ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಧರ್ಮೇಂದ್ರ (41), ತಂದೆ: ಗುರುಮೂರ್ತಿ, ವಾಸ:17/15, ಶ್ರೀದೇವಿ ಕೃಪಾ, ಸುಮಿತ್ರ ರವರ ಬಾಡಿಗೆ ಮನೆ, ಇಮ್ಮುಂಜೆ ರಸ್ತೆ, ಬಂಗ್ಲೇಗುಡ್ಡೆ, ಕಸಬಾ ಗ್ರಾಮ, ಕಾರ್ಕಳ ತಾಲುಕು, ಉಡುಪಿ ಜಿಲ್ಲೆ ಇವರ ಅಣ್ಣನ ಮಗ ಕಾರ್ತಿಕ್ (25) ರವರು 5  ವರ್ಷಗಳಿಂದ ಮಂಗಳೂರು  ಪ್ಲಾನ್ ಟೆಕ್ ಕಂಪನಿಯಲ್ಲಿ  ಸೇಫ್ಟಿ ಸುಪರ್ ವೈಸರ್ ಆಗಿ ಕೆಲಸಕ್ಕೆ ಆಯ್ಕೆಯಾಗಿ ಪ್ರಸ್ತುತ 2 ತಿಂಗಳಿನಿಂದ ಒರಿಸ್ಸಾ ರಾಜ್ಯದ ಪಾರಾದೀಪ್ ನಲ್ಲಿ ಪ್ಲಾನ್ ಟೆಕ್ ಕಂಪನಿಯಲ್ಲಿ  ಕೆಲಸ ಮಾಡಿಕೊಂಡಿದ್ದು, ದಿನಾಂಕ 14/01/2022 ರಂದು  ಮಂಗಳೂರಿನ ಪ್ಲಾನ್ ಟೆಕ್ ಕಂಪನಿಯ ಮ್ಯಾನೇಜರ್ ಕುಶಲ್ ರವರು ಪಿರ್ಯಾದುದಾರರಿಗೆ ಕರೆ ಮಾಡಿ ಕಾರ್ತಿಕ್ ನು ದಿನಾಂಕ 13/01/2022 ರಂದು  ಫ್ಲಾಟ್ ನಂ 1322 ಉದಯ್ ಬಾಠ, ಪಾರದೀಪ್ ಒರಿಸ್ಸಾ ಇಲ್ಲಿ ವಾಸವಿದ್ದವರು ಯಾವುದೋ ವೈಯಕ್ತಿಕ ವಿಚಾರಕ್ಕೆ ಮನನೊಂದು ತನ್ನ ರೂಮಿನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿದ್ದವರನ್ನು ಆತನ ಸ್ನೇಹಿತರು  ಸೇರಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಟಕ್ ನ ರಿಲಾಕ್ಸ್  ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಿಸಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಮನೆಯವರಿಗೆ ವಿಚಾರ ತಿಳಿಸಿ ಸಂಬಂಧಿಕರಾದ ವೇಲು ಮತ್ತು ಕೃಷ್ಣರವರೊಂದಿಗೆ  ದಿನಾಂಕ 15/01/2022 ರಂದು ಹೊರಟು 17/01/2022 ರಂದು ಕಟಕ್ ತಲುಪಿ ಕಟಕ್ ನ ರಿಲಾಕ್ಸ್  ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ನನ್ನು ನೋಡಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆತನು ಸೇವಿಸಿದ ವಿಷ ಪದಾರ್ಥವು ತೀಕ್ಣವಾಗಿದ್ದು ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುವುದಾಗಿ ತಿಳಿಸಿ ಈಗಾಗಲೆ ಒರಿಸ್ಸಾದ ಮಂಗಲ್ ಬಾಗ್ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದು ಅಲ್ಲದೆ ಆಸ್ಪತ್ರೆಯ ಬಿಲ್  94,000/- ರೂಪಾಯಿ ಆಗಿರುತ್ತದೆ  ಪೊಲೀಸ್ ಠಾಣೆಯವರು ಪಿರ್ಯಾದಿದಾರರು ಹೋದಾಗ ಪಿರ್ಯಾದಿದಾರರಿಗೆ ಒರಿಯಾ ಬಾಷೆ ಬಾರದ ಕಾರಣ ಯಾವುದೇ ರೀತಿ ಸಹಾಯ ಮಾಡಿರುವುದಿಲ್ಲ , ಕೂಲಿ ಕೆಲಸ ಮಾಡಿಕೊಂಡಿದ್ದು ಬಡವರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟಲು ಕಷ್ಟವಾಗುತ್ತದೆಯೆಂದು ಉಡುಪಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮಾಡಿಸುವ ಬಗ್ಗೆ ಪಿರ್ಯಾದಿದಾರರು ಕಾರ್ತಿಕ್ ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಅಂಬುಲೆನ್ಸ್ ನಲ್ಲಿ ದಿನಾಂಕ: 17/01/2022 ರಂದು ರಾತ್ರಿ ಹೊರಟು ಬಂದಿದ್ದು ಕಾರ್ತಿಕ್ ನು  ದ್ರವ ಆಹಾರ ಸೇವಿಸುತ್ತಿದ್ದನು, ದಿನಾಂಕ 19/01/2022 ರಂದು ಮದ್ಯಾಹ್ನ ದಾರಿ ಮದ್ಯೆ ಜ್ಯೂಸ್ ಕುಡಿಸಿದ್ದು ನಂತರ ಆತನು ಮಲಗಿದ್ದನು . ಉಡುಪಿಗೆ ಕರೆದುಕೊಂಡು ಬರುತ್ತಿರುವಾಗ ಕಾರ್ಕಳ ಹತ್ತಿರ ಬರುವ ಸಮಯ ಆತನು ತೀರಾ ಅಸ್ವಸ್ಥನಾಗಿ ಉಸಿರು ತೆಗೆದುಕೊಳ್ಳಲು ಕಷ್ಟಪಟ್ಟಂತೆ ಕಂಡುಬಂದಿದ್ದು,  ಪಿರ್ಯಾದಿದಾರರು ಕೂಡಲೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ದಿನಾಂಕ 19/01/2022 ರಂದು  ಸಂಜೆ 05:45 ಗಂಟೆಗೆ ಕಾರ್ತಿಕ್ ನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಕಾರ್ಕಳ ನಗರ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿದ್ದು, ಘಟನೆ ಬಗ್ಗೆ  ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯವರು ಕಾರ್ತಿಕ್ ನು ಒರಿಸ್ಸಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾರಣದಿಂದ ಪ್ರಕರಣದ ಬಗ್ಗೆ ಒರಿಸ್ಸಾದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿ ಮಾಹಿತಿ ನೀಡಿದ್ದು, ಅಲ್ಲದೆ ಪ್ಲಾನ್ ಟೆಕ್ ಕಂಪನಿಯ ಪಾರಾದೀಪ್ ನ ಮ್ಯಾನೇಜರ್ ಅಕ್ಷಯ್ ಶೆಟ್ಟಿರವರು ಹೋದಾಗಲೂ ಸ್ಪಂದಿಸದೆ  ಈ ಬಗ್ಗೆ ದೂರು ಸ್ವೀಕರಿಸಿರುವುದಿಲ್ಲ. ಪಿರ್ಯಾದಿದಾರರು ಕಾರ್ತಿಕ್ ನ ಮೃತದೇಹವನ್ನು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯ ಶವಗಾರದಲ್ಲಿ  ಇರಿಸಿರುತ್ತಾರೆ. ಒರಿಸ್ಸಾ ಪಾರಾದೀಪ್ ಲಾಕ್ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬಿಟ್ಟುಕೊಡುವುದಾಗಿ ಪಿರ್ಯಾದಿದಾರರು ನಂಬಿದ್ದು ,ಆದರೆ ಕಾರ್ಕಳ ನಗರ ಪೊಲೀಸರು ಮಾಹಿತಿ ನೀಡಿದ ನಂತರವು ಸ್ಪಂದಿಸದೆ ಇದ್ದು,ಮ್ಯಾನೇಜರ್ ಮೂಲಕ ದೂರು ನೀಡಲು ಪ್ರಯತ್ನಿಸಿದರೂ ಸ್ಪಂದನೆ ಸಿಗದ ಕಾರಣ  ಅಲ್ಲದೆ ಕಾರ್ತಿಕ್ ನು ಮೃತಪಟ್ಟು ಈಗಾಗಲೆ ಮೂರು ದಿನಗಳು ಕಳೆದಿದ್ದು ಆತನ ತಾಯಿ ಆಹಾರ ಸೇವಿಸದೆ ಅಸ್ವಸ್ಥರಾಗಿದ್ದ ಕಾರಣ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ (33), ಗಂಡ: ರಾಜು, ವಾಸ: ಗುಳ್ಳಾಡಿ ಬೇಳೂರು ಗ್ರಾಮ ಕುಂದಾಪುರ ತಾಲೂಕು ಇವರು   ಹನ್ನೊಂದು ವರ್ಷಗಳ  ಹಿಂದೆ  ರಾಜು ಎಂಬುವವರನ್ನು ಮದುವೆಯಾಗಿ ಎರಡು ಜನ ಮಕ್ಕಳಿದ್ದು,  ಗಂಡ ರಾಜುರವರು ಹಿಂದಿನಿಂದಲೂ ಅನೇಕ ಬಾರಿ ಗಲಾಟೆ ಮಾಡಿದ್ದು, ದಿನಾಂಕ 20/01/2022ರಂದು 10:30 ಗಂಟೆಗೆ ಬೇಳೂರು ಗ್ರಾಮದ ಗುಳ್ವಾಡಿಯಲ್ಲಿ ಮನೆಯಲ್ಲಿರುವಾಗ ಗಂಡ ರಾಜು  ಬಂದು ಖರ್ಚಿಗೆ ಹಣ ಕೊಡದ್ದಕ್ಕೆ ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯವಾಗಿ ಬೈದು, ಎಳೆದು ನೆಲಕ್ಕೆ ಕೆಡವಿ ಕೈಯಿಂದ ಮುಖಕ್ಕೆ ಹೊಡೆದು ಅಲ್ಲಿಯೇ ಇದ್ದ ದೊಣ್ಣೆಯಿಂದ ಬೆನ್ನು ತಲೆಗೆ ಹೊಡೆದಿದ್ದು, ಮನೆಯಿಂದ ಹೊರಗೆ ದೂಡಿ ಹಾಕಿದ್ದು, ಆಗ ಅಲ್ಲಿದ್ದವರೆಲ್ಲ ಜೋರು ಮಾಡಿದಾಗ ಅಲ್ಲಿಂದ ಹೋಗುತ್ತಾ  ಜೀವ ಬೆದರಿಕೆ ಹಾಕಿ ಹೋಗಿದ್ದು , ರಾತ್ರಿ  ಕೂಡಾ ಕುಡಿದು ಬಂದು ಹೊಡೆದಿದ್ದು, ಈ ಬಗ್ಗೆ ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 498(A), 323, 324 ,354(B) 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 22-01-2022 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080