ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ  21/02/2022 ರಂದು ಮದ್ಯಾಹ್ನ 12:30 ಗಂಟೆಗೆ  ಹೆಬ್ರಿ ತಾಲೂಕಿನ  ಅಲ್ಬಾಡಿ  ಗ್ರಾಮದ ಕೊಂಜಾಡಿ  ಎ ಸತೀಶ್ ಕಾಮತ್‌‌ರವರ ಮನೆಯ ಎದುರಿನ  ಹಾಲಾಡಿ ಸೊಮೇಶ್ವರದ ನಡುವಿನ ಸಾರ್ವಜನಿಕ ರಸ್ತೆಯಲ್ಲಿ  ಕಾರು ನೊಂದಣಿ ನಂಬ್ರ KA-05-NA-8462ನೇ ನಂಬ್ರದ ಕಾರು ಚಾಲಕ  ರಕ್ಷಕ್  ಅವರು ಚಲಾಯಿಸುತ್ತಿದ್ದ ಕಾರನ್ನು ಸೋಮೇಶ್ವರ ಕಡೆಯಿಂದ  ಬೆಳ್ವೆ ಕಡೆಗೆ ಅತೀ ವೇಗ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿನಲ್ಲಿ  ರಸ್ತೆಯ ಮೇಲೆ ಅಡ್ಡ ಬಂದ ದನಕ್ಕೆ  ಆಗುವ ಆಪಘಾತವನ್ನು ತಪ್ಪಿಸಲು ಒಮ್ಮೆಲೆ  ಕಾರನ್ನು ಅವರ ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಚಾಲಕರ ನಿಯಂತ್ರಣ ತಪ್ಪಿ ಚಾಲಕರ  ಎಡ ಬದಿಯ ಚರಂಡಿಗೆ ಕಾರು ಮಗುಚಿ ಬಿದ್ದ ಪರಿಣಾಮ ಕಾರಿನ ಒಳಗೆ ಇದ್ದ  ಎಂ. ತೇಜಪ್ಪ  ಶೆಟ್ಟಿಯವರು ತಲೆಗೆ ಆಗಿರುವ ಗಾಯ ನೋವಿನಿಂದ ಬೆಳ್ವೆ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಹೋಗುವಾಗಲೇ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022  ಕಲಂ: 279,   304(A)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 20/02/2022 ರಂದು ಬೆಳಿಗ್ಗೆ 07:30 ಗಂಟೆಗೆ ಆರೋಪಿ ಸವಾರ ಪುನೀತ್‌ ಕುಮಾರ್‌  ತನ್ನ ನೀಲಿ ಬಣ್ಣದ KA-20-EJ-8303 ನೇ Gixer ಬೈಕ್‌ ನಲ್ಲಿ ತನ್ನ ದೊಡ್ಡಮ್ಮ ಶ್ರೀಮತಿ. ಪುಷ್ಪಾ ಪೂಜಾರ್ತಿ ರವರನ್ನು ಹಿಂಬದಿ ಸಹಸವಾರಳಾಗಿ ಕುಳ್ಳಿರಿಸಿಕೊಂಡು ಅಚ್ಲಾಡಿ ಗ್ರಾಮದ ಮಧುವನ ಮಂಜುಶೆಟ್ಟಿ ರವರ ಅಂಗಡಿ ಬಳಿ ಬಂದಾಗ ಬೈಕ್ ಅನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಹಾಲುಡೈರಿ ಹೋಗಲು ಮಧುವನ-ಕೊಮೆ ಸಂಪರ್ಕ ರಸ್ತೆಯ ತಿರುವಿನ ಬಳಿ ಅಜಾಗರೂಕತೆಯಿಂದ ಒಮ್ಮೆಲೆ ತಿರುಗಿಸಲು ಬ್ರೇಕ್‌ ಹಾಕಿದ ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಸಹಸವಾರಿಣಿ ಮಾತ್ರ ಆಯತಪ್ಪಿ ಜಾರಿ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ತೀವ್ರ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 20/02/2022 ರಂದು ರಾತ್ರಿ 10:30 ಗಂಟೆಗೆ ಪಿರ್ಯಾದಿದಾರರಾದ ಕಮಲಾವತಿ ದೇವಾಡಿಗ (48), ಗಂಡ:ಅಣ್ಣಪ್ಪ ದೇವಾಡಿಗ, ವಾಸ: ಸಳ್ಳೆಕುಳಿ ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರು ಮಗ ಮಂಜುನಾಥ ರವರೊಂದಿಗೆ ಸಂಬಂಧಿಕರ ಮನೆಯಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಬೈಂದೂರಿನಿಂದ  ಸಳ್ಳೆಕುಳಿಗೆ ಹೋಗಲು ಪಡುವರಿ ಗ್ರಾಮದ ವತ್ತಿನೆಣೆ ರಾಘವೇಂದ್ರ ಮಠದ ಕ್ರಾಸಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಶಿರೂರು ಕಡೆಗೆ  KA-20-EN-1500 ನೇ ಮೋಟಾರು ಸೈಕಲ್ ಸವಾರ ರೋಹಿತ್ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ದನವೊಂದು ಒಮ್ಮೆಲೇ ರಸ್ತೆಗೆ ಅಡ್ಡ ಬಂದ ಕಾರಣ ದನವನ್ನು ತಪ್ಪಿಸಲು  ಮೋಟಾರು ಸೈಕಲ್ ನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ  ರಸ್ತೆಯ ಎಡಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರ ಮಗ ಮಂಜುನಾಥ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥನು ರಸ್ತೆಯ ಪಕ್ಕದಲ್ಲಿದ್ದ  ಕಾಲುವೆಗೆ ಬಿದ್ದು  ಎಡಗೈ ಭುಜಕ್ಕೆ  ಮೂಳೆ ಮುರಿತದ ಗಾಯ ಹಾಗೂ ತಲೆಗೆ ರಕ್ತ ಗಾಯ ಆದವರನ್ನು  ಪಿರ್ಯಾದಿದಾರರು ಗಾಯಾಳುವಿಗೆ ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರಾಘವೇಂದ್ರ ಪ್ರಭು (59), ತಂದೆ: ದಿ ನರಸಿಂಹ ಪ್ರಭು, ವಾಸ: ಬೋರ್ಕಟ್ಟೆ, ಮಿಯ್ಯಾರು ಗ್ರಾಮ, ಕಾರ್ಕಳ ಹಾಲಿ ವಿಳಾಸ: ರೂಂ ನಂಬ್ರ 8, ಮನ್ಸೂರಿ ಸೊಸೈಟಿ, ಮಾಲವನಿ, ಮಲಾಡ್, ಪಶ್ಚಿಮ ಮುಂಬೈ ಇವರ ತಮ್ಮ ಬಿ ವಿಜೇಂದ್ರ ಪ್ರಭು (56) ಎಂಬುವವರು ತಂದೆಯ ಮನೆಯಾದ ಮಿಯಾರು ಗ್ರಾಮದ ಬೋರ್ಕಟ್ಟೆ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಪಿರ್ಯಾದಿದಾರರು ಮತ್ತು  ಸಹೋದರ ಸಹೋದರಿಯವರು ಮುಂಬಯಿ ಮತ್ತು ಬೆಂಗಳೂರಿನಲ್ಲಿ ವಾಸವಾಗಿದ್ದು ಮನೆಯಲ್ಲಿ ಕಾರ್ಯಕ್ರಮ ಇದ್ದಾಗ ಬಂದು ಹೋಗುತ್ತಿದ್ದು 2021 ನೇ ಸೆಪ್ಟಂಬರ್ ತಿಂಗಳಿನ 10 ನೇ ತಾರೀಖಿನ ವರೆಗೆ ಗಣಪತಿ ಹಬ್ಬದ ಬಗ್ಗೆ ಊರಿಗೆ ಬಂದು ಹೋಗಿದ್ದು, ದಿನಾಂಕ 21/02/2022 ರಂದು ಪಿರ್ಯಾದಿದಾರರು ಮುಂಬಯಿಯಿಂದ ಬೋರ್ಕಟ್ಟೆಯ ಮನೆಗೆ ಬಂದಾಗ ತಮ್ಮ ವಿಜೇಂದ್ರ ಪ್ರಭು ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ, ಆಸುಪಾಸಿನಲ್ಲಿ ವಿಚಾರಿಸಿದಾಗ ಸುಮಾರು ದಿನದಿಂದ ಅವರನ್ನು ನೋಡಿಲ್ಲವಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2022  ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಂಜುನಾಥ (32), ತಂದೆ: ಶೇಖರ ಬಡಾಬೆಟ್ಟು, ವಾಸ:ಬಳ್ಕೂರು ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರ ತಾಯಿ ಭವಾನಿ(58) ರವರು ರಘುಸನ್ ಟೈಲ್ಸ್‌  ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು. ದಿನಾಂಕ 21/02/2022 ರಂದು ಬೆಳಿಗ್ಗೆ 12:00 ಗಂಟೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಇದ್ದ ಎದೆ ನೋವು ಹೆಚ್ಚಾದ ಕಾರಣ ಕಾರ್ಖಾನೆಯ ಕೆಲಸಗಾರರು ಚಿಕಿತ್ಸೆ ಬಗ್ಗೆ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಕುಂದಾಪುರ ಕುಂದಾಪುರ ಸರಕಾರಿ ಆಸ್ಪತ್ರೆಗೆ ಪಿರ್ಯಾದಿದಾರರು ಕರೆದುಕೊಂಡು ಬಂದಿದ್ದು,ಅಲ್ಲಿ ಪರೀಕ್ಷಿಸಿದ ವೈಧ್ಯರು 14:10 ಗಂಟೆಗೆ ಭವಾನಿ ಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಕೃಷ್ಣ ಬಂಗೇರ (36), ತಂದೆ: ನರಸಿಂಹ ತಿಂಗಳಾಯ, ವಾಸ: ಕೋಡಿ ಹೊಸ ಬೆಂಗ್ರೆ  ಕೋಡಿ ಕನ್ಯಾನ ಗ್ರಾಮ ಬ್ರಹ್ಮಾವರ ತಾಲೂಕು ಇವರ ಪರಿಚಯದ ಮಂಜುನಾಥ ಖಾರ್ವಿ (45) ರವರು ಸಾಂಪ್ರದಾಯಿಕ ನಾಡ ದೋಣಿಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದು, ಪ್ರತಿದಿನ ಸೀತಾನದಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು  ಎಂದಿನಂತೆ ದಿನಾಂಕ 21/02/2022 ರಂದು ಬೆಳಿಗ್ಗೆ ಮೀನುಗಾರಿಕೆಗೆಂದು  ದೋಣಿಯಲ್ಲಿ ಸೀತಾನದಿಯಲ್ಲಿ  ಮೀನುಗಾರಿಕೆ ಕೆಲಸ ಮಾಡಿಕೊಂಡಿರುವಾಗ  ಆಕಸ್ಮಿಕವಾಗಿ ಕಾಲು ಜ್ಯಾರಿ  ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ರಮೇಶ್ ಕರ್ಕೇರಾ(52), ತಂದೆ: ಶೀನಾ ಮರಕಾಲ, ವಾಸ: ಸಂಗೀತ ನಿಲಯ, ಪೊಲೀಸ್ ವಸತಿ ಗೃಹಬಳಿ,  ಅಂಜಾರು ಗ್ರಾಮ ಉಡುಪಿ ತಾಲೂಕು ಇವರ ಮಗಳು ಸಂಗೀತಾ(28) ಎಂಬುವವರು 2 ವರ್ಷದ ಹಿಂದೆ ಪಾಡಿಗಾರದ ದಿನೇಶ್ ಎಂಬುವವರ ಜೊತೆ ಮದುವೆಯಾಗಿ ಪ್ರಸ್ತುತ  9 ತಿಂಗಳ ಹೆಣ್ಣು ಮಗಳು ಇರುತ್ತಾಳೆ. ಪಿರ್ಯಾದಿದಾರರ ಮಗಳು ಸಂಗೀತಾ ಹಿಂದಿನಿಂದಲೂ ಸಿಡುಕು ಸ್ವಾಭಾವದವಳಾಗಿದ್ದು  ಮಾತನಾಡುವಾಗ ಒಮ್ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದವರು ಹಾಗೂ ಒಮ್ಮೊಮ್ಮೆ ಮಂಕಾಗಿ ಇರುತ್ತಿದ್ದು ಈ ಹಿಂದೆ ಮದುವೆಗೂ ಮೊದಲು ಒಮ್ಮೆ ಅತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ. ದಿನಾಂಕ 21/02/2022 ರಂದು ಮಧ್ಯಾಹ್ನ  3:00 ಗಂಟೆಗೆ ಪಿರ್ಯಾದಿದಾರರ ಹೆಂಡತಿ  ತೋಟಕ್ಕೆ ಹೋಗಿ ವಾಪಾಸು 3:30 ಗಂಟೆಗೆ ಮನೆಗೆ ಬಂದಾಗ  ಮನೆಯ  ಕೋಣೆಯ ಒಳಗಡೆಯಿಂದ ಚಿಲಕ ಹಾಕಿದ್ದು  ಮಗು ಅಳುವ ಶಬ್ದ ಕೇಳಿ ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದು   ಬಾಗಿಲು ಚಿಲಕ ಒಡೆದು ನೋಡಲಾಗಿ ಸಂಗೀತಾ ಮನೆಯ ಸೀಟು ಮಾಡಿನ ಕಬ್ಬಿಣದ ಪಟ್ಟಿಗೆ ಚೂಡಿದಾರ ಶಾಲನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಕಿಸಾನ್ ಕುಮಾರ್ (21), ತಂದೆ: ದಿ. ಕೆ. ಕುಮಾರ್, ವಾಸ:ಕುಕ್ಕುದಕಟ್ಟೆ,  ಕಾಜರಗುತ್ತು ರಸ್ತೆ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು  ಇವರ ತಮ್ಮ ಜಿಸಾನ್ ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10 ನೇ ತರಗತಿ  ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಆತನು ಈ ಮೊದಲಿನಿಂದಲೂ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಒಬ್ಬಂಟಿಯಾಗಿ ಇರುತ್ತಿದ್ದನು. ಎಷ್ಟು ಬೇಕು ಅಷ್ಟೆ ಮಾತನಾಡುತ್ತಿದ್ದನು. ಕಳೆದ ವಾರ ಶಾಲೆಗೆ ಸರಿಯಾಗಿ ಹೋಗದೇ ಇದ್ದು, ಶನಿವಾರ ಮಾತ್ರ ಶಾಲೆಗೆ ಹೋಗಿರುತ್ತಾನೆ. ದಿನಾಂಕ 21/02/2022 ರಂದು ಆತನಿಗೆ ಪರೀಕ್ಷೆ ಇದ್ದು, ಆ ಪರೀಕ್ಷೆಗೆ ಹೊಗದೇ ಇದ್ದ ಬಗ್ಗೆ ತಾಯಿ ಆಕ್ಷೇಪ ವ್ಯಕ್ತ ಪಡಿಸಿರುತ್ತಾರೆ. ಪಿರ್ಯಾದಿದಾರರ ತಾಯಿ ಬೆಳಿಗ್ಗೆ 9:15 ಗಂಟೆಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಜಿಸಾನ್ ಮನೆಯಲ್ಲಿಯೇ ಇದ್ದು, ಸಂಜೆ 6:15 ಗಂಟೆಗೆ ಅವರು ಕೆಲಸ ಮುಗಿಸಿ ಮನೆಗೆ ಬಂದ ಸಮಯದಲ್ಲಿ ಮನೆಯ ಎದುರು ಬಾಗಿಲಿನ ಚಿಲಕ ಹಾಕಿದ್ದು, ಹಿಂದಿನ ಬಾಗಿಲಿನಿಂದ ಒಳಗೆ ಹೋಗಿ ನೋಡಲಾಗಿ ಜಿಸಾನ್ ಮನೆಯ ಒಳಗಿನ ಮಲಗುವ ಕೋಣೆಯಲ್ಲಿ ಮುಚ್ಚಿಗೆಯ ಜಂತಿಗೆ ಸೀರೆಯಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆತನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪರೀಕ್ಷೆಯ ಭಯದಿಂದಲೋ ಅಥವಾ ತನ್ನ ಯಾವುದೋ ವ್ಯೆಯಕ್ತಿಕ ಕಾರಣದಿಂದಲೋ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 22-02-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080