ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

ಪಡುಬಿದ್ರಿ: ಪಿರ್ಯಾದಿ ಪ್ರಸಾದ್ ಇವರು ವ್ಯಾಪಾರ ವೃತ್ತಿ ಮಾಡಿಕೊಂಡಿದ್ದು, ದಿನಾಂಕ: 10.04.2023 ರಂದು ಅವರ ಬಾಬ್ತು ಮೋಟಾರ್‌‌ ಸೈಕಲ್ಲಿನಲ್ಲಿ ಕಾಪುವಿಗೆ ಹೋಗಿ ವಾಪಾಸ್ಸು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಪಡುಬಿದ್ರಿ ಕಡೆಗೆ ಬರುತ್ತಾ ಸಮಯ ಸುಮಾರು 18:00 ಗಂಟೆಯ ವೇಳೆಗೆ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ ಕಲ್ಸಂಕ ಸೇತುವೆ ಬಳಿ ತಲುಪಿದಾಗ KA-20-D-9376 ನೇ ನಂಬ್ರದ  ಬೊಲೆರೋ ಪಿಕಪ್ ವಾಹನದ ಚಾಲಕ ಸದಾನಂದ ಪಾದೆಬೆಟ್ಟು ಎಂಬಾತನು ತನ್ನ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್ಲನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿ ಎದುರು ಹೋಗುತ್ತಿದ್ದ KA-20-EZ-8100 ನೇ ನಂಬ್ರದ ಆಕ್ಟಿವಾ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಪರಿಚಯದ ಸ್ಕೂಟಿ ಸವಾರ ಪಲಿಮಾರು ಗ್ರಾಮದ ವಿಜಯ ಪೂಜಾರಿ(68) ಎಂಬುವರು ರಸ್ತೆಗೆ ಎಸೆಯಲ್ಪಟ್ಟು, ಅವರ ತಲೆಗೆ, ಕುತ್ತಿಗೆಗೆ ಹಾಗೂ ಎಡಭುಜಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನರಾಗಿರುತ್ತಾರೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023, ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

ಕುಂದಾಪುರ: ಪಿರ್ಯಾದಿ ಗುರುಮೂರ್ತಿ, ಕೆ.ಸಿ ಇವರು ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಉಪಜಾತಿಗೆ ಸೇರಿದವರಾಗಿರುತ್ತಾರೆ. ಪಿರ್ಯಾದಿದಾರರ ತಾಯಿಯ ಹೆಸರಿನಲ್ಲಿ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಸ. ನಂ 162A ರಲ್ಲಿ 0.75 ಎಕ್ರೆ ಕೃಷಿ ಭೂಮಿ ಇದ್ದು ಸದ್ರಿ ಜಾಗದಲ್ಲಿ ಮನೆ ಹಾಗೂ ತೋಟ ಮಾಡಿಕೊಂಡು ಪಿರ್ಯಾದಿದಾರರ ತಾಯಿಯೊಂದಿಗೆ ವಾಸವಾಗಿರುತ್ತಾರೆ. ಸದ್ರಿ ಸ್ಥಿರಾಸ್ಥಿಯ ಉತ್ತರ ಭಾಗದಲ್ಲಿ ಸ.ನಂ 162 ರ ಸರ್ಕಾರಿ ಭೂಮಿಯಲ್ಲಿ 2.5 ಎಕ್ರೆ ಭೂಮಿ ಪಿರ್ಯಾದಿದಾರರ ಸ್ವಾದೀನತೆ ಇದ್ದು ಆ ಭೂಮಿಯಲ್ಲಿ ತೆಂಗು, ಅಡಿಕೆ ಕೃಷಿ ಮಾಡುತ್ತಿದ್ದು ಸದ್ರಿ ಜಾಗದ ಪೂರ್ವ ಭಾಗದಲ್ಲಿ ಆರೋಪಿತ ಶಂಕರನಾರಾಯಣ ಕರಣಿಕ ಮತ್ತು ಜಯಂತ ಕರಣಿಕ ಇವರುಗಳು ಆ ಜಾಗ ತಮಗೆ ಸೇರಿದ್ದೆಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಜಗಳ ಮಾಡಿ ಪಿರ್ಯಾದಿದಾರರ ಜಾತಿಯನ್ನು ಹೀನಾಯವಾಗಿ ನಿಂದಿಸಿರುತ್ತಾರೆ. ನಂತರ ದಿನಾಂಕ 01.04.2023 ರಂದು 09:00 ಗಂಟೆಗೆ ಪಿರ್ಯಾದಿದಾರರು ಕೃಷಿ ಭೂಮಿಗೆ ನೀರು ಹಾಯಿಸಲು ಹೋದಾಗ ಆರೋಪಿಗಳು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೈಯಲ್ಲಿ ಪ್ಲಾಸ್ಟಿಕ್‌ ಮಗ್ಗಗಳ ಹಾಗೆ ಇರುವ ವಸ್ತುಗಳನ್ನು ಹಿಡಿದುಕೊಂಡು ಸ್ಥಳದಿಂದ ಓಡಿ ಹೋಗಿದ್ದು ಬಳಿಕ ಪಿರ್ಯಾದಿದಾರರು ಜಾಗದಲ್ಲಿರುವ ಸಸಿಗಳನ್ನು ನೋಡಿದಾಗ ಉತ್ತಮ ತಳಿಯ 100 ತೆಂಗಿನ ಸಸಿಗಳು ಮತ್ತು 60 ಅಡಿಕೆ ಸಸಿಗಳಿಗೆ ರಾಸಾಯನಿಕವನ್ನು ಸಿಂಪಡಿಸಿ ಸುಟ್ಟು ಹಾಕಿ ಆರ್ಥಿಕ ನಷ್ಟ ಉಂಟುಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ: 447, 427, 504 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ: 3(1) (r), 3(1)(s), 3(1)(q), 3(1)(g), 3(2)(5-a) SC/ST (POA) Act 2015 ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಪು: ಸುಮ. ಬಿ ಪಿ.ಎಸ್.ಐ(ಕಾ.ಸು & ಸಂಚಾರ) ಕಾಪು ಪೊಲೀಸ್ ಠಾಣೆ ಇವರಿಗೆ  ದಿನಾಂಕ:21-04-2023 ರಂದು 13:30  ಗಂಟೆಯ ಸಮಯಕ್ಕೆ ಉಚ್ಚಿಲ ಕಡೆಯಿಂದ  ಉದ್ಯಾವರದ  ಕಡೆಗೆ ನೀಲಿ ಮತ್ತು ಕಪ್ಪು  ಬಣ್ಣದ ಬಜಾಜ್‌ ಕಂಪೆನಿಯ  ಡಿಸ್ಕವರಿ ಮೋಟಾರ್‌ ಸೈಕಲ್ಲಿನಲ್ಲಿ ಅಕ್ರಮ ದನದ ಮಾಂಸ ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ  ಠಾಣೆಯಿಂದ ಹೊರಟು ಸಮಯ ಮಧ್ಯಾಹ್ನ 13:45 ಗಂಟೆಗೆ ಉದ್ಯಾವರ ಗ್ರಾಮದ ಕರಾವಳಿ ಟಿಂಬರ್ಸ್‌ ಬಳಿ ಹೋಗಿ ರಾ.ಹೆ 66 ಮಂಗಳೂರು –ಉಡುಪಿ ರಸ್ತೆಯಲ್ಲಿ ಕಾಯುತ್ತಿರುವಾಗ ನೀಲಿ ಮತ್ತು ಕಪ್ಪು ಬಣ್ಣದ ಮೋಟಾರ್‌ ಸೈಕಲ್ಲಿನಲ್ಲಿ   ಬರುತ್ತಿರುವುದನ್ನು  ಖಚಿತ ಪಡಿಸಿಕೊಂಡು ಸಮಯ 14:00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಮೋಟಾರ್‌ ಸೈಕಲನ್ನು ನಿಲ್ಲಿಸುವ ಸೂಚನೆ ನೀಡಿ, ತಡೆದು ನಿಲ್ಲಿಸಿ, ಆತನ ಮೋಟಾರ್‌ ಸೈಕಲ್‌ ನಂಬ್ರ ನೋಡಲಾಗಿ ನಂಬ್ರ ನೋಡಲಾಗಿ ಕೆ.ಎ. 19-ಇಜೆ-7667 ನೇ  ಬಜಾಜ್‌ ಕಂಪೆನಿಯ ಡಿಸ್ಕವರಿ ಮೋಟಾರ್‌ ಸೈಕಲ್‌ ಆಗಿದ್ದು   ಸದ್ರಿ ಮೋಟಾರ್‌ ಸೈಕಲ್ಲಿನಲ್ಲಿ  ಬಿಳಿ ಪಾಲಿಥೀನ್ ಪಾಕೇಟ್‌ನಲ್ಲಿರುವ ಮಾಂಸವನ್ನು ನೋಡಿ ಆತನ ಬಳಿ ವಿಚಾರಿಸಿದಾಗ ಆತನು ಅದು ದನದ ಮಾಂಸ ಎಂಬುದಾಗಿ ತಿಳಿಸಿ 10 ಕೆ.ಜಿ ದನದ ಮಾಂಸವಿದ್ದು ಅದನ್ನು  ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ  ತಿಳಿಸಿದ್ದು.  ದನದ ಮಾಂಸ ಮಾರಾಟ ಮಾಡಲು ಪರವಾನಗಿ  ಬಗ್ಗೆ ವಿಚಾರಿಸಿದಲ್ಲಿ ಯಾವುದೇ  ಪರವಾನಗಿ ಇರುವುದಿಲ್ಲವಾಗಿ ತಿಳಿಸಿದ್ದು,  ಮಾಂಸವನ್ನು ಎಲ್ಲಿಂದ ತಂದಿರುವೇ ಎಂಬ ಬಗ್ಗೆ ವಿಚಾರಣೆ ಮಾಡಲಾಗಿ, ನಾನು ರಂಜಾನ್‌ ಹಬ್ಬದ ಬಗ್ಗೆ ಉಚ್ಚಿಲ ಕಡೆಯಿಂದ ದನದ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಂದಿದ್ದು  ಉದ್ಯಾವರದ ಕಡೆಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ, ಆತನ ಹೆಸರು ವಿಳಾಸ ಕೇಳಲಾಗಿ  ಅಶ್ಪಕ್‌ (38) ತಂದೆ: ಅಮೀರ್‌ ಅಬ್ಬಾಸ್‌ ವಾಸ: ಜಮೀರ್‌ ಮಂಜಿಲ್‌,  ಸಾಲುಮರ ಉದ್ಯಾವರ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಮೊ.8105909235 ಎಂಬುದಾಗಿ ತಿಳಿಸಿರುತ್ತಾನೆ. ಪಂಚರ ಸಮಕ್ಷಮ ಸಮಯ 14:15 ಗಂಟೆಗೆ ದನದ ಮಾಂಸ, ಮೋಟಾರ್‌ ಸೈಕಲ್‌  ಮತ್ತು ಆರೋಪಿಯನ್ನು ವಶಕ್ಕೆ  ಪಡೆದು, ಮೋಟಾರ್‌ ಸೈಕಲ್ಲಿನಲ್ಲಿರುವ ಪ್ಲಾಸ್ಟಿಕ್‌ ಕವರ್‌ನಲ್ಲಿದನದ ಮಾಂಸವಿರುವ  ಒಂದೊಂದು ಕೆ.ಜಿ.ಯ 10 ಪಾಕೇಟ್‌ ಗಳಿರುವ ಬಿಳಿಯ ಪಾಲೀಥಿನ್‌ ಚೀಲ ದನದ ಮಾಂಸ, ಇದರ ಅಂದಾಜು ಮೌಲ್ಯ 3000/-  ಮತ್ತು  ಕೆ.ಎ. 19-ಇ.ಜೆ-7667 ನೇ  ಬಜಾಜ್‌ ಕಂಪೆನಿಯ ಡಿಸ್ಕವರಿ ಮೋಟಾರ್‌ ಸೈಕಲ್‌ ಅಂದಾಜು ಮೌಲ್ಯ 30,000/-  ಆಗಬಹುದು. ಸದ್ರಿ ಸೊತ್ತುಗಳನ್ನು   ಪ್ರಕರಣದ ಮುಂದಿನ ತನಿಖೆ ಕುರಿತು ಪಂಚರ ಸಮಕ್ಷಮ ಮಹಜರು ಮುಖೇನ  ಸ್ವಾಧೀನ ಪಡಿಸಿಕೊಂಡು, ಸದ್ರಿ ಆರೋಪಿಯೂ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುವ ಉದ್ದೇಶದಿಂದ  ಮಾಂಸವನ್ನು ತಂದಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 7, 12  ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಆದ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಶಿರ್ವ: ದಿನಾಂಕ 20.04.2023 ರಂದು ಬೆಳಗ್ಗೆ 10.00  ಗಂಟೆಗೆ ಕಾಪು ತಾಲೂಕು ಬೆಳಪು ಗ್ರಾಮದ ಬೆಳಪು ಬಸ್ಸು ನಿಲ್ದಾಣದ ಬಳಿ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದ ಆಶ್ರಫ್‌ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/23, ಕಲಂ 27(b) NDPS Act. ನಂತೆ  ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-04-2023 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080