ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಶ್ರೀಕಾಂತ್ (25)ರ್ಷ, ತಂದೆ: ವೇಣುಗೋಪಾಲ ಎಸ್ ಆಚಾರ್ಯ ವಾಸ: ಶ್ರೀ ನಿಲಯ, ಮನೆ ನಂಬ್ರ: 7-21 ಭುಜಂಗ ರಾವ್ ರೋಡ್, ಚಿಟ್ಪಾಡಿ, ಉಡುಪಿ ಇವರು ದಿನಾಂಕ 18/03/2022 ರಂದು ಮಣಿಪಾಲಕ್ಕೆ ಕೆಲಸದ ನಿಮಿತ್ತ ಬಂದು ಬಳಿಕ ವಾಪಾಸು ಸಂಜೆ 4:30 ಗಂಟೆಗೆ KA-20-EX-5978 ನೇ ಟಿ.ವಿ.ಎಸ್ ಅಪಾಚಿ ಮೋಟಾರು ಸೈಕಲಿನಲ್ಲಿ ಎಂ.ಐ.ಟಿ ಜಂಕ್ಷನ್ ನಿಂದ ಕಾಮತ್ ಸರ್ಕಲ್ ಮುಖಾಂತರವಾಗಿ ಮನೆಗೆ ಹೋಗುತ್ತಿರುವಾಗ ಬಬ್ಬುಸ್ವಾಮಿ ದೈವಸ್ಥಾನದ ಬಳಿ ನಿಲ್ಲಿಸಿಕೊಂಡಿದ್ದ KA-20-AA-8021 ನೇ ಮಾರುತಿ ಸುಝುಕಿ ಕಾರಿನ ಬಲಬದಿಯ ಡ್ರೈವರ್ ಸೀಟ್ ಬಳಿಯ ಡೋರ್ ನ್ನು ಅದರ ಚಾಲಕನು ಏಕಾಏಕಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೆರೆದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಕಾರಿನ ಡೋರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡ ಕೈಗೆ ಮೂಳೆ  ಮುರಿತದ ಒಳ ಜಖಂ ಹಾಗೂ  ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022, ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ರಾಜೇಶ್ ಶಂಕರಪ್ಪ ರಾಠೋಡ್ (34), ತಂದೆ: ಶಂಕರಪ್ಪ ರಾಠೋಡ್, ವಾಸ: ಮಹಾಗಣಪತಿ ಸ್ಟೋನ್ ಕ್ರಶರ್, ಬೈಲೂರು, ಯರ್ಲಪಾಡಿ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 20/03/2022 ರಂದು ಬೈಲೂರು ಮಹಾಗಣಪತಿ ಸ್ಟೋನ್ ಕ್ರಶರ್ ಬಳಿ ರೂಮ್ ನಲ್ಲಿರುವಾಗ ಮದ್ಯಾಹ್ನ 03:15 ಗಂಟೆಗೆ ಪಿರ್ಯಾದಿದಾರರೊಂದಿಗೆ ಕೆಲಸ ಮಾಡಿಕೊಂಡಿದ್ದ ಒಬ್ಬರಿಗೆ ಆಟೋರಿಕ್ಷಾದವರು ಪೋನ್ ಮಾಡಿ ಪಿರ್ಯಾದಿದಾರರೊಂದಿಗೆ ಕ್ರಶರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಬೀಮಪ್ಪ ರಾಠೋಡ್ ಎಂಬುವವರ ಪತ್ನಿ ರೇಣುಕಾ ಬೀಮಪ್ಪ ರಾಠೋಡ್ (40)  ರವರು ಮದ್ಯಾಹ್ನ ಬೈಲೂರಿನಿಂದ ಕಾರ್ಕಳದ ಅಯ್ಯಪ್ಪನಗರ ಕಡೆಗೆ ಹೋಗಲು ಉಡುಪಿಯಿಂದ ಕಾರ್ಕಳ ಕಡೆಗೆ ಹೋಗುವ KA-20-AA-8376 ನೇ ನೋಂದಣಿ ಸಂಖ್ಯೆಯ ಸಾಚಿ ಬಸ್ಸಿನಲ್ಲಿ ಹೋಗುತ್ತಾ ಮದ್ಯಾಹ್ನ 02:50 ಗಂಟೆಗೆ ಕುಕ್ಕುಂದೂರು ಗ್ರಾಮದ ತ್ರಿವಿಕ್ರಮ ಕಿಣಿ ಎಂಬುವವರ ಅಂಗಡಿ ಬಳಿ ತಲುಪುವಾಗ  ಬಸ್ ನಿಲ್ದಾಣದ ಬಳಿ ಬಸ್ಸಿನಿಂದ ಇಳಿಯಲು ಬಸ್ಸು ನಿಲ್ಲಿಸಲು ಬಸ್ಸು ನಿರ್ವಾಹಕನಿಗೆ ತಿಳಿಸಿದಾಗ ಬಸ್ ಚಾಲಕನಾದ ಸಂತೋಷ್ ರವರು ಬಸ್ಸು ನಿಲ್ಲಿಸಿದ್ದು ರೇಣುಕಾ ಬೀಮಪ್ಪ ರಾಠೋಡ್ ರವರು ಬಸ್ಸಿನಿಂದ ಕೆಳಗೆ ಇಳಿಯುತ್ತಿರುವಾಗ ಚಾಲಕನು ಸೂಚನೆ ನೀಡದೇ ಒಮ್ಮೆಲೆ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿದ ಪರಿಣಾಮ ರೇಣುಕಾ ಬೀಮಪ್ಪ ರಾಠೋಡ್ ರವರು ಬಸ್ಸಿನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಮೂರ್ಛೆ ತಪ್ಪಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು,  ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕೂಡಲೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೋಗಿ ಗಾಯಾಳುವನ್ನು ನೋಡಿದ್ದು ಗಾಯಾಳುವಿನ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಓಳಜಖಂ, ಹಣೆ ಮತ್ತು ಬಲಕೈಗೆ ತರಚಿದ ರಕ್ತ ಗಾಯವಾಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಪಿರ್ಯದಿದಾರರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯದಿದಾರರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗ್ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಪ್ರಶಾಂತ್ (37), ತಂದೆ: ಚಂದ್ರಹಾಸ ತಿಂಗಳಾಯ,  ವಾಸ: ತಿಂಗಳಾಯ ಕಂಪೌಂಡ್ ಸುಲ್ತಾನ್ ಬತ್ತೇರಿ ರಸ್ತೆ ಬೊಳೂರು ಶೆಟ್ಟಿ ಮಂಗಳೂರು ಇವರು ಮಂಗಳೂರು ಕಾವೂರಿನ ವಾಸಿಯಾದ  ಭವ್ಶಶ್ರೀ(28) ಎಂಬುವವವರನ್ನು  5 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು  3 ವರ್ಷದ ಹೆಣ್ಣು ಮಗುವಿರುತ್ತದೆ. ಪಿರ್ಯಾದಿದಾರರು ದಿನಾಂಕ 18/03/2022 ರಂದು ಕೆಲಸದ ಬಗ್ಗೆ ಮಂಗಳೂರು ಹಾಗೂ ಬೆಂಗಳೂರಿಗೆ ಹೋಗಿದ್ದು ದಿನಾಂಕ 20/03/2022 ರಂದು ಮಧ್ಯಾಹ್ನ 12:00 ಗಂಟೆಗೆ ಮನೆಯ ಮಾಲಕಿಯವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ  ಭವ್ಯಶ್ರೀರವರು ವಾಂತಿ ಮಾಡುತ್ತಿದ್ದು ಹುಷಾರಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಆಗ ಮಂಗಳೂರಿನಲ್ಲಿದ್ದ ಪಿರ್ಯಾದಿದಾರರು ಅದೇ ದಿನ ಸಂಜೆ 07:00 ಗಂಟೆಗೆ ಮನೆಗೆ ಬಂದು ಮನೆಯ ಬಾಗಿಲು ಬಡಿದಾಗ ಒಳಗಿನಿಂದ ಚಿಲಕ ಹಾಕಿದ್ದು ಕಂಡು ಬಂದಿದ್ದು  ಪಿರ್ಯಾದಿದಾರರು ಹಾಗೂ ಮನೆಯ ಮಾಲಕಿಯವರು ಮತ್ತು ನೆರೆಕರೆಯವರು ಸೇರಿ ಬಾಗಿಲು ಒಡೆದು ಒಳಗೆ ಹೋಗಿ ನೋಡಲಾಗಿ  ಭವ್ಯಶ್ರೀಯವರು ಅಂಗಾತನೇ ಮಲಗಿದ್ದು ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿರುವುದಾಗಿದೆ.   ಭವ್ಯಶ್ರೀಯವರಿಗೆ ಆಗಾಗ ವಾಂತಿಯಾಗುತ್ತಿದ್ದು ಈ ಬಗ್ಗೆ ಆಯುರ್ವೇದಿಕ್ ಚಿಕಿತ್ಸೆ ಕೊಡಿಸುತ್ತಿದ್ದು, ಅವರು ಕಾಯಿಲೆಯಿಂದ ಅಥವಾ ಬೇರೆ ಯಾವುದೋ  ಕಾರಣದಿಂದ ದಿನಾಂಕ19/03/2022ರ ಸಂಜೆ 06:00 ಗಂಟೆಯಿಂದ ದಿನಾಂಕ 20/03/2022 ರಂದು 07:00 ಗಂಟೆಯ ಮಧ್ಯಾವದಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸಂಶುದ್ದೀನ್ (32), ತಂದೆ: ದಿ. ಇಬ್ರಾಹಿಂ, ವಾಸ: ಮಿಜಾರು ಗ್ರಾಮ ಮತ್ತು ಅಂಚೆ ತೋಡಾರು ಮೂಡಬಿದ್ರಿ ತಾಲೂಕು ಮಂಗಳೂರು ಜಿಲ್ಲೆ ಇವರು ಗುಜರಿ  ಲೋಡೀಂಗ್ ಹಾಗೂ  ಚಾಲಕ  ಕೆಲಸ  ಮಾಡಿಕೊಂಡಿದ್ದು,  6 ತಿಂಗಳಿನಿಂದ  ಮಲ್ಲಾರಿನ  ಗುಡ್ಡೆಕೇರಿಯ ಸಲಾಫಿ ಮಸೀದಿ ಬಳಿ ಇರುವ  ಸಾಧಿಕ್ ರವರ ಗುಜರಿ ಅಂಗಡಿಯಲ್ಲಿ ಗುಜರಿ ಲೋಡಿಂಗ್ ಕೆಲಸ  ಮಾಡಿಕೊಂಡಿರುತ್ತಾರೆ.  ದಿನಾಂಕ 21/03/2022  ರಂದು ಬೆಳಿಗ್ಗೆ 08:00 ಗಂಟೆಗೆ  ರಜಾಭ್ ಎಂಬುವವರ  KA-19-AB-8639 ನೇ  ಬೊಲೇರೋ ಪಿಕಪ್ ವಾಹನದ  ಮಾಲಕರಾದ ರಜಭ್ ರವರು ಚಾಲಕರಾಗಿ  ಹಸನಬ್ಬ, ನಯಜ್ ಮತ್ತು ವಿರೇಶ್ ರವರೊಂದಿಗೆ ಪಿರ್ಯಾದಿದಾರರು  ಕೂಡ ಗುಜರಿ ಅಂಗಡಿಯಿಂದ ಹೊರಟು, ಮಜೂರಿನ  ಶಮೀರ್ ಎಂಬುವವರ ಮನೆಗೆ ಹೋಗಿ ಗುಜರಿ  ಸಾಮಾನುಗಳನ್ನು  ಲೋಡ್  ಮಾಡಿಕೊಂಡು  ಅಲ್ಲಿಂದ ಹೊರಟು 09:45  ಸಮಯಕ್ಕೆ ಮಲ್ಲಾರಿನ ಗುಡ್ಡೆಕೇರಿಯ ಸಲಾಪಿ  ಮಸೀದಿ  ಬಳಿ  ಇರುವ ಸಾಧೀಕ್‌ರವರ  ಗುಜರಿ  ಅಂಗಡಿಯ  ಸಮೀಪ ತಂದು  ವಾಹನವನ್ನು  ನಿಲ್ಲಿಸಿ  ಗುಜರಿ  ಸಾಮಾನುಗಳನ್ನು  ಅನ್‌ಲೋಡ್  ಮಾಡಿ ಪಿರ್ಯಾದಿದಾರರು ವಾಹನದ ಬಳಿಯೇ  ನಿಂತಿದ್ದು, ಆ  ಸಮಯ ರಜಭ್, ರಜಭ್ ಬ್ಯಾರಿ, ಹಸನಬ್ಬ  ವೀರೇಶ್, ನಯಾಜ್  ರವರು   ಗುಜರಿ  ಅಂಗಡಿ  ಒಳಗಡೆ ಹೋಗಿ ಗುಜರಿಗೆ ಬಂದ ಕಂಪ್ರೆಸರ್‌ನ್ನು ಗ್ಯಾಸ್  ಕಟ್ಟರ್‌ನಿಂದ  ಯಾವುದೇ  ಮುಂಜಾಗೃತ  ಕ್ರಮಗಳನ್ನು  ತೆಗೆದುಕೊಳ್ಳದೇ 10:00  ಗಂಟೆ ಸಮಯಕ್ಕೆ ಕಟ್ ಮಾಡುವಾಗ ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಜೋರಾದ ಶಬ್ದ  ಕೇಳಿದ್ದು, ಪಿರ್ಯಾದಿದಾರರು ಬಂದು ನೋಡುವಾಗ ರಜಭ್  ಮತ್ತು  ರಜಭ್ ಬ್ಯಾರಿ ಇಬ್ಬರು ಸುಟ್ಟು  ತೀವ್ರ  ಗಾಯಗೊಂಡು ಬಿದ್ದಿದ್ದು, ಹಸನಬ್ಬ, ವಿರೇಶ್ ಮತ್ತು ನಯಾಜ್  ರವರು  ಸುಟ್ಟು ಗಾಯಗೊಂಡು   ಹೊರಗಡೆ  ಓಡಿ  ಬಂದಿರುತ್ತಾರೆ. ಅವರಿಗೆ  ಮೈಕೈಗಳಿಗೆ  ಸುಟ್ಟ  ಗಾಯಗಳಾಗಿರುತ್ತವೆ.  ಪಿರ್ಯಾದಿದಾರರು  ಮತ್ತು  ಇತರರು ಬೊಬ್ಬೆ  ಹಾಕುವುದನ್ನು ಕೇಳಿ  ನೆರೆ ಕೆರೆಯವರೆಲ್ಲಾ  ಬಂದು  ರಜಭ್  ಮತ್ತು  ರಜಭ್ ಬ್ಯಾರಿ ಯನರನ್ನು ನೋಡುವಾಗ  ಅವರು  ಸುಟ್ಟ  ಬೆಂಕಿಯಿಂದಾಗಿ  ಮೃತಪಟ್ಟಿರುವುದಾಗಿ  ತಿಳಿಯಿತು. ಹಸನಬ್ಬ, ವಿರೇಶ್, ಹಾಗೂ ನಯಾಜ್  ರವರನ್ನು ಅಲ್ಲಿನ  ಸ್ಥಳೀಯರು  ಒಂದು  ವಾಹನದಲ್ಲಿ  ಉಡುಪಿ  ಕಡೆಯ  ಆಸ್ಪತ್ರೆಗೆ ಚಿಕಿತ್ಸೆಯ  ಬಗ್ಗೆ  ಕರೆದುಕೊಂಡು  ಹೋಗಿರುತ್ತಾರೆ.  ಮೃತ ಪಟ್ಟ ರಜಭ್ ಮತ್ತು  ರಜಭ್  ಬ್ಯಾರಿ  ರವರನ್ನು ಒಂದು  ಅಂಬುಲೆನ್ಸ್ ನಲ್ಲಿ  ಉಡುಪಿ  ಜಿಲ್ಲಾ  ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ  ಕೊಂಡು ಹೋಗಿರುತ್ತಾರೆ. ಈ ಬೆಂಕಿ ಅನಾಹುತದಿಂದ ಗುಜರಿ ಅಂಗಡಿಯು ಸುಟ್ಟು ಹೋಗಿ ಅಂಗಡಿಯಲ್ಲಿದ್ದ ಎಲ್ಲಾ ಸ್ವತ್ತುಗಳು ಸುಟ್ಟು ಹೋಗಿದ್ದು, ಅಲ್ಲದೇ ಗುಜರಿ  ವಸ್ತುಗಳನ್ನು  ತುಂಬಿಕೊಂಡು  ಬಂದ ಬೊಲೆರೋ  ಪಿಕಪ್  ವಾಹನದ ಹಿಂಭಾಗ   ಸುಟ್ಟು ಹೋಗಿರುತ್ತದೆ.  ಈ ಘಟನೆಗೆ ಗುಜರಿ  ಅಂಗಡಿ  ಮಾಲಕರಾದ  ಮಹಮ್ಮದ್ ಸಾಧಿಕ್‌ರವರು ಗುಜರಿ  ಅಂಗಡಿಯಲ್ಲಿ ಬೋಟಿಗೆ  ಸಂಬಂಧಿಸಿದ  ಗುಜರಿಗೆ  ಬಂದ  ಕಂಪ್ರೆಸರನ್ನು  ಗ್ಯಾಸ್‌ ಕಟ್ಟ ರ್ ನಿಂದ ಕಟ್  ಮಾಡಲು  ಯಾವುದೇ   ಮುಂಜಾಗೃತಾ ಕ್ರಮಗಳನ್ನು  ವಹಿಸದೇ  ಹಾಗೂ ಕೆಲಸಗಾರಿಗೆ  ಸರಿಯಾದ ಮುಂಜಾಗೃತಾ  ಸಲಕರಣೆಗಳನ್ನು  ನೀಡದೇ  ಕೆಲಸ   ಮಾಡಿಸಿರುವುದೇ  ಕಾರಣವಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 285, 338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ . ಪರಮೇಶ್ವರ (45), ತಂದೆ: ದಿ. ಐತ, ವಾಸ: ಉಪ್ಪೂರು. ಕೆ.ಜಿ.ರೋಡ್, ತೆಂಕಬೆಟ್ಟು ಅಂಚೆ, ಬ್ರಹ್ಮಾವರ ತಾಲೂಕು ಇವರು ಪಿಡಬ್ಲ್ಯೂಡಿ ಕ್ಲಾಸ್-1, ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದು ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿಯ ಪಿಡಬ್ಲ್ಯೂಡಿ ಗುತ್ತಿಗೆದಾರರಿಗೆ ನಿಗಧಿಪಡಿಸಿದ ಮೀಸಲು ಕಾಮಗಾರಿ ಗಳಲ್ಲಿ ಕಾಮಗಾರಿ ನಿರ್ವಹಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು 2017-18 ರಿಂದ ಮುದರಂಗಡಿ ಗ್ರಾಮ ಪಂಚಾಯತಿಯ ಪಿಲಾರು ಮತ್ತು ಸಾಣೂರು ಗ್ರಾಮದ ಹಲವು ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿರ್ವಹಿಸಿದ್ದು, ಚುನಾವಣೆಯ ನಂತರ ಆಡಳಿತ ಪಕ್ಷ ಬದಲಾಗಿದ್ದು, ಮುದರಂಗಡಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶರತ್ ಶೆಟ್ಟಿ ಎಂಬುವವರು ಕಾಮಗಾರಿಗಳಲ್ಲಿ ದುರ್ಲಾಭ ಪಡೆಯುವ ಉದ್ದೇಶದಿಂದ ಮತ್ತು ಪರಿಶಿಷ್ಟ ಕಾಮಗಾರಿಗಳನ್ನು ತಮ್ಮ ಹಿತಾಸಕ್ತಿಗೆ ಒಪ್ಪುವ ಗುತ್ತಿಗೆದಾರರಿಗೆ ವಹಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣವಾದ ಫೇಸ್‌‌‌ಬುಕ್‌‌ನಲ್ಲಿ ಪಿರ್ಯಾದಿದಾರರ ಕಾಮಗಾರಿ ಬಗ್ಗೆ ದಿನಾಂಕ 17/03/2022 ರಂದು 08:39 ಗಂಟೆಗೆ ಋಣಾತ್ಮಕವಾಗಿ ಬರೆದು ಪೋಸ್ಟ್ ಮಾಡಿ, ಪರಿಶಿಷ್ಟ ರಿಗೆ ಮೀಸಲಿರಿಸಿದ ಕಾಮಗಾರಿ ಮತ್ತು ಇತರೆ ಯಾವುದೇ ಕಾಮಗಾರಿಗಳನ್ನು ನಿರ್ವಹಿಸದಂತೆ ಪಿರ್ಯಾದಿದಾರರಿಗೆ ತಡೆಯುಂಟು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪಿರ್ಯಾದಿದಾರರ ಬಗ್ಗೆ ಸುಳ್ಳು ಅಪ ಪ್ರಚಾರ ಮಾಡಿ, ಪಿರ್ಯಾದಿದಾರರು ವೃತ್ತಿಗೆ ತೊಂದರೆ ನೀಡಿ ಆರ್ಥಿಕ ನಷ್ಟವನ್ನುಂಟು ಮಾಡಿ ದೌರ್ಜನ್ಯ ಎಸಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/ 2022 ಕಲಂ:3(1)(u) SC/ST (POA) ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ರತಿ ಎ ಶೆಡ್ತಿ (62), ಗಂಡ: ದಿ. ಹೆಚ್.ಆನಂದ ಶೆಟ್ಟಿ, ವಾಸ: ದನ್ಸಾಡಿ ಮನೆ, ಹೊಸಮಠ, ಕೊರ್ಗಿ ಗ್ರಾಮ, ಕುಂದಾಪುರ ಇವರ  ಗಂಡ ಆನಂದ ಶೆಟ್ಟಿಯವರು ದಿನಾಂಕ 27/08/2020 ರಂದು ಮೃತಪಟ್ಟಿದ್ದು  ಮರಣಾನಂತರ ಮೃತರ  ಉಳ್ತೂರು, ಕುಂಭಾಶಿ, ಹಂಗಳೂರು ಗ್ರಾಮಗಳಲ್ಲಿನ ಕೆಲವೊಂದು ಸ್ಥಿರಾಸ್ಥಿಗಳು ಪಿರ್ಯಾದುದಾರರ ಹೆಸರಿಗೆ ಹಾಗೂ ಎಲ್.ಐ.ಸಿ ವಿಮಾ 38,00,000/- ರೂಪಾಯಿ ಹಣ ಪಿರ್ಯಾದಿದಾರರ ಹುಬ್ಬಳ್ಳಿ, ಕೇಶವಪುರ, ಮಧುರ ಎಸ್ಟೇಟ್,  ಕರ್ಣಾಟಕ ಬ್ಯಾಂಕ್ ಶಾಖೆಗೆ ಬಂದಿದ್ದು ಆಪಾದಿತ  ಪಿರ್ಯಾದಿದಾರರ ಮಗ  ಗುರುರಾಜ ಶೆಟ್ಟಿ(38),  ವಾಸ: 41 , ವಿನಯ ಕಾಲನಿ, ಬೆಂಗೇರಿ ರಸ್ತೆ, ಕೇಶವ ಪುರ, ಹುಬ್ಬಳ್ಳಿ ಇವರು ಮೋಸದಿಂದ ಪಿರ್ಯಾದಿದಾರರ ಫೋರ್ಜರಿ ಸಹಿ ಮಾಡಿ ಪಿರ್ಯಾದಿದಾರರ ಖಾತೆಯಿಂದ 38,00,000/- ರೂಪಾಯಿಗಳನ್ನು ಹಾಗೂ ಅದರ ಮೇಲಿನ ಬಡ್ಡಿ  90,000/- ರೂಪಾಯಿಗಳನ್ನು ಆತನ ಖಾತೆಗೆ ಜಮಾ ಮಾಡಿಕೊಂಡಿರುತ್ತಾನೆ. ಅಲ್ಲದೇ  ಪಿರ್ಯಾದಿದಾರರ ಹೆಸರಿನಲ್ಲಿದ್ದ  ಉಳ್ತೂರು, ಕುಂಭಾಶಿ, ಹಂಗಳೂರು ಗ್ರಾಮಗಳಲ್ಲಿನ ಕೆಲವೊಂದು ಸ್ಥಿರಾಸ್ಥಿಗಳನ್ನು ನಕಲಿ ಮುಕ್ತ್ಯಾರು ನಾಮೆ ಸೃಷ್ಠಿಸಿ ಆರೋಪಿತನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಆಪಾದಿತನಲ್ಲಿ ಮೋಸದಿಂದ ಹಣ ವರ್ಗಾವಣೆ ಮಾಡಿದ ಬಗ್ಗೆ ವಿಚಾರಿಸಲಾಗಿ ನಿನ್ನ ಉಳಿದ ಆಸ್ತಿಯನ್ನು ಬರೆದುಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ: 406, 417, 465, 468, 420, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 22-03-2022 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080