ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ದಿನಾಂಕ 21/03/2023 ರಂದು ಪಿರ್ಯಾದಿದಾರರಾದ ಬಿ. ಎಂ ನದೀಮ್ (26), ತಂದೆ: ಅಬ್ದುಲ್ ರೆಹೆಮಾನ್, ವಾಸ: ಸುಲ್ತಾನ್‌ಮೊಹಲ್ಲಾ, ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ತನ್ನ ಅಟೋರಿಕ್ಷಾದಲ್ಲಿ ಬಾಡಿಗೆಗೆ ಗಂಗೊಳ್ಳಿಯಿಂದ ಪ್ರಯಾಣಿಕರನ್ನು ಕರೆದುಕೊಂಡು ಕುಂದಾಪುರ ರೈಲ್ವೆ ಸ್ಟೇಷನ್‌ ಗೆ ಬಿಟ್ಟು ವಾಪಾಸು ಗಂಗೊಳ್ಳಿಗೆ ಬರುತ್ತಿರುವಾಗ  ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿಯ ಕರ್ನಾಟಕ ಬ್ಯಾಂಕ್ ಬಳಿ ತಲುಪುವಾಗ ಬೆಳಿಗ್ಗಿನ ಜಾವ  02:30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ KA-47-M-4860 ನೇ  ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾವನ್ನು ಓವರ್‌ ಟೇಕ್‌ ಮಾಡಿ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನಾರ್ಧನ ಪೂಜಾರಿ ಎಂಬುವವರಿಗೆ ಢಿಕ್ಕಿ ಹೊಡೆದ ಪರಿಣಾಮ ಜನಾರ್ಧನ ಪೂಜಾರಿ ಯವರ ಎರಡೂ ಕಾಲಿಗೆ ತೀವೃ ರಕ್ತ ಗಾಯವಾಗಿದ್ದು, ಹಣೆಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಪಿರ್ಯಾದಿದಾರರು ಅಂಬ್ಯುಲೆನ್ಸ್‌ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ಸಂಜೀವಿ (45), ಗಂಡ: ಗೋಪಾಲ ಪೂಜಾರಿ, ವಾಸ: 7-82, ಮುತ್ತು ನಿವಾಸ, ತಿರುಮಟ್ಲ ಕೆರು, ಮಟ್ಟಾರು ಅಂಚೆ, ಶಿರ್ವ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಾಯಿಯ ತಮ್ಮ ಸದಾಶಿವ ಪೂಜಾರಿ(60) ಎಂಬುವವರು ಕಳೆದ ಒಂದು ತಿಂಗಳಿನಿಂದ ತೆಂಕ ಎರ್ಮಾಳು ಗ್ರಾಮದ ಜನಾರ್ಧನ ಹೋಟೆಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡು, ವಿಶ್ರಾಂತಿ ಬಗ್ಗೆ ಉಚ್ಚಿಲದ ಕಿಶೋರ್ ಎಂಬುವವರ ಮನೆಗೆ ಸೈಕಲ್ಲಿನಲ್ಲಿ ಹೋಗಿ ಬರುತ್ತಿದ್ದು, ದಿನಾಂಕ 20/03/2023 ರಂದು ವಿಶ್ರಾಂತಿ ಮುಗಿಸಿ ಕೆಲಸಕ್ಕೆಂದು ಉಚ್ಚಿಲದಿಂದ ಹೋಟೆಲ್‌ಗೆ ಬರುತ್ತಾ 17:30 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಬುದಗಿ ಪೆಟ್ರೋಲ್ ಪಂಪ್ ಡಿವೈಡರ್ ತಲುಪಿದಾಗ KA-19-MF-7163 ನೇ ನಂಬ್ರದ  ಕಾರು ಚಾಲಕ ಕೃಷ್ಣಾಪುರದ ಮೊಹಮ್ಮದ್ ಆಸೀಫ್  ತನ್ನ  ಕಾರನ್ನು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಾವ ಹೋಗುತ್ತಿದ್ದ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ, ಸದಾಶಿವ ಪೂಜಾರಿಯವರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು,ಅವರ ತಲೆಯ ಹಿಂಭಾಗ ಹಾಗೂ ಬೆನ್ನಿಗೆ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಶಂಕರನಾರಾಯಣ: ಪಿರ್ಯಾದಿದಾರರಾದ ಸುನೀಲ್ ಮೊಗವೀರ (26), ತಂದೆ: ದಿ. ಅಣ್ಣಪ್ಪ ನಾಯ್ಕ, ವಾಸ: ಸುಮಿತ್ರಾ ನಿಲಯ ಬಡಾಬಾಳು ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 20/03/2023 ರಂದು KA-20-EA-3389 ನೇ ನಂಬ್ರದ ಮೋಟಾರ ಸೈಕಲನಲ್ಲಿ ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ ಜೆಎಮ್‌ಜೆ ಗ್ಯಾರೇಜ್ ಬಳಿ  ಸಿದ್ದಾಪುರ ಕಡೆಯಿಂದ  ಬಡಾಬಾಳು ಕಡೆಗೆ  ಹೋಗುತ್ತಿರುವಾಗ ಆರೋಪಿ KA-20-EY-4833 ನೇ ನಂಬ್ರದ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೇರೆ ವಾಹನವನ್ನು ಓವರಟೆಕ್ ಮಾಡಿದ  ಪರಿಣಾಮ ಸ್ಕೂಟಿಯು ಆರೋಪಿಯ ಹತೋಟಿ  ತಪ್ಪಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟಿ ಸವಾರ ರಸ್ತೆಯ ಮೇಲೆ ಬಿದ್ದು, ಗಾಯಗೊಂಡಿರುತ್ತಾರೆ. ಇದರ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದೆ ಹಾಗೂ  ಆರೋಪಿಗೆ  ಸಹ ರಕ್ತಗಾಯವಾಗಿದ್ದು  ಕುಂದಾಪುರ ಚಿನ್ಮಯಿ   ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 29/2023 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಶಂಕರನಾರಾಯಣ: ದಿನಾಂಕ  21/03/2023 ರಂದು ಬೆಳಗಿನ 01:45 ಗಂಟೆಗೆ ಪಿರ್ಯಾದಿದಾರರಾದ ರವಿ ಶೆಟ್ಟಿ (44 ), ತಂದೆ: ಮಂಜಯ್ಯ ಶೆಟ್ಟಿ, ವಾಸ: ಮಠದಹಕ್ಲು,  ಯಡಮೊಗ್ಗೆ ಗ್ರಾಮ ಕುಂದಾಪುರ ತಾಲೂಕು  ಇವರ ವಾಸದ  ಮನೆಯಾದ  ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ಮಠದಹಕ್ಕು ಎಂಬಲ್ಲಿ  ಮನೆಯ ಗೇಟಿನ  ಬಳಿ ಮಲಗಿದ್ದ ಪಿರ್ಯಾದಿದಾರಿರಗೆ  ಸೇರಿದ 15,000/- ರೂಪಾಯಿ  ಮೌಲ್ಯದ ಕಪ್ಪು ಬಣ್ಣದ ದನವನ್ನು  ಆರೋಪಿಗಳು KA- 05-0760 ನೇ ನಂಬ್ರದ ರಿಡ್ಜ್ ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023  ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಸ್ಥಿರಾಸ್ತಿ ಸರ್ವೆ ನಂಬ್ರ 124/12, 124/11, 124/9 ಮತ್ತು ಇತರೆ ಸ್ಥಿರಾಸ್ಥಿಗಳ ಬಗ್ಗೆ ಪಿರ್ಯಾದಿದಾರರಾದ ಸಹನಾ (25), ತಂದೆ: ಸುರೇಶ್, ವಾಸ: ಮೇಲಿನ ಕಡಂಬೂರಿ, ಕಲ್ಯ ಗ್ರಾಮ, ಕಾರ್ಕಳ ತಾಲೂಕು ಇವರ ಅಜ್ಜಿ ಶ್ರೀಮತಿ ವಾರಿಜಾ ಮತ್ತು ಹರಿಣಿ, ಕುಸುಮ ಎಂಬುವವರ ಮಧ್ಯೆ ಜಾಗದ ತಕರಾರಿನ ಬಗ್ಗೆ ಮಾನ್ಯ ಕಾರ್ಕಳ ನ್ಯಾಯಾಲಯದಲ್ಲಿ  ದಾವೆ ನಡೆಯುತ್ತಿದ್ದು,  ತಕರಾರು ಇರುವ ಜಾಗದ ಸರ್ವೆ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ, ದಿನಾಂಕ 21/03/2023 ರಂದು ಬೆಳಗ್ಗೆ 10:00 ಗಂಟೆಗೆ ಪಿರ್ಯಾದಿದಾರರು ತಮ್ಮ ತಾಯಿ, ಸೀತಾ, ಸುಜಾತ, ಸುಪ್ರೀತ, ಸುನೀತಾ ಹಾಗೂ ಸಬಿತಾ ಇವರ ಜೊತೆಯಲ್ಲಿ ತೆರಳಿ, ಜಾಗದ ಸರ್ವೆ ನಡೆಸುತ್ತಿದ್ದ ಸರ್ವೆಯರಲ್ಲಿ ಜಾಗದ ಸರ್ವೆ ನಡೆಸಲು ಇರುವ ಆದೇಶದ ಪ್ರತಿಯ ಬಗ್ಗೆ ವಿಚಾರಿಸಿ,  ಜಾಗದ ಸರ್ವೆ ನಡೆಸಲು ಆಕ್ಷೇಪ ಇರುವುದಾಗಿ ತಿಳಿಸಿದಾಗ, ಸ್ಥಳದಲ್ಲಿದ್ದವರ ಪೈಕಿ ಪ್ರಕಾಶ ಮತ್ತು ಯತೀಶ್ ಇವರು ಅವಾಚ್ಯ ಶಬ್ದಗಳಿಂದ ಬೈಯ್ದು ಮಾನಕ್ಕೆ ಕುಂದನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ : 504, 509 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ: ಪಿರ್ಯಾದಿದಾರರಾದ ಶೇಖರ ನಾಯ್ಕ್ (47), ತಂದೆ: ಅಣ್ಣು ನಾಯ್ಕ್, ವಾಸ: ಪೊಸನೊಟ್ಟು, ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ಕುಕ್ಕುಂದೂರು  ಗ್ರಾಮದ ನಕ್ರೆ  ಪೊಸನೊಟ್ಟು ಎಂಬಲ್ಲಿ ವಾಸವಾಗಿದ್ದು ಅವರ  ಮನೆಯಿಂದ ಸ್ವಲ್ಪ  ದೂರದಲ್ಲಿ  ಶ್ರೀನಿವಾಸ ಆಚಾರ್ಯ ಎಂಬುವವರ  ಮನೆ ಇದ್ದು ಅವರು ಪ್ರತಿದಿನ ಪಿರ್ಯಾದಿದಾರರ ಮನೆಯ ಬಳಿ ಮಾತನಾಡಲು ಸಿಗುತ್ತಿದ್ದರು. ಶ್ರೀನಿವಾಸ ಆಚಾರ್ಯರವರ  ಮನೆಯಲ್ಲಿ  ಅವರ ಹೆಂಡತಿಯ ತಮ್ಮ ಜಗದೀಶ ಆಚಾರ್ಯ ಎಂಬುವವರು ವಾಸವಾಗಿರುತ್ತಾರೆ. ದಿನಾಂಕ 20/03/2023 ರಂದು ಪಿರ್ಯಾದಿದಾರರು  ಮನೆಯಲ್ಲಿದ್ದಾಗ   ಶ್ರೀನಿವಾಸ ಆಚಾರ್ಯರವರು ಸಂಜೆ ಪಿರ್ಯಾದಿದಾರರ ಮನೆಗೆ  ಬಂದಿದ್ದು   ಅವರೊಂದಿಗೆ  ಸ್ವಲ್ಪ ಹೊತ್ತು  ಮಾತನಾಡುತ್ತಾ ನಂತರ ಅವರೊಂದಿಗೆ ಶ್ರೀನಿವಾಸ ಆಚಾರ್ಯರವರ  ಮನೆಗೆ ಹೋಗಿ ರಾತ್ರಿ 19:30 ಗಂಟೆಗೆ   ಅಂಗಳದಲ್ಲಿ  ನಿಂತುಕೊಂಡು  ಮಾತನಾಡುತ್ತಿದ್ದಾಗ  ಅವರ  ಮನೆಯಲ್ಲಿದ್ದ  ಜಗದೀಶ  ಆಚಾರ್ಯ ಏಕಾಏಕಿ ಕೈಯಲ್ಲಿ ತುಂಡು ಕತ್ತಿಯನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ  ಬೈದು ಪಿರ್ಯಾದಿದಾರರ ಎಡಕೈಯ ಮೊಣಗಂಟಿನ  ಕೆಳಗೆ ಕಡಿದನು. ಆ ಸಮಯ  ಪಿರ್ಯಾದಿದಾರರು  ಬೊಬ್ಬೆ ಹಾಕಿದಾಗ  ಬೊಬ್ಬೆ ಕೇಳಿ  ಪಿರ್ಯಾದಿದಾರರ ಹೆಂಡತಿ  ಸ್ಥಳಕ್ಕೆ  ಬಂದು ಹೊಡೆಯದಂತೆ ತಡೆದಾಗ  ಕತ್ತಿಯನ್ನು  ಅಲ್ಲಿಯೇ   ಬಿಸಾಡಿ ಹೋಗಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ  ಹೆಂಡತಿ ಹಾಗೂ ಶ್ರೀನಿವಾಸ ರವರು  ಚಿಕಿತ್ಸೆಯ  ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ  ಬಂದು  ಚಿಕಿತ್ಸೆ   ಕೊಡಿಸಿರುತ್ತಾರೆ.  ಪಿರ್ಯಾದಿದಾರರು  ಹಾಗೂ ಶ್ರೀನಿವಾರವರು ಸ್ನೇಹಿತರಾಗಿದ್ದು ಅಪಾದಿತ ಜಗದೀಶನ ವಿಚಾರ  ಮಾತನಾಡುತ್ತಿದ್ದಾರೆ  ಎಂಬ ದ್ವೇಷದಿಂದ  ಅಪಾದಿತನು  ಕತ್ತಿಯಿಂದ  ಕಡಿದು ಗಾಯಗೊಳಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023  ಕಲಂ :324, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 18/03/2023 ರಂದು  ಮಧು  ಬಿ.ಇ,   ಪೊಲೀಸ್‌‌‌‌‌ ಉಪನಿರೀಕ್ಷಕರು(ಕಾ ಮತ್ತು  ಸು),   ಕೋಟ  ಪೊಲೀಸ್‌‌‌‌‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ  ಸೇತುವೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಗಾಂಜಾ ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವುದಾಗಿ ಮಾಹಿತಿ ದೊರೆತಂತೆ ಸಾಸ್ತಾನ  ಸೇತುವೆಯ ಬಳಿ ಹೋಗಿ ಆಪಾದಿತ ಚೇತನ್‌‌‌‌  ಕುಂದರ್‌‌‌‌‌ (25) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಗಾಂಜಾ ಸೇವಿಸಿರುವ ಬಗ್ಗೆ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ದಿನಾಂಕ  21/03/2023  ರಂದು  ತಜ್ಞ ವರದಿ ಪಡೆಯಲಾಗಿ, ಆಪಾದಿತನಾದ ಚೇತನ್‌‌‌‌‌ ಕುಂದರ್‌ ‌ಗಾಂಜಾ  ಸೇವಿಸಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023  ಕಲಂ: 27(B)NDPS ACT     ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 21/03/2023 ರಂದು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬೀಚ್ ಬಳಿ ಪಾರ್ಕ್‌ ನಲ್ಲಿ ಓರ್ವ ವ್ಯಕ್ತಿ  ಗಾಂಜಾ ಮಾರಾಟ ಮಾಡುತ್ತಿರುವುದಾಗಿ ವಿನಯ್‌ ಎಮ್‌ ಕೊರ್ಲಹಳ್ಳಿ,  ಪೊಲೀಸ್‌ ಉಪನಿರೀಕ್ಷಕರು (ಕಾ,ಸು), ಗಂಗೊಳ್ಳಿ ಪೊಲೀಸ್‌ ಠಾಣೆ ಇವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಗಾಂಜಾ ಮಾರಟ ಮಾಡುತ್ತಿದ್ದ ಮಾಮ್ದು ಐಮಾನ್ (23), ತಂದೆ: ಮಾಮ್ದು ಹನೀಫ್, ವಾಸ: ಹಡುವಿನಕೋಣೆ ರಸ್ತೆ, ಶಿರೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಆಪಾದಿತನ ವಶದಲ್ಲಿದ್ದ  46 ಗ್ರಾಂ ಗಾಂಜಾ  ಅಂದಾಜು 1,500/- ರೂಪಾಯಿ ಹಾಗೂ ಚಿಕ್ಕಚಿಕ್ಕ ಪ್ಲಾಸ್ಟಿಕ್‌ ಜಿಪ್‌ ಕವರ್‌-10, ಮತ್ತು 245 ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆಪಾದಿತನು ಗಾಂಜಾವನ್ನು ತನಗೆ ಭಟ್ಕಳದ ಮೆಹತಾಭ್ ಎಂಬಾತನು ನೀಡಿರುವುದಾಗಿ ತಿಳಿಸಿರುತ್ತಾನೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2023 ಕಲಂ: 8(ಸಿ), 20(ಬಿ),(ii)(ಎ) ಎನ್.ಡಿ.ಪಿ.ಎಸ್ ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 21/03/2023 ರಂದು ನಿರಂಜನ ಗೌಡ ಬಿ ಎಸ್ , ಪೊಲೀಸ್  ಉಪ ನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ  ಪಡುವರಿ ಗ್ರಾಮದ ಒತ್ತಿನಾಣೆ  ಹೇನುಬೇರು ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಗಾಂಜಾ ಮಾರಾಟ  ಮಾಡುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿ  ಗಾಂಜಾ ಮಾರಾಟ ಮಾಡುತ್ತಿದ್ದ ಆಪಾದಿತ ಸದ್ಕೆ ಸಜ್ಜಾದ್ (22), ತಂದೆ: ಸಡ್ಕೆ ಹಾರೂನ್, ವಾಸ: ಸದ್ಕೆ ಮಂಜಿಲ್ ಹಡವಿನಕೋಣೆ ಶಿರೂರು ಗ್ರಾಮ ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಆರೋಪಿಯ  ಪ್ಯಾಂಟ್ ಕಿಸೆಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ 50 ಗ್ರಾಂ ತೂಕದ ಗಾಂಜಾ ಮೌಲ್ಯ ರೂಪಾಯಿ 1,500/- ಮತ್ತು ಪ್ಯಾಂಟಿನ ಇನ್ನೊಂದು ಕಿಸೆಯಲ್ಲಿದ್ದ   ರೆಡ್ ಮಿ ಕಂಪೆನಿಯ ಮೊಬೈಲ್ ಅದಕ್ಕೆ ಅಳವಡಿಸಿದ   ಜೀಯೊ ಕಂಪೆನಿಯ ಸಿಮ್  ಮೌಲ್ಯ 10,000/- ರೂಪಾಯಿ  ಸ್ವಾಧೀನಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 8 (ಸಿ), 20 (ಬಿ) (ii) (ಎ) ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ  21/03/2023 ರಂದು ರಾತ್ರಿ 23:00 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಅಮೀರ್ ಸುಹೈಲ್ (29), ತಂದೆ: ಇಬ್ರಾಹಿಂ ಖಲೀಲ್, ವಾಸ: ತಂಜೀರ್ ಮಂಜಿಲ್, ಎಸ್.ಎಸ್. ರಸ್ತೆ, ಹೆಜಮಾಡಿ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ದೂರದ ಸಂಬಂಧಿ ಹೆಜಮಾಡಿ ಗ್ರಾಮದ ಎನ್.ಎಸ್. ರಸ್ತೆಯ ನಿವಾಸಿ ಇಕ್ಬಾಲ್ ಎಂಬಾತನು ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್, ಮರದ ರೀಪ್‌‌ನ್ನು ಹಿಡಿದುಕೊಂಡು ಬಂದು ಏಕಾಏಕಿಯಾಗಿ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮವಾಗಿ ಬಂದು, ಪಿರ್ಯಾದಿದಾರರ ಅತ್ತಿಗೆ ತಸ್ಲಿಮಾ ರವರ ರೂಮಿನ ಒಳಗೆ ಹೋದಾಗ, ಪಿರ್ಯಾದಿದಾರರ ತಂದೆ ಇಬ್ರಾಹಿಂ ಖಲೀಲ್ ರವರು ಆತನ ಹಿಂದೆ ಹೋಗಿ ಏನಾಯಿತು ಎಂದು ಕೇಳುವಾಗ, ಆರೋಪಿ ಇಕ್ಬಾಲ್‌‌ನು ಪಿರ್ಯಾದಿದಾರರ ತಂದೆಯನ್ನು ಕೈಯಿಂದ ದೂಡಿದ್ದು, ಆಗ ಪಿರ್ಯಾದಿದಾರರು ಅವರನ್ನು ಯಾಕೆ ದೂಡಿದ್ದು ಎಂದು ಕೇಳಿದಾಗ, ಇಕ್ಬಾಲ್‌ನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರಿಗೆ ಹೊಡೆದಾಗ,ಅವರು ತಪ್ಪಿಸುವಾಗ ರಾಡ್‌ ಪಿರ್ಯಾದಿದಾರರ ತಲೆಗೆ  ಕೈಗೆ  ತಾಗಿ ನೋವಾಗಿರುತ್ತದೆ. ನಂತರ ಇಕ್ಬಾಲ್‌ನು ಪಿರ್ಯಾದಿದಾರರ ಅಣ್ಣ ಇಮ್ರಾನ್‌ನಿಗೆ ರೀಪಿನಿಂದ ಮುಖಕ್ಕೆ ಹೊಡೆದ ಪರಿಣಾಮ ಮೂಗಿಗೆ ರಕ್ತ ಗಾಯವಾಗಿರುತ್ತದೆ. ಈ ವೇಳೆ ಬಿಡಿಸಲು ಹೋದ ಪಿರ್ಯಾದಿದಾರರ ಅತ್ತಿಗೆ ರುಬೀನಾಳನ್ನು ಆರೋಪಿ ಕೈಯಿಂದ ದೂಡಿರುತ್ತಾನೆ. ಈ ವೇಳೆಗೆ ಪಿರ್ಯಾದಿದಾರರ ಅಣ್ಣ ರಮೀಝ್ ಬಂದಾಗ ಆರೋಪಿಯು ಅಲ್ಲಿಂದ ಓಡಿ ಹೋದವನು, ಆತನ ತಮ್ಮ ನೌಫಲ್, ಅಜರ್, ಆತನ ಅಣ್ಣ ಇಬ್ರಾಹಿಂ, ಮನ್ಸೂರ್, ಮತ್ತಿತರರೊಂದಿಗೆ ಕೈಯಲ್ಲಿ ಬ್ಯಾಟ್‌ ‌ಹಿಡಿದುಕೊಂಡು ಪಿರ್ಯಾದಿದಾರರ ಮನೆಯ ಬಳಿ ಬಂದು, ಹೊರಗೆ ಬನ್ನಿ, ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಕಲ್ಲು ಬಿಸಾಡಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಹಾಗೂ ಅವರ ಅಣ್ಣ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023, ಕಲಂ: 143, 147, 148, 448, 504, 323, 324, 506, 354 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 22-03-2023 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080