ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರು ದಿನಾಂಕ 21/03/2022 ರಂದು ಸಂಜೆ 07:30 ಗಂಟೆಗೆ ತನ್ನ KA-20 R-9315 ನೇ ಮೋಟಾರ್ ಸೈಕಲ್ ನಲ್ಲಿ ಚಿತ್ತೂರಿನಿಂದ ಹಾಲ್ಕಲ್ ಗೆ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ಇಡೂರು ಕುಂಜ್ಞಾಡಿ ಗ್ರಾಮದ ರಾಜ್ಯ ಹೆದ್ದಾರಿ ಜನ್ನಾಲ್ ಬಳಿ ತಲುಪಿದಾಗ ಪಿರ್ಯಾದಿದಾರರಾದ ಸಂತೋಷ್ ನಾಯ್ಕ (40) ಕೊರಗ ನಾಯ್ಕ ವಾಸ:  ಮನೆ ನಂಬ್ರ 2/94 ಗುಡ್ಡಿಮನೆ ಮಾರಣಕಟ್ಟೆ  ಚಿತ್ತೂರು  ಗ್ರಾಮ ಕುಂದಾಫುರ ಇವರ ಹಿಂದಿನಿಂದ ಆರೋಪಿ ಮೋಟಾರ್ ಸೈಕಲ್ ನ್ನು ಚಿತ್ತೂರು ಕಡೆಯಿಂದ ಹಾಲ್ಕಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡುವ ಸಮಯದಲ್ಲಿ ಇವರ ಮೋಟಾರ್ ಸೈಕಲ್ ನ ಹ್ಯಾಂಡಲ್ ಬಾರ್ ಗೆ ಡಿಕ್ಕಿ ಹೊಡೆದ  ಪರಿಣಾಮ ಸಂತೋಷ್‌ ನಾಯ್ಕ ರವರು  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೈ ಗಂಟಿನ ಮೂಳೆ ಮುರಿತ ಮತ್ತು  ಕೈ ಕಾಲುಗಳಿಗೆ ತರಚಿದ ರಕ್ತ ಗಾಯವಾಗಿರುತ್ತದೆ.  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಅಶ್ವಿನಿ (29) ಗಂಡ: ಸುದರ್ಶನ ವಾಸ: ನಂ 102, ಸನ್ನಿ ಅಕುರ ಲೇ  ಔಟ್ ರೋಡ್ ಒನರ್ಸ ಅಪಾರ್ಟ ಮೆಂಟ್ ಕಸವನ ಹಳ್ಳಿ ಬೆಂಗಳೂರು ಇವರಿಗೆ ಸುದರ್ಶನ ಎಂಬ ಹುಡುಗನ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ, ದಿನಾಂಕ 26/01/2021 ರಂದು ಗರ್ಭೀಣಿ ಆಗಿದ್ದು, ನಂತರ ಈ ವಿಚಾರ ತಿಳಿದ ಸುದರ್ಶನ್ ಗರ್ಭಪಾತ ಮಾತ್ರೆಗಳನ್ನು ನೀಡಿ, ಗರ್ಭಪಾತ ಮಾಡಿಸಿರುತ್ತಾನೆ. ನಂತರ ಪಿರ್ಯಾದಿಯ ಜೊತೆಯಲ್ಲಿ 2021-ಮಾರ್ಚ್ ತಿಂಗಳಿಲ್ಲಿ ಸಹ ಲೈಂಗಿಕವಾಗಿ ದೈಹಿಕ ಸಂಪರ್ಕ ಮಾಡಿ ಗರ್ಭೀಣಿ ಮಾಡಿದ್ದು, ನಂತರ ವಿಷಯ ತಿಳಿದ ಸುದರ್ಶನ್ ತನ್ನ ಸ್ವಂತ ಊರಾದ ಕುಂದಾಪುರ ತೆಕ್ಕಟ್ಟೆ ಗ್ರಾಮಕ್ಕೆ ಹೋಗಿದ್ದು, ನಂತರ ಶ್ರೀಮತಿ ಅಶ್ವಿನಿ ತಾನು ಗರ್ಭವತಿಯಾಗಿರುವ ವಿಷಯವನ್ನು ತನ್ನ ತಂದೆ ತಾಯಿಗಳಿಗೆ ತಿಳಿಸಿದ್ದು, ನಂತರ ಶ್ರೀಮತಿ ಅಶ್ವಿನಿ ರವರು ವಕೀಲರ ಮೂಲಕ ಸುದರ್ಶನ್ ರವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದಾಗ, ನಂತರ ಸುದರ್ಶನ್ ಬಂದು ಶ್ರೀಮತಿ ಅಶ್ವಿನಿ ಇವರನ್ನು ಮದುವೆಯಾಗುವುದಾಗಿ ತಿಳಿಸಿದ್ದು, ನಂತರ ಶ್ರೀಮತಿ ಅಶ್ವಿನಿ ಇವರ ತಂದೆ ತಾಯಿಗಳು ಸುದರ್ಶನ್ ರವರ ತಂದೆ ತಾಯಿ ರವರ ಜೊತೆಯಲ್ಲಿ ಮಾತನಾಡಿ ವರದಕ್ಷಿಣೆಯಾಗಿ 5 ಲಕ್ಷ ಹಣ ಮತ್ತು ಚಿನ್ನದ ವಡವೆಗಳನ್ನು ಕೊಟ್ಟು ದಿನಾಂಕ 10/10/2021 ರಂದು ಕುಂದಾಪುರ ತಾಲ್ಲೂಕು, ತೆಕ್ಕಟ್ಟೆ ಗ್ರಾಮದ ನವಶಕ್ತಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಟ್ಟಿರುತ್ತಾರೆ ವಿವಾಹದ ನಂತರ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿದ್ದು, ನಂತರ ಶ್ರೀಮತಿ ಅಶ್ವಿನಿ ಮತ್ತು ಅವರ ಗಂಡ ಸುದರ್ಶನ್ ರವರು ಉಡುಪಿ ಜಿಲ್ಲೆ, ತೆಕ್ಕಟ್ಟೆ ಗ್ರಾಮಕ್ಕೆ ಹೋಗಿ, ಅತ್ತೆ ಶ್ರೀಮತಿ.ರುಕ್ಮಿಣಿ, ಮಾವ ಕೃಷ್ಣ ಪೂಜಾರಿ ರವರ ಜೊತೆಯಲ್ಲಿ ವಾಸಮಾಡಿಕೊಂಡಿದ್ದು, ಆಗ ಸುದರ್ಶನ್, ಅತ್ತೆ ಶ್ರೀಮತಿ.ರುಕ್ಮಿಣಿ, ಸುದರ್ಶನ್ ರವರ ಅಕ್ಕ ಶ್ರೀಮತಿ.ಸುಜಾತಾ, ಅಕ್ಕನ ಗಂಡ ದಯಾನಂದ ರವರು ಪ್ರತಿ ದಿನ ಶ್ರೀಮತಿ ಅಶ್ವಿನಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡಿದ್ದು, ನಂತರ ಶ್ರೀಮತಿ ಅಶ್ವಿನಿ ಗರ್ಭವತಿಯಾದಾಗ ಗರ್ಭಪಾತ ಮಾಡಿಸುವ ಉದ್ದೆಶದಿಂದ ಗಂಡ ಸುದರ್ಶನ್ ಬೈಕ್‌ನಲ್ಲಿ ಕೂರಿಸಿಕೊಂಡು ಕುಂದಾಪುರದಿಂದ ಕುಶಾಲನಗರಕ್ಕೆ ವೇಗವಾಗಿ ಚಾಲನೆ ಮಾಡಿ ಗರ್ಭಪಾತ ಮಾಡಿಸಿರುತ್ತಾನೆ. ನಂತರ ಶ್ರೀಮತಿ ಅಶ್ವಿನಿ ಇವರು ಗಂಡ ಮತ್ತು ಗಂಡನ ಮನೆಯವರು ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣ ಮತ್ತು ಚಿನ್ನದ ವಡವೆಗಳನ್ನು ತೆಗೆದುಕೊಂಡು ಬರುವಂತೆ ತೆಕ್ಕಟ್ಟೆ ಗ್ರಾಮದ ಮನೆಯಿಂದ ಹೊರಗೆ ಹಾಕಿದ್ದು, ನಂತರ ಶ್ರೀಮತಿ ಅಶ್ವಿನಿ ರವರು ಬೆಂಗಳೂರಿಗೆ ಬಂದು, ಇವರ ತನ್ನ ಗಂಡನ ಅಕ್ಕ ಶ್ರೀಮತಿ.ಸುನೀತ ಮತ್ತು ಅವಳ ಗಂಡ ಸುರೇಶ್ ರವರ ಬಳಿ ಹೋಗಿ ಗಂಡ ಸುದರ್ಶನ್ ಬಗ್ಗೆ ವಿಚಾರಿಸಿದಾಗ ತೆಕ್ಕಟ್ಟೆಗೆ ಹೋಗಿ ವಿಚಾರ ಮಾಡು, ಇಲ್ಲಿ ಬರಬೇಡವೆಂದು ಕಳುಹಿಸಿರುತ್ತಾರೆ. ನಂತರ ಶ್ರೀಮತಿ ಅಶ್ವಿನಿ ರವರು ಹಾಗು ಇವರ ತಂದೆ-ತಾಯಿ ಮತ್ತು ಸಂಬಂಧಿಕರು ತೆಕ್ಕಟ್ಟೆ ಗ್ರಾಮಕ್ಕೆ ತೆರಳಿ ಮಾತುಕತೆ ಮಾಡುವಾಗ ಗಂಡ ಸುದರ್ಶನ್, ಅತ್ತೆ ಶ್ರೀಮತಿ.ರುಕ್ಮಿಣಿ, ಸುದರ್ಶನ್ ರವರ ಅಕ್ಕ ಶ್ರೀಮತಿ.ಸುಜಾತಾ, ಅಕ್ಕನ ಗಂಡ ದಯಾನಂದ ರವರು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಗಲಾಟೆ ಮಾಡಿರುತ್ತಾರೆಂದು ಕೊಟ್ಟ ದೂರನ್ನು ಪಡೆದು ಆಡುಗೋಡಿ ಪೊಲೀಸ್ ಠಾಣೆ ಮೊ.ಸಂ-29/2022 ಕಲಂ498(A) RW 34 IPC & 3,4 DP ACT ರೀತ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸಿ ತಕ್ಷೀರು ಸ್ಥಳದ ಆಧಾರದ ಮೇಲೆ ಮುಂದಿನ ತನಿಖೆಯ ಬಗ್ಗೆ  ಮೇಲಾಧಿಕಾರಿಯವರ ಮುಖಾಂತರ ನೀಡಿದ್ದನ್ನು ಸ್ವೀಕರಿಸಿ ಪ್ರಕರಣವನ್ನು ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 498(A) RW 34 IPC & 3,4 DP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 22-03-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080