ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 21/03/2021 ರಂದು ಮಧ್ಯಾಹ್ನ 2:45ಗಂಟೆಗೆ ಕುಂದಾಪುರ  ತಾಲೂಕಿನ,  ದೇವಲ್ಕುಂದ ಗ್ರಾಮದ ಚಂದ್ರಶೇಖರ್‌ ಶೆಟ್ಟಿ ಯವರ ಮನೆಯ ಬಳಿ ತಿರುವಿನ ರಸ್ತೆಯಲ್ಲಿ, ಆಪಾದಿತ ಭರತ್‌ ಕುಮಾರ್‌ ಎಂಬುವವರು  KA-20-MC-1129 ನೇ ಮಾರುತಿ ಇಕೋ ಕಾರಿನಲ್ಲಿ  ಶ್ರೀಕಾಂತ  ಕೃಷ್ಣ  ಹೆಬ್ಬಾರ್‌ರನ್ನು  ಕುಳ್ಳಿರಿಸಿಕೊಂಡು  ವಂಡ್ಸೆ ಕಡೆಯಿಂದ  ಹೆಮ್ಮಾಡಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು ತಿರುವಿನ ರಸ್ತೆಯಲ್ಲಿ, ಒಮ್ಮೆಲೆ  ಬ್ರೇಕ್‌ ‌ಹಾಕಿದಾಗ ಕಾರು  ಚಾಲಕನ ನಿಯಂತ್ರಣ  ತಪ್ಪಿ ಎಡಮಗ್ಗುಲಾಗಿ  ರಸ್ತೆಯ ಎಡಬದಿಯಲ್ಲಿ ಉರುಳಿ ಬಿದ್ದು, ಶ್ರೀಕಾಂತ  ಕೃಷ್ಣ  ಹೆಬ್ಬಾರ್‌ ರವರ ಎಡಕೈಗೆ ನಜ್ಜುಗುಜ್ಜಾಗಿ ಮೂಳೆ ತುಂಡಾಗಿ ನೇತಾಡುತ್ತಿದ್ದು ಹಾಗೂ  ಮೈ ಕೈಗೆ ಗುದ್ದಿದ  ಒಳನೋವಾಗಿದ್ದು, ಅವರು ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಣಿಪಾಲ: ದಿನಾಂಕ 21/03/2021 ರಂದು 17:50 ಗಂಟೆಗೆ ಮಣಿಪಾಲ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಕುಮಾರ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ವಿದ್ಯಾರತ್ನ ನಗರದಲ್ಲಿನ ಸಿಂಡಿಕೇಟ್  ಸರ್ಕಲ್‌– ಡಿಸಿ ಕಛೇರಿ ಮುಖ್ಯ ರಸ್ತೆಯಲ್ಲಿ ಚರಕ ಜಂಕ್ಷನ್ ಬಳಿ ಕೋಟ್ಪಾ ಕಾಯಿದೆಯಡಿಯಲ್ಲಿ ಕೇಸ್ ಹಾಕುತ್ತಿದ್ದ ಸಮಯ ರಸ್ತೆಯಲ್ಲಿ  ಡಿಸಿ ಕಚೇರಿ ಕಡೆಗೆ  ಒಂದು  ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಸವಾರನು ಪೊಲೀಸರನ್ನು  ನೋಡಿ  ಗಾಬರಿಯಿಂದ, ತನ್ನ ಮೋಟಾರ್ ಸೈಕಲನ್ನು  ಅತೀವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ರೌಂಡ್ಸ್ ಕರ್ತವ್ಯದಲ್ಲಿದ್ದ ಇಲಾಖಾ ವಾಹನದ ಚಾಲಕ ಸತೀಶ್ ಶೆಟ್ಟಿ ಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್  ಸವಾರ ಮತ್ತು  ಸತೀಶ್ ಶೆಟ್ಟಿ ರವರೂ ರಸ್ತೆಗೆ ಬಿದ್ದಿರುತ್ತಾರೆ, ಆಪಾದಿತನು ತನ್ನ ಮೋಟಾರ್ ಸೈಕಲ್  ಸಮೇತ ಪರಾರಿಯಾಗಿರುತ್ತಾನೆ. ಅಪಘಾತದಿಂದ ಸತೀಶ್ ಶೆಟ್ಟಿರವರ  ತಲೆ, ಮತ್ತು ಎಡ ಕೈಗೆ ರಕ್ತ ಗಾಯ ಹಾಗೂ  ಎಡಕೈ ಹಾಗೂ  ಸೊಂಟಕ್ಕೆ  ಗುದ್ದಿದ ನೋವು ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ :279, 337 ಐಪಿಸಿ ಮತ್ತು ಕಲಂ: 134(ಎ) ಮತ್ತು (ಬಿ) ಮೋಟಾರು ವಾಹನ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

 • ಕಾರ್ಕಳ: ದಿನಾಂಕ 21/03/2021 ರಂದು ಬೆಳಿಗ್ಗೆ 11:30 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯ ನಡುವಿನ ಸಮಯ ಪಿರ್ಯಾದಿದಾರರಾದ ಸಂದೀಪ ಜೈನ್‌ (38), ತಂದೆ:ನಾಗರಾಜ ಹೆಗ್ಡೆ, ವಾಸ:ವಿನೋದ ನಿಲಯ ಕೇರ್ತಾಡಿ ಬಳಿ ಕುಕ್ಕುಂದೂರು ಕಾರ್ಕಳ ಇವರ ಮನೆಯ ಎದುರಿನ ಬಾಗಿಲಿನ ಬೀಗವನ್ನು  ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಒಳಗಡೆ ಕೋಣೆಯ ಕಬ್ಬಿಣದ ಕಪಾಟಿನಲ್ಲಿ ಇಟ್ಟಿದ್ದ 15,40,000/- ಮೌಲ್ಯದ ವಿವಿಧ ಚಿನ್ನಾಭರಣಗಳು ಮತ್ತು  60,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  35/2021 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಮಂಜುನಾಥ (42), ತಂದೆ: ರಾಜು, ವಾಸ: ವಿನಾಯಕ ಸಾಮಿಲ್‌ ಹತ್ತಿರ ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ರಾಜು (65) ಇವರು ಗಾಳ ಹಾಕಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 21/03/2021 ರಂದು ಬೆಳಿಗ್ಗೆ 11:00 ಗಂಟೆಗೆ ಗಾಳ ಹಾಕಿ ಮೀನು ಹಿಡಿಯಲು ಗಂಗೊಳ್ಳಿ ಗ್ರಾಮದ ಪಂಚ ಗಂಗಾವಳಿ ಹೊಳೆಗೆ ಹೋಗಿದ್ದವರು ಮದ್ಯಾಹ್ನ  2:30 ಗಂಟೆಗೆ ಹೊಳೆಯಲ್ಲಿ ಬಿದ್ದಿರುವುದನ್ನು ನೋಡಿದ ಸುಂದರ ಜಿ. ಗುರುರಾಜ, ಸಂದೀಪ ಎಂಬುವರು ಎತ್ತಿ ದಡಕ್ಕೆ ತಂದು ನೋಡಿದಾಗ ಮೃತಪಟ್ಟಿದ್ದನ್ನು ನೋಡಿ ಪಿರ್ಯಾದಿದಾರರಿಗೆ ಮಾಹಿತಿ ನೀಡಿದ್ದು ಪಿರ್ಯಾದಿದಾರರ ಸ್ಥಳಕ್ಕೆ ಹೋಗಿ ನೋಡಿದಲ್ಲಿ ಪಿರ್ಯಾದಿದಾರರ ತಂದೆಯವರು ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ಕೆಸರಿನಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಕಾಪು: ದಿನಾಂಕ 21/03/2021 ರಂದು ಐ. ಆರ್. ಗಡ್ಡೇಕರ್,  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಯೇಣಗುಡ್ಡೆ ಗ್ರಾಮದ ಕಟಪಾಡಿ ಶಿರ್ವಾ ರಸ್ತೆಯ ಶವಾರ್ನ ಕಾರ್ನರ್ ಹೊಟೇಲ್ ಮತ್ತು ನ್ಯೂ ನಯನ ಜನರಲ್ ಸ್ಟೋರ್ ಬಿಲ್ಡಂಗ್ ನ ಮಧ್ಯದ  ಖಾಲಿ ಜಾಗವಾದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ  ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು  ಅಭಿಷೇಕ್ (28), ತಂದೆ: ಶೇಕರ್ , ವಾಸ: ಹೌಸ್ ನಂಬ್ರ: 1-22  ಶ್ರೀದೇವಿ ಪ್ರಸಾದ್ ಹೌಸ್ ಪಾಂಗಾಳ ಕಾಪು ತಾಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿರುವುದಾಗಿದೆ. ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1, ಮಟ್ಕಾ ಚೀಟಿ -1 ಹಾಗೂ ನಗದು ರೂಪಾಯಿ 1545 /-  ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 78(1)&(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಬೈಂದೂರು: ಪಿರ್ಯಾದಿದಾರರಾದ ಭವಾನಿ ಶೆಡ್ತಿ (53), ಗಂಡ:ವಿಠಲ ಶೆಟ್ಟಿ, ವಾಸ:ಹಳಗೇರಿ ಆಚಾರಬೆಟ್ಟು,ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 20/03/2021 ರಂದು ಸಂಜೆ 16: 30 ಗಂಟೆಗೆ ಕಂಬದಕೋಣೆ ಗ್ರಾಮದ ಹಳಗೇರಿ,ಆಚಾರ ಬೆಟ್ಟು ಎಂಬಲ್ಲಿ ಪಿರ್ಯಾದಿದಾರರ  ಗದ್ದೆಯ ಅಂಚಿನ ಮಧ್ಯೆ ಕಲ್ಲು ಕಂಬ ಹುಗಿಯುತ್ತಿರುವ ಕೆಲಸ ಮಾಡುತ್ತಿರುವುದನ್ನು ನೋಡಲು ತಂಗಿ ಅಂಬಿಕಾರೊಂದಿಗೆ ಹೋಗಿದ್ದು ಅಲ್ಲಿ ಪ್ರವೀಣ್ ಶೆಟ್ಟಿ ಆತನ ತಂದೆ ಹೆರಿಯಣ್ಣ ಶೆಟ್ಟಿ, ತಾಯಿ ಗುಲಾಬಿ ,ಅಕ್ಕ ಉಷಾ ಮತ್ತು ಇಬ್ಬರು ಕೆಲಸಗಾರರೊಂದಿಗೆ ಅವರ ಮತ್ತು ಪಿರ್ಯಾದಿದಾರರ ಗದ್ದೆಯ ಅಂಚಿನ ಮಧ್ಯೆದಲ್ಲಿ ಕಲ್ಲುಕಂಬ ಹುಗಿಯುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ನಡೆದಾಡುವ ದಾರಿ ಮಧ್ಯೆದಲ್ಲಿ ಯಾಕೆ ಕಲ್ಲುಕಂಬ ಹುಗಿಯುವುದು ಮೇಲ್ಗದ್ದೆ ನಮ್ಮದ್ದು, ಕೆಳ್ಗದ್ದೆ ನಿಮ್ಮದ್ದು ನಿಮ್ಮ ಗದ್ದೆಯ ಅಂಚಿನ ಬದಿಯಲ್ಲಿ ಬೇಕಾದರೆ ಕಲ್ಲು ಕಂಬ ಹುಗಿಯಿರಿ ಎಂದು ಹೇಳಿದಕ್ಕೆ ಗುಲಾಬಿ ಮತ್ತು ಉಷಾ ಪಿರ್ಯಾದಿದಾರರಿಗೆ ಕೈಯಿಂದ ದೂಡಿ ಕೈಯಿಂದ ಹೊಡೆದಿರುತ್ತಾರೆ. ಅಲ್ಲದೇ ಪ್ರವೀಣ ಶೆಟ್ಟಿ ಆತನ ಅಣ್ಣ ಸುಭಾಶ್ಚಂದ್ರ ಶೆಟ್ಟಿಗೆ ಫೋನ್ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದು ಸುಭಾಶ್ಚಂದ್ರ ಶೆಟ್ಟಿಯು ಲಕ್ಷ್ಮಣ ಎಂಬುವವನೊಂದಿಗೆ ಅಲ್ಲಿಗೆ ಬಂದು  ಬೆದರಿಕೆ ನೀಡಿದ್ದು, ಪಿರ್ಯಾದಿದಾರರು ಹಾಗೂ ಅವರ ತಂಗಿ ಹೆದರಿಕೊಂಡು ಮನೆಗೆ ಓಡಿಕೊಂಡು ಬರುವಾಗ ದಾರಿ ಮಧ್ಯೆದಲ್ಲಿ ಪಿರ್ಯಾದಿದಾರರನ್ನು ಆರೋಪಿತರೆಲ್ಲರೂ  ಸೇರಿ ಅಡ್ಡಗಟ್ಟಿ ಸುಭಾಶ್ಚಂದ್ರ ಶೆಟ್ಟಿ ಕೈ ಮುಷ್ಟಿ ಕಟ್ಟಿ ಪಿರ್ಯಾದಿದಾರರ ಮುಖಕ್ಕೆ ,ಎದೆಗೆ ಮತ್ತು ಬೆನ್ನಿಗೆ ಗುದ್ದಿದ್ದು ಅಲ್ಲದೇ ಪ್ರವೀಣ ಕೈಯಿಂದ ಗುದ್ದಿದ್ದು ಅಲ್ಲಿಂದ ಪಿರ್ಯಾದಿದಾರರು ಕೂಗಿಕೊಂಡು ಪಕ್ಕದ ಮನೆಯವರಾದ ಚಂದ್ರ ಶೇಖರ ಶೆಟ್ಟಿಯವರ ಮನೆಯ ಒಳಗೆ ಹೆದರಿ ಓಡಿದ್ದು ಆಗ ಪ್ರವೀಣ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಅಲ್ಲಿಗೆ ಬಂದು ಮನೆಯ ಒಳಗಿಂದ ಪಿರ್ಯಾದಿದಾರರನ್ನು ಅಂಗಳಕ್ಕೆ ಕೈ ಹಿಡಿದು ಎಳೆದುಕೊಂಡು ಬಂದು ಕಾಲಿನಿಂದ ತುಳಿಯುತ್ತಿರುವಾಗ ಪಿರ್ಯಾದಿದಾರರು  ಜೋರಾಗಿ ಕೂಗಿಕೊಂಡದ್ದನ್ನು ಕೇಳಿ  ಚಂದ್ರ ಶೇಖರ ಶೆಟ್ಟಿಯವರು ಹೊರಗೆ ಓಡಿ ಬಂದು ಪಿರ್ಯಾದಿದಾರರಿಗೆ ಹೊಡೆಯುತ್ತಿದ್ದುದ್ದನ್ನು ತಪ್ಪಿಸಿರುತ್ತಾರೆ. ಅವರುಗಳು ಹೊಡೆದ ಪರಿಣಾಮ ಪಿರ್ಯಾದಿದಾರರ ಎದೆಗೆ, ಬೆನ್ನಿಗೆ, ಮುಖಕ್ಕೆ , ಕಾಲು ಮತ್ತು ಕೈಗೆ ಒಳನೋವು ಉಂಟಾಗಿದ್ದು ಬೈಂದೂರಿನ ಅಂಜಲಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2021 ಕಲಂ:323, 341, 354, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ದಿನಾಂಕ 20/03/2021 ರಂದು ಅಪರಾಹ್ನ 3:30 ಗಂಟೆಯ ವೇಳೆಗೆ ಎಳ್ಳಾರೆ ಗ್ರಾಮದ ಮಾವಿನಕಟ್ಟೆ ನೀರಿನ ಟ್ಯಾಂಕಿಯ ಬಳಿ ಪಿರ್ಯಾದಿದಾರರಾದ ಶ್ಯಾಮ (32), ತಂದೆ: ಆನಂದನ್, ವಾಸ:ತಿರುವಂಬಾಡಿ ಗ್ರಾಮ ಮತ್ತು ತಾಲೂಕು ಪುನ್ನಕ್ಕೆಲ್ ಅಂಚೆ, ಕ್ಯಾಲಿಕಟ್ ಜಿಲ್ಲೆ, ಕೇರಳ ರಾಜ್ಯ. ಹಾಲಿ ವಿಳಾಸ: ಶಿಜೋ ಎಂ ಟಿ ರವರ ತೋಟದಲ್ಲಿ ಮಾವಿನಕಟ್ಟೆ, ಎಳ್ಳಾರೆ ಇವರು ಕೆಲಸ ಮಾಡುವ ರಬ್ಬರ್ ತೋಟದ ಮಾಲೀಕ ಶಿಜೋ ರವರ ಬಳಿ ಸಂಬಳದ ವಿಚಾರದಲ್ಲಿ ಮಾತುಕತೆ ನಡೆಸುತ್ತಿರುವಾಗ ಮಾತಿಗೆ ಮಾತು ಬೆಳದು ಶಿಜೋ ರವರು ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಎದೆಯ ಮದ್ಯಭಾಗಕ್ಕೆ ಮತ್ತು ಎಡಭುಜಕ್ಕೆ ತಿವಿದು ರಕ್ತಗಾಯವಾಗಿರುತ್ತದೆ. ಬಳಿಕ ಅಲ್ಲಿಗೆ ಬಂದವರು ಪಿರ್ಯಾದಿದಾರರನ್ನು ಮುನಿಯಾಲು ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ 108 ಆಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಬಂದು ನಂತರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021  ಕಲಂ: 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-03-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ