ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾಪು: ಪಿರ್ಯಾದಿ ಇಶ್ರತ್ ಬಾನು ಪ್ರಾಯ : 50 ಸತ್ಯ ನಾರಾಯಣ ನಾಯಕ್ ಪ್ರಾಯ: 42 ವರ್ಷ  ತಂದೆ : ದಿ| ಶ್ರೀನಿವಾಸ ನಾಯಕ್ ವಾಸ : ಸೊಸೈಟಿ ಕಾಲೋನಿ,  ಅಲೆಯೂರ್‌ ಗ್ರಾಮ ಇವರು ದಿನಾಂಕ:22-02-2023 ರಂದು ಉಡುಪಿಯಿಂದ ತನ್ನ  KA 20 AB 3340 ನೇ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಕಾಪುವಿಗೆ ಬಾಡಿಗೆ ಬಂದಿದ್ದು, ಕಾಪುವಿನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ವಾಪಾಸ್ಸು ಉಡುಪಿಗೆ ಹೋಗುವರೇ ರಾ.ಹೆ 66 ರ ಮಂಗಳೂರು-ಉಡುಪಿ ರಸ್ತೆಯ ಮೂಲಕ ಹೋಗುತ್ತಾ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ಗ್ಲೋಬಲ್‌ ವೀಲ್‌ ಅಲೈನ್‌ ಮೆಂಟ್‌ ಗ್ಯಾರೇಜ್‌ ನ್ನು ತಲುಪುವ ವೇಳೆಗೆ ಫಿರ್ಯಾದುದಾರರ ಎದುರಿನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ KA-20-AA-6268 ನೇ ಅಶೋಕ ಲೈಲ್ಯಾಂಡ್‌ ವಾಹನದ ಸವಾರನು ಯಾವುದೇ ಸೂಚನೆಯನ್ನು ನೀಡದೇ ತೀವ್ರ ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ಏಕಾಏಕಾಯಾಗಿ ಎಡಕ್ಕೆ ತಿರುಗಿಸಿದ್ದು, ಫಿರ್ಯಾದುದಾರರು ತನ್ನ ರಿಕ್ಷಾವನ್ನು ಆದಷ್ಟು ನಿಂತ್ರಣಕ್ಕೆ ತರಲು ಪ್ರಯತ್ನಿಸಿದ್ದು, ಆದರೂ ರಿಕ್ಷಾ ತನ್ನ ನಿಯಂತ್ರಣಕ್ಕೆ ಸಿಗದೇ ಅಶೋಕ ಲೈಲ್ಯಾಂಡ್‌ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತದೆ. ಇದರಿಂದ ರಿಕ್ಷಾದ ಮುಂಭಾಗ ಸಂಪೂರ್ಣವಾಗಿ ಬೆಂಡಾಗಿ ಫಿರ್ಯಾದುದಾರರ 2 ಕಾಲುಗಳ ಮೇಲೆ ಕುಳಿತಿದ್ದು, 2 ಕಾಲುಗಳಿಗೂ ಗುದ್ದಿದ ನೋವುಂಟಾಗಿರುತ್ತದೆ. ಅಲ್ಲದೇ ಎಡಗೈ ಗೂ ಕೂಡಾ ಗುದ್ದಿದ ನೋವುಂಟಾಗಿರುತ್ತದೆ. ಬಳಿಕ ಸ್ಥಳಕ್ಕೆ ಸೇರಿದ ಸಾರ್ವಜನಿಕರು ಫಿರ್ಯಾದುದಾರರನ್ನು ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೋಡಿಸಿರುವುದಾಗಿದೆ. ಈ ,ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ  31/2023 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಲ್ಪೆ:  ಪಿರ್ಯಾದಿ: ಅಶ್ವಿನಿ ಕುಮಾರ(38) ತಂದೆ:ಬಿ ಕೆ ಅರುಣ ರಾವ್ವಾಸ: 2-1, 82B1, ಪರ್ಣಕುಟಿ, ಪಾಡಿಗಾರ್ ಗೇಟಿನ ಬಳಿ, ಗುಂಡಿಬೈಲು, ಶಿವಳ್ಳಿ ಗ್ರಾಮ  ಇವರು ದಿನಾಂಕ 22/1/2023 ರಂದು ಮಣಿಪಾಲದಿಂದ ಮಲ್ಪೆ ಬೀಚ್ ಉತ್ಸವಕ್ಕೆ ಬರಲು ಬೆಳಿಗ್ಗೆ ತನ್ನ KA EM 9465 ನೇ ಸ್ಕೂಟರಿನಲ್ಲಿ ಸಹಸವಾರನ್ನಾಗಿ ತನ್ನ ಸ್ನೇಹಿತನ ಮಗ ನಿಹಾಲ್ ಮರಾಡಿ (13ವ) ಇವರನ್ನು ಕುಳ್ಳಿರಿಸಿಕೊಂಡು ಉಡುಪಿ- ಆದಿಉಡುಪಿ ಮದ್ವನಗರ ಮಾರ್ಗವಾಗಿ ಮಲ್ಪೆಗೆ ಹೋಗುತ್ತಿರುವಾಗ ಬೆಳಿಗ್ಗೆ 9:45 ಗಂಟೆಸಮಯಕ್ಕೆ ಮೂಡಬೆಟ್ಟು ಬಸ್ಸು ನಿಲ್ದಾಣದ ಬಳಿ ತಲುಪಿದಾಗ ಅವರ ಎದುರಿನಿಂದ ಅಂದರೆ ಕೊಡವೂರು ಕಡೆಯಿಂದ KA 20 AB 3592 ನೇ ಆಟೋ ರಿಕ್ಷಾವನ್ನು ಅದರ ಚಾಲನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೂಡುಬೆಟ್ಟು ಬಸ್ಸು ನಿಲ್ದಾಣದ ಎದುರು ಆಟೋ ರಿಕ್ಷಾವನ್ನು ಯಾವುದೇ ಸೂಚನೆ ನೀಡದೆ ಯು ಟರ್ನ್ ಮಾಡಿದಾಗ ಪಿರ್ಯಾದಿದಾರರು ಹಾರ್ನ ಹೊಡೆಯುತ್ತಾ ಸ್ಕೂಟರ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸ್ಕೂಟರಿಗೆ ಒಮ್ಮಲೇ ಬ್ರೇಕ್ ಹಾಕಿ ನಿಲ್ಲಿಸಿದಾಗ  ಒಮ್ಮಲೇ ಅಟೋ ರಿಕ್ಷಾ ಚಾಲಕನು ಅಟೋ ರಿಕ್ಷಾವನ್ನು ಸ್ಕೂಟರಿನ ಬಲ ಬದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರಿನ ಸಹಸವಾರ ನಿಹಾಲ್ ಮರಾಡಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಮೊಣಗಂಟಿಗೆ ತೀವ್ರ ಒಳ ಜಖಂ ಆಗಿದ್ದು ಅಲ್ಲದೆಎಡಕಾಲಿನ ಮೊಣಗಂಟಿನಕೆಳಗೆ ಮೂಳೆ ಮುರಿತದ ಜಖಂ ಆಗಿರುತ್ತದೆ ಅಲ್ಲದೆ ಸಹಸವಾರ ನಿಹಾಲ್ ಮರಾಡಿ ಇವರಿಗೆ ಎಡಕಾಲಿನ  ಮೊಣಗಂಟಿಗೆ ತರುಚಿದ ಗಾಯ ಆಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಹಾಗೂ ಸಹಸವಾರನನ್ನ ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿದ್ದು ಅಲ್ಲದೆಪಿರ್ಯಾದಿದಾರರು ಹೈ ಟೆಕ್ ಆಸ್ಪತ್ರೆಯ ಅಂಬುಲೆನ್ಸ್ ಗೆ ಕರೆ ಮಾಡಿ ಅಂಬುಲೆನ್ಸ್ ನಲ್ಲಿ  ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ  ಹೋಗಿದ್ದು ಅಲ್ಲಿನ ವೈದ್ಯರು ಪಿರ್ಯಾದಿದಾರರಿಗೆಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದು ಅಲ್ಲದೆ ನಿಹಾಲ್ ಮರಾಡಿ ಯವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.ಪಿರ್ಯಾದಿದಾರರು ಪುನ: ದಿನಾಂಕ 26/1/2023 ರಂದು  ಕೆ ಎಂ ಸಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈ ಅಪಘಾತಕ್ಕೆ KA 20 AB 3592 ನೇ ಆಟೋ ರಿಕ್ಷಾಚಾಲಕನ ನಿರ್ಲಕ್ಷ್ಯತನ ಹಾಗೂ ಅಜಾಗರೂ ಕತೆಯ ಚಾಲನೆಯೇ ಕಾರಣವಾಗಿದ್ದು .ಅಪಘಾತ ನಡೆಸಿದ ಆಟೋ ರಿಕ್ಷಾ ಚಾಲಕನ ಹೆಸರು ಕೇಶವ ಎಂದು ಪಿರ್ಯಾದಿದಾರರಿಗೆ ತಿಳಿದಿದ್ದು. ಅಪಘಾತ ನಡೆಸಿದ KA 20 AB 3592 ನೇ ಆಟೋ ರಿಕ್ಷಾಚಾಲಕ ಪಿರ್ಯಾದಿದಾರರಲ್ಲಿ ತಾವು ರಾಜಿ ಮಾಡಿಕೊಳ್ಳುವ ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ಅಶ್ವಾಸನೆ ನೀಡಿ ನಂತರ ಆಸ್ಪತ್ರೆಯ  ವೆಚ್ಚವನ್ನು ಭರಿಸಲು ನಿರಾಕರಿಸಿರುತ್ತಾರೆ. ಪಿರ್ಯಾದಿದಾರರು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬೆಡ್ ರೆಸ್ಟ್ ನಲ್ಲಿ ಇದ್ದು ಪಿರ್ಯಾದಿ ನೀಡುವಾಗ ವಿಳಂಬವಾಗಿರುತ್ತದೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 18/2023 ಕಲಂ 279,337,338 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿ: ಅಶೋಕ್‌  ಪ್ರಾಯ: 42 ವರ್ಷ ತಂದೆ: ದಿವಂಗತ ಸುಬ್ರಹ್ಮಣ್ಯ ವಾಸ: ನಗರ ಪೊಸ್ಟ್‌, ಹಿಲ್ಕುಂಜಿ ಗ್ರಾಮ ಇವರ  ಅಣ್ಣನಾದ  ಸುರೇಶ್‌  ಪ್ರಾಯ: 44 ವರ್ಷ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ  ಬ್ಯಾಲಿಹಿತ್ಲು ಎಂಬಲ್ಲಿರುವ ಸಯ್ಯದ್‌ ಸಾಹೇಬರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 21/02/2023 ರಂದು ಸಂಜೆ 04:15 ಗಂಟೆಗೆ ಬೀಜಾಡಿಯಿಂದ ಕರೆ ಮಾಡಿ  ಪಿರ್ಯಾದುದಾರರ ಅಣ್ಣನು ವಾಸಮಾಡಿಕೊಂಡಿದ್ದ ರೂಮಿನ ಪಕಾಸಿಗೆ ನೈಲಾನ್‌ ಹಗ್ಗದಿಂದ ಮಾಡಿನ ಪಕಾಸಿಗೆ ಕಟ್ಟಿ ಕುತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದು ಮೃತ ಶರೀರವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವುದಾಗಿ ಮಾಹಿತಿ ಬಂದಂತೆ ಪಿರ್ಯಾದುದಾರರು ಬಂದು ಮೃತ ಶರೀರವನನ್ನು ನೋಡಿ ವಿಚಾರಿಸಲಾಗಿ ಪಿರ್ಯಾದುದಾರರ ಅಣ್ಣ ಸುರೇಶನು ವಿಪರೀತ ಕುಡಿಯುವ ಅಭ್ಯಾಸವಿದ್ದು, ಯಾವುದೋ ವಿಷಯಕ್ಕೆ ಮನನೊಂದು ದಿನಾಂಕ 21/02/2023 ರಂದು ಬೆಳಿಗ್ಗೆ 08:30 ಗಂಟೆಯಿಂದ ಸಂಜೆ 03:45 ಗಂಟೆಯ ನಡುವೆ ಆತನ ಹೆಂಡತಿ ಗೀತಾ ಕೆಲಸಕ್ಕೆ ಹೋದ ಸಮಯದಲ್ಲಿ, ಮನೆಯ ರೂಮಿನ ಪಕಾಸಿಗೆ ನೈಲಾನ್‌ ಹಗ್ಗದಿಂದ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಯುಡಿಆರ್‌ ನಂ 10/2023 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ: ಪಿರ್ಯಾದಿ: ರಾಘವೇಂದ್ರ ಪೂಜಾರಿ  ಪ್ರಾಯ 38 ವರ್ಷ ತಂದೆ, ಶೀನ ಪೂಜಾರಿ ವಾಸ, ಜನತಾ ಕಾಲೋನಿ  ಕ್ರೋಡ ಬೈಲ್ಲೂರು ಅಂಚೆ ಶಂಕರನಾರಾಯಣ ಗ್ರಾಮ ಈವರ ತಂದೆ,ಶೀನ ಪೂಜಾರಿ  ಇವರು ದಿನಾಂಕ 21.02.2023  ರಂದು  ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಅಂಪಾರು ನಾಗಶ್ರೀ ಬಾರ್ ಒಳಗಡೆ ಅನಾರೋಗ್ಯದಿಂದ ಕುಸಿದು ಬಿದ್ದವರನ್ನು ಚಿಕಿತ್ಸೆಯ  ಬಗ್ಗೆ  ಕುಂದಾಪುರ ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಅಲ್ಲಿಂದ ಹೆಚ್ಷಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ,ಎಮ್.ಸಿ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಶೀನ ಪೂಜಾರಿ ಇವರನ್ನು ಪರೀಕ್ಷಿಸಿದ ವೈಧ್ಯರು ಅವರು ಬದುಕುವುದು ಕಷ್ಟ ಎಂದು ತಿಳಿಸಿದ್ದು, ಅದರಂತೆ   ವಾಪಾಸು   ಕುಂದಾಪುರ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದಾಗ ಅಲ್ಲಿ  20;10  ಘಂಟೆಗೆ   ಶೀನ  ಪೂಜಾರಿ ಇವರನ್ನು ಪರೀಕ್ಷಿಸಿದ ವೈದ್ಯರು  ಮೃತಪಟ್ಟಿರು ತ್ತಾರೆ ಎಂದು ತಿಳಿಸಿರುತ್ತಾರೆ, ಶೀನ ಪೂಜಾರಿ  ಇವರು ಅನಾರೋಗ್ಯದಿಂದಹಾಗೂಅವರಿಗೆಇರುವ  ವಿಪರೀತ ಶರಾಬು ಕುಡಿಯುವ ಚಟದಿಂದ  ಮೃತಪಟ್ಟಿರುತ್ತಾರೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ನಂಬ್ರ 03/2023  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ದರೋಡೆ ಪ್ರಕರಣ

 • ಉಡುಪಿ  ಪಿರ್ಯಾದಿ : ಶ್ರೀಮತಿ ವಿಜಯ  ಜೆ.ಎಸ್‌ ಪ್ರಾಯ:  61  ವರ್ಷ ಗಂಡ: ಜೆಟ್ಲ ಸತ್ಯನಾರಾಯಣ ವಾಸ: 'ಸಪ್ತಸ್ವರ', ಸತ್ಯ ಸಾಯಿ  ಮಾರ್ಗ, ಬ್ರಹ್ಮಗಿರಿ,  ಮೂಡನಿಡಂಬೂರು  ಗ್ರಾಮ ಇವರು ದಿನಾಂಕ: 22/02/2023 ರಂದು ಬೆಳಿಗ್ಗೆ 06:10 ಗಂಟೆಯ ಸುಮಾರಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಾಯರ್‌ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ರಸ್ತೆಯಲ್ಲಿ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಬರುತ್ತಿರುವಾಗ, ಪಿರ್ಯಾದುದಾರರ ಹಿಂದಿನಿಂದ ಮೋಟಾರ್‌ಸೈಕಲಿನಲ್ಲಿ ಬಂದ ಅಂದಾಜು 20 ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರುಗಳ ಪೈಕಿ, ಹಿಂದೆ ಕೂತಿದ್ದವನು ಏಕಾಏಕಿ ಹಿಂದಿನಿಂದ ಪಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ ತಳ್ಳಿ, ನೆಲಕ್ಕೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಅಂದಾಜು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆಯಾದ ಚಿನ್ನದ ಮಾಂಗಲ್ಯದ ಸರದ ಮೌಲ್ಯ ರೂ. 2,50,000/- ಆಗಬಹುದು. ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ: 392  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ ಪ್ರಕರಣ

 • ಕಾರ್ಕಳ:  ಕಾರ್ಕಳ ತಾಲೂಕು, ನೂರಾಳ್ ಬೆಟ್ಟು ಗ್ರಾಮದ ಗೋಲಿದಲ್ಕೆ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ರೇಶ್ಮಾ (30) ಗಂಡ:ಸುನಿಲ್ ಕುಲಾಲ್  ವಾಸ: ಗೋಲಿದಲ್ಕೆ ,ಮನೆ ನೂರಾಳ್ ಬೆಟ್ಟು ಗ್ರಾಮ ಇವರ ಗಂಡ ಸುನಿಲ್ ಕುಲಾಲ್ ಪ್ರಾಯ 37 ವರ್ಷ ಇವರಿಗೆ ತಲೆಯ ನರದ ಸಮಸ್ಯೆಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ದಿನಾಂಕ 20/02/2023 ರಂದು ಬೆಳ್ಳಿಗೆ 11:15 ಗಂಟೆಗೆ ಕಾರ್ಕಳಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು, ಮಧ್ಯಾಹ್ನ 2:45 ಗಂಟೆಗೆ ಅವರ ಮೊಬೈಲ್ ಗೆ ಕರೆ ಮಾಡಿದಾಗ ಹೊಸ್ಮಾರಿನಲ್ಲಿ ಇರುವುದಾಗಿ ತಿಳಿಸಿದ್ದು, ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ. 23/2023 ಕಲಂ ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 22-02-2023 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080