ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು:

 • ಕಾಪು: ರಾಘವೇಂದ್ರ ಸಿ. ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 22.05.2021 ರಂದು ಸಿಬ್ಬಂದಿಯವರೊಂದಿಗೆ  ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10.05.2021 ರಂದು ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ  ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ನಾನು ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 10.15  ಗಂಟೆಗೆ  ಉಡುಪಿ ತಾಲೂಕು, ಉದ್ಯಾವರ ಗ್ರಾಮದ ವೀರ ವಿಠ್ಠಲ ದೇವಸ್ಥಾನ ಹತ್ತಿರ  ಕಲರ್ಸ್ ಫುಟ್ ವೇರ್ ಹೆಸರಿನ ಚಪ್ಪಲಿ ಅಂಗಡಿಯನ್ನು ತೆರೆದುಕೊಂಡು ಚಪ್ಪಲಿ ಮಾರಾಟ ಮಾಡುತ್ತಿದ್ದವನನ್ನು ಹೆಸರು ವಿಳಾಸ ವಿಚಾರಿಸಲಾಗಿ ನಾಸೀರ್ ಪ್ರಾಯ 45 ವರ್ಷ ತಂದೆ: ಅಬೂಬಕರ್ ವಾಸ :ಕಿಜಿರಾ ಹೌಸ್ ಅಚ್ಚಡ ಕ್ರಾಸ್ ಏಣಗುಡ್ಡೆ ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿರುವುದಾಗಿದೆ. ಸದ್ರಿ ಆರೋಪಿಯನ್ನು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ  ಚಪ್ಪಲಿ ಅಂಗಡಿಯನ್ನು  ತೆರೆದುಕೊಂಡು ಚಪ್ಪಲಿ ಮಾರಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 83/2021 ಕಲಂ: 269 ಐಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಕಾಪು: ರಾಘವೇಂದ್ರ ಸಿ. ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 22.05.2021 ರಂದು ಸಿಬ್ಬಂದಿಯವರೊಂದಿಗೆ  ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10.05.2021 ರಂದು ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ  ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ನಾನು ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11.15 ಗಂಟೆಗೆ ಉಡುಪಿ ತಾಲೂಕು, ಉದ್ಯಾವರ ಗ್ರಾಮದ ಮೀನು ಮಾರ್ಕೆಟ್ ಹತ್ತಿರದ ಗೀತಾ ಹೇರ್ ಡ್ರೆಸಸ್  ಅಂಗಡಿಯನ್ನು ತೆರೆದುಕೊಂಡು ಹೇರ್ ಕಟ್ಟಿಂಗ್ ಮಾಡುತ್ತಿದ್ದವನನ್ನು ಹೆಸರು ವಿಳಾಸ ವಿಚಾರಿಸಲಾಗಿ ಶಿವಣ್ಣ  ಪ್ರಾಯ 50 ವರ್ಷ ತಂದೆ.ದಿ. ಸಣ್ಣ ಭಂಡಾರಿ  ವಾಸ ಗರಡಿ  ರೋಡ್ ಉದ್ಯಾವರ  ಗ್ರಾಮ ಎಂದು ತಿಳಿಸಿರುವುದಾಗಿದೆ. ಸದ್ರಿ ಆರೋಪಿಯನ್ನು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷ್ಯತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ.  ಹೇರ್ ಕಟ್ಟಿಂಗ್ ಅಂಗಡಿಯನ್ನು  ತೆರೆದುಕೊಂಡು ಹೇರ್  ಕಟ್ಟಂಗ್  ಮಾಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 84/2021 ಕಲಂ: 269 ಐಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಬ್ರಹ್ಮಾವರ : ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ ಇವರು ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು  ದಿನಾಂಕ: 22.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಚಾಂತಾರು ಗ್ರಾಮದ, ಚಾಂತಾರು, ಬ್ರಹ್ಮಾವರ –ಹೆಬ್ರಿ  ಮುಖ್ಯ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 08:55 ಗಂಟೆಯ ಸಮಯದಲ್ಲಿ ಆರೋಪಿ ಹರೀಶ್, ಚಿನ್ನ ಜುವೆಲ್ಲರ್ಸ್ , ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಎದುರು, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಈತನು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಎದುರುನಲ್ಲಿರುವ  ತಮ್ಮ ಚಿನ್ನ ಜುವೆಲ್ಲರ್ಸ್ ಅಂಗಡಿಯನ್ನು ವ್ಯವಹಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 91/2021 ಕಲಂ: 269,188 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಬ್ರಹ್ಮಾವರ : ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ ಇವರು ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ದಿನಾಂಕ: 22.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ, ಬ್ರಹ್ಮಾವರ ಬಸ್ಸ್ ನಿಲ್ದಾಣದ ಸಮೀಪ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:24 ಗಂಟೆಯ ಸಮಯದಲ್ಲಿ ಆರೋಪಿ ಮುರುಗೇಶ್, ಶ್ರೀ ಸಾಯಿ ಡಿಜಿಟಲ್ ಸೇವಾ ಕೇಂದ್ರ, ಪಂಚಾಯತ್ ಕಟ್ಟಡ, ಬಸ್ಸ್ ನಿಲ್ದಾಣದ ಬಳಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಸ್ಸ್ ನಿಲ್ದಾಣದ ಬಳಿ ಪಂಚಾಯತ್ ಕಟ್ಟಡದಲ್ಲಿರುವ ತಮ್ಮ ಶ್ರೀ ಸಾಯಿ ಡಿಜಿಟಲ್ ಸೇವಾ ಕೇಂದ್ರ ಇಂಟರ್‌ನೆಟ್ ಅಂಗಡಿಯನ್ನ ವ್ಯವಹಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 92/2021 ಕಲಂ: 269,188 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 24/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಬ್ರಹ್ಮಾವರ ಠಾಣಾ ಪೊಲೀಸ್ ನೀರಿಕ್ಷಕರು ನೀಡಿದ ಆದೇಶದಂತೆ  ವೆಂಕಟರಮಣ ದೇವಾಡಿಗ, ಹೆಚ್‌ಸಿ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 22/05/2021 ರಂದು ಸಿಬ್ಬಂದಿಯೊಂದಿಗೆ ಇಲಾಖಾ ಮೋಟಾರ್ ಸೈಕಲ್‌ನಲ್ಲಿ ಚಾತಾರು ಗ್ರಾಮದಲ್ಲಿ  ವಸ್ತುಗಳ ಖರೀದಿಯ ಅಂಗಡಿಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 10.05 ಗಂಟೆಗೆ 2ನೇ ಆರೋಪಿ ನಂದ ಕುಮಾರ್ ಕುಡ್ವ ರವರ ಮಾಲಕತ್ವದ ಚಾಂತಾರು ಗ್ರಾಮದ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ನವಮಿ ಸೂಪರ್ ಮಾರ್ಕೇಟ್ ಅಂಗಡಿಯನ್ನು, ಅವರ ಅನುಮತಿಯಂತೆ ಅಂಗಡಿಯ ಮೆನೇಜರ್ ಆದ 1ನೇ ಆರೋಪಿ ದಿಲೀಪ್, ಪ್ರಾಯ: 34 ವರ್ಷ, ತಂದೆ: ರಾಮಪ್ಪ ಪೂಜಾರಿ, ವಾಸ: ಪ್ರಿಯದರ್ಶ್‌, ಪೋಸ್ಟ್‌ ಆಫೀಸ್ ಬಳಿ, ಮಿಯ್ಯಾರು, ಕಾರ್ಕಳ ತಾಲೂಕು ಇವರು ವ್ಯಾಪಾರದ ಬಗ್ಗೆ ತೆರೆದು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 93/2021 ಕಲಂ 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಮಲ್ಪೆ: ದಿನಾಂಕ: 22/05/2021 ರಂದು ಸಕ್ತಿವೇಲು ಈ ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ,  ಉಡುಪಿ ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಮಲ್ಪೆ ಬಂದರು ಕಡೆ  ರೌಂಡ್ಸ್ ಸಮಯ ಬೆಳಿಗ್ಗೆ 09:45 ಗಂಟೆಗೆ ಶ್ರೀ ಪದ್ಮಾ ಪ್ರಸಾದ್ ಹೋಟೆಲ್ ನಲ್ಲಿ ಮುಂಜಾಗೃತಾ ಕ್ರಮವಾಗಿ ಯಾವುದೇ ಮಾಸ್ಕ, ಗ್ಲೌಸ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಹೋಟೆಲ್ ನಲ್ಲಿ ಗ್ರಾಹಕರಿಗೆ ಸರ್ವೀಸ್ ಮಾಡಬಾರದಾಗಿ ಆದೇಶವಿದ್ದರೂ ಸಹಾ ಆದೇಶವನ್ನು ಉಲ್ಲಂಘಿಸಿ ಸರ್ವೀಸ್ ಮಾಡುತ್ತಿವುದು ಕಂಡು ಬರುವುದನ್ನು ಗಮನಿಸಿದ ಪಿರ್ಯಾದಿದಾರರು ಹೋಟೆಲ್ ಒಳಗಡೆ ತೆರಳಿ ಹೋಟೆಲ್ ನ ಒಳಗಡೆ ಉಪಾಹಾರ ಮಾಡುತ್ತಿದ್ದವರನ್ನು ವಿಚಾರಿಸಲಾಗಿ 1) ಮಂಜುನಾಥ ಪೈ, 2) ಯೋಗೀಶ್ ಪೈ ಎಂಬುದಾಗಿ ತಿಳಿಸಿದ್ದು   ಹಾಗೂ ಗ್ರಾಹಕರಿಗೆ ಹೋಟೆಲ್ ಒಳಗಡೆ ಮುಖಕ್ಕೆ ಮಾಸ್ಕ ಧರಿಸದೇ,ನಿಷೇದಾಜ್ಞೆ ಯನ್ನು ಉಲ್ಲಂಘಿಸಿ ತಿಂಡಿ ಚಾ ವನ್ನು ಹೋಟೆಲ್ ನ ಒಳಗಡೆ ಗ್ರಾಹಕರಿಗೆ ಸರ್ವೀಸ್ ಮಾಡುತ್ತಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ  ವೆಂಕಟೇಶ  ಶೆಣೈ(ಪ್ರಾಯ: 58 ವರ್ಷ)ತಂದೆ: ವಿಠ್ಠಲದಾಸ, ವಾಸ:  ಪದ್ಮಶ್ರೀ  ಮನೆ  ಫಿಶರೀಸ್  ಹೈಸ್ಕೂಲ್  ಹಿಂಬದಿ  ಮಲ್ಪೆ ಕೊಡವೂರು ಗ್ರಾಮ ಎಂದು ತಿಳಿಸಿದ್ದು,ಸದ್ರಿ ವ್ಯಕ್ತಿ ಮಾರಣಾಂತಿಕ ಕೋವಿಡ್ 19 ಸೋಂಕನ್ನು ಸಾರ್ವಜನಿಕರಿಗೆ ಹರಡುವ ಸಂಭವ ವಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರದ ಸ್ವಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಸ್ವೆಚ್ಛಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಹೋಟೆಲ್ ನಲ್ಲಿ ಮಾಸ್ಕ  ಹಾಗೂ ಗ್ಲೌಸ್ ಧರಿಸದೇ ಸರ್ವೀಸ್ ಮಾಡಿ, ಕಾನೂನು ಉಲ್ಲಂಘಿಸಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 60/2021 ಕಲಂ 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.

ಅಪಘಾತ ಪ್ರಕರಣ

 • ಶಿರ್ವ: ಪಿರ್ಯಾದಿ ಗುರುಪ್ರಸಾದ್ ಇವರ ತಂದೆ ಹರಿದಾಸ್‌ ಭಟ್  ರವರು ಬೆಳಿಗ್ಗೆ ಅಗತ್ಯದ ಕೆಲಸ ನಿಮಿತ್ತ ತನ್ನ ಬಾಬ್ತು ಕೆಎ 20 ಎಕ್ಸ್ 2017 ನೇ ಮೋಟಾರ್ ಸೈಕಲಿನಲ್ಲಿ ಬಂದಿದ್ದು, ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09:05 ಗಂಟೆಗೆ ಕುರ್ಕಾಲು ಗ್ರಾಮದ ಸರ್ಕಾರಿಗುಡ್ಡೆ ಜಂಕ್ಷನ್ ಹತ್ತಿರ ತಲುಪುವಾಗ ಹಿಂದುಗಡೆಯಿಂದ ಅಂದರೆ ಶಂಕರಪುರ ಕಡೆಯಿಂದ ಕಟಪಾಡಿ ಕಡೆಗೆ ಕೆಎ 20 ಎಎ 6922 ನೇ ಅಟೋ ರಿಕ್ಷಾ ಚಾಲಕ ವಿಲಿಯಂ ಡಿಸೋಜಾ ರವರು  ತನ್ನ ಬಾಬ್ತು ಅಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ತಂದೆ ಹರಿದಾಸ್‌ ಭಟ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 20 ಎಕ್ಸ್ 2017 ನೇ ಮೋಟಾರ್ ಸೈಕಲಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ಹರಿದಾಸ್‌ ಭಟ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಹಿಂಬದಿ ತಲೆಗೆ ಗಂಬೀರ ಸ್ವರೂಪದ ಜಖಂ ಹಾಗೂ ಮೈಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಅಲ್ಲದೇ ಆರೋಪಿ ರಿಕ್ಷಾ ಚಾಲಕನು ಅಫಘಾತವಾದ ಬಗ್ಗೆ ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 32/21, ಕಲಂ 279,  338  IPC & 134(B) IMV Act ನಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 22-05-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ