ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೊಲ್ಲೂರು: ಪಿರ್ಯಾದಿದಾರರಾದ ಗೌರಿ(44), ಗಂಡ: ಸುರೇಂದ್ರ ನಾಯ್ಕ್ , ವಾಸ: ಕೆಳಕುಡೇರಿ ಜಡ್ಕಲ್ ಗ್ರಾಮ ಬೈಂದೂರು ಇವರು ದಿನಾಂಕ 22/01/2022 ರಂದು ಬೆಳಗಿನ ಜಾವ 02:10 ಗಂಟೆಗೆ ಎಂದಿನಂತೆ ತನ್ನ ಗಂಡ ಸುರೇಂದ್ರ ನಾಯ್ಕ್ ರವರ KA-20-MC-7444 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸಹ ಸವಾರಳಾಗಿ ಕುಳಿತು ಮುದೂರು ಪಿ. ವಿ ಬಾಬುರವರ ಐಶ್ವರ್ಯ ರಬ್ಬರ್ ಪ್ಯಾಂಟೇಷನ್ ಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೊರಟು ಆರೋಪಿ ಸುರೇಂದ್ರ ನಾಯ್ಕ್ ಮೋಟಾರ್ ಸೈಕಲ್ ನನ್ನು ಬಸ್ರಿಬೇರು ಕಡೆಯಿಂದ ಮುದೂರು ಮೈದಾನ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ಮುದೂರು ಗ್ರಾಮದ ಕೋರೆಮುಖದ ಗೋವಿಂದ ಪ್ಯಾಂಟೇಷನ್ ಬಳಿ ರಸ್ತೆ ಎಡ ಬದಿಯಿಂದ ಕಡವೆ ರಸ್ತೆಗೆ ಅಡ್ಡ ಓಡಿ ಬಂದ ಕಾರಣ ಆರೋಪಿ ಮೋಟಾರ್ ಸೈಕಲ್ ನ ವೇಗವನ್ನು ನಿಯಂತ್ರಿಸಲಾಗದೇ ಗಲಿಬಿಲಿಗೊಂಡು ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತುಟಿಗೆ ರಕ್ತಗಾಯ ಮತ್ತುಹಲ್ಲುಗಳಿಗೆ ಒಳ ನೋವು , ಹಾಗೂ ಬಲಕೈಗೆ ಒಳನೋವು ಪೆಟ್ಟಾಗಿರುತ್ತದೆ. ಹಾಗೂ ಆರೋಪಿಗೆ ಎಡಕಾಲು ಪಾದದ ಹಿಮ್ಮಡಿ ರಕ್ತಗಾಯ ಉಂಟಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಗಂಗೊಳ್ಳಿ: ದಿನಾಂಕ 21/01/2022 ರಂದು ಪಿರ್ಯಾದಿದಾರರಾದ ಸುರೇಶ ಖಾರ್ವಿ ಪ್ರಾಯ 35 ವರ್ಷ, ತಂದೆ: ಮುಡೂರ ಖಾರ್ವಿ ವಾಸ: ಬೈರಂ ಪ್ರಸಾದ ಮನೆ , ನೀರೋಣಿ, ಫಿಶರೀಸ್ ರೋಡ್, ಮರವಂತೆ ಗ್ರಾಮ ,ಬೈಂದೂರು ತಾಲೂಕು ಇವರು ತನ್ನ KA-20-EQ-9760 ನೇ ನಂಬ್ರದ TVS JUPITOR ಸ್ಕೂಟರನಲ್ಲಿ ಸಹಸವಾರನಾಗಿ ಚಂದ್ರಖಾರ್ವಿ ಯವರನ್ನು ಕುಳ್ಳಿರಿಸಿಕೊಂಡು ನಾವುಂದ ಕಡೆಯಿಂದ ಮರವಂತೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ, ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66 ರಲ್ಲಿ KA-19-MB-1936 ನೇ ನಂಬ್ರದ ಇನೋವಾ ಕಾರನ್ನು ಅದರ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮರವಂತೆ ಗ್ರಾಮದ ನೀರೋಣಿ ಎಂಬಲ್ಲಿ ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿದಾರರು ಸವಾರಿ ಮಾಡುತಿದ್ದ ಸ್ಕೂಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಗೆ ಒಳ ಜಖಂ ಆಗಿ, ಬಲ ಕೈಗೆ, ಬೆನ್ನಿಗೆ, ಪಕ್ಕೆಲುಬು, ಹೊಟ್ಟೆಗೆ , ಬಲ ತೊಡೆಗೆ ಗುದ್ದಿದ ನೋವು ಆಗಿದ್ದು ಅಲ್ಲದೇ ಸಹ ಸವಾರ ಚಂದ್ರ ಖಾರ್ವಿ ರವರಿಗೆ ತಲೆಗೆ, ಬಲ ಮುಂಗಾಲಿಗೆ, ಬಲ ಮುಂಗೈಗೆ, ಎರಡು ಕಣ್ಣಿನ ಬಳಿ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ 22/01/2022 ರಂದು ಬೆಳಿಗ್ಗೆ 10:40 ಗಂಟೆಗೆ ಆಪಾದಿತ ಮೆಹಿಮೊದ್‌ ಪಾಟೀಲ್‌ ಕಾರು ನಂಬ್ರ KA-23-N-2555 ನೇದನ್ನು ಕುಂದಾಪುರ ತಾಲುಕು ಕೊಟೇಶ್ವರ ಗ್ರಾಮದ ಸರ್ಜನ್‌ ಆಸ್ಪತ್ರೆಯ ಎದುರು ರಾ ಹೆ 66 ರ ಉಡುಪಿ - ಕುಂದಾಪುರ ಎಕಮುಖ ಸಂಚಾರ ವ್ಯವಸ್ಥೆಯ ರಸ್ತೆಯ ಪಶ್ಚಿಮ ಬದಿಯ ಸರ್ವಿಸ್‌ ರಸ್ತೆಯಲ್ಲಿ ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಸರ್ವೊತ್ತಮ ಹೆಬ್ಬಾರ್ ಪ್ರಾಯ 48, ತಂದೆ: ಆನಂದ ಹೆಬ್ಬಾರ ,ವಾಸ :ತೆಂಕಬೈಲು ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರ ಮೋಟಾರ್ ಸೈಕಲ್‌ ನಂಬ್ರ KA-20-U-7521 ನೇದರಲ್ಲಿ ಹೆಂಡತಿ ಗೀತಾ ಎಸ್‌ ಹೆಬ್ಬಾರ್‌ ರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಅದೇ ಸರ್ವಿಸ್‌ ರಸ್ತೆಯಿಂದ ಸರ್ಜನ್‌ ಆಸ್ಪತ್ರೆಗೆ ಹೋಗಲು ನಿಂತಿರುವಾಗ ಮೋಟಾರು ಸೈಕಲ್‌ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಮೋಟಾರು ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದು ಮೋಟಾರು ಸೈಕಲ್‌ ಸವಾರರಾದ ಪಿರ್ಯಾದಿದಾರರಿಗೆ ಬಲ ಕಾಲಿನ ಮಣಿಗಂಟಿಗೆ, ಗಲ್ಲಕ್ಕೆ ರಕ್ತ ಗಾಯ ಮತ್ತು ಎಡ ಕಾಲಿಗೆ, ಬಲ ಕೈಯ ಬೆರಳಿಗೆ ತರಚಿದ ಗಾಯ ಮತ್ತು ಸಹಸವಾರಳಿಗೆ ಎಡ ಕಾಲಿಗೆ ಮೂಳೆ ಮುರಿತ ಒಳಜಖಂ ಹಣೆಗೆ ತರಚಿದ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರ ಸರ್ಜನ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ:279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ : ದಿನಾಂಕ 21/01/2022 ರಂದು 15:00 ಗಂಟೆಗೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಬೆಳ್ವೆ-ಗೋಳಿಯಂಗಡಿ ಸಾರ್ವಜನಿಕ ರಸ್ತೆಯಲ್ಲಿನ ಇಂದ್ರ ಎಲೆಕಕ್ಟ್ರಿಕಲ್ ಶಾಪ್ ಬಳಿಯ ಸ್ವಲ್ಪ ತಿರುವಿನಿಂದ ಕೂಡಿದ ರಸ್ತೆಯಲ್ಲಿ KA-20-D-9464 ನೇ ಶ್ರೀ ದುರ್ಗಾಂಬಾ ಬಸ್ ಚಾಲಕ ಪ್ರದೀಪ ತಾನು ಚಲಾಯಿಸುತ್ತಿದ್ದ ಬಸ್ಸ್ ನ್ನು ಬೆಳ್ವೆಕಡೆಯಿಂದ ಗೋಳಿಯಂಗಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅದೇ ದಿಕ್ಕಿನಲ್ಲಿ ಬೆಳ್ವೆ ಕಡೆಯಿಂದ ಗೋಳಿಯಂಗಡಿ ಕಡೆಗೆ ಪಿರ್ಯಾದಿದಾರರಾದ ಸೀತರಾಮ ಭಂಡಾರಿಪ್ರಾಯ 31 ವರ್ಷ ,ತಂದೆ: ಕೃಷ್ಣ ಭಂಡಾರಿ ,ವಾಸ: ವಾರಿಜಾಕ್ಷಯ ನಿಲಯ ದೇವಸ್ಥಾನ ಬೆಟ್ಟು ಬೆಳ್ವೆ ಅಂಚೆ ಮತ್ತು ಗ್ರಾಮ ಹೆಬ್ರಿ ತಾಲೂಕು ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬರ್ KA-20-X-8997 ನ್ನು ಹಿಂದಿಕ್ಕಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಯಾವುದೇ ಸೂಚನೆ ನೀಡದೇ ತೀವ್ರ ನಿರ್ಲಕ್ಷತನದಿಂದ ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಎದುರಿಗೆ ಒಮ್ಮೆಲೆ ಬ್ರೇಕ್ ಹಾಕಿ ಬಸ್ಸ್ ನ್ನು ನಿಲ್ಲಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಬಸ್ಸಿನ ಎಡಬದಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬಲ ಕಣ್ಣಿನ ಬಳಿ ಮೂಳೆ ಮುರಿತದ ಗಾಯ ಹಾಗೂ ಗುದ್ದಿದ ಬಳಿ ನೋವು ಹಾಗೂ ಬಲ ಭುಜಕ್ಕೆ ಗುದ್ದಿದ ಒಳ ನೋವು ಒಳನೋವು ಮತ್ತು ಹಾಗೂ ಬಲ ಮೊಣಕಾಲು , ಬಲ ತೋಳು, ಬಲ ತೋರು ಬೆರಳಿನ ಬಳಿ ಗೀರಿದ ರಕ್ತ ಗಾಯ ವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಬ್ರಹ್ಮಾವರ: ಆರೋಪಿ 1] ಸಂತೋಷ್ ಕೋಟ್ಯಾನ್, ವ್ಯವಸ್ಥಾಪಕರು, ಮೆ|| ಶ್ರೀ ಸಿದ್ದಿ ವಿನಾಯಕ ಪ್ಯಾಕೇಜಿಂಗ್ & ಪ್ರಿಂಟಿಂಗ್ , 2-84 (ಸಿ), ಬನ್ಯಾಳ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು, 2] ಮಂಜುಳ ಎಸ್ ಕೋಟ್ಯಾನ್, ಗಂಡ: ಸಂತೋಷ್ ಕೋಟ್ಯಾನ್, ಡೋರ್ ನಂ 2-84 (ಇ), ಶ್ರೀ ಗೌತಮ್ , ಮೆ|| ಶ್ರೀ ಸಿದ್ದಿ ವಿನಾಯಕ ಪ್ಯಾಕೇಜಿಂಗ್ & ಪ್ರಿಂಟಿಂಗ್ ಹತ್ತಿರ, ಬನ್ಯಾಳ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್, ಉಡುಪಿ ಬ್ರಾಂಚ್ ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ 2,89,29,120/- ( ಎರಡು ಕೋಟಿ ಎಂಭತ್ತೊಂಭತ್ತು ಲಕ್ಷದ ಇಪ್ಪತ್ತೊಂಭತ್ತು ಸಾವಿರದ ನೂರ ಇಪ್ಪತ್ತು ) ರೂಪಾಯಿಗಳ ಸಾಲವನ್ನು ಪಡೆದಿದ್ದು, ಸಾಲದ ಭದ್ರತೆಗಾಗಿ ಫ್ಯಾಕ್ಟರಿಯ ಚರ ಆಸ್ಥಿಯನ್ನು ಬ್ಯಾಂಕಿನವರಿಗೆ ಕರಾರು ಪತ್ರದ ಮೂಲಕ ಅಡಮಾನ ಇರಿಸಿ, ಫ್ಯಾಕ್ಟರಿಯ ಚರ ಆಸ್ಥಿಯ ಮೇಲೆ ಬ್ಯಾಂಕಿನವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಕೊಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿತರು ಬ್ಯಾಂಕಿನಿಂದ ಪಡೆದ ಸಾಲದ ಮೊತ್ತಕ್ಕೆ ಸರಿಯಾಗಿ ಸಾಲದ ಕಂತಿನ ಹಣವನ್ನು ಪಾವತಿ ಮಾಡದೇ ಇದ್ದುದರಿಂದ ಸಾಲದ ಮರುಪಾವತಿಯು NPA ಗೆ ವರ್ಗೀಕರಣಗೊಂಡಿದ್ದು, ನಂತರ ಸಾಲದ ಹಣವನ್ನು ವಸೂಲಿ ಮಾಡಲು SARFAESI Act 2020 ರಲ್ಲಿ ದಿನಾಂಕ 17/03/2021 ರಂದು ಬ್ಯಾಂಕಿನವರು ಆರೋಪಿಗಳಿಗೆ ಡಿಮ್ಯಾಂಡ್ ನೊಟೀಸ್‌ನ್ನು ಜ್ಯಾರಿ ಮಾಡಿರುತ್ತಾರೆ. ಆರೋಪಿತರು ಪಡೆದಿದ್ದ ಸಾಲದ ಕಂತಿನ ಹಣವನ್ನು ಸರಿಯಾಗಿ ಕಟ್ಟದೇ ಇದ್ದುದರಿಂದ ಆರೋಪಿತರು ಸಾಲದ ಅಡಮಾನ ಇರಿಸಿದ್ದ ಸ್ವತ್ತುಗಳನ್ನು ಪಿರ್ಯಾದಿದಾರರಾದ ಬಾಲಕೃಷ್ಣ ಕರ್ಕೆರಾ, ಡೆಪ್ಯುಟಿ ಜನರಲ್ ಮೆನೇಜರ್ & ಆಥೋರೈಸಡ್ ಆಫಿಸರ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್, ಉಡುಪಿ ಬ್ರಾಂಚ್, ವಾಸುಕಿ ಟವರ್ , ಜಿಲ್ಲಾ ನ್ಯಾಯಾಲಯದ ಎದುರು, ಉಡುಪಿ ಇವರು ದಿನಾಂಕ 17/11/2021 ರಂದು ಅವರ ಸುಪರ್ದಿಗೆ ಪಡೆದಿರುತ್ತಾರೆ. ದಿನಾಂಕ 06/12/2021 ರಂದು ಪಿರ್ಯಾದಿದಾರರು ಆರೋಪಿತರ ಫ್ಯಾಕ್ಟರಿಗೆ ಹೋಗಿ ಆರೋಪಿತರು ಬ್ಯಾಂಕಿನಿಂದ ಪಡೆದ ಸಾಲದ ಮೊತ್ತಕ್ಕೆ ಅಡಮಾನ ಇರಿಸಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಪರಿಶೀಲನೆ ಮಾಡಿದಾಗ ಅರೋಪಿತರು ಫ್ಯಾಕ್ಟರಿಯಲ್ಲಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಫ್ಯಾಕ್ಟರಿಯಿಂದ ಬೇರೆ ಕಡೆಗೆ ಸಾಗಿಸಿ, ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳು ಫ್ಯಾಕ್ಟರಿಯಿಂದ ಕಾಣೆಯಾಗಿರುವುದು ಕಂಡುಬಂದಿದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯವರು ಆರೋಪಿತರಿಗೆ ಕಾಣೆಯಾಗಿರುವ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಪಟ್ಟಿ ಮಾಡಿ ಬ್ಯಾಂಕಿನವರ ವಶಕ್ಕೆ ಒಪ್ಪಿಸಲು ದಿನಾಂಕ 07/12/2021 ರಂದು ಪತ್ರವನ್ನು ನೀಡಿರುತ್ತಾರೆ. ಆದರೆ ಇದುವರೆಗೂ ಆರೋಪಿತರುಗಳು ಬ್ಯಾಂಕಿನಲ್ಲಿ ಪಡೆದ ಸಾಲದ ಭದ್ರತೆಗಾಗಿ ಅಡಮಾನ ಇಟ್ಟಿದ್ದ ಫ್ಯಾಕ್ಟರಿಯಲ್ಲಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಬ್ಯಾಂಕಿಗೆ ಹಿಂದಿರುಗಿಸದೆ, ಬ್ಯಾಂಕಿನಿಂದ ಪಡೆದ ಸಾಲದ ಹಣವನ್ನು ಮರುಪಾವತಿ ಮಾಡದೇ ವಂಚನೆ ಮಾಡಿ, ಫ್ಯಾಕ್ಟರಿಯಲ್ಲಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಸಾಗಾಟ ಮಾಡಿ ಬ್ಯಾಂಕಿಗೆ ಬರಬೇಕಾದ ಸಾಲದ ಹಣವನ್ನು ತಪ್ಪಿಸುವ ದುರುದ್ಧೇಶದಿಂದ ಕೇಡನ್ನು ಬಯಸಿ ಬ್ಯಾಂಕಿಗೆ ನಷ್ಟವುಂಟುಮಾಡಿ ನಂಬಿಕೆ ದ್ರೋಹ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ: 406, 409, 415, 418, 420, 421, 422, 424, 425 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಪಡುಬಿದ್ರಿ: ಪಿರ್ಯಾದಿದಾರರಾದ ರೇಮಿಜಿಯಸ್ ಪ್ರಕಾಶ್ ಡಿಸೋಜ, ಪ್ರಾಯ: 47 ವರ್ಷ, ತಂದೆ: ದಿ. ಜಾನ್ ಡಿಸೋಜ, ವಾಸ: ಕಡವಿನ ಬಾಗಿಲು, ಹೆಜಮಾಡಿ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಪತ್ನಿ ರೀನಾ ವಿನುತಾ ಡಿಸೋಜ(35) ಎಂಬುವವರು ದಿನಾಂಕ: 21/01/2022 ರಂದು ಎಂದಿನಂತೆ ಸಂಜೆ ವಾಯು ವಿಹಾರಕ್ಕೆಂದು ಹೊರಟು17:15 ಗಂಟೆಯ ವೇಳೆಗೆ ವಿನ್ಸೆಂಟ್ ಡಿಸೋಜಾ ರವರ ಮನೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ವಿನಯ್ ಡಿಸೋಜಾ ಎಂಬಾತನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಏಕಾಏಕಿಯಾಗಿ ರೀನಾ ವಿನುತಾ ಡಿಸೋಜಾ ರವರ ಹೊಟ್ಟೆಯ ಬಲಬದಿಗೆ ತಿವಿದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾನೆ. ಮತ್ತು ಬಿಡಿಸಲು ಬಂದ ಮೋನಿಟಾ ಡಿಸೋಜಾ ಹಾಗೂ ಎಲಿಜಾ ಡಿಸೋಜಾ ರವರಿಗೆ ಆರೋಪಿತನು ಅವಾಚ್ಯ ಶಬ್ಧಗಳಿಂದ ಬೈದು ಅವರನ್ನೂ ಕೊಲ್ಲುವುದಾಗಿ ಅವರೆಡೆಗೆ ಚೂರಿ ಬೀಸಿ ಬೆದರಿಕೆ ಹಾಕಿರುತ್ತಾನೆ. ನಂತರ ಗಾಯಾಳುವಿಗೆ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 307, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-01-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080