ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 22.03.2021 ರಂದು ಪಿರ್ಯಾದಿ ಬಾಲಕೃಷ್ಣ ರವರು ತನ್ನ ಬಾಬ್ತು ಸ್ಕೂಟಿಯಲ್ಲಿ ಕಿರಾಡಿಯಿಂದ ಶಿರೂರು ಮೂರುಕೈ ರಸ್ತೆಯಲ್ಲಿ ಮಂದಾರ್ತಿಗೆ ಹೋಗುತ್ತಿರುವಾಗ ಸಮಯ ಬೆಳಿಗ್ಗೆ 08:30 ಗಂಟೆಗೆ 33ನೇ ಶೀರೂರು ಗ್ರಾಮದ ಹೆಮ್ಮಣ್ಕಿ ಕ್ರಾಸ್ ಬಳಿ ತಲುಪುವಾಗ ಎದುರಿನಿಂದ ಅಂದರೆ ಶಿರೂರು ಮೂರುಕೈ ಕಡೆಯಿಂದ ಕಿರಾಡಿ ಕಡೆಗೆ ಆರೋಪಿ ಪ್ರದೀಪ್ ನಾಯ್ಕ ಎಂಬವರು ತನ್ನ KL-58-C-3104 ನೇ ಟಾಟಾ 407 ಟಿಪ್ಪರ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂಭಾಗದಲ್ಲಿ ಶಿರೂರು ಮೂರುಕೈ ಕಡೆಗೆ ಗಣೇಶ್ ರವರು ಸವಾರಿ ಮಾಡುತ್ತಿದ್ದ  KA-20-EL-4833 ನೇ Hero Duet ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು. ಈ ಅಪಘಾತದ ಪರಿಣಾಮ ಗಣೇಶ್ ರವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು, ಅವರ ತಲೆಗೆ, ಮುಖಕ್ಕೆ ರಕ್ತಗಾಯವಾಗಿದ್ದು ಮಾತನಾಡುತ್ತಿರಲಿಲ್ಲಾ. ತೀವ್ರ ರಕ್ತ ಗಾಯಗೊಂಡ ಗಣೇಶ್ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದು, ಗಣೇಶ್ (20) ರವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 10:20 ಗಂಟೆಗೆ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವರದಕ್ಷಿಣೆ ಕಿರುಕುಳ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಶ್ರೀಮತಿ ಸುಜಯ (27) ಗಂಡ: ವಿನೋದ್ ಕುಮಾರ್ ವಿ ವಾಸ: ಹೆಬ್ಬಾಡಿ ಕೊಂಡಾಳಬೆಟ್ಟು ಹೆಗ್ಗುಂಜೆ ಗ್ರಾಮ ಮಂದಾರ್ತಿ ಅಂಚೆ ಬ್ರಹ್ಮಾವರ ಇವರು ಮತ್ತು ಆರೋಪಿ ವಿನೋದ್ ಕುಮಾರ್ ಇವರು ಪ್ರೀತಿಸಿ ದಿನಾಂಕ 14/06/2020 ರಂದು ಧರ್ಮಸ್ಥಳದ ಸೂರ್ಯಕಮಲ್ ಮಿನಿ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿರುತ್ತಾರೆ. ಮದುವೆ ನಂತರ ಶ್ರೀಮತಿ ಸುಜಯ ರವರು ಆರೋಪಿಯೊಂದಿಗೆ ಬೆಂಗಳೂರಿನ  ಚಂದ್ರ ಲೇಔಟ್ 11 ನೇ ಕ್ರಾಸ್ , 3 ನೇ ಮೈನ್ ಡೋರ ನಂಬ್ರ 77 ರಲ್ಲಿ  ಸಂಸಾರ ಮಾಡಿಕೊಂಡಿದ್ದರು. ಮದುವೆಯಾದ ಸುಮಾರು 2 ತಿಂಗಳ ವರೆಗೆ  ಆರೋಪಿ ಶ್ರೀಮತಿ ಸುಜಯ ರವರನ್ನು ಒಳ್ಳೇ ರೀತಿಯಲ್ಲಿ ನೋಡಿಕೊಂಡು ನಂತರದ ದಿನದಲ್ಲಿ ಆರೋಪಿ ತವರು ಮನೆಗೆ ಹಣ ಕಳುಹಿಸಿಕೊಡುತ್ತಿರುವ ವಿಚಾರದಲ್ಲಿ ಹಾಗೂ ಶ್ರೀಮತಿ ಸುಜಯ ರವರ ಮೇಲೆ ಅನುಮಾನ ಪಟ್ಟು, ಇವರಿಗೆ ಅವಾಚ್ಯ ಶಬ್ದದಿಂದ ಬೈದು ಬಾಟಲಿಯಿಂದಪೊರೆಕೆಯಿಂದ ಮತ್ತು ಕೈಯಿಂದ ಶ್ರೀಮತಿ ಸುಜಯ ರವರಿಗೆ ಹೊಡೆದು , ಬೆದರಿಕೆ ಹಾಕಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ. ಅಲ್ಲದೇ ಆರೋಪಿ ಶ್ರೀಮತಿ ಸುಜಯ ರವರಿಗೆ ಆಕೆಯ ತವರು ಮನೆಯಾದ ಬ್ರಹ್ಮಾವರ ತಾಲೂಕು, ಹೆಗ್ಗುಂಜೆ ಗ್ರಾಮದ , ಕೊಂಡಾಳಬೆಟ್ಟುವಿನ  ಹೆಬ್ಬಾಡಿಯಲ್ಲಿ ಕೂಡ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ:498(ಎ), 323, 324.504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂ 84/2021 ರ ಸಾರಾಂಶವೆನೆಂದರೆ, ಪ್ರಕರಣದ ಪಿರ್ಯಾದಿ ಶ್ರೀಮತಿ ಸೌಮ್ಯ ಪಿ ಸೋಮಾಯಾಜಿ ರವರ ಗಂಡ ಸುನೀಲ್ ಎಸ್ ಚಾತ್ರ ಇವರು ಕುಂದಾಪುರದಲ್ಲಿ “ಶ್ರೀ ದುರ್ಗಾಂಬ” ನಾಮಾಂಕಿತ ಸಂಸ್ಥೆಯನ್ನು ನಡೆಸಿಕೊಂಡಿದ್ದು  ಸದ್ರಿ ಸಂಸ್ಥೆಯ ಹೆಸರಿನಲ್ಲಿ ಮದ್ಯಪ್ರದೇಶದ ಭೋಪಾಲ್ ನಲ್ಲಿ  ಕೂಡ ಸಿಟಿ ಬಸ್ಸುಗಳನ್ನು ಓಡಾಡಿಸುತ್ತಿದ್ದು ಪಿರ್ಯಾದಿದಾರರು ಜೊತೆಯಲ್ಲಿ ಈ ವ್ಯವಹಾರದಲ್ಲಿದ್ದು  ಆಪಾದಿತ 1. ಚರಣ್ ಜೀತ್ ಸಿಂಗ್ ಘುಲಾಟಿ, ನಿರ್ದೇಶಕರು ಕ್ಯಾಪಿಟಲ್ ರೋಡ್ ವೇಸ್ ಮತ್ತು ಪೈನಾನ್ಸ್ ಪ್ರೈ.ಲಿ ಭೋಪಾಲ್. 2. ಗುರಿಂದರ್ ಜೀತ್ ಸಿಂಗ್ ಘುಲಾಟಿ, ಸಿ.ಇ.ಓ ಕ್ಯಾಪಿಟಲ್ ರೋಡ್ ವೇಸ್ ಮತ್ತು ಪೈನಾನ್ಸ್ ಪ್ರೈ.ಲಿ ಭೋಪಾಲ್ ಇವರು ಮದ್ಯಪ್ರದೇಶದ ಭೋಪಾಲ್ ನಲ್ಲಿ ಭೋಪಾಲ್ ಸಿಟಿ ಲಿಂಕ್ಸ್ ಕಂಪನಿ ಅಡಿಯಲ್ಲಿ 35 ಬಸ್ಸುಗಳನ್ನು  “ಬಿ.ಆರ್.ಟಿ.ಎಸ್. ರೂಟ್ಸ್ “ ಎಂಬ ನಾಮಫಲಕದಲ್ಲಿ ಓಡಿಸಿಕೊಂಡಿದ್ದು ಆರೋಪಿತರಿಗೆ ಸದ್ರಿ ಬಸ್ಸುಗಳನ್ನು ಓಡಿಸುವುದು ಕಷ್ಟವಾಗುತ್ತಿರುವುದಾಗಿ 2007 ನೇ ಡಿಸೆಂಬರ್ ಮೊದಲವಾರದಲ್ಲಿ ಆರೋಪಿತರು ಕುಂದಾಪುರದ ಇವರ ಸಂಸ್ಥೆಗೆ ಬಂದು ಸದರಿ ಸಿಟಿ ಬಸ್ಸುಗಳನ್ನು “ಶ್ರೀ ದುರ್ಗಾಂಬ” ಕಂಪನಿಗೆ ಎಸಾಯಿನ್ ಮಾಡುವ ಒಪ್ಪಂದ ಮಾಡಿಕೊಂಡಿದ್ದು ಈ ಬಗ್ಗೆ ಪಿರ್ಯಾದುದಾರರ ಕಡೆಯಿಂದ ಒಟ್ಟು 30 ಲಕ್ಷ ಹಣವನ್ನು ಮುಂಗಡವಾಗಿ ಪಡೆದು  ಬಳಿಕ ಆರೋಪಿತರು ಪಿರ್ಯಾದುದಾರರ ಕಂಪನಿಗೆ ಬಸ್ಸುಗಳನ್ನು ಎಸಾಯಿನ್ ಮಾಡದೇ 2019 ರ ನವೆಂಬರ್ ತಿಂಗಳಿನಲ್ಲಿ ಆರೋಪಿತರು ಸದ್ರಿ ಬಸ್ಸುಗಳನ್ನು “ಜೋಪ್ ಹೊಪ್ ಟೆಕ್ನಾಲಜಿ” (ಚಲೋ) ಎಂಬ ಸಂಸ್ಥೆಗೆ ಎಸಾಯಿನ್ ಮಾಡಿ ಪಿರ್ಯಾದಿದಾರರಿಗೆ ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 420, ಜೋತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ನಗರ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ. ರವರು ಇಲಾಖಾ ವಾಹನದಲ್ಲಿ ಎಪಿಸಿ 1536 ಗಿರಿಧರ ಪೈ ಹಾಗೂ ಹೆಚ್.ಜಿ ಪ್ರಭಾಕರ ಇವರೊಂದಿಗೆ ದಿನಾಂಕ 21.03.2021 ರಂದು ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಾ ಅಪರ ರಾತ್ರಿ ಸಮಯ ಸುಮಾರು 3:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಆನೆಕೆರೆ ಬಳಿ ಇರುವ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಬಸ್‌ ನಿಲ್ದಾಣದ ಹಿಂದೆ ಅವಿತು ಕುಳಿತು ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದ ಸಂತಾನಮ್. ಆರ್ ಪ್ರಾಯ:56 ವರ್ಷ  ತಂದೆ: ರಾಜು ವಾಸ:3/41, ಕುಮರನ್‌ ಸ್ಟ್ರೀಟ್‌, ಮರುತಮಲೈ, ಅಡಿವರಂ ಕೊಯಿಮತ್ತೂರು ಉತ್ತರ, ಕೊಯಿಮತ್ತೂರು, ತಮಿಳುನಾಡು ಈತನನ್ನು ಸಮೀಪಿಸಿದಾಗ ಸದ್ರಿ ವ್ಯಕ್ತಿ ಸ್ಥಳದಿಂದ ಓಡಿ ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದವರನ್ನು ಗೃಹರಕ್ಷಕ ಸಿಬ್ಬಂದಿ ಪ್ರಭಾಕರರವರ ಸಹಾಯದಿಂದ ಬೆನ್ನಟ್ಟಿ ಹಿಡಿದಿದ್ದು ವಿಚಾರಣೆ ನಡೆಸಿದಲ್ಲಿ ಅವನು ಅಪರ ರಾತ್ರಿಯ ವೇಳೆಯಲ್ಲಿ ಸದರಿ ಸ್ಥಳದಲ್ಲಿ ತನ್ನ ಉಪಸ್ಥಿತಿಯ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ನೀಡದೇ ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಇರಾದೆಯಿಂದ ಸದರಿ ಸ್ಥಳದಲ್ಲಿ ಇರುವುದಾಗಿ ಸಂಶಯಗೊಂಡು, ಅಸಾಮಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಠಾಣೆಯಲ್ಲಿ ಅಸಾಮಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 96 (ಬಿ)  KP ACT ನಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-03-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080