ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ವಸಂತ ಶೆಟ್ಟಿ (53), ತಂದೆ: ಬೊಬ್ಬಯ್ಯ ಶೆಟ್ಟಿ, ವಾಸ: ಬಡ ಹವಳ ಹಳ್ಳಾಡಿ ಹರ್ಕಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 21/02/2021 ರಂದು ತನ್ನ ಸಂಬಂಧಿಕರ ಮದುವೆಗೆಂದು ತೆಕ್ಕಟ್ಟೆಯ ಗ್ರೇಸ್ ಅಡಿಟೋರಿಯಂ ಹಾಲಿಗೆ ಬಂದಿದ್ದು, ಮದುವೆ ಕಾರ್ಯಕ್ರಮ ಮುಗಿಸಿ ಮದುವೆ  ಹಾಲ್ ನ  ಹೊರಗೆ ನಿಂತು ಕೊಂಡಿರುವಾಗ ಗ್ರೇಸ್ ಅಡಿಟೋರಿಯಂ ಹಾಲ್ ನ ಎದುರು ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಪೂರ್ವದ ಅಂಚಿನ ಬಳಿ ರಸ್ತೆ ದಾಟಲು ಒಬ್ಬ ವ್ಯಕ್ತಿ ನಿಂತು ಕೊಂಡಿರುವಾಗ ಮದ್ಯಾಹ್ನ 2:15 ಗಂಟೆಗೆ ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-19-P-431 ನೆ ನಂಬ್ರದ ಸ್ಯಾಂಟ್ರೋ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗ್ರೇಸ್ ಅಡಿಟೋರಿಯಂ ಹಾಲ್ ನ ಎದುರು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಗುದ್ದಿದ ಪರಿಣಾಮ ವ್ಯಕ್ತಿಯು ರಸ್ತೆಗೆ ಬಿದ್ದಿದ್ದು, ವ್ಯಕ್ತಿಯ ತಲೆ ಹಾಗೂ ಮೂಗಿನಲ್ಲಿ ರಕ್ತ ಬರುತ್ತಿದ್ದು  ಮಾತನಾಡುವ ಸ್ಥಿತಿಯಲ್ಲಿ  ಇರಲಿಲ್ಲ. ಕೂಡಲೇ ಪಿರ್ಯಾದಿದಾರರು ಹಾಗೂ ಅವರ ಪರಿಚಯದ ವಿಜಯ ರವರು ಉಚಚರಿಸಿ ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತದಿಂದ ಗಾಯಗೊಂಡ ವ್ಯಕ್ತಿಯ ಹೆಸರು ಶೇಖರ ಶೆಟ್ಟಿ ಎಂಬುದಾಗಿಯೂ, ಢಿಕ್ಕಿ ಹೊಡೆದ KA-19-P-431 ನೆ ನಂಬ್ರದ ಸ್ಯಾಂಟ್ರೋ ಕಾರು ಚಾಲಕ ಗಣೇಶ ಎಂಬುವುದಾಗಿ ತಿಳಿದಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: 21/02/2021 ರಂದು 17:00 ಗಂಟೆಗೆ ಪಿರ್ಯಾದಿದಾರರಾದ ರೋಹಿತ್ ಬೈಲೂರು (40), ತಂದೆ: ರಾಘವೇಂದ್ರ ಭಟ್, ವಾಸ: 5-78-ಎ8, ರಜತಾದ್ರಿ 76 ಬಡಗುಬೆಟ್ಟು ಗ್ರಾಮ ಉಡುಪಿ ಇವರು ತನ್ನ  ಹೊಸ ಟಿ.ವಿ.ಎಸ್ ಜುಪಿಟರ್ ಸ್ಕೂಟರಿನಲ್ಲಿ ಹಿಂಬದಿ ತನ್ನ ತಂದೆ ಬಿ.ರಾಘವೇಂದ್ರ ಭಟ್ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಮನೆಯಿಂದ ಉಡುಪಿ ಬಸ್ ನಿಲ್ದಾಣಕ್ಕೆ ಸವಾರಿ  ಮಾಡಿಕೊಂಡು ಬರುತ್ತಿದ್ದು ರಾತ್ರಿ 8:20 ಗಂಟೆಗೆ ಚಿತ್ತರಂಜನ್ ಸರ್ಕಲ್ ಕಡೆಯಿಂದ ಸಂಸ್ಕೃತ ಕಾಲೇಜು ಜಂಕ್ಷನ್ ಕಡೆಗೆ ಸವಾರಿ ಮಾಡುತ್ತಿದ್ದು ಚಿತ್ತರಂಜನ್ ಸರ್ಕಲ್ ಬಳಿ ತಲುಪುವಾಗ ಸಂಸ್ಕೃತ ಕಾಲೇಜ್ ಜಂಕ್ಷನ್ ಕಡೆಯಿಂದ ಚಿತ್ತರಂಜನ್ ಸರ್ಕಲ್ ಕಡೆಗೆ KA-20-P-4961 ನೇ ಕಾರು ಚಾಲಕ ರಾಘವೇಂದ್ರ ಆಚಾರ್ಯ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೂಟರ್ ಸವಾರರಾದ ಪಿರ್ಯಾದಿದಾರರಿಗೆ ಬಲಕಾಲಿಗೆ ತರಚಿದ ಗಾಯವಾಗಿದ್ದು, ಸಹಸವಾರರಾದ ಪಿರ್ಯಾದಿದಾರರ ತಂದೆಗೆ ಬಲಕಾಲಿಗೆ ಬಲಕಾಲಿಗೆ ಗಾಯವಾಗಿದ್ದು, ಸೊಂಟದಲ್ಲಿ ಮೂಳೆ ಮುರಿತ ಉಂಟಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021  ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ದಿನಾಂಕ 21/02/2021 ರಂದು KA-20-AB-0916 ಆಟೋ ರಿಕ್ಷಾದಲ್ಲಿ ಬಾರಕೂರಿನಲ್ಲಿ ಸುರ್ಗಿಕಟ್ಟೆ ನಿವಾಸಿಗಳಾದ ವಾಗ್ದೇವಿ, ಶಾರದವರನ್ ನುಕುಳ್ಳಿರಿಸಿಕೊಂಡು ಬಾರಕೂರು ಮಂದಾರ್ತಿ ರಸ್ತೆಯಲ್ಲಿ ಮಂದರ್ತಿ ಕಡೆಗೆ ಬರುತ್ತಾ ಹೆಗ್ಗುಂಜೆ ಗ್ರಾಮದ ಮಂದರ್ತಿ ಚಟ್ಟೆರಿಕಲ್‌‌ಎಂಬಲ್ಲಿರುವ ತಿರುವಿನಲ್ಲಿ ಹೋಗುವಾಗ ಪಿರ್ಯಾದಿದಾರರಾದ ಶಂಭು ಮರಕಾಲ (48), ತಂದೆ: ಕೂಸ ಮರಕಾಲ, ವಾಸ: ಕಲ್ಲು ದೇವಸ್ದಾನದ ಬಳಿ ಮಂದರತಿ ನಿಲಯ  ಸುರ್ಗಿಕಟ್ಟೆ , ಹೆಗ್ಗುಂಜೆ ಗ್ರಾಮ , ಮಂದರ್ತಿ ಬ್ರಹ್ಮಾವರ ತಾಲೂಕು ಇವರ ಎದುರಿನಿಂದ ಮಂದರ್ತಿ ಕಡೆಯಿಂದ ಬಾರಕೂರು ಕಡೆಗೆ KA-20-EW-4808 FZ ಮೋಟಾರ ಸೈಕಲ್‌ ‌ಸವಾರ ಅಕ್ಷಯ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ತೀರಾ ಬಲ ಬಾಗಕ್ಕೆ ಸವಾರಿ ಮಾಡಿಕೊಂಡು  ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದ  ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಮಧ್ಯಾಹ್ನ 2:15 ಗಂಟೆಗೆ  ಡಿಕ್ಕಿ  ಹೊಡೆದ ಪರಿಣಾಮ  ರಿಕ್ಷಾದ ಬಲಭಾಗದ ಮುಂದಿನ ಗ್ಲಾಸ್‌ ‌ಸ್ಟೇರಿಂಗ್‌ ಪ್ಲಾಟ್‌ ಫಾರಂ ಜಖಂಗೊಂಡು ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಶಾರದ ಅವರಿಗೆ  ಬಲ ಕೈ ಹಸ್ತದ ಮೇಲ್ಬಾಗಕ್ಕೆ ರಕ್ತ ಗಾಯ ಪಿರ್ಯಾದಿದಾರರಿಗೆ ಹಣೆಯ ಬಳಿ  ತರಚಿದ ಗಾಯ , ವಾಗ್ದೇವಿಯವರನ್ನು ಅಲ್ಲಿ ಸೇರಿದ ಕೀಶೋರ್‌ ಶೆಟ್ಟಿ  ಹಾಗೂ ಇತರರು  ನಮ್ಮನ್ನು ಉಪಚರಿಸಿದ್ದು ಮೋಟಾರ ಸೈಕಲ್‌ ‌ಸವಾರ ಅಕ್ಷಯ ರವರಿಗೆ  ಎರಡು ಕೈ ಬೆರಳುಗಳ ಬಳಿ  ರಕ್ತಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರನ್ನು ಕೀಶೋರ ಶೆಟ್ಟಿಯವರ ಕಾರಿನಲ್ಲಿ ಶಾರದ, ವಾಗ್ದೇವಿ ಮತ್ತು ಅಕ್ಷಯನನ್ನು 108 ಅಂಬುಲೈನ್ಸ್‌ನಲ್ಲಿ ಚಿಕಿತ್ಸೆ ಬಗ್ಗೆ ಮಹೇಶ ಅಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು  ಪಿರ್ಯಾದಿದಾರರನ್ನು ವಾಗ್ದೇವಿಯವರನ್ನು  ಹೊರರೋಗಿಯಾಗಿ ಚಿಕಿತ್ಸೆಯನ್ನು  ನೀಡಿದ್ದು  ಅಕ್ಷಯ ಹಾಗೂ ಶಾರದವರನ್ನು ಒಳ ರೋಗಿಯಾಗಿ  ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಕಿಶೋರ್ ಕೋಟ್ಯಾನ್ (42), ತಂದೆ: ದಿ. ನಾರಾಯಣ ಪುತ್ರನ್, ವಾಸ: ಸರಸು ನಿಲಯ ಲಕ್ಷ್ಮೀನಾರಾಯಣ ಭಜನಾ ಮಂದಿರದ ಹತ್ತಿರ ಪೊಲಿಪು ಪಡು ಗ್ರಾಮ ಕಾಪು ಇವರ ಅಣ್ಣ ಮನೋಜ್ (45) ಎಂಬುವವರು ದಿನಾಂಕ 20/02/2021 ರಂದು ಮಧ್ಯಾಹ್ನ 2:45 ಗಂಟೆಗೆ ಮೀನುಗಾರಿಕೆ ಬಗ್ಗೆ ಟ್ಯೂಬ್‌‌ನಲ್ಲಿ ಬಲೆ ಕಟ್ಟಿಕೊಂಡು ಕಾಪು ಲೈಟ್‌‌ ಹೌಸ್‌ನ ಹತ್ತಿರ ಸಮುದ್ರಕ್ಕೆ ಇಳಿದವರು ವಾಪಾಸು ಬಾರದೇ ಇದ್ದು, ದಿನಾಂಕ 21/02/2021 ರಂದು ಮಧ್ಯಾಹ್ನ 1:15 ಗಂಟೆ ಸಮಯಕ್ಕೆ  ಪೊಲಿಪು ಪಡು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ಬಳಿ ಸಮುದ್ರ ತೀರದಲ್ಲಿ ಒಂದು ಮೃತ ದೇಹ ನೀರಿನಲ್ಲಿ ತೇಲಿ ಬಂದಿದ್ದು ಅದನ್ನು ಪಿರ್ಯಾದಿದಾರರು ಹಾಗೂ ಇತರರು ಮೇಲಕ್ಕೆತ್ತಿ ನೋಡಿದಾಗ ಪಿರ್ಯಾದಿದಾರರ ಅಣ್ಣ ಮನೋಜ್‌ರವರ ಮೃತದೇಹವಾಗಿರುತ್ತದೆ. ಮೃತ ಮನೋಜ್ ರವರು ದಿನಾಂಕ 20/02/2021 ರಂದು ಮಧ್ಯಾಹ್ನ 2:45 ರಂದು  ಟ್ಯೂಬ್‌‌ನ ಸಹಾಯದಿಂದ ಬಲೆ ಹಾಕಿ ಮೀನುಗಾರಿಕೆ ಮಾಡಲು ಹೋದವರು  ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 21/02/2021 ರಂದು ಹೊಸಾಡು ಗ್ರಾಮದ ಮೋವಾಡಿ ESSAR ಪೆಟ್ರೋಲ್ ಬಂಕ್  ಹಿಂಭಾಗ ಗೇರು ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆ  ಭೀಮಾಶಂಕರ ಸಿನ್ನೂರ ಸಂಗಣ್ಣ,  ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ  1. ಖಾದರ್,  2. ಮುಜೀಬ್ ರೆಹೆಮಾನ್, 3. ಹನೀಫ್, 4. ರಮೇಶ, 5.  ರಮೇಶ ಬಿನ್ ಹೆರಿಯಣ್ಣ, 6. ಅರುಣ,  7. ರವಿ ಇವರನ್ನು ದಸ್ತಗಿರಿ ಮಾಡಿ ಇಸ್ಪಿಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 4,930/- ರೂಪಾಯಿ,  ಇಸ್ಪೀಟು ಎಲೆ-52,  ಬೆಳಕಿಗೆ ಉಪಯೋಗಿಸಿದ  ಕ್ಯಾಂಡಲ್-2, ಹಳೆಯ ನ್ಯೂಸ್ ಪೇಪರ್ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: 87 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮೋಹನ ಪೂಜಾರಿ (53), ತಂದೆ: ಜಟ್ಟ ಪೂಜಾರಿ, ವಾಸ: ಕೆಳಹಿತ್ಲು ಮನೆ ತಾರಾಪತಿ ಅಂಚೆ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 20/02/2021 ರಂದು ಸಂಜೆ 6:00 ಗಂಟೆಗೆ ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಎದುರುಗಡೆ ತಮ್ಮ ಕೇಶವನೊಂದಿಗೆ ನಿಂತುಕೊಂಡಿರುವಾಗ ಶೇಖರ ಪೂಜಾರಿ, ಜನಾರ್ದನಾ ಮೊಗವೀರ ಹಾಗೂ ಇತರರು ಅಲ್ಲಿಗೆ ಬಂದು  ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ, ಶೇಖರ ಪೂಜಾರಿಯು ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಬೆನ್ನಿಗೆ ಬಲಕೈಗೆ ಹೊಡೆದಿದ್ದು, ಆ ಸಮಯ ತಪ್ಪಿಸಲು ಬಂದ ಪಿರ್ಯಾದಿದಾರರ ತಮ್ಮನಿಗೆ ಜನಾರ್ಧನಾ ಹಾಗೂ ಇತರರು ದೂಡಿ ಹಾಕಿ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಆ ಸಮಯ ಪಿರ್ಯಾದಿದಾರರ ಸ್ನೇಹಿತರು ಬಂದು ಗಲಾಟೆಯನ್ನು ತಪ್ಪಿಸಿರುತ್ತಾರೆ. ಪಿರ್ಯಾದಿದಾರರನ್ನು ಉದ್ದೇಶಿಸಿ ಶೇಖರ ಪೂಜಾರಿ ಹಾಗೂ ಇತರರು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಜರ್ನಾರ್ಧನ  ಮೊಗವೀರ (28), ತಂದೆ: ವೆಂಕಟೇಶ  ಮೊಗವೀರ, ವಾಸ: ಆಶ್ರಯ ಕಾಲೋನಿ, ಹೆರಂಜಾಲು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 20/02/2021 ರಂದು ಅವರ ಸ್ನೇಹಿತರಾದ ಶೇಖರ ಪೂಜಾರಿಯವರೊಂದಿಗೆ ಅವರ ಕಾರಿನಲ್ಲಿ ಸಂಜೆ 6:00 ಗಂಟೆಗೆ ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಬಳಿ ಹೋಗುತ್ತಿರುವಾಗ ಸೊಸೈಟಿಯ ಬಳಿ ನಿಂತಿದ್ದ ಮೋಹನ ಪೂಜಾರಿ ಹಾಗೂ ಕೇಶವ ಪೂಜಾರಿಯವರು ಪಿರ್ಯಾದಿದಾರರನ್ನು ಕೈ ಸನ್ನೆ ಮಾಡಿ ಕರೆದಿದ್ದು, ಆಗ ಪಿರ್ಯಾದಿದಾರರು ಅಲ್ಲಿಗೆ ಹೋದಾಗ ಮೋಹನ ಪೂಜಾರಿರವರು ಪಿರ್ಯಾದಿದಾರರ ಅಂಗಿಯ ಕಾಲರನ್ನು ಹಿಡಿದೆಳೆದು ಅವಾಚ್ಯವಾಗಿ ಬೈದು ಒಂದು ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ಎಡಗೈ ರಟ್ಟೆಗೆ, ಬಲಗಾಲಿಗೆ ಹೊಡೆದಿದ್ದು, ಕೈಯಿಂದ ಕೆನ್ನೆಗೆ ಹೊಡೆದು ಕುತ್ತಿಗೆಯಲ್ಲಿದ್ದ ಚಿನ್ನದ ಚೈನನ್ನು ಹರಿದು, ದೂಡಿ ಹಾಕಿದರು. ಪಿರ್ಯಾದಿದಾರರು ನೆಲಕ್ಕೆ ಬಿದ್ದಾಗ ಕೇಶವ ಪೂಜಾರಿಯವರು ಉದ್ದೇಶ ಪೂರ್ವಕವಾಗಿ ಆತನು ಧರಿಸಿದ ಚಪ್ಪಲಿಯಿಂದ ಸೊಂಟಕ್ಕೆ ತುಳಿದಿರುತ್ತಾನೆ.  ಅವರೊಂದಿಗಿದ್ದ ಇತರರು ಕೈಯಿಂದ ಹೊಡೆದಿರುತ್ತಾರೆ. ಗಲಾಟೆಯನ್ನು ತಪ್ಪಿಸಲು ಅಲ್ಲಿಗೆ ಬಂದ ರಾಘವೇಂದ್ರ ಹಾಗೂ ಶೇಖರ ಪೂಜಾರಿಯವರನ್ನು ಕೈಯಿಂದ ದೂಡಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ: 323, 324, 327, 355, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-02-2021 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080