ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 21.01.2023 ರಂದು ಪ್ರಭಾಕರ ರವರು ತನ್ನ ಬಾಬ್ತು ಬಾಡಿಗೆ ಆಟೋ ರಿಕ್ಷಾವನ್ನು ಉಡುಪಿ-ಕುಂದಾಪುರ ರಾಹೆ 66 ರಲ್ಲಿ     ಹೇರೂರುನಿಂದ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೈಕಾಡಿ ಗ್ರಾಮದ ರುಡ್‌ ಸೆಟ್‌ ಕ್ರಾಸ್ ಸಮೀಪ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ತಲುಪುವಾಗ  ಸಮಯ  ಮಧ್ಯಾಹ್ನ 2:15 ಗಂಟೆಯ ಸುಮಾರಿಗೆ ಅವರ ಮುಂಭಾಗದಲ್ಲಿ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಆರೋಪಿ ಮೋಹನ ಉಡುಪ ರವರು ಅವರ ಬಾಬ್ತು KA.20.MB.9583  ನೇ Swift Desire Car ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ ರಾ.ಹೆ 66 ರ ಪಕ್ಕದಲ್ಲಿದ್ದ ಹಣ್ಣಿನ ಅಂಗಡಿಯ ಬಳಿ ನಿಲ್ಲಿಸಲು ಯಾವುದೇ ಸೂಚನೆ ನೀಡದೇ ಅವರ ಎಡಭಾಗಕ್ಕೆ ಕಾರನ್ನು ಚಲಾಯಿಸಿ ರಾ.ಹೆ 66 ರ ಎಡಭಾಗದಲ್ಲಿ ಬ್ರಹ್ಮಾವರ ಕಡೆಗೆ ಸುಧಾಕರ ದೇವಾಡಿಗ ರವರು ಚಲಾಯಿಸುತ್ತಿದ್ದ KA.20.AB.6328 ನೇ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ.  ಈ ಅಪಘಾತದ ಪರಿಣಾಮ ಸದ್ರಿ ಆಟೋ ರಿಕ್ಷಾ ಬಲ ಮಗ್ಗುಲಾಗಿ ರಸ್ತೆಗೆ ಬಿದ್ದು, ರಿಕ್ಷಾ ಚಾಲಕ  ಸುಧಾಕರ ದೇವಾಡಿಗ ರವರ ಎಡಕಾಲಿನ ಕಿರು ಬೇರಳಿಗೆ ತೀವ್ರ ಒಳ ಜಖಂ ಉಂಟಾಗಿ ಅದರ ಪಕ್ಕದ ಎರಡು ಬೆರಳುಗಳಿಗೆ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 09/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ  ನವೀನ್‌ ಕುಮಾರ್‌ ರವರ ಮಾವ ಶೇಖರ ಪೂಜಾರಿ ಯವರು ರಾತ್ರಿ ಸಮಯ ಆಲೂರಿನಲ್ಲಿ ಟೈಲರಿಂಗ ಕೆಲಸ ಮುಗಿಸಿ ಆಲೂರಿನಿಂದ ತನ್ನ ಮನೆಯಾದ ಸಸಿಹಿತ್ಲು ಕಡೆಗೆ  ದಿನಾಂಕ: 21.01.2023 ರಂದು ಬೆಳಿಗಿನ ಜಾವ MH 06 AP 6719 ನೇ ಬೈಕ್‌ನಲ್ಲಿ ಹೊರಟು ಸಮಯ ಸುಮಾರು 03:00 ಗಂಟೆಗೆ  ಆಲೂರು ಗ್ರಾಮದ ಕಾಳಿಕಾಂಬ ನಗರದ ಜಂಕ್ಷನ್‌ ಬಳಿ  ಹೋಗುತ್ತಿರುವಾಗ ಎದುರಿನಿಂದ ಅಂದರೆ ಸಸಿಹಿತ್ಲು ಕಡೆಯಿಂದ ಆಲೂರು ಕಡೆಗೆ KA-02 P-2878 ನೇ ಕಾರಿನ  ಚಾಲಕ ವಿಜಯ್‌ ಗಾಣಿಗ  ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ತೀರಾ ಬಲಕ್ಕೆ ಬಂದು ಪಿರ್ಯಾದಿದಾರರ ಮಾವ ಶೇಖರ ಪೂಜಾರಿ ರವರು ಚಲಾಯಿಸುತ್ತಿರುವ ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್‌ ಸಮೇತ ಶೇಖರ ಪೂಜಾರಿ ಯವರು ರಸ್ತೆಗೆ ಬಿದ್ದು ಬಲಕಾಲಿನ ಮುಳೆ ಮುರಿತವಾಗಿ, ಕೈಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 08/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಬೈಂದೂರು: ಫಿರ್ಯಾದಿ ಹೆಚ್ .ಆರ್  ಅಭಿಷೇಕ್  ಇವರು ದಿನಾಂಕ 20/01/2023 ರಂದು ಸಂಜೆ 4:45 ಗಂಟೆಗೆ ಅವರ ತಂದೆಯ ಬಾಬ್ತು KA 47 X 2999 ನೇ ಮೋಟಾರು ಸೈಕಲ್ ನಲ್ಲಿ  ಸರ್ಪನಕಟ್ಟೆಯಿಂದ  ಬೆಳ್ತಂಗಡಿ ಕಡೆಗೆ ಹೊರಟಿದ್ದು  ರಾ.ಹೆ 66 ರ ಪೂರ್ವಬದಿಯ ರಸ್ತೆಯಲ್ಲಿ  ಸವಾರಿ ಮಾಡಿಕೊಂಡು ಹೋಗುತ್ತಾ  ಶಿರೂರು ಗ್ರಾಮದ ಕೆರೆಕಟ್ಟೆ ಬಳಿ  ತಲುಪಿದಾಗ ಫಿರ್ಯಾದುದಾರರ ಎದುರಿನಿಂದ ಶಿರೂರು ಕಡೆಯಿಂದ  ಭಟ್ಕಳ ಕಡೆಗೆ  KA 47 Q 7778 ನೇ ನಂಬ್ರದ KTM DUKE ಮೊಟಾರು ಸೈಕಲ್ ಸವಾರ ರಾಜೇಶ್ ನು ಆತನ ಬಾಬ್ತುಮೋಟಾರು ಸೈಕಲ್ ನಲ್ಲಿ ಮೋಹನ್ ರಾಜ್ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ ಏಕ ಮುಖ ಸಂಚಾರ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದುದಾರರ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ಸವಾರ ಹಾಗೂ  ಸಹ ಸವಾರ ಮೋಹನ್ ರಾಜ್ ಮೋಟಾರು ಸೈಕಲ್ ಸಮೇತ ರಸ್ತೆಗೆ  ಬಿದ್ದ ಅಪಘಾತದ ಪರಿಣಾಮ ಫಿರ್ಯಾದುದಾರರಿಗೆ ಎಡ ಕೈ ಮೂಳೆ ಮುರಿತ ಹಾಗೂ ಎಡ ಭುಜದಮೂಳೆ ತುಂಡಾಗಿದ್ದು , ಎಡ ಕಾಲಿನ ಮೊಣಗಂಟಿಗೆ ತರಚಿದ ರಕ್ತಗಾಯ ಉಂಟಾಗಿದ್ದು, ಆರೋಪಿ ಮೋಟಾರು ಸೈಕಲ್ ಸಹ ಸವಾರ ಮೋಹನ್ ರಾಜ್ ರವರಿಗೆ ಎಡ ಕೈ ಮೂಳೆ ಮುರಿತ ಹಾಗೂ ಆರೋಪಿ ರಾಜೇಶನಿಗೂ ಎಡ ಕೈ ಮತ್ತು ಎಡ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಸಾರ್ವಜನಿಕರು ಎತ್ತಿ ಉಪಚರಿಸಿ ಐ ಆರ್ ಬಿ ಅಂಬುಲೆನ್ಸ್ ನಲ್ಲಿ  ಚಿಕಿತ್ಸೆ  ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿ   ಪರೀಕ್ಷಿಸಿದ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ  ನೀಡಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಕುಂದಾಪುರಕ್ಕೆ ಹೋಗುವಂತೆ ಸೂಚಿಸಿದ ಮೇರೆಗೆ ಫಿರ್ಯಾದುದಾರರು ಕುಂದಾಪುರದ ವಿವೇಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ  ಆರೋಪಿ ರಾಜೇಶ್ ಹಾಗೂ ಆರೋಪಿ ಮೋಟಾರು ಸೈಕಲ್  ಸಹ ಸವಾರ ಮೋಹನ್ ರಾಜ್ ಕುಂದಾಪುರದ ನ್ಯೂ ಮೆಡಿಕಲ್ ಆಸ್ಪತ್ರೆಗೆ ಹೋದಲ್ಲಿ ರಾಜೇಶ್ ನಿಗೆ ಚಿಕಿತ್ಸೆ ನೀಡಿದ್ದು  ಮೋಹನ್ ರಾಜ್ ರವರನ್ನು  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 13/2023 ಕಲಂ:279, 338 ಐಪಿಸಿ & 218 R/w 177 IMV ACT ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಶಶಿಧರ ಆಚಾರ್‌ ಇವರು  ಮರದ ಕೆಲಸಮಾಡಿಕೊಂಡಿದ್ದು  ಜನಾರ್ಧನ ಆಚಾರಿ ಎಂಬವರು ಕೂಡಾ ಪಿರ್ಯಾದಿದಾರರ ಜೊತೆಯಲ್ಲಿ  ಮರದ ಕೆಲಸ ಮಾಡಿಕೊಂಡಿರುತ್ತಾರೆ. ಈ ದಿನ ದಿನಾಂಕ: 21.01.2023 ರಂದು ಬೆಳಿಗ್ಗೆ ಪಿರ್ಯಾದಿದಾರರು  ಕೋಟ ಹೈಸ್ಕೂಲ್‌ ಬಳಿಯ ಶ್ರೀ ಅಘೋರೇಶ್ವರ ದೇವಸ್ಥಾನದ ಬಳಿಯ ಮನೆಯೊಂದರ ಮರದ ಕೆಲಸದ ಬಗ್ಗೆ ಹೋಗುವರೇ ಮನೆಯಿಂದ ಹೊರಟು ಡಾ. ಪುನೀತ್‌ ರಾಜ್‌ ಕುಮಾರ್‌ ರಸ್ತೆಯಲ್ಲಿ ನಿಂತು ಜನಾರ್ಧನ ಆಚಾರಿ ರವರಿಗಾಗಿ ಕಾಯುತ್ತಿರುವಾಗ, ಬೆಳಿಗ್ಗೆ ಸುಮಾರು 9.00 ಗಂಟೆಗೆ ಜನಾರ್ಧನ ಆಚಾರಿ ರವರು ತಮ್ಮ ಬಾಬ್ತು ನಂ: KA 20 EE 2638 ನೇ ಬೈಕಿನಲ್ಲಿ ಕೋಟ ಹೈಸ್ಕೂಲ್‌ - ಸಾಯಿಬ್ರಕಟ್ಟೆ ರಸ್ತೆಯಲ್ಲಿ ಸಾಯಿಬ್ರಕಟ್ಟೆ ಕಡೆಯಿಂದ ಬರುತ್ತಿದ್ದವರು ಡಾ. ಪುನೀತ್‌ ರಾಜ್‌ ಕುಮಾರ್‌ ರಸ್ತೆಯ ತಿರುವಿನ ಬಳಿ ಬಂದಾಗ ತಮ್ಮ ಬೈಕ್‌ ಅನ್ನು ನಿಧಾನಿಸಿ ಇಂಡಿಕೇಟರ್‌ ಕೊಟ್ಟು ತಿರುಗಿಸುತ್ತಿರುವಾಗ, ಕೋಟ ಹೈಸ್ಕೂಲ್‌ ಕಡೆಯಿಂದ ಬಂದ KA 20 Y 6882 ನೇ ಅವೆಂಜರ್‌ ಬೈಕ್‌ ಸವಾರ ಅಫೀಜ್‌ ತನ್ನ ಬೈಕನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಜನಾರ್ಧನ ಆಚಾರಿ ರವರು ಚಲಾಯಿಸಿಕೊಂಡಿದ್ದ ಬೈಕಿಗೆ ಢಿಕ್ಕಿ ಹೊಡೆದನು. ಅಪಘಾತದಲ್ಲಿ ಇಬ್ಬರೂ ಸವಾರರು ಬೈಕ್‌ ಸಮೇತ ರಸ್ತೆಗೆ ಬಿದ್ದರು. ಪರಿಣಾಮ ಜನಾರ್ಧನ ಆಚಾರಿ ರವರ ಎಡಕಾಲಿಗೆ, ಬಲ ಕೈಗೆ, ಮುಖಕ್ಕೆ ತೀವ್ರ ಗಾಯ ಮತ್ತು ಮೈಕೈಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಢಿಕ್ಕಿ ಹೊಡೆದ ಬೈಕ್‌ ಸವಾರನ ಮುಖಕ್ಕೆ ಹಾಗೂ ಇತರಡೆಗಳಿಗೆ ತರಚಿದ ಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿ ವೈ ಪಿ ಸತೀಶ್ ಇವರು ಟಾಟಾ ಕಂಪನಿಯ KA 20 C 6973 ನೇ   407 ಟಿಪ್ಪರ್ ವಾಹನದ ನೊಂದಣಿ ಮಾಲೀಕರಾಗಿದ್ದು ಸದ್ರಿ ವಾಹನದಲ್ಲಿ ಕೋಟೆಶ್ವರ  ಗ್ರಾಮದ ಕಾಗೇರಿಯ  ಸಂತೋಷ್ ಎನ್ನುವವರು ಲೋಡರ್  ಆಗಿ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ 19/01/2023 ರಂದು 19:00 ಗಂಟೆಗೆ ಪಿರ್ಯಾದುದಾರರು  ಸದ್ರಿ ವಾಹನವನ್ನು ಕೊಟೆಶ್ವರ ಗ್ರಾಮದ ಪೈ ಎಂಬವರ ಬಾಬ್ತು ಶೆಡ್ ನಲ್ಲಿ ವಾಹನವನ್ನು ನಿಲ್ಲಿಸಿ ಹೋಗಿದ್ದು  ದಿನಾಂಕ 20/01/2023 ರಂದು ಬೆಳಿಗ್ಗೆ 05:00 ಗಂಟೆಗೆ ಬಂದು ವಾಹನವನ್ನು ನಿಲ್ಲಿಸಿದ ಶೇಡ್ ಬಳಿ  ನೋಡಿದಾಗ  ವಾಹನವು ಶೆಡ್ ನಲ್ಲಿ ಇಲ್ಲದೆ ಇದ್ದು  ಸದ್ರಿ ವಾಹನದಲ್ಲಿ ಕೆಲಸ ಮಾಡಿಕೊಂಡಿರುವ ಸಂತೋಷ್  ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಪ್ ಬರುತ್ತಿದ್ದು  ನಂತರ  ಆತನ ಮನೆಗೆ ಹೋಗಿ ವಿಚಾರಿಸಿದಾಗ ಆತನು ಮನೆಯಲ್ಲೂ ಇರಲಿಲ್ಲವಾಗಿದ್ದು  ಸಂತೋಷ ಆಚಾರಿ ಈತನು ಪಿರ್ಯಾದುದಾರರ ಬಾಬ್ತು  ಟಿಪ್ಪರ್ ವಾಹನವನ್ನು ಕಳವು ಮಾಡಿಕೊಂಡು ಹೊಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 4 ಲಕ್ಷ ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಕುಂದಾಪುರ  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 07/2023  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-01-2023 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080