ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಫಿರ್ಯಾದಿ  ಕೋದಂಡರಾಮ ಭಟ್ (36 ವರ್ಷ),ತಂದೆ: ಧನಂಜಯ ಭಟ್,ವಾಸ: ಸೌಡ ಅಂಚೆ, ಹಾರ್ದಳ್ಳಿ-ಮಂಡಳ್ಳಿ, ಕುಂದಾಪುರ ಇವರು ದಿನಾಂಕ: 21.02.2022 ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ತನ್ನ  ಗ್ರೇ ಬಣ್ಣದ ನಂ: KA 20 MC 4718 ನೇ ಟಾಟಾ ನೆಕ್ಸಾನ್ ಕಾರ್‌ ನಲ್ಲಿ ಕೋಟೇಶ್ವರ-ಹಾಲಾಡಿ ರಸ್ತೆಯಲ್ಲಿ ಬರುತ್ತಿರುವಾಗ, ಹುಣ್ಸೆಮಕ್ಕಿ ಪೇಟೆಯಿಂದ ಸುಮಾರು ಒಂದು ಕೀ.ಮೀ. ಮುಂದೆ ಎದುರುಗಡೆಯಿಂದ ಅಂದರೆ ಹಾಲಾಡಿ ಕಡೆಯಿಂದ ನಂ: KA 20 U 9538 ನೇ ಅಪಾಚಿ ಬೈಕ್ ಅನ್ನು ಅದರ ಸವಾರನು ಹಿಂಬದಿ ಸಹಸವಾರನನ್ನು ಕುಳ್ಳಿರಿಸಿಕೊಂಡು ರಸ್ತೆಯಲ್ಲಿ ಆತನ ಮುಂದೆ ಸಾಗುತ್ತಿದ್ದ ನಂ: KA 18 C 4512 ನೇ ಬಿಳಿ ಬಣ್ಣದ ಟೆಂಪೋ ಟ್ರಾವೆಲರ್ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗುವ ಭರದಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಸವಾರಿ ಮಾಡಿಕೊಂಡು ಬಂದು ಟೆಂಪೋ ಟ್ರಾವೆಲರ್ ವಾಹನದ ಹಿಂಬದಿ ತಾಗಿಸಿ ರಸ್ತೆಯ ವಿರುದ್ದ ಪಾರ್ಶ್ವಕ್ಕೆ ಬಂದು ಫಿರ್ಯಾದುದಾರರ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಪರಿಣಾಮ ಬೈಕ್ ಸವಾರನ ತಲೆಯ ಹಿಂಬದಿ ತೀವ್ರ ಹಾಗೂ ಇತರೆಡೆಗಳಲ್ಲಿ ಸಾದಾ ಸ್ವರೂಪದ ರಕ್ತಗಾಯವಾಗಿದ್ದು, ಬೈಕ್‌ನ ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಅಪಘಾತದಲ್ಲಿ ಗಾಯಗೊಂಡ ಸವಾರ ಹಾಗೂ ಸಹಸವಾರನನ್ನು ಚಿಕಿತ್ಸೆಯ ಬಗ್ಗೆ ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತದಲ್ಲಿ ಫಿರ್ಯಾದಿದಾರರ ಕಾರಿನ ಬಲಬದಿ ಮುಂದಿನ ಟಯರ್ ಬಸ್ಟ್ ಆಗಿದ್ದು ಅಲ್ಲದೇ ಕಾರಿನ ಬಂಪರ್, ಹೆಡ್ ಲೈಟ್ ಹಾಗೂ ಬಾನೆಟ್ ಜಖಂಗೊಂಡಿರುತ್ತದೆ. ಹಾಗೂ ಅಪಘಾತಪಡಿಸಿದ ಬೈಕಿನ ಮುಂದಿನ ಡೂಮ್ ಮತ್ತು ಹ್ಯಾಂಡಲ್ ಬಾರ್ ಹಾಗೂ ಬಲಬದಿ ಗಾರ್ಡ್‌ಜಖಂ ಆಗಿರುತ್ತದೆ. ಈ ಅಪಘಾತಕ್ಕೆ ನಂ: KA 20 U 9538 ನೇ ಅಪಾಚಿ ಬೈಕ್ ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಬೈಕ್ ಸವಾರಿಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ   21/2022  ಕಲಂ: 279, 337, 338 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಕೋಟ:  ಪಿರ್ಯಾದಿ ಸೂರ್ಯ ಹೆಚ್ ಸಿ 125 ಕೋಟ ಪೊಲೀಸ್‌ ಠಾಣೆ ಇವರು ದಿನಾಂಕ 21/02/2022 ರಂದು ಪ್ರೋ.ಪಿಎಸ್ಐ ಮಹಾಂತೇಶ್ ಜಾಬಗೌಡ ರವರೊಂದಿಗೆ ಇಲಾಖಾ ಸಮವಸ್ತ್ರದಲ್ಲಿ ರಾತ್ರಿ ಸಮಯ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದವರು ಸೈಬ್ರಕಟ್ಟೆ ಚೆಕ್ ಪೋಸ್ಟ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ ಸುಮಾರು 23:35 ಗಂಟೆಗೆ ಮಂದಾರ್ತಿ ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ KA20EP2157 ನಂಬ್ರದ ಮೋಟಾರು ಸೈಕಲ್ ಸವಾರನನ್ನು ತಪಾಸಣೆ ಮಾಡುವರೇ ಸದ್ರಿ ಮೋಟಾರ್ ಸೈಕಲ್ ಸವಾರನಿಗೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ  ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಅನ್ನು ನಿಧಾನಿಸದೇ ಇನ್ನೂ ಹೆಚ್ಚಿನ ಎಕ್ಸಲೈಟರ್ ನೊಂದಿಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ಮೈಮೇಲೆ ಬಂದಂತೆ ಚಲಾಯಿಸಿ, ಕರ್ತವ್ಯದಲ್ಲಿದ್ದವರ  ದೈಹಿಕ ಸುರಕ್ಷತೆಗೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿದ್ದೂ, ಆಗ ಸದ್ರಿ ಬೈಕಿನಲ್ಲಿ ಒರ್ವ ಸವಾರ ಮತ್ತು ಮತ್ತೋರ್ವ ಸಹಸವಾರ ಇರುವುದು ಕಂಡು ಬಂದಿದ್ದು, ಅವರಿಬ್ಬರೂ ಜೋರಾಗಿ ಕರ್ತವ್ಯದಲ್ಲಿದ್ದವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೋಟ ಮೂರುಕೈ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  22/2022  ಕಲಂ: 279.336 ,504 rw 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಹೆಂಗಸು ಕಾಣೆ:

  • ಮಲ್ಪೆ: ಪಿರ್ಯಾದಿ ಧರ್ಮಪಾಲ ವರ್ಮ( 48 ) ತಂದೆ:ದಿ/ ಚಲ್ಲೂ ರಾಮ್ ವಾಸ: 5-27 ಅಂಬಾರಸ್ತೆ  ಗೋವಿಂದ  ನಿಲಯ  ಕಿದಿಯೂರು ಇವರ  ಮಗಳಾದ ಕುಮಾರಿ ಏಕತಾ  ವರ್ಮಾ ಪ್ರಾಯ 23 ವರ್ಷ ಇವಳು  ಉಡುಪಿಯ  ಜಿ.ಶಂಕರ್ ಕಾಲೇಜಿನಲ್ಲಿ  ವಿಧ್ಯಾಭ್ಯಾಸ  ಮುಗಿಸಿ ಮನೆಯಲ್ಲಿಯೇ  ಇದ್ದು ನಿನ್ನೆ ದಿನ ದಿನಾಂಕ 21-02-2022  ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರ  ಮಗಳು ಕುಮಾರಿ ಏಕತಾ  ವರ್ಮಾ  ಕಿದಿಯೂರಿನ ಮನೆಯಿಂದ  ಪಿರ್ಯಾದಿದಾರರ  ಮಗನ  ಮಣಿಪಾಲದಲ್ಲಿರುವ  ಕ್ಯಾಂಟೀನ್ ಗೆ  ಹೋದವಳು ಮಣಿಪಾಲಕ್ಕೆ ಹೋಗದೆ  ಮನೆಗೂ  ಬಾರದೆ  ಇರುವುದಾಗಿ ಪಿರ್ಯಾದಿದಾರರ  ಹೆಂಡತಿ  ಮಧ್ಯಾಹ್ನ  03:00 ಗಂಟೆಗೆ ವಿಚಾರ  ತಿಳಿಸಿದ್ದು ಪಿರ್ಯಾದಿದಾರರು ಕೂಡಲೆ ಮಣಿಪಾಲದಲ್ಲಿರುವ ಮಗನ  ಕ್ಯಾಂಟೀನ್ ಗೆ  ಹೋಗಿ  ವಿಚಾರಿಸಿದ್ದು ಬಂದಿರುವುದಿಲ್ಲವಾಗಿ  ತಿಳಿಸಿದ್ದು  ಪಿರ್ಯಾದಿದಾರರು ತಮ್ಮಮಗಳನ್ನು ಇಂದ್ರಾಳಿ , ಉಡುಪಿ ಮಣಿಪಾಲ ಕಡೆಗಳಲ್ಲಿ ಹುಡುಕಾಡಿದ್ದು  ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಮಲ್ಪೆ ಪೊಲೀಸ ಠಾಣಾ ಅಪರಾಧ ಕ್ರಮಾಂಕ  21/2022 ಕಲಂ:ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 22-02-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080