ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀನಿವಾಸ ಎಸ್ ಕೋಟ್ಯಾನ್ (38),   ತಂದೆ: ದಿ. ಶೀನ ಪೂಜಾರಿ,  ವಾಸ: ಮಟ್ಟಿ ಹೌಸ್, ಶಿವನಗರ ಹೆಜಮಾಡಿ ಗ್ರಾಮ, ಕಾಪು ತಾಲೂಕು ಇವರು ಕಿನ್ನಿಗೋಳಿಯಲ್ಲಿ ಗ್ಯಾರೇಜ್ ಇಟ್ಟುಕೊಂಡು  ಮೆಕಾನಿಕ್ ಕೆಲಸ ಮಾಡಿಕೊಂಡಿದ್ದು,  ದಿನಾಂಕ 21/04/2022 ರಂದು ಮದ್ಯಾಹ್ನ ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ಊಟಕ್ಕೆಂದು ಬರುತ್ತಿರುವಾಗ ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಟೋಲ್ ಗೇಟಿಗೆ ಸಂಬಂದಿಸಿದ ಕ್ಯಾಂಟೀನ್ ಎದುರು ತಲುಪಿದಾಗ 14:15 ಗಂಟೆಯ ಸಮಯಕ್ಕೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-66 ಕಾಂಕ್ರಿಟ್ ರಸ್ತೆಯ ಮದ್ಯಬಾಗದಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ KA-01-AH-8589 ನೇ ಗ್ಯಾಸ್‌ಬುಲೆಟ್ ಟ್ಯಾಂಕರ್ ಚಾಲಕನು ಟ್ಯಾಂಕರನ್ನು ಯಾವುದೇ ಸೂಚನೆ ನೀಡದೆ ಒಮ್ಮೇಲೆ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿದ ಪರಿಣಾಮ  KA-20-EY-1833 ನೇ ಸ್ಕೂಟಿ ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಟ್ಯಾಂಕರಿನ ಹಿಂಬದಿ ಬಲಬದಿಯ ಕಬ್ಬಿಣದ ಗಾರ್ಡ್‌ ಜಖಂಗೊಂಡು ಅದರೊಳಗೆ ದ್ವಿಚಕ್ರ ವಾಹನ ಮತ್ತು ಅದರ ಸವಾರ ಸಿಲುಕಿಕೊಂಡು ಮುಖಕ್ಕೆ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸ್ಕೂಟಿ ಸವಾರ ಮಹೇಶ್ ಮಲ್ಪೆ ಕೊಡವೂರು ಎಂಬುವವರನ್ನು ಹೈವೇ ಅಂಬುಲೆನ್ಸ್ ನಲ್ಲಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮುಕ್ಕಾ ಶ್ರೀನಿವಾಸ  ಆಸ್ಪತ್ರೆಯ ವೈದ್ಯರು ಮಹೇಶ ರವರನ್ನು 14:45 ಗಂಟೆಗೆ ಪರೀಕ್ಷಿಸಿ ಮಹೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 304(A) ಐಪಿಸಿ, ಕಲಂ: 117 ಜೊತೆಗೆ 177 ಐ.ಎಮ್.ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 21/04/2022 ರಂದು ಪಿರ್ಯಾದಿದಾರರಾದ ಪ್ರಸಾದ್‌ (28), ತಂದೆ: ಕೃಷ್ಣ ಪೂಜಾರಿ, ಆದಿ ಶಕ್ತಿ ಕೃಪಾ, ಉಗ್ಗೇಲ್‌ಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಉಡುಪಿಗೆ ಹೋಗಲು ಉಪ್ಪೂರು ಗ್ರಾಮದ  ಉಪ್ಪೂರು ರಿಕ್ಷಾ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತ ನಿಂತಿರುವಾಗ ರಾತ್ರಿ 8:00 ಗಂಟೆಗೆ ಉಪ್ಪೂರು ರಿಕ್ಷಾ ನಿಲ್ದಾಣದ ಎದುರು ಮಧ್ಯಸ್ಥರ ಬಿಲ್ಡಿಂಗ್‌ ಕಡೆಯಿಂದ ನಾಗರಾಜ ಎಂಬುವವರು ಉಡುಪಿ– ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟಿ ಡಿವೈಡರ್‌ಗೆ ಬಂದು ಅಲ್ಲಿಂದ ಕುಂದಾಪುರ-ಉಡುಪಿ ರಸ್ತೆಯನ್ನು ದಾಟಲು ಡಿವೈಡರ್‌ನಿಂದ ಕೆಳಗಿಳಿದು ರಸ್ತೆಗೆ ಬರುತ್ತಿದ್ದಂತೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಆರೋಪಿಯು ಅವರ KA-20-MC-5014 ನೇ ಮಾರುತಿ ಸ್ವೀಪ್ಟ್‌ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಅಂಚಿನಲ್ಲಿ ನಿಂತಿದ್ದ ನಾಗರಾಜ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಗರಾಜ್‌ ರವರು ಮೇಲಕ್ಕೆ ಎಸೆಯಲ್ಪಟ್ಟು ಕಾರಿನ ಗಾಜಿನ ಮೇಲೆ ಬಿದ್ದು ರಸ್ತೆಯ ಮೇಲೆ ಬಿದ್ದಿದ್ದು, ಅಪಘಾತದಿಂದ ನಾಗರಾಜ್‌ ರವರ ತಲೆಗೆ ತೀವ್ರ ರಕ್ತಗಾಯ ಹಾಗೂ ಮುಖ ಕೈಕಾಲುಗಳಿಗೆ ತೀವ್ರ ಗಾಯವಾಗಿ ಪ್ರಜ್ಞಾಹೀನರಾಗಿರುತ್ತಾರೆ.  ಗಾಯಗೊಂಡ ನಾಗರಾಜ್‌ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ರಾತ್ರಿ 8:20 ಗಂಟೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈಧ್ಯರು ನಾಗರಾಜ್‌ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2022 ಕಲಂ: 279,304(A)    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 20/04/2022 ರಂದು ಪಿರ್ಯಾದಿದಾರರಾದ ಡಾ. ರಮಾಕಾಂತ ಆಚಾರ್ಯ (73), ತಂದೆ: ದಿ. ಪದ್ಮನಾಭ ಆಚಾರ್ಯ, ವಾಸ: ರಜನಿಗಂಧ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ತಂಗಿ ರೇವತಿ ಆಚಾರ್ಯ (62) ರವರು ಅವರ  ಗಂಡ ಡಾ. ರಮಾಕಾಂತ ಆಚಾರ್ಯ (68) ರವರು ಸವಾರಿ ಮಾಡುತ್ತಿದ್ದ KA-20-EV-5694ನೇ ಟಿವಿಎಸ್‌ ಜ್ಯೂಪಿಟರ್‌ ಸ್ಕೂಟರ್‌ನಲ್ಲಿ ಸಹಸವಾರಿಣಿಯಾಗಿ ಕುಳಿತು ನೀಲಾವರ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 09:45 ಗಂಟೆಗೆ ಚಾಂತಾರು ಗ್ರಾಮದ ಚಾಂತಾರು ಕೃಷಿಕೇಂದ್ರದ ಬಳಿ, ರಸ್ತೆಯಲ್ಲಿದ್ದ ಹೊಂಡ ತಪ್ಪಿಸಲು ಡಾ. ರಮಾಕಾಂತ ಆಚಾರ್ಯ ರವರು ಸ್ಕೂಟರ್‌ನ ಬ್ರೇಕ್‌ ಹಾಕಿದಾಗ ಅವರ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬಂದ ಆರೋಪಿಯು ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು,  ಮೋಟಾರ್‌ ಸೈಕಲ್‌ನ್ನು ನಿಲ್ಲಿಸದೇ ಹೋಗಿರುತ್ತಾನೆ.  ಅಪಘಾತದ ಪರಿಣಾಮ ರೇವತಿ ಆಚಾರ್ಯ ಹಾಗೂ ಡಾ. ರಮಾಕಾಂತ ಆಚಾರ್ಯ ರವರು ಸ್ಕೂಟರ್‌ ಸಮೇತ ರಸ್ತೆ ಮೇಲೆ ಬಿದ್ದು ರೇವತಿ ಆಚಾರ್ಯ ರವರ ಎದೆಗೆ ಮತ್ತು ಬೆನ್ನಿಗೆ ಗುದ್ದಿದ ಒಳನೋವು, ಎಡಕೈ ಮೂಳೆ ಮುರಿತ ಆಗಿದ್ದು ಅವರ ಗಂಡ ಡಾ. ರಮಾಕಾಂತ ಆಚಾರ್ಯ ರವರ ಬಲಕೈ ಮತ್ತು ಬಲ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಹೋದಾಗ ರೇವತಿ ಆಚಾರ್ಯ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ದಿನಾಂಕ 21/04/2022 ರಂದು ಸಂಜೆ 7:30 ಗಂಟೆಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ರೇವತಿ ಆಚಾರ್ಯ  ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವೈಧ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 279, 337,304(A) ಐಪಿಸಿ & 134 (A &B), 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದರರಾದ ನಾಗರಾಜ್ ನಾಯ್ಕ (39), ತಂದೆ:ಟೊಗ್ಳ ನಾಯ್ಕ, ವಾಸ: ಪೊಲೀಸ್ ವಸತಿ ಗೃಹ ಕಾರ್ಕಳ ಇವರು  ದಿನಾಂಕ 21/04/2022 ರಂದು ಕರ್ತವ್ಯದಲ್ಲಿ ತನ್ನ KA-17-EJ-6852 ನೇ ಮೋಟಾರ್ ಸೈಕಲ್ ನಲ್ಲಿ ಮುದ್ರಾಡಿಗೆ ಬಂದಿದ್ದು, ಅಲ್ಲಿಂದ ಹೆಬ್ರಿ ಕಾರ್ಕಳ ರಸ್ತೆಯಲ್ಲಿ ವಾಪಾಸು ಕಾರ್ಕಳ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 10:15 ಗಂಟೆಗೆ ವರಂಗ ಗ್ರಾಮದ ಹಿತ್ಲುಕೊಟ್ಟಿಗೆ ಕ್ರಾಸ್ ಬಳಿ ತಲುಪಿದಾಗ ಅವರ ಮುಂದುಗಡೆ ಕಾರ್ಕಳ ಕಡೆಗೆ ಹೋಗುತ್ತಿದ್ದ KA-20-Z-6499 ನೇ ಸ್ವಿಪ್ಟ್ ಡಿಸೈರ್ ಕಾರಿನ ಚಾಲಕ ಅನೂಪ್ ಕುಮಾರ ರವರು ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷತನದಿಂದ ಕಾರನ್ನು ರಸ್ತೆಯ ಬದಿಯಲ್ಲಿರುವ ಹಿತ್ಲುಕೊಟ್ಟಿಗೆ  ಕಡೆಗೆ ಹೋಗುವ ರಸ್ತೆಗೆ ತಿರುಗಿಸಿದ ಪರಿಣಾಮ ಕಾರಿನ ಬಲಬದಿಯ ಮುಂದಿನ ಭಾಗವು ಫಿರ್ಯಾದಿದಾರರ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ತಾಗಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ  ಬಿದ್ದು ಅವರ ಎಡಕೈಯ ಮಣಿಗಂಟಿನ ಬಳಿ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 21/04/2022 ರಂದು ನಸುಕಿನ 05:10 ಗಂಟೆಗೆ ಪಿರ್ಯಾದಿದಾರರಾದ ಮಾರುತಿ ಹೊನ್ನಪ್ಪ ವಗ್ಗರ (36), ತಂದೆ: ದಿ. ಹೊನ್ನಪ್ಪ, ವಾಸ:  ವಗ್ಗರ ಓಣಿ, ಬಸವೇಶ್ವರ ದೇವಸ್ಥಾನದ ಹತ್ತಿರ, ಲಿಂಗದಾಳ ಹಳ್ಳಿ, ರಾಮದುರ್ಗ ತಾಲೂಕ, ಬೆಳಗಾಂ ಜಿಲ್ಲೆ ಇವರು ಶೌಚಾಲಯಕ್ಕೆ ಹೋಗಲು ಅವರು ಉಳಿದುಕೊಂಡಿದ್ದ  ಕುಂದಾಪುರ  ತಾಲೂಕು ಕಸಬಾ  ಗ್ರಾಮದ ಶಾಸ್ತ್ರಿ ಪಾರ್ಕ ಹತ್ತಿರ ನೆಹರೂ ಮೈದಾನದ ಎದುರಿನಲ್ಲಿರುವ  ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಏಕಮುಖ ಸಂಚಾರ ಡಾಮಾರು  ರಸ್ತೆಯನ್ನು  ಪಶ್ಚಿಮ ಬದಿಯಿಂದ ಪೂರ್ವ ಬದಿಗೆ  ದಾಟುತ್ತಿರುವಾಗ  ಉಡುಪಿ ಕಡೆಯಿಂದ ಕಾರ್‌ ನಂಬ್ರ KA-20-Z-6860 ನೇದನ್ನು ಅದರ ಚಾಲಕ  ಮಂಜುನಾಥ ಹನುಮಂತ ನಾಯ್ಕ  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರು ರಸ್ತೆಯಲ್ಲಿ  ಬಿದ್ದಿದ್ದು ಅವರ ಬಲಕಾಲ ಪಾದದ ಮೇಲೆ ಮೂಳೆ ಮೂರಿತದ ರಕ್ತಗಾಯ, ಬಲ ಪಕ್ಕೆಲುಬಿನಲ್ಲಿ  ಗುದ್ದಿದ  ಒಳಗಾಯ, ಗದ್ದದ ಕೆಳಗೆ, ಹಣೆಯ ಮೇಲೆ  ರಕ್ತ  ಗಾಯ ಹಾಗೂ  ಕೈ ಕಾಲುಗಳಿಗೆ ತರಚಿದ ರಕ್ತ  ಗಾಯವಾಗಿರುತ್ತದೆ. ಕಾರಿನಲ್ಲಿದ್ದವರಿಗೆ  ಯಾವುದೇ  ಗಾಯಗಳಾಗಿರುವುದಿಲ್ಲ. ಗಾಯಗೊಂಡ  ಪಿರ್ಯಾದಿದಾರರನ್ನು  ಸ್ಥಳದಲ್ಲಿದ್ದವರು ಚಿಕಿತ್ಸೆಗೆ  ಕುಂದಾಪುರ ತಾಲೂಕು  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಲ್ಲಿಂದ  ಹೆಚ್ಚಿನ ಚಿಕಿತ್ಸೆ  ಬಗ್ಗೆ ಜಿಲ್ಲಾ ಸರ್ಕಾರಿ  ಆಸ್ಪತ್ರೆ  ಉಡುಪಿಗೆ ಕರೆದುಕೊಂಡು ಹೋಗಿ  ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಗೆ  ಕೋಟೇಶ್ವರ  ಎನ್‌.ಆರ್‌.ಆಚಾರ್ಯ  ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 20/04/2022 ರಂದು ಪಿರ್ಯಾದಿದಾರರಾದ ಶ್ರೀನಿವಾಸ ಆಚಾರ್ಯ (50), ತಂದೆ: ದಿ. ನಾರಾಯಣ ಆಚಾರ್ಯ , ವಾಸ: ಕುಕ್ಕುದಕಟ್ಟೆ ಮನೆ, ಬಾಳೆಪುನಿ ಗ್ರಾಮ, ಕೈರಂಗಳ ಅಂಚೆ, ಬಂಟ್ವಾಳ ತಾಲೂಕು ಇವರು ಮತ್ತು ಪ್ರವೀಣ್ ಆಚಾರ್ಯ ರವರು  ಚಲಾಯಿಸುತ್ತಿದ್ದ ಜುಪಿಟರ್ ಸ್ಕೂಟರ್ ನಂಬ್ರ KA-19-HC-1966 ನೇದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಕಾರ್ಕಳದಿಂದ ಕಳಸಕ್ಕೆ ಹೋಗಲು ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಚೆಕ್ ಫೋಸ್ಟ್ ನಿಂದ ಸುಮಾರು 4 ಕಿಮೀ ಎದುರು ಕಾರ್ಕಳ ಕುದುರೆಮುಖ ರಸ್ತೆಯಾಗಿ 12:15  ಗಂಟೆಗೆ ಹೋಗುತ್ತಿದ್ದಾಗ ಎದುರಿನಿಂದ ಕುದುಮುಖ ಕಡೆಯಿಂದ ಕಾರ್ಕಳ ಕಡೆಗೆ ಕಾರು ನಂಬ್ರ KA-14-M-3914 ನೇದರ ಚಾಲಕನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲಕ್ಕೆ ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಕೋಲು ಕಾಲಿನ ಮುರಿತವಾಗಿದ್ದು  ಪಾದ ಮತ್ತು ಸೊಂಟಕ್ಕೂ ಒಳ ಜಖಂ ಆಗಿದ್ದು, ಕಿರುಬೆರಳು ತುಂಡಾಗಿರುತ್ತದೆ. ನಂತರ ಪಿರ್ಯಾದಿದಾರರು ಚಿಕಿತ್ಸೆಯನ್ನು ಕಾರ್ಕಳ ಸರಕಾರಿ ಆಸ್ಪತ್ರೆ, ಕೊಲಸೋ ಆಸ್ಪತ್ರೆ , ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಎಸ್‌. ಸಾಯಿಶ್ರೀ (23), ತಂದೆ: ಈಶ್ವರ ರೆಡ್ಡಿ,  ವಾಸ: ಮನೆ ನಂಬ್ರ: 40-41, ಸಾಯಿ ಗಣೇಶ್‌ ಶ್ರೀನಿವಾಸಂ ಎದುರು, ಪ್ರಗತಿ ನಗರ, ಹೈದರಾಬಾದ್‌, ಆಂಧ್ರಪ್ರದೇಶ ಇವರು ಹೈದರಾಬಾದ್‌ನಲ್ಲಿ ಬ್ರೀತ್‌ಎನಿಮಲ್‌ರೆಸ್ಕ್ಯೂ ಸೆಂಟರ್‌ನ್ನು ನಡೆಸಿಕೊಂಡಿದ್ದು, ಜೊತೆಗೆ Stray Animal Foundation of India ದ ಮ್ಯಾನೇಜರ್‌ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ರೀನಾ ಎಂಬುವವರು ಹೈದರಾಬಾದ್‌ನಲ್ಲಿರುವ ಪಿರ್ಯಾದಿದಾರರ ಸಂಸ್ಥೆಗೆ ದಿನಾಂಕ 06/03/2022 ರಂದು ಬಂದು, ಎರಡು ದಿನ ಉಳಕೊಂಡು ಪಿರ್ಯಾದಿದಾರರ ಸಂಸ್ಥೆಯಲ್ಲಿರುವ ಕ್ರೀಮ್‌ ಮತ್ತು ಬ್ಲ್ಯಾಕಿ ಎಂಬ ಹೆಸರಿನ ಎರಡು ನಾಯಿಗಳನ್ನು ದತ್ತು ತೆಗೆದುಕೊಂಡಿದ್ದು, ಅದರಂತೆ ದಿನಾಂಕ 02/04/2022 ರಂದು ಪಿರ್ಯಾದಿದಾರರು ಉಡುಪಿ ತೆಗೆದುಕೊಂಡು ಬಂದು ಬಿಟ್ಟಿರುತ್ತಾರೆ. ಸ್ವಲ್ಪ ದಿನದ ಬಳಿಕ ರೀನಾ ರವರು ಕರೆ ಮಾಡಿ ಬ್ಲ್ಯಾಕಿ ಕೆಟ್ಟ ಗುಣಗಳನ್ನು ಹೊಂದಿರುವುದಾಗಿ ತಿಳಿಸಿದ್ದು, ಅದನ್ನು ವಾಪಾಸು ಮಾಡುವಂತೆ ಪಿರ್ಯಾದಿದಾರರು ತಿಳಿಸಿದರೂ, ರೀನಾ ರವರು ಅದನ್ನು ದಿನಾಂಕ 15/04/2022 ರಂದು ಸಾಲಿಗ್ರಾಮದ ಸುಧೀಂದ್ರ ಐತಾಳ್‌ರವರ ರೆಸ್ಕ್ಯೂ ಜೂ ಗೆ ಬಿಟ್ಟಿರುವುದಾಗಿ ತಿಳಿಸಿದ್ದು, ಸುಧೀಂದ್ರ ಐತಾಳ್ ರವರನ್ನು ವಿಚಾರಿಸಲಾಗಿ ಬ್ಲ್ಯಾಕಿ ನಾಯಿಯನ್ನು ಯಾರೋ ಬಂದು ಕೊಂಡು ಹೋಗಿರುತ್ತಾರೆ ಎಂಬುದಾಗಿ ತಿಳಿಸಿದ್ದು,  ಪ್ರಾಣಿಯನ್ನು ಸುರಕ್ಷತೆ ಇಲ್ಲದ ಜಾಗಕ್ಕೆ ಸ್ಥಳಾಂತರಿಸಿ ಅಪಾಯವನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 429 ಐಪಿಸಿ  & ಕಲಂ:  11(1)(A) Prevention Of Cruelty To Animals Act, 1960 ರಂತೆ ಪ್ರಕರಣ ದಾಖಲಾಗಿರುತ್ತದೆ.   
     
     

ಇತ್ತೀಚಿನ ನವೀಕರಣ​ : 22-04-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080