Feedback / Suggestions

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾಧ ಗಣೇಶ್ ಪ್ರಭು (42) ,ತಂದೆ: ದಿ.ನಾಗಪ್ಪ ಪ್ರಭು,ವಾಸ: ಪ್ರಭು ಗಣೇಶ್ ನಿಲಯ, ವಾರಂಬಳ್ಳಿ ಗ್ರಾಮ,ಸಾಲಿಕೇರಿ ಅಂಚೆ, ಬ್ರಹ್ಮಾವರ ತಾಲೂಕು, ಉಡುಪಿ ಇವರು KA-20 B-5987 ನೇ ಬಸ್ ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/02/2023 ರಂದು ಬೆಳಿಗ್ಗೆ ಬಸ್ಸಿನಲ್ಲಿ ಉಡುಪಿ ಸಿಟಿಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಣಿಪಾಲ ಕಡೆಗೆ ಹೋಗುತ್ತಿದ್ದು, ಬಳಿಕ ಶಿವಳ್ಳಿ ಗ್ರಾಮದ ಎಮ್.ಜಿ.ಎಮ್ ಬಸ್ ನಿಲ್ದಾಣದಲ್ಲಿ ಬಸ್ ನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ ಇಳಿಸುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ  ಕಲ್ಸಂಕ ಕಡೆಯಿಂದ ಮಣಿಪಾಲ ಕಡೆಗೆ KA-20 EK-4614ನೇ ಮೋಟಾರು ಸೈಕಲ್ ಸವಾರ ಮುತ್ತಪ್ಪ ಎಂಬಾತನು ತಾನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದ ಬಸ್ ನ ಹಿಂಬದಿಯ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಒಳನೋವುವಾಗಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಅಪಘಾತಕ್ಕೆ KA20EK4614ನೇ ಮೋಟಾರು ಸೈಕಲ್  ಸವಾರ ಮುತ್ತಪ್ಪ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುವುದಾಗಿದೆ, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2023 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 21/02/2023 ರಂದು ಫಿರ್ಯಾದಿದಾರರಾದ ದಿನಕರ (51) ತಂದೆ: ಕಿಟ್ಟ ಪೂಜಾರಿ ವಾಸ:ಮನೆ ನಂಬ್ರ 2-1-102,A4A, ವೈಷ್ಣವಿ, ಕುದುರೆ ಕಲ್ಸಂಕ, 2ನೇ ಅಡ್ಡ ರಸ್ತೆ, ಗುಂಡಿಬೈಲು, ಶಿವಳ್ಳಿ ಗ್ರಾಮ, ಉಡುಪಿ  ರವರು ಅವರ KA-20 AA-4978 ನೇ ನಂಬ್ರದ ಮೊಟಾರ್ ಸೈಕಲಿನಲ್ಲಿ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 2:00 ಗಂಟೆಗೆ ಉಪ್ಪೂರು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ, ಹೇರಾಯಿ ಬೆಟ್ಟು ಕ್ರಾಸ್‌ನಿಂದ ಸ್ವಲ್ಪ ಹಿಂದೆ ತಲುಪುವಾಗ ಅವರ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಆರೋಪಿ ಸಮೀರ್ ಎಂಬವರು ಅವರ KA-9 ML-4194 ನೇ ಮಾರುರತಿ ಸ್ವಿಪ್ಟ್‌ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದಿನಕರ ಇವರ ಮೋಟಾರ್‌ಸೈಕಲ್‌‌ನ ಹಿಂಬದಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ದಿನಕರ ಇವರು ಮೊಟಾರ್ ಸೈಕಲ್‌‌ಸಮೇತ ತಾರು ರಸ್ತೆಯ ಮೇಲೆ ಬಿದ್ದು ಅವರ ಎರಡೂ ಕೈ, ಮೊಣಗಂಟು, ಹಸ್ತ, ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು ಹಾಗೂ ಬೆನ್ನು ಭಾಗದಲ್ಲಿ ತೀವ್ರ ನೋವಾಗಿ ನಡೆದಾಡಲು ಕಷ್ಟವಾಗಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 28/2023 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 21/02/2023 ರಂದು ಬೆಳಿಗ್ಗೆ 11:30 ಗಂಟೆಗೆ ಸಾಲಿಗ್ರಾಮ ಮೀನು ಮಾರುಕಟ್ಟೆ ಎದುರು ಬರುತ್ತಿರುವಾಗ ಎದುರುರಿನಿಂದ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ KA-20-EY-4496 ಅನ್ನು ಅದರ ಸವಾರ ದಕ್ಷತ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆ ದಾಟಲು ನಿಂತುಕೊಂಡಿದ್ದ ಸಂಜೀವ ಮರಕಾಲ ಎಂಬುವವರಿಗೆ ಡಿಕ್ಕಿ ಹೊಡೆದನು. ಸಂಜೀವ ಮರಕಾಲ ರವರು ಹಾಗೂ ಮೋಟಾರು ಸೈಕಲ್ ಸವಾರ ಮತ್ತು ಸಹಸವಾರ ಸುಂದರ್ ಮೋಟಾರು ಸೈಕಲ್ ಸಮೇತವಾಗಿ ರಸ್ತೆಗೆ ಬಿದ್ದರು ಪರಿಣಾಮ ಸಂಜೀವ ಮರಕಾಲರವರಿಗೆ ತಲೆಗೆ, ಹೊಟ್ಟೆಗೆ ಒಳಗಾಯವಾಗಿದ್ದು ಬಲಕೈ ಮೂಳೆ ಮುರಿತದ ತೀವ್ರ ತರದ ಗಾಯಗಳಾಗಿದ್ದು, ಆಪಾದಿತ ದಕ್ಷತ್ ರವರಿಗೆ ಕೈಗೆ ಹಾಗೂ ಕಾಲಿಗೆ ರಕ್ತಗಾಯವಾಗಿದ್ದು, ಸಹಸವಾರ ಸುಂದರ್ ರವರಿಗೆ ತಲೆಗೆ, ಕೈಗೆ, ಕಾಲಿಗೆ ಗಾಯವಾಗಿರುತ್ತದೆ. ಎಂಬುದಾಗಿ ಪ್ರಭಾಕರ ಮರಕಾಲ (38) ತಂದೆ: ಶಂಕರ ಮರಕಾಲ ವಾಸ:ಕಾರ್ಕಡ ಗ್ರಾಮ, ಬ್ರಹ್ಮಾವರ ಇವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2023 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದುದಾರರಾದ ನಮಿತಾ ಜೆ ಶೆಟ್ಟಿ (44) ಗಂಡ: ಜಯರಾಮ ಶೆಟ್ಟಿ ವಾಸ: ವಸುಂಧರ ನಿವಾಸ, ಕಮಲಾಬಾಯಿ ಹೈಸ್ಕೂಲ್‌ ಹಿಂಭಾಗ, ಕಡಿಯಾಳಿ, ಶಿವಳ್ಳಿ ಗ್ರಾಮ, ಉಡುಪಿ ಇವರ ತಾಯಿ ವಸಂತಿ ಶೆಟ್ಟಿ (67)ಎಂಬವರು ಕಳೆದ ಒಂದು ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿರುವುದಾಗಿದೆ. ದಿನಾಂಕ 21/02/2023 ರಂದು ಮಧ್ಯಾಹ್ನ 12:15 ಗಂಟೆಯಿಂದ 13:30 ಗಂಟೆ ನಡುವಿನ ಸಮಯದಲ್ಲಿ ವಸಂತಿ ಶೆಟ್ಟಿ ರವರು ಮನೆಯ ಬಾವಿಯಿಂದ ನೀರು ತರಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಮೃತಪಟ್ಟಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 08/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾಧ ದೇವಿ (52) ಗಂಡ ದಿವಂಗತ ದಿನೇಶ ವಾಸ: ಹೋಲಿಕ್ರಾಸ್‌ ಹತ್ತಿರ ಕೊಡಪಾಡಿ,   ಗುಜ್ಜಾಡಿ ಗ್ರಾಮ  ಕುಂದಾಪುರ ತಾಲೂಕು ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿ , ಹೋಲಿಕ್ರಾಸ್‌  ಹತ್ತಿರ  ಸರ್ವೇ ನಂ: 145/1/A ಜಾಗವು  ಪಿರ್ಯಾದಿದಾರರ ಹೆಸರಿಗೆ ಇರುತ್ತದೆ. ಸದ್ರಿ ಜಾಗದ ಎದುರುಗಡೆ ಆಪಾದಿತ 1)ಭಾರತಿ ಗಾಣಿಗ 2) ಕೀರ್ತಿರಾಜ್ 3) ನಾಗರಾಜ ಗಾಣಿಗ ಇವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಈ ಬಗ್ಗೆ ದೇವಿ ರವರು ಗ್ರಾಮ ಪಂಚಾಯತ್‌ ಹಾಗೂ ಲೋಕೋಪಯೋಗಿ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿರುತ್ತಾರೆ. ದಿನಾಂಕ 16/02/2023 ರಂದು ರಾತ್ರಿ 8:30 ಗಂಟೆಗೆ ದೇವಿ ರವರ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಸದ್ರಿ ಕಟ್ಟಡದ ಹಿಂಬಾಗದಲ್ಲಿ  ಆಪಾದಿತರು ಶೌಚಾಲಯದ ಗುಂಡಿಯನ್ನು ನಿರ್ಮಿಸುತ್ತೀರುವಾಗ ದೇವಿ ಇವರು, ಆಕ್ಷೇಪಣೆ ಮಾಡಿದಾಗ ಆಪಾದಿತರಾದ ಭಾರತಿ ಗಾಣಿಗ, ಕೀರ್ತಿರಾಜ್‌, ಹಾಗೂ ನಾಗರಾಜ ಗಾಣಿಗ ರವರು ದೇವಿ ರವರ ಕಡೆಯವರೊಂದಿಗೆ ಜಗಳ ಮಾಡಿ, ಆಪಾದಿತ ಕೀರ್ತಿರಾಜ್‌ನು ದೇವಿ ರವರಿಗೆ  ಹಾಗೂ ಅಕ್ಕಮ್ಮ, ಮತ್ತು ಜಯಂತಿಯವರಿಗೆ ಹೊಡೆಯಲು ಬಂದುರುತ್ತಾನೆ. ಅಲ್ಲದೇ ಆಪಾದಿತರುಅವಾಚ್ಯವಾಗಿ ಬೈದು ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈದಕ್ಕೆಲ್ಲಾ ಆಪಾದಿತೆ ಭಾರತಿ ಗಾಣಿಗ ರವರು ಕುಮ್ಮಕ್ಕು ನೀಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ: 504, 506, 114, r/w 34 IPC   And 3(i)(r)(s), 3(2)(V-a) SC/ST ACT 1989 ಆಕ್ಟ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾಧಿದಾರರಾಧ ಪ್ರವೀಣ ಶೆಟ್ಟಿ (28) ತಂದೆ: ಶೇಖರ ಶೆಟ್ಟಿ ವಾಸ: ಹಳ್ಳನೀರು  ಜಡ್ಕಲ್‌ಗ್ರಾಮ ಬೈಂದೂರು ತಾಲೂಕು  ಉಡುಪಿ  ಜಿಲ್ಲೆ ಇವರು ಜಡ್ಕಲ್‌ನಲ್ಲಿ ತಮ್ಮ  ರಿಕ್ಷಾವನ್ನು  ಬಾಡಿಗೆಗೆ ಓಡಿಸಿ ಕೊಂಡಿದ್ದು  ದಿನಾಂಕ 01/02/2023 ರಂದು ರಾತ್ರಿ 11:00 ಗಂಟೆಗೆ ಜಡ್ಕಲ್‌ರಿಕ್ಷಾ ನಿಲ್ಥಾಣದಲ್ಲಿದಾಗ ವಂಡ್ಸೆಗೆ ಬಾಡಿಗೆಗೆ ಸಿಕ್ಕಿದ್ದು ರಾತ್ರಿಯಾದ್ದರಿಂದ ನನ್ನ ಸ್ನೇಹಿತ ನಾರಾಯಣನನ್ನು ಜೂತೆಯಲ್ಲಿ ಕರೆದುಕೊಂಡು ವಂಡ್ಸೆಗೆ ಬಾಡಿಗೆಗೆ  ಬಂದು ಪ್ರಯಾಣಿಕರನ್ನು ಇಳಿಸಿ ವಾಪಸು ಮನೆಗೆ ಹೋಗಲು ರಿಕ್ಷಾವನ್ನು  ಚಲಾಯಿಸಿಕೊಂಡು ಜಡ್ಕಲ್‌ಗ್ರಾಮದ ಜಡ್ಕಲ್‌ಜಂಕ್ಷನ್‌ನಿಂದ  ಜಡ್ಕಲ್‌- ಮುದೂರು  ರಸ್ತೆಯಲ್ಲಿ ದಿನಾಂಕ 02/02/2023 ಬೆಳಗ್ಗಿನ ಜಾವ 00:15 ಗಂಟೆ ಸುಮಾರಿಗೆ  ಹೋಗುತ್ತಿದಾಗ ಜಡ್ಕಲ್‌ಸುಪರ್‌ಮಾರ್ಕೆಟ್‌ ಎದುರು ಒಂದು ಬಿಳಿ ಬಣ್ಣದ  RITZ  ಕಾರು ಚಾಲನಾ ಸ್ಥಿತಿಯಲ್ಲಿದ್ದು ಅಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಪರ್‌ಮಾರ್ಕೆಟ್‌ಎದುರು ಮಲಗಿದ ಜಾನುವಾರುಗಳನ್ನು ಕಳವು ಮಾಡಿಕೊಂಡು ಹೋಗಲು ಕಾರಿನ ಡಿಕ್ಕಿಗೆ  ತುಂಬಿಸಲು ಪ್ರಯತ್ನಿಸುತ್ತಿದ್ದನ್ನು  ನೋಡಿ ರಿಕ್ಷಾ  ನಿಲ್ಲಿಸಿ  ಪ್ರವೀಣ ಶೆಟ್ಟಿ ಮತ್ತು ನಾರಾಯಣ ಹತ್ತಿರಕ್ಕೆ  ಹೋದಾಗ ಅಪಾದಿತರು ಇವರಿಗೆ  ಇಲ್ಲಿಂದ ಹೋಗಿ  ಇಲ್ಲದಿದ್ದರೇ  ನಿಮ್ಮನ್ನು  ಇಲ್ಲಿಯೇ  ಕೊಂದು ಹಾಕುತ್ತೇವೆ. ಎಂದು ಬೆದರಿಕೆ ಹಾಕಿರುತ್ತಾರೆ.  ಪ್ರವೀಣ ಶೆಟ್ಟಿ  ರವರು  ಭಯಗೊಂಡು  ಹಿಂದಕ್ಕೆ  ಹೋದಾಗ ಅಪಾದಿತರು ಬಲವಂತವಾಗಿ ಅಲ್ಲಿ ಮಲಗಿದ ಒಂದು ಕಪ್ಪು ಬಣ್ಣದ  ಜಾನುವಾರು  ಕಾಲುಗಳನ್ನು  ಹಿಡಿದು ಎತ್ತಿ ಕಾರಿನ ಡಿಕ್ಕಿಯಲ್ಲಿ ತುಂಬಿಸಿಕೊಂಡು ಪರಾರಿಯಾಗಿರುತ್ತಾರೆ. ಕಾರಿನ ನಂಬ್ರ ನೋಡಲಾಗಿ KA-19 ME-6373 ಆಗಿರುತ್ತದೆ.  ಆರೋಪಿ ಗಳು ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿ  ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಸಾಗಟ ಮಾಡಿ ರುವುದಾಗಿದೆ. ಇನ್ನು ಮುಂದಕ್ಕೂ ಆರೋಪಿಗಳು  ಜಡ್ಕಲ್‌ಪರಿಸರದಲ್ಲಿ ಜಾನುವಾರು ಕಳ್ಳತನ ಮಾಡುವ ಸಾಧ್ಯತೆ ಇರುವ  ಬಗ್ಗೆ ಮನಗೊಂಡು ನಾನು ಸ್ಥಳೀಯರಲ್ಲಿ ಮತ್ತು  ಸ್ನೇಹಿತರಲ್ಲಿ ಈಗ  ವಿಚಾರ ತಿಳಿಸಿ  ಘಟನೆಯಿಂದ  ಭಯಗೊಂಡು  ದೂರು ನೀಡಲು ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2022  ಕಲಂ: 4,5,12 ಕರ್ನಾಟಕ ಜಾನುವಾರು  ಹತ್ಯೆ ಪ್ರತಿಭಂಧಕ  ಮತ್ತು ಸಂರಕ್ಷಣಾ  ಆಧ್ಯಾದೇಶ- 2020 ಕಲಂ: 379, 506 ಜೂತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 21/02/2023 ರಂದು 11.00 ಗಂಟೆಗೆ ಪಿರ್ಯಾದಿದಾರರಾದ ದೇವರಾಜ್‌ಟಿ.ವಿ ಪೊಲೀಸ್ ನಿರೀಕ್ಷಕರು   ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಆರ್.ಟಿ.ಓ ಬಳಿ ಸ್ಟೂಟಿಯಲ್ಲಿ ಮಾದಕವಸ್ತು ಹಾಗೂ ಗಾಂಜಾ ಮಾರುತ್ತಿರುವ ವ್ಯಕ್ತಿಗಳನ್ನು ದಾಳಿ ನಡೆಸಲು ಮಾನ್ಯ ಪೊಲೀಸ್ ಅಧೀಕ್ಷಕರವರಿಂದ ಅನುಮತಿ ಪಡೆದು ಸದರಿ ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆಪಾದಿತ ಇಕ್ಬಾಲ್ ಶೇಕ್, (32) ತಂದೆ: ದಿ ಶಬ್ಬೀರ್ ಅಹಮ್ಮದ್  ವಾಸ:ಮಾತಾ ಶ್ರೀ ವಾಸುಕಿ ನಗರ 5 ನೇ ಕ್ರಾಸ್ ಕೊರಂಗ್ರಪಾಡಿ, 76 ಬಡಗಬೆಟ್ಟು ಗ್ರಾಮ ಉಡುಪಿ ಇತನ ವಶದಲ್ಲಿದ್ದ 136  ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್‌ಸಮೇತ)‌, 0.36 ಗ್ರಾಂ ಎಂ ಡಿ ಎಂ ಎ (ಪ್ಲಾಸ್ಟಿಕ್ ಕವರ್‌ಸಮೇತ), 1 ಮೊಬೈಲ್ ಪೋನ್, ಜಿಯೋ ಕಂಪನಿಯ ವೈಫೈ Router, ಕೆಎ-20-ಇಕ್ಯೂ-3582 ನಂಬ್ರದ TVS Dio  ಸ್ಕೂಟಿ, ಹಾಗೂ ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತಿನ ಮೌಲ್ಯ ರು. 44700/- ಆಗಬಹುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 32/2023 ಕಲಂ 8 (c) 20 (b) (ii) (A), 21(b), 22(b) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 22-02-2023 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080