನ್ ನಲ್ಲಿರುವ ರೋಗಿಗಳನ್ನು ವೀಕ್ಷಣೆ ಬಗ್ಗೆ ಕಾವ್ರಾಡಿ  ಗ್ರಾಮದ ಕಂಡ್ಲೂರು  ಕೆಳಪೇಟೆ ಬಳಿ   ಆಪಾದಿತ ಖಾಲೀಫ್  ಮಹಮ್ಮದ್ ಜಾಫರ್, ತಂದೆ: ಅಬ್ದುಲ್ ರೆಹಮಾನ್, ವಾಸ: ಕೆಳಪೇಟೆ ಕಂಡ್ಲೂರು ಕಾವ್ರಾಡಿ ಗ್ರಾಮ ಈತನ ಮನೆಗೆ ಹೋದಾಗ ಆಪಾದಿತ  ಮನೆಯಲ್ಲಿ ಇಲ್ಲದೇ ಇದ್ದು ಇತನು ಕೋವಿಡ್  ಪಾಸಿಟೀವ್ ವ್ಯಕ್ತಿಯಾಗಿದ್ದು ಹೀಗಿದ್ದರೂ ಕೂಡಾ ಹೊರಗಡೆ ತಿರುಗಾಡಿ ಉಳಿದ ವ್ಯಕ್ತಿಗಳಿಗೂ ಕೂಡಾ ಕೋವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ಹರಡುವಿಕೆಯ  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 39/2021 ಕಲಂ:  269 ,271 ಐಪಿಸಿಯಂತೆ  ಪ್ರಕರಣ  ದಾಖಲಿಸಲಾಗಿದೆ.
  • ಕಾಪು: ಕಾಪು ಪುರಸಭಾ ವ್ಯಾಪ್ತಿಯ ಲೈಟ್ ಹೌಸ್ ವಾರ್ಡ್‌ನ ಕಾಡ್ಯಾ ಗುರಿಕಾರ ಮನೆ, ಕೋಟ್ಯಾನ್ ಮೂಲಸ್ಥಾನದ ಬಳಿ ಪಡುವಿನಲ್ಲಿ ವಾಸವಿರುವ ಸುಕುಮಾರ್ ಕೋಟ್ಯಾನ್ (47),ಮಮತ ಕೋಟ್ಯಾನ್ (45)ಮತ್ತು ಎರಡು ಮಕ್ಕಳು ಕೋವಿಡ್-19 ಪಾಸಿಟಿವ್ ರೋಗಿಗಳಾಗಿದ್ದು ದಿನಾಂಕ 18/05/2021 ರಿಂದ ಹೋಂ ಐಸೋಲೇಷನ್‌ ನಲ್ಲಿದ್ದು ಸದರಿಯವರ ಹೋಂ ಐಸೋಲೇಷನ್ ಅವಧಿ ದಿನಾಂಕ 27/05/2021 ಮುಕ್ತಾಯಗೊಳ್ಳಲಿದ್ದು, ಆದರೂ ಸದ್ರಿ 4 ಜನರು ಸರಕಾರದ ಲಾಕ್ ಡೌನ್/ಹೋಂ ಐಸೋಲೇಷನ್ ಆದೇಶವನ್ನು ಉಲ್ಲಂಘಿಸಿ ಕೋವಿಡ್-19 ಮಾರಕ ರೋಗ ಬೇರೆಯವರಿಗೂ ಹರಡುವುದೆಂದು ತಿಳಿದರೂ ಕೂಡಾ ನಿರ್ಲಕ್ಷತನದಿಂದ ಸರಕಾರದ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ ಮುಂಬೈಗೆ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 82/2021 ಕಲಂ 269 ಐಪಿಸಿಯಂತೆ  ಪ್ರಕರಣ  ದಾಖಲಿಸಲಾಗಿದೆ.

ಅಸ್ವಾಭಾವಿಕ ಪ್ರಕರಣ

  • ಬೈಂದೂರು: ಫಿರ್ಯಾದಿ ಗಣಪತಿ ಖಾರ್ವಿ ಪ್ರಾಯ:57 ವರ್ಷ.ತಂದೆ: ದಿ ಕುಪ್ಪ ಖಾರ್ವಿ, ವಾಸ;ಅಯ್ಯಪ್ಪನ ಮನೆ,ಮಡಿಕಲ್, ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರ ತಮ್ಮ ಲಕ್ಷ್ಮಣ ಖಾರ್ವಿ ಪ್ರಾಯ:52 ವರ್ಷರವರು ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಕಳೆದೆರೆಡು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದುದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲದೇ ವಿಪರೀತ ಮಧ್ಯಪಾನ ಚಟವನ್ನು ಹೊಂದಿದವರಾಗಿದ್ದು ಮಾನಸಿಕ ಖಾಯಿಲೆ ಇರುವುದರಿಂದ ಹೆಂಡತಿ ಮಕ್ಕಳೊಂದಿಗೆ ಜಗಳವಾಡುತ್ತಿದ್ದು ಕಳೆದ ಒಂದು ವಾರದ ಹಿಂದೆ ಹೆಂಡತಿ-ಮಕ್ಕಳು ತವರು ಮನೆಗೆ ಹೋಗಿದ್ದು ಲಕ್ಷ್ಮಣ ಖಾರ್ವಿರವರು ಒಬ್ಬಂಟಿಗರಾಗಿದ್ದು, ದಿನಾಂಕ;21/05/2021ರಂದು ಬೆಳಿಗ್ಗೆ ಪಿರ್ಯಾದಿದಾರರಿಗೆ ಧನಂಜಯ್ ಎಂಬುವವರು ಕರೆ ಮಾಡಿ ದಿನಾಂಕ 19/05/2021ರಂದು ಕಾಣ ಸಿಕ್ಕಿದ್ದು ಅದರ ನಂತರ ಕಾಣದೇ ಇದ್ದು ಮನೆಯ ಒಳಗಿನಿಂದ ಲಾಕ್ ಇದ್ದು ಕರೆದರೂ ಉತ್ತರಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದು ನಂತರ ಫಿರ್ಯಾದಿದಾರರು ಹೋಗಿ ನೋಡಿದಾಗ ಲಕ್ಷ್ಮಣ ಖಾರ್ವಿರವರು ಮನೆಯ ಹಾಲ್ ನಲ್ಲಿ ಸೀಲೀಂಗ್ ಪ್ಯಾನ್ ಗೆ ನೈಲಾನ್ ರೋಪ್ ಕಟ್ಟಿ ನೈಲಾನ್ ರೋಪ್ ನ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಮೃತ ಲಕ್ಷ್ಮಣ ಖಾರ್ವಿರವರು ವಿಪರೀತ ಮಧ್ಯಪಾನ ಚಟವನ್ನು ಹೊಂದಿದವರಾಗಿದ್ದು, ಮಾನಸಿಕ ಖಾಯಿಲೆ ಇರುವುದರಿಂದ ಜಗಳವಾಡುತ್ತಿದ್ದು ಹೆಂಡತಿ ಮಕ್ಕಳು ತವರು ಮನೆಗೆ ಹೋಗಿದ್ದರಿಂದ ಅದೇ ವಿಚಾರಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 19/05/2021 ರಂದು ಮಧ್ಯಾಹ್ನ  12:00 ಗಂಟೆಯಿಂದ ದಿ:21-05-2021 ರ ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2021  ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 22-05-2021 10:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080