ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಗಂಗೊಳ್ಳಿ: ಪಿರ್ಯಾದಿದಾರರಾಧ ಕೆನ್ಯೂಟ್‌ ಗೋನ್ಸಾಲಿಸ್‌, (78), ವಾಸ: ನಡುಬೆಟ್ಟು ಪೋಸ್ಟ್‌‌, ಮರವಂತೆ, ಬೈಂದೂರು ತಾಲೂಕು, ಉಡುಪಿ ಇವರ ಮಗ ವಿಜಯ(45) ಎಂಬವರು ದಿನಾಂಕ 21/04/2021 ರಂದು ತನ್ನ ಸ್ವಂತ ದೋಣಿಯಲ್ಲಿ ಮರವಂತೆಯಿಂದ ತನ್ನ ತಂಗಿಯ ಮನೆಯಾದ ನಾಡಾ ಗ್ರಾಮಕ್ಕೆ ತನ್ನ ತಂದೆ ತಾಯಿಯೊಂದಿಗೆ ಹೋಗಿದ್ದು, ನಂತರ ವಿಜಯನು ಬೇಗ ಊಟ ಮಾಡಿಕೊಂಡು ಸಮಯ ಸುಮಾರು 14:00 ಗಂಟೆಗೆ ತಾನು ಹೋಗುವುದಾಗಿ ತಂದೆಗೆ ತಿಳಿಸಿ ಹೋಗಿರುತ್ತಾನೆ. ಸಮಯ ಸುಮಾರು 17:00 ಗಂಟೆಗೆ ಕೆನ್ಯೂಟ್‌ ಗೋನ್ಸಾಲಿಸ್‌ ರವರು ಹಾಗೂ ಅವರ ಹೆಂಡತಿ ಮನೆಗೆ ತೆರಳಲು ಹೊಳೆಯ ಬದಿ ಹೋದಾಗ ವಿಜಯನ ದೋಣಿ ಮತ್ತು ಜಲ್ಲು ನೀರಿನಲ್ಲಿ ತೇಲುತ್ತಿರುವುದು ಕಂಡು, ಮನೆಗೆ ಬಂದು ವಿಜಯರವರ ಹೆಂಡತಿಯಲ್ಲಿ ವಿಚಾರಿಸಿದಾಗ ಮನೆಗೆ ಬಂದಿಲ್ಲವಾಗಿ ತಿಳಿಸಿರುತ್ತಾಳೆ. ನಂತರ ಕೆನ್ಯೂಟ್‌ ಗೋನ್ಸಾಲಿಸ್‌ ರವರು ಮತ್ತು ನೆರೆಕೆರೆಯವರು ಹುಡುಕಾಡಿದಾಗ ಕೋಟೆಮನೆ ದೋಣಿ ಕಡುವಿನಲ್ಲಿ ಮೃತದೇಹ ತೇಲುತ್ತಿದ್ದು, ಕೆನ್ಯೂಟ್‌ ಗೋನ್ಸಾಲಿಸ್‌ ರವರ ಮಗ ವಿಜಯನು ದೋಣಿ ದಾಟಿಸುವಾಗ ಆಕಸ್ಮಿಕವಾಗಿ ಸೌಪರ್ಣಿಕ ಹೊಳೆಯಲ್ಲಿ ಮುಗುಚಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾಧ ರಮೇಶ್ ಹೆಚ್‌ ಪ್ರಭು ತಂದೆ: ದಿ|| ರಾಘವ ಪ್ರಭು ವಾಸ: ಪ್ರಸನ್ನ ಹೌಸ್, ಮುದರಂಗಡಿ  ಉಡುಪಿ ತಾಲೂಕು & ಜಿಲ್ಲೆ ಇವರು ಮತ್ತು ಅರೋಪಿ ಮಕ್ವಿನ್ ಮೊನ್‌ಟೇರಿನೋ(35) ತಂದೆ: ಜೋಸೆಫ್ ಮೋನ್‌ಥೆರೋ, 2)ರಿಯಾ ಎಡ್ಲಿನ್ ಮಥಾಯಸ್ ಗಂಡ: ಮಕ್ವಿನ್ ಮೊನ್‌ಟೇರಿನೋ ವಾಸ:ರೀರೋಯ್ ಹೌಸ್ , ಗೋಪಾಲಪುರ, 5 ನೇ ಅಡ್ಡ್ ರಸ್ತೆ  ಸಂತೆಕಟ್ಟೆ ಉಡುಪಿ ಹಾಗೂ ಇತರ 3 ಜನ ಸೇರಿ NISSI INFINITY PROMOTERS AND DEVELOPERS ಎಂಬ ಪಾಲುದಾರಿಕೆ ಸಂಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಅರೋಪಿಯು ಸದ್ರಿ ಸಂಸ್ಥೆಯ ಆಡಳಿತ ಪಾಲುದಾರರಾಗಿರುತ್ತಾರೆ. ಅದರಂತೆ ಪ್ರತಿ ಓರ್ವ ಪಾಲುದಾರನಿಗೂ ನಿರ್ದಿಷ್ಟ ಸಂಖ್ಯೆ ಪ್ಲಾಟ್‌ಗಳನ್ನು  ನೀಡಲಾಗಿದೆ ಅರೋಪಿಯು ಸದ್ರಿ ಜಾಗದಲ್ಲಿ ಪ್ಟಾಟ್‌‌ನ್ನು ಪೂರ್ಣಗೊಳಿಸದೆ ವಿದ್ಯಶ್ಚಕ್ತಿ  ಮತ್ತು ನೀರಿನ ಸೌಲಭ್ಯ  ಕಲ್ಪಿಸದೆ ಖರೀದಿದಾರರಿಗೆ ಮೋಸ ಮಾಡಿರುತ್ತಾರೆ ಸದ್ರಿ ಪ್ಲಾಟ್‌ಗಳ ಮೇಲೆ ಬಡಗುಬೆಟ್ಟು ಬ್ಯಾಂಕಿನಲ್ಲಿ ಸಾಲವಿದ್ದು ಸಲವನ್ನು ಸಹ ಮರು ಪಾವತಿ ಮಾಡಿರುವುದಿಲ್ಲ, ಮಾರಾಟವಾದ ಪ್ಲಾಟ್‌ಗಳ ಹಣವನ್ನು ತನ್ನ ಸ್ವಯಂ ಬಳಕೆಗೆ ಉಪಯೋಗಿಸುತ್ತಿದ್ದು ಅಲ್ಲದೆ ಕೆಲವು ಪ್ಲಾಟ್‌ಗಳ ಪಾಲುದಾರರ ಸಮ್ಮತಿ ಇಲ್ಲದಿದ್ದರು ಕೂಡ 5 ವರ್ಷಕ್ಕೆ ಲೀಸ್‌ಗೆ ನೀಡಿ ಅಕ್ರಮ ಲಾಭ ಮಾಡಿಕೊಂಡಿರುತ್ತಾರೆ. ಅರೋಪಿಯು ರಮೇಶ್ ಹೆಚ್‌ ಪ್ರಭು ರವರಿಗೆ ಮೋಸ ಮಾಡುವ ಉದ್ದೇಶದಿಂದ ಎಲ್ಲಾ ಹಣ ಪಡೆದು ಹೂಡಿಕೆ ಮಾಡುವಂತೆ ಉತ್ತೇಜಿಸಿ ಒಬ್ಬನೆ ಪ್ಲಾಟ್‌ಗಳನ್ನು ಮಾರಾಟ ಮಾಡಿ ಹಣ ನೀಡಿದೆ ಉದ್ದೇಶ ಪೂರ್ವಕವಾಗಿ ಮೋಸ ಮಾಡಿದ್ದು ಅರೋಪಿತರನ್ನು ಸಂಪರ್ಕಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಇನ್ನುಮುಂದಕ್ಕೆ ಹಣದ ವಿಚಾರದಲ್ಲಿ ಬಂದಲ್ಲಿ ಕೈಕಾಲು ಕಡಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 420,465,468,474,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದುದಾರರಾದ ಜೋಯನ್ ಜೋನ್ ಲೂವಿಸ್ ತಂದೆ: ಜೋನ್ ಬಪ್‌ಸಿಟ್ ಲೂವಿಸ್  ವಾಸ: ಜೆ ಜೆ ವಿಲ್ಲಾ ತೋಮ್‌ಸನ್ ರಸ್ತೆ , ಸಂತೆಕಟ್ಟೆ ಅಂಚೆ ಕಕ್ಕುಂಜಿ ಉಡುಪಿ ಇವರು ಮತ್ತು ಅರೋಪಿ ಮಕ್ವಿನ್ ಮೊನ್‌ಟೇರಿನೋ(35) ತಂದೆ: ಜೋಸೆಫ್ ಮೋನ್‌ಥೆರೋ, 2)ರಿಯಾ ಎಡ್ಲಿನ್ ಮಥಾಯಸ್ ಗಂಡ: ಮಕ್ವಿನ್ ಮೊನ್‌ಟೇರಿನೋ ವಾಸ:ರೀರೋಯ್ ಹೌಸ್ , ಗೋಪಾಲಪುರ, 5 ನೇ ಅಡ್ಡ್ ರಸ್ತೆ  ಸಂತೆಕಟ್ಟೆ ಉಡುಪಿ ಹಾಗೂ ಇತರ 3 ಜನ ಸೇರಿ NISSI INFINITY PROMOTERS AND DEVELOPERS ಎಂಬ ಪಾಲುದಾರಿಕೆ ಸಂಸ್ಥೆಯನ್ನು ಮಾಡಿಕೊಂಡಿರುತ್ತಾರೆ.  ಅರೋಪಿಯು ಸದ್ರಿ ಸಂಸ್ಥೆಯ ಆಡಳಿತ ಪಾಲುದಾರರಾಗಿರುತ್ತಾರೆ. ಅದರಂತೆ ಪ್ರತಿ ಓರ್ವ ಪಾಲುದಾರನಿಗೂ ನಿರ್ದಿಷ್ಟ ಸಂಖ್ಯೆ ಪ್ಲಾಟ್‌ಗಳನ್ನು  ನೀಡಲಾಗಿದೆ ಅರೋಪಿಯು ಸದ್ರಿ ಜಾಗದಲ್ಲಿ ಪ್ಟಾಟ್‌‌ನ್ನು ಪೂರ್ಣಗೊಳಿಸದೆ ವಿದ್ಯಶ್ಚಕ್ತಿ ಮತ್ತು ನೀರಿನ ಸೌಲಭ್ಯ ಕಲ್ಪಿಸದೆ ಖರೀದಿದಾರರಿಗೆ ಮೋಸ ಮಾಡಿರುತ್ತಾರೆ ಸದ್ರಿ ಪ್ಲಾಟ್‌ಗಳ ಮೇಲೆ ಬಡಗುಬೆಟ್ಟು ಬ್ಯಾಂಕಿನಲ್ಲಿ ಸಾಲವಿದ್ದು ಸಾಲವನ್ನು ಸಹ ಮರು ಪಾವತಿ ಮಾಡಿರುವುದಿಲ್ಲ, ಮಾರಾಟವಾದ ಪ್ಲಾಟ್‌ಗಳ ಹಣವನ್ನು ತನ್ನ ಸ್ವಯಂ ಬಳಕೆಗೆ  ಉಪಯೋಗಿಸುತ್ತಿದ್ದು ಅಲ್ಲದೆ ಕೆಲವು ಪ್ಲಾಟ್‌ಗಳ ಪಾಲುದಾರರ ಸಮ್ಮತಿ ಇಲ್ಲದಿದ್ದರು ಕೂಡ 5 ವರ್ಷಕ್ಕೆ ಲೀಸ್‌ಗೆ ನೀಡಿ ಅಕ್ರಮ ಲಾಭ  ಮಾಡಿಕೊಂಡಿರುತ್ತಾರೆ. ಅರೋಪಿಯು ಜೋಯನ್ ಜೋನ್ ಲೂವಿಸ್ ರವರಿಗೆ ಮೋಸ ಮಾಡುವ ಉದ್ದೇಶದಿಂದ ಎಲ್ಲಾ ಹಣ ಪಡೆದು ಹೂಡಿಕೆ ಮಾಡುವಂತೆ ಉತ್ತೇಜಿಸಿ ಒಬ್ಬನೆ ಪ್ಲಾಟ್‌ಗಳನ್ನು ಮಾರಾಟ ಮಾಡಿ ಹಣ ನೀಡಿದೆ ಉದ್ದೇಶ ಪೂರ್ವಕವಾಗಿ ಮೋಸ ಮಾಡಿದ್ದು ಜೋಯನ್ ಜೋನ್ ಲೂವಿಸ್ ರವರು ಅರೋಪಿತರನ್ನು ಸಂಪರ್ಕಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಇನ್ನುಮುಂದಕ್ಕೆ  ಹಣದ ವಿಚಾರದಲ್ಲಿ ಬಂದಲ್ಲಿ  ಕೈಕಾಲು ಕಡಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 420,465,468,474,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂ 24/2021ರ ಸಂಕ್ಷೀಪ್ತ ಸಾರಾಂಶವೇನೆಂದರೆ ಪಿರ್ಯಾದಿ ಶ್ಯಾಮ ಕೆ ಪೂಜಾರಿ ಇವರು ಮತ್ತು ಅರೋಪಿ  1)ಮಕ್ವಿನ್ ಮೊನ್‌ಟೇರಿನೋ(35) ತಂದೆ: ಜೋಸೆಫ್ ಮೋನ್‌ಥೆರೋ, 2)ರಿಯಾ ಎಡ್ಲಿನ್ ಮಥಾಯಸ್ ಗಂಡ: ಮಕ್ವಿನ್ ಮೊನ್‌ಟೇರಿನೋ ವಾಸ:ರೀರೋಯ್ ಹೌಸ್ , ಗೋಪಾಲಪುರ, 5 ನೇ ಅಡ್ಡ್ ರಸ್ತೆ  ಸಂತೆಕಟ್ಟೆ ಉಡುಪಿ ತಾಲೂಕು & ಜಿಲ್ಲೆಹಾಗೂ ಇತರ 3 ಜನ ಸೇರಿ NISSI INFINITY PROMOTERS AND DEVELOPERS ಎಂಬ ಪಾಲುದಾರಿಕೆ ಸಂಸ್ಥೆಯನ್ನು  ಮಾಡಿಕೊಂಡಿರುತ್ತಾರೆ.  ಅರೋಪಿಯು ಸದ್ರಿ ಸಂಸ್ಥೆಯ ಆಡಳಿತ ಪಾಲುದಾರರಾಗಿರುತ್ತಾರೆ. ಅದರಂತೆ ಪ್ರತಿ ಓರ್ವ ಪಾಲುದಾರನಿಗೂ ನಿರ್ದಿಷ್ಟ ಸಂಖ್ಯೆ ಪ್ಲಾಟ್‌ಗಳನ್ನು  ನೀಡಲಾಗಿದೆ ಅರೋಪಿಯು ಸದ್ರಿ ಜಾಗದಲ್ಲಿ ಪ್ಟಾಟ್‌‌ನ್ನು ಪೂರ್ಣಗೊಳಿಸದೆ ವಿದ್ಯಶ್ಚಕ್ತಿ  ಮತ್ತು ನೀರಿನ ಸೌಲಭ್ಯ  ಕಲ್ಪಿಸದೆ ಖರೀದಿದಾರರಿಗೆ ಮೋಸ ಮಾಡಿರುತ್ತಾರೆ ಸದ್ರಿ ಪ್ಲಾಟ್‌ಗಳ ಮೇಲೆ ಬಡಗುಬೆಟ್ಟು ಬ್ಯಾಂಕಿನಲ್ಲಿಸಾಲವಿದ್ದು ಸಲವನ್ನು ಸಹ ಮರು ಪಾವತಿ ಮಾಡಿರುವುದಿಲ್ಲ ,ಮಾರಾಟವಾದ ಪ್ಲಾಟ್‌ಗಳ ಹಣವನ್ನು ತನ್ನ ಸ್ವಯಂ ಬಳಕೆಗೆ  ಉಪಯೋಗಿಸುತ್ತಿದ್ದು ಅಲ್ಲದೆ ಕೆಲವು ಪ್ಲಾಟ್‌ಗಳ ಪಾಲುದಾರರ ಸಮ್ಮತಿ ಇಲ್ಲದಿದ್ದರು ಕೂಡ 5 ವರ್ಷಕ್ಕೆ ಲೀಸ್‌ಗೆ ನೀಡಿ ಅಕ್ರಮ ಲಾಭ  ಮಾಡಿಕೊಂಡಿರುತ್ತಾರೆ. ಅರೋಪಿಯು ಪಿರ್ಯಾದುದಾರರಿಗೆ ಮೋಸ ಮಾಡುವ ಉದ್ದೇಶದಿಂದ ಎಲ್ಲಾ ಹಣ ಪಡೆದು ಹೂಡಿಕೆ ಮಾಡುವಂತೆ ಉತ್ತೇಜಿಸಿ ಒಬ್ಬನೆ ಪ್ಲಾಟ್‌ಗಳನ್ನು ಮಾರಾಟ  ಮಾಡಿ  ಹಣ ನೀಡಿದೆ ಉದ್ದೇಶಪೂರ್ವಕವಾಗಿ ಮೋಸ ಮಾಡಿದ್ದು ಅಲ್ಲದೆ  ಪಿರ್ಯಾದುದಾರರ ಮತ್ತು ಇತರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಮಾಡಿ ಹಣ ಪಡೆಯುತ್ತಿದ್ದರು.  ಪಿರ್ಯಾದುದಾರರು  ಅರೋಪಿತರನ್ನು ಸಂಪರ್ಕಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಇನ್ನುಮುಂದಕ್ಕೆ  ಹಣದ ವಿಚಾರದಲ್ಲಿ ಬಂದಲ್ಲಿ  ಕೈಕಾಲು ಕಡಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 420,465,468,474,504,506 R/W 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 20/04/2021 ರಂದು  20:30 ಗಂಟೆಗೆ ಪಿರ್ಯಾದಿದಾರರಾದ ಶಾಹಿಸ್ತಾ (42)ಗಂಡ ಜಾಫರ್‌ಸಾಧಿಕ್‌‌ವಾಸ: ಎಮ್‌ಎಸ್‌ಮಂಜಿಲ್‌ ಹೆನ್ನಾಬೈಲು ಸಿದ್ದಾಪುರ ಅಂಚೆ ಮತ್ತು ಗ್ರಾಮ ಕುಂದಾಪುರ ಇವರ ಮನೆಯ ಬಳಿ ಸಮಾನ ಉದ್ದೇಶದಿಂದ ಆರೋಪಿ ಮಹಮ್ಮದ್‌ ರಫೀಕ್‌‌ (44) ತಂದೆ: ಹಯತ್‌‌ಬಾಷಾ ವಾಸ: ಹೆನ್ನಾಬೈಲು ಸಿದ್ದಾಪುರ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಉಡುಪಿ ಮತ್ತು ಆಶೀಪ್‌ ಇವರು ಶಾಹಿಸ್ತಾ ರವರ ಮನೆಯ ಎದುರಿನ ಗೇಟ್‌ ಬಳಿ ಬಂದು ಶಾಹಿಸ್ತಾ ಇವರ  ಗಂಡ ಜಾಫರ್‌ ಸಾಧಿಕ್‌ ‌ರವರ ಹಣೆಗೆ ಟಾರ್ಚ್ ಲೈಟ್‌ನಿಂದ  ಹೊಡೆದುದಲ್ಲದೆ ಬಿಡಿಸಲು ಹೋದ ಶಾಹಿಸ್ತಾ ರವರ ಎಡ ಕೈ ಮಣಿಗಂಟಿನ ಬಳಿ ಆರೋಪಿ 2ನೇಯವರು  ಕಚ್ಚಿ  ದೂಡಿ ಹಾಕಿ ಇಬ್ಬರೂ ಓಡಿ ಹೋಗಿರುವುದಾಗಿದೆ. ಮನೆಯ ಹತ್ತಿರ ನಡೆಯುತ್ತಿದ್ದ ಗ್ರಾಮ ಪಂಚಾಯತ್‌ ‌ನೀರಿನ ಪೈಪ್‌ಲೈನ್‌ ಕೆಲಸವನ್ನು ನೋಡಿದ ಶಾಹಿಸ್ತಾ ರವರು  ಗ್ರಾಮ ಪಂಚಾಯುತ್‌ ‌ನಳ್ಳಿ ನೀರು ತಮಗೂ ಬೇಕು ಎಂದು ಆರೋಪಿತರಲ್ಲಿ ಹೇಳಿದ್ದಕ್ಕೆ ಕೋಪಗೊಂಡಿದ್ದ ಆಪಾದಿತರು ಈ ಹಲ್ಲೆ ಮಾಡಿರುವುದಾಗಿದೆ.  ಘಟನೆ ಬಳಿಕ ಆದ ಗಾಯನೋವಿನಿಂದ  ಶಾಹಿಸ್ತಾ ರವರು ಮತ್ತು ಅವರ ಗಂಡ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರಿಂದ ಈ ದೂರು ನೀಡಲು ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 323, 324, 354 (B) ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 19/04/2021 ರಂದು ಸಂಜೆ 5:30 ಗಂಟೆಗೆ ಜಿಲ್ಲಾಧಿಕಾರಿಯವರು ಸಂತೆಕಟ್ಟೆ  ಜಂಕ್ಷನ್‌ಲ್ಲಿ ಜಿಲ್ಲಾಧಿಕಾರಿಯವರು ಕೋವಿಡ್ -19 ನಿಯಮಾವಳಿ ಉಲ್ಲಂಘನೆ ಬಗ್ಗೆ ಪರಿಶೀಲಿಸುವಾಗ  KA-20-AA-8281, KA-20-D-9148, KA-51-AA-8003,  KA-20-AA-2327, KA-19-C-5172 ನೇ ಬಸ್ಸಿನ ಚಾಲಕರು ಕೋವಿಡ್ -19 ನಿಯಮಾವಳಿ ಉಲ್ಲಂಘಿಸಿ ನಿಗಧಿಪಡಿಸಿದ ಸಂಖ್ಯೆಗಿಂತ ಆಧಿಕ ಪ್ರಯಾಣಿಕರನ್ನು ಹತ್ತಿಸಿಕೊಂಡ ಕೋವಿಡ್ -19 ನಿಯಮಾವಳಿ ಪಾಲಿಸಿರುವುದಿಲ್ಲ ಎಂಬುದಾಗಿ ಪೌರ ಅಯುಕ್ತರು ಉಡುಪಿ ನಗರ ಸಭೆ ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 73/2021 ಕಲಂ: 269 ಜೊತಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-04-2021 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080