ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಹೆಬ್ರಿ: ಫಿರ್ಯಾದಿ ಹೆಚ್. ದಿನೇಶ ಶೆಟ್ಟಿ ಇವರು ದಿನಾಂಕ:21/04/2022 ರಂದು ಕೆಲಸದ ನಿಮಿತ್ತ ಅವರ ಸ್ನೇಹಿತನೊಂದಿಗೆ ಮೋಟಾರ್ ಸೈಕಲ್ ನಲ್ಲಿ ಸೀತಾನದಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 08:05 ಗಂಟೆಗೆ ಹೆಬ್ರಿ ಗ್ರಾಮದ ಮೇಲ್ಪೇಟೆ ಆರ್.ಎಸ್ ರೆಸ್ಟೋರೆಂಟ್ ಬಳಿ ತಲುಪಿದಾಗ ಆಗುಂಬೆ ಕಡೆಯಿಂದ KA 53 N 6830 ನೇ ಓಮ್ನಿ ಕಾರನ್ನು ಅದರ ಚಾಲಕ ಮಹೇಶ.ಎನ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ದನವನ್ನು ತಪ್ಪಿಸುವರೇ ರಸ್ತೆಯ ತೀರಾ ಬಲಬದಿಗೆ ಬಂದು ಪ್ರಕಾಶ ರವರು ಸಹ ಸವಾರರಾಗಿ ಅವರ ಶ್ರೀಮತಿ ಅಶ್ವಿನಿ ಮತ್ತು ಮಗು ಆಕಾಶರವರನ್ನು KA 19 EF 0228 ನೇ ಮೋಟಾರ್ ಸೈಕಲ್ ನಲ್ಲಿ ಕುಳ್ಳಿರಿಸಿಕೊಂಡು ಹೆಬ್ರಿ ಕಡೆಯಿಂಧ ಆಗುಂಬೆ ಕಡೆಗೆ ಹೋಗುತ್ತಿದ್ದ ಇವರ ಮೋಟಾರ್ ಸೈಕಲ್ ಗೆ ಢಿಕ್ಕಿಹೊಡೆದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ, ಈ ಅಪಘಾತದಿಂದ  ಪ್ರಕಾಶ ರವರಿಗೆ ಎಡತೊಡೆಯ ಬಳಿ ತೀವ್ರ ತರಹದ ಜಖಂ ಆಗಿದ್ದು ತಲೆಗೆ ಮತ್ತು ಎಡಕೈಗೆ ತರಚಿದ ಗಾಯಗಳಾಗಿರುತ್ತದೆ.  ಅವರ ಪತ್ನಿ ಅಶ್ವಿನಿ ರವರಿಗೆ ಬಲಕೈಗೆ ಗುದ್ದಿದ ನೋವಾಗಿರುತ್ತದೆ. ಮಗು ಆಕಾಶ ಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2022ಕಲಂ:,279,337 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

 • ಕಾಪು: ಪಿರ್ಯಾದಿ ಕೆ ಪಿ ಆದಿಲ್ ದಾರರು ಕಾರ್ಕಳ ಮಸೀದಿಯಲ್ಲಿ ಖತೀಬರಾಗಿ ಕೆಲಸ ಮಾಡಿಕೊಂಡಿದ್ದು ರಂಜಾನ್ ಉಪವಾಸ ಇದ್ದುದರಿಂದ ತನ್ನ ಹೆಂಡತಿ ಮಕ್ಕಳೂ ಕಾರ್ಕಳಕ್ಕೆ ಹೋಗಿದ್ದು ಪಿರ್ಯಾದಿದಾರರು  ದಿನಾಂಕ 21/04/2022 ರಂದು ಸಂಜೆ 7:00 ಗಂಟೆ ಸಮಯಕ್ಕೆ ಮೂಳೂರಿನ ತನ್ನ ಮನೆಗೆ ಬೀಗ ಹಾಕಿ ಕಾರ್ಕಳಕ್ಕೆ ಹೋಗಿರುತ್ತಾರೆ. ದಿನಾಂಕ 22/04/2022 ರಂದು ತಾನು ವಾಸವಿರುವ ಮೂಳೂರಿನ ಅರಪಾ ಪ್ಲಾಟಿನ ಮಾಲಕರು ಪಿರ್ಯಾದಿದಾರರಿಗೆ ಪೋನ್ ಕರೆ ಮಾಡಿ ನಿಮ್ಮ ರೂಮಿನ ಬಾಗಿಲಿನ ಬೀಗ ಒಡೆದು ಬಾಗಿಲು ತೆರೆದಿರುತ್ತದೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ತನ್ನ ಹೆಂಡತಿಯೊಂದಿಗೆ ಮೂಳೂರಿಗೆ ಬಂದು ರೂಮನ್ನು ನೋಡಿದಾಗ ರೂಮಿನ ಬಾಗಿಲಿನ ಬೀಗವನ್ನು ಮುರಿದು ತೆಗೆದು ಅಲ್ಲಿಯೇ ಇಟ್ಟಿದ್ದು ಒಳಗೆ ಹೋಗಿ ನೋಡುವಾಗ ರೂಮಿನ ಕಪಾಟಿನ ಬಾಗಿಲನ್ನು ಮುರಿದು ಒಳಗಡೆ ಇದ್ದ ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಅಲ್ಲದೇ ಪಿರ್ಯಾದಿದಾರರ ಹೆಂಡತಿ ಕಪಾಟಿನ ಲಾಕರ್‌ ನಲ್ಲಿ ಇಟ್ಡಿದ್ದ 50,000/- ರೂ ನಗದನ್ನು ತೆಗೆದುಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಹಾಗೂ ಪಿರ್ಯಾದಿದಾರರ ರೂಮಿನ ಸಮೀಪದ ಮಹಮ್ಮದ್ ಆಸೀಫ್, ನಹೀದ್, ಸಮೀರ ಬಾನು, ಮತ್ತು ಅಲೀಮಾ ಎಂಬವರ ರೂಮಿನ ಬೀಗವನ್ನು ಒಡೆದಿರುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ 21/04/2022 ರಂದು 19:00 ಗಂಟೆಯಿಂದ ದಿನಾಂಕ 22/04/2022 ರಂದು 08:00 ಗಂಟೆಯ ಮದ್ಯಾವಧಿಯಲ್ಲಿ ರೂಮಿನ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ರೂಮಿನಲ್ಲಿದ್ದ ಕಪಾಟಿನ ಬಾಗಿಲನ್ನುಮುರಿದು ಕಪಾಟಿನ ಲಾಕರ್‌ ನಲ್ಲಿಟ್ಟಿದ್ದ 50,000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022 ಕಲಂ  457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಫಿರ್ಯಾದುದಾರರಾದ ಶ್ರೀಮತಿ ಲಿನೆಟ್ ಪಿಂಟೋ, ಪ್ರಾಯ: 74 ವರ್ಷ ಎಂಬವರು ಸಾಣೂರು  ಗ್ರಾಮದ ಜೋಡುಗರಡಿ ಬಳಿ ಮಗ ಶೋನ್ ಪಿಂಟೋ ಎಂಬವರು  ಕಟ್ಟಿಸಿದ ಮನೆಯಲ್ಲಿ ಮಗನ  ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಮಗ ಶೋನ್ ಪಿಂಟೋ ದುಬಾಯಿಯಲ್ಲಿ ಉದ್ಯೋಗದಲ್ಲಿರುತ್ತಾರೆ. ಶಾಲೆಗೆ ರಜೆ ಇದ್ದ ಕಾರಣ ಸೊಸೆ ಮತ್ತು ಮಕ್ಕಳು ಇತ್ತೀಚೆಗೆ ದುಬಾಯಿಗೆ ಹೋಗಿದ್ದು ಫಿರ್ಯಾದುದಾರರು 21-04-2022 ರಂದು ಸಂಜೆ 7 ಗಂಟೆಗೆ ಮಗಳ ಮನೆಗೆ ಮಲಗಲು ಹೋಗಿದ್ದು ದಿನಾಂಕ 22-04-2022 ರಂದು ಬೆಳಿಗ್ಗೆ 08-30 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಒಳಪ್ರವೇಶಿಸಿ ಮನೆಯೊಳಗೆ ಮೂರು ಬೆಡ್‌ ರೂಮುಗಳಲ್ಲಿ  ಇದ್ದ ಕಪಾಟುಗಳಲ್ಲಿದ್ದ  ಬಟ್ಟೆಬರೆಗಳನ್ನು ಎಳೆದು ಹೊರಗೆ ಹಾಕಿ ಮಾಡಿ ಕಳವು ಮಾಡಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2022 ಕಲಂ: 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾಧಿ ಅಚ್ಚುತ್  ಎಸ್ ಬಂಗೇರ ಇವರು  ದಿನಾಂಕ: 17-04-2022  ರಂದು  ತನ್ನ ಬಾಬ್ತು KA -20-EC-0231  ನೇ  ಪಲ್ಸರ್ 150 ಮೋಟಾರು ಸೈಕಲ್ ನಲ್ಲಿ  ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸದ ಬಗ್ಗೆ   ಬಂದು ಮಲ್ಪೆ ಬಂದರಿನ 1 ನೇ  ಟಿ ಧಕ್ಕೆಯ  ಬಳಿ  ಇರುವ ವಾಸು ಕಾಂಚನ್  ರವರ ಕ್ಯಾಂಟೀನ ಬಳಿಮೋಟಾರು ಸೈಕಲ್ ನ್ನು  ಇಟ್ಟು ಕೆಲಸ ಕ್ಕೆ ಹೋಗಿದ್ದು ಪುನ: ಸಂಜೆ 4:00 ಗಂಟೆಗೆ ಬಂದು ನೋಡಿದಾಗ ಪಿರ್ಯಾಧಿದಾರರ ಬಾಬ್ತು KA -20-EC-0231 ನೇ ಮೋಟಾರು ಸೈಕಲ್ ಕಾಣಿಸದೆ ಇದ್ದು, ಎಲ್ಲಾ ಕಡೆ ಹುಡುಕಾಡಿದರೂ  ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ ಬಾಬ್ತು KA -20-EC-0231 ನೇ ಮೋಟಾರು ಸೈಕಲ್ ನ್ನು ಯಾರೋ ಕಳ್ಳರು ದಿನಾಂಕ: 17-04-2022  ರಂದು  ಮಧ್ಯಾಹ್ನ  2:00 ಗಂಟೆಯಿಂದ  ಸಂಜೆ 4:00 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರು ಸೈಕಲ್ ಅಂದಾಜು ಮೌಲ್ಯ ಸುಮಾರು 20,000/- ರೂ ಆಗಿರಬಹುದು. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿ ಸಂತೋಷ ಆಚಾರ್ಯ ಇವರ ತಂದೆ ನಾರಾಯಣ ಆಚಾರ್ಯ  ಪ್ರಾಯ: 54 ಇವರು ಕಾರ್ಕಳ ತಾಲೂಕಿನ ಯರ್ಲಪಾಡಿ  ಗ್ರಾಮದ ಶಾಂತಿಪಲ್ಕೆ  ಎಂಬಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದು, ನಾರಾಯಣ ಆಚಾರ್ಯ ಯವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಮನೆಗೆ ಆಗಾಗ ಬಂದು ಹೋಗುತ್ತಿದ್ದು ತನ್ನ ಮನೆ ಬಳಿ ಇರುವ ಅಕ್ಕ ರತ್ನ ಎಂಬುವವರ ಮನೆಯಲ್ಲಿ ಮಲಗುತ್ತಿದ್ದವರು ಕುಡಿತದ ಚಟದಿಂದ ಅಥವಾ ಯಾವೂದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು    ದಿನಾಂಕ 22.04.2022 ರಂದು ರಾತ್ರಿ 01:00 ಯಿಂದ  ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಮೃತರ ಅಕ್ಕ ರತ್ನ ಆಚಾರ್ಯ ರವರ ಮನೆಯ ಹಿಂಬದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 22-04-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080