ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಕಾಪು:   ದಿನಾಂಕ 22/03/2023 ರಂದು ಕಾಪು ಮಾರಿಗುಡಿ ಬಂದೋಬಸ್ತ್‌ ಪ್ರಯುಕ್ತ ಸುಮ ಬಿ. (ಕಾ ಮತ್ತು ಸು), ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಪಡು ಗ್ರಾಮದ ಕಾಪು ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ  ಜೂಜಾಟ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ  ನೋಡಲಾಗಿ ಬಬ್ಬುಸ್ವಾಮಿ ದೈವಸ್ಥಾನ ಬದಿಯ ಸಾರ್ವಜನಿಕ ಸ್ಥಳದಲ್ಲಿ 05 ಜನರು ಕುಳಿತು ಹಳೆಯ ನ್ಯೂಸ್ ಪೇಪರ್‌ಹಾಸಿಕೊಂಡು ಅದರಲ್ಲಿ ಒಬ್ಬ ಒಂದು ಚುಕ್ಕಿಗೆ 10 ಕ್ಕೆ 20, ಎರಡು ಚುಕ್ಕಿಗೆ 10 ಕ್ಕೆ 30  ಎಂಬಿತ್ಯಾದಿಯಾಗಿ ಕೂಗುತ್ತಿದ್ದು, ಮಧ್ಯದಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಚುಕ್ಕಿಗಳಿರುವ ಚೌಕವನ್ನು ಒಂದು ಪ್ಲಾಸ್ಟಿಕ್‌ ಬಾಕ್ಸ್‌ ನಲ್ಲಿ ಹಾಕಿ ಅಲುಗಾಡಿಸಿ ಡಬ್ಬವನ್ನು ತಲೆಕೆಳಗೆ ಮಾಡಿ ಪೇಪರ್‌ ಮೇಲೆ ಹಾಕುತ್ತಿದ್ದು ಆಗ ಅದರೊಳಗಿದ್ದ ಚೌಕವು ನೆಲಕ್ಕೆ ಬಿದ್ದು ಯಾವ ಚುಕ್ಕಿ ಮೇಲೆ ಇರುತ್ತದೋ ಆ ಚುಕ್ಕಿಗೆ ಹಣ ಕಟ್ಟಿದವರಿಗೆ  ಹಣ ನೀಡುತ್ತಿದ್ದು, ಉಳಿದವರು ಹಣವನ್ನು ಪಣವಾಗಿಟ್ಟು ಜುಗಾರಿ ಆಡುತ್ತಿದ್ದು, ಗರಗರ ಮಂಡಲ ಎನ್ನುವ ಜೂಜಾಟ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಗರಗರ ಮಂಡಲ ಜೂಜಾಟ ಆಡುತ್ತಿರುವವರು ಓಡಲು ಪ್ರಯತ್ನಿಸಿದ್ದು  ಅವರನ್ನು ಹಿಡಿದು ವಿಚಾರಿಸಲಾಗಿ ಗರಗರ ಮಂಡಲ ಜೂಜಾಟದ ಡಬ್ಬವನ್ನು ಅಲುಗಾಡಿಸಿ ಹಾಕುತ್ತಿದ್ದವನ ಹೆಸರು 1)ತೌಸಿಫ್, ಮತ್ತು 2)ದೀಪಕ್ 3) ಶ್ರೀನಿವಾಸ 4)ಆದರ್ಶ್ 5) ಮಂಜುನಾಥ ಎಂದು ತಿಳಿಸಿದ್ದು ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ ಆರೋಪಿಗಳು  ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 4,060/- ರೂಪಾಯಿ ಗರಗರ ಮಂಡಲ ಜೂಜಾಟ ಆಟಕ್ಕೆ ಬಳಸಲಾದ ಒಂದು ಕೆಂಪು ಬಣ್ಣದ ಪ್ಲಾಸ್ಟಿಕ್‌ ಡಬ್ಬಿ, 1 ರಿಂದ 6 ರವರೆಗೆ ಬಿಳಿ ಬಣ್ಣದ ಚುಕ್ಕಿಗಳಿರುವ ಗುಲಾಬಿ ಬಣ್ಣದ ಚೌಕ, ನೆಲಕ್ಕೆ ಹಾಸಿದ ಹಳೆಯ ನ್ಯೂಸ್‌ಪೇಪರ್‌ ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023 ಕಲಂ:  87 ಕೆ. ಪಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಬ್ರಹ್ಮಾವರ: ದಿನಾಂಕ 21/03/2023 ರಂದು ಬ್ರಹ್ಮಾವರ ತಾಲೂಕು  ಕಚ್ಚೂರು ಗ್ರಾಮದ ಬಾರಕೂರು ಎಂಬಲ್ಲಿರುವ ಶಾಂತ ನಿಲಯ ಎಂಬ ಮನೆಯ ಬಾಗಿಲಿನಲ್ಲಿ ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸುಷ್ಮೀತಾ, (26), ಗಂಡ: ಸಚಿನ್‌ ಶೆಟ್ಟಿ ಇವರು ಒಬ್ಬರೇ ನಿಂತುಕೊಂಡಿರುವಾಗ ಅವರ ಹಿಂದಿನ ಮನೆಯ ನಿವಾಸಿಯಾದ ಆರೋಪಿ ಶಂಕರ ಶಾಂತಿ  ಏಕಾ ಎಕಿ ಮನೆಯ  ಕಂಪೌಂಡ್‌ ಒಳಗೆ ಅಕ್ರಮ ಪ್ರವೇಶ ಮಾಡಿ, “ನೀವು ನಮಗೆ ದಾರಿಗೆ ಜಾಗ ಕೊಡದೆ ಇರುವುದರಿಂದ, ನಿನ್ನ ಮತ್ತು ಶರ್ಮಿಳಾಳ ಗಂಡನನ್ನು ಜೈಲಿಗೆ ಕಳುಹಿಸಿದ್ದೇನೆ”, ನನಗೆ ನಿಮ್ಮ ಮನೆಯ ದಕ್ಷಿಣ ದಿಕ್ಕಲ್ಲಿರುವ ದಾರಿಯನ್ನು ಬಿಟ್ಟುಕೊಡದಿದ್ದರೇ, ನಿನ್ನನ್ನು ಮತ್ತು ಶರ್ಮಿಳಾಳನ್ನು ಕೊಂದು ದಾರಿ ಬಿಡಿಸಿಕೊಳ್ಳುತ್ತೇನೆ”, ಎಂದು ಕೂಗುತ್ತಾ ಏಕಾ ಎಕಿ  ಮನೆಯ ಸಿಟ್‌ ಔಟ್‌ ನಲ್ಲಿ ನಿಂತ ಪಿರ್ಯಾದಿದಾರರನ್ನು ಕೈಯಿಂದ ದೂಡಿ ಹಲ್ಲೆ ಮಾಡಿರುತ್ತಾನೆ. ಆಗ ಜೀವ ಭಯದಿಂದ ಪಿರ್ಯಾದಿದಾರರು ತಪ್ಪಿಸಿಕೊಂಡು ಮನೆಯ ಒಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಾಗ ಆರೋಪಿಯು ಪಿರ್ಯಾದಿದಾರಿಗೆ ಇವತ್ತು ನನ್ನ ಕೈಯಿಂದ ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಮತ್ತು ಶರ್ಮಿಳಾಳನ್ನು ಒಂದಲ್ಲ ಒಂದು ದಿನ ಕೊಲ್ಲದೇ ಬಿಡುವುದಿಲ್ಲ ಎಂದು ಕೂಗೂತ್ತಾ ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 : ಕಲಂ 447, 354, 354(B), 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಈಶ್ವರ ನಗರದ ಶಾಂಭವಿ ಪ್ಯಾಲೇಸ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ  ಜೋಸ್ ಬಿಜು (20) ಎಂಬಾತನನ್ನು  ಸುನಿಲ್ ಎ., ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು  ದಿನಾಂಕ 22/03/2023 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು, ವರದಿಯಲ್ಲಿ ಆರೋಪಿ ಜೋಸ್ ಬಿಜು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ . ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 19/03/2023 ರಂದು ಮಹಾಂತೇಶ್‌ ಉದಯ ನಾಯಕ್ , ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಸಾರ್ವಜನಕರಿಂದ ಬಂದ ದೂರಿನ ಮೇರೆಗೆ   ಉಪ್ಪೂರು ಗ್ರಾಮದ ಕೊಳಲಗಿರಿ ಜಂಕ್ಷನ್‌ ಬಳಿ ಆರೋಪಿ ಕೃಷ್ಣ(46) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ. ಆತನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,. ದಿನಾಂಕ 22/03/2023 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023 ಕಲಂ : 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 22-03-2023 05:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080