ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸುಜಾತ (38), ಗಂಡ: ಸಂತೋಷ್‌, ವಾಸ: ಪಳ್ಳಿ ಶಾಲೆ ಬಳಿ, ಪಳ್ಳಿ ಗ್ರಾಮ, ಕಾರ್ಕಳ ತಾಲೂಕು ಇವರ ಗಂಡ ಸಂತೋಷ್‌ ಪ್ರಾಯ: 44 ವರ್ಷ ಎಂಬುವವರು ದಿನಾಂಕ: 21/01/2023 ರಂದು ಬೆಳಗ್ಗೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ಸಂಜೆ 6:00 ಗಂಟೆಗೆ ಮನೆಗೆ ಬಂದಿದ್ದು ರಾತ್ರಿ 9:00 ಗಂಟೆಗೆ ಊಟ ಮಾಡಿ ಮನೆಯ ಹೊರಗಡೆ ಟಾಯ್ಲೆಟ್‌ ಗೆ ಹೋಗುತ್ತಿರುವಾಗ ಮನೆಯ ಅಂಗಳದಲ್ಲಿ ತಲೆ ತಿರುಗಿ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಮೈದುನ ಶಂಕರ್‌ ಎಂಬುವವರು ಬಂದು ನೆಲದ ಮೇಲೆ ಬಿದ್ದಿದ್ದ ಸಂತೋಷ್‌ ರವರನ್ನು ಎಬ್ಬಿಸಿದಾಗ ಮಾತನಾಡುತ್ತಿರಲಿಲ್ಲ ಕೂಡಲೇ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ರಾತ್ರಿ 11:30 ಗಂಟೆ ಸಮಯಕ್ಕೆ ಅಲ್ಲಿನ ವೈದ್ಯರು ಸಂತೋಷ್‌ ರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 22/01/2023 ರಂದು ಸುದರ್ಶನ್‌ ದೊಡಮನಿ,ಪೊಲೀಸ್‌ ಉಪ ನಿರೀಕ್ಷಕರು, ಹೆಬ್ರಿ ಪೊಲೀಸ್‌ ಠಾಣೆ ಇವರಿಗೆ ಹೆಬ್ರಿ ಗ್ರಾಮದ ಹೆಬ್ರಿಯ ಮೇಲ್ಟೇಟ್ಟೆ ಎಂಬಲ್ಲಿರುವ ಪೆಟ್ರೋಲ್ ಬಂಕ್ ಬದಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ಮಾಡಿ ಆರೋಪಿತ ಸುಜಿತ್‌ ( 25), ತಂದೆ: ಶೇಖರ, ವಾಸ: ಕುದ್ಮಲ್‌ ರಂಗರಾವ್‌ ನಗರ ಪುತ್ತೂರು ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 2,100/- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 78 (1)(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-01-2023 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080