ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ


  • ಕಾಪು: ಪಿರ್ಯಾದಿ :ಸತೀಶ್ ಕುಂದರ್ (40) ತಂದೆ: ಬೂದ ತಿಂಗಳಾಯ ವಾಸ: ಶ್ರೀ ದುರ್ಗಾ ಪ್ರಸಾದ್ ಕಡೆಕಾರ್‌ಪಡುಕೆರೆ ಪೋಸ್ಟ್, ಮತ್ತು ಗ್ರಾಮ ಇವರು ದಿನಾಂಕ 07/12/2022 ರಂದು ತನ್ನ  KA 20 EV-2638 ನೇ ಸ್ಕೂಟರ್‌ನಲ್ಲಿ ತನ್ನ ಹೆಂಡತಿ ಅಶ್ವಿನಿ ರವರನ್ನು ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಮಲ್ಪೆ ಕಾಪು ರಸ್ತೆಯಲ್ಲಿ ಕಾಪು ಕಡೆಗೆ ಬರುತ್ತಿದ್ದಾಗ ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಉದ್ಯಾವರ ಗ್ರಾಮದ ಕೌಸ್ತುಭ ಗೆಸ್ಟ್ ಹೌಸ್ ಬಳಿ ತಲುಪುತ್ತಿದ್ದಂತೆ ಕೌಸ್ತುಭ ಗೆಸ್ಟ್ ಹೌಸ್‌ನಿಂದ  KA 27 M 3628 ನೇ ಬೊಲೆರೋ ವಾಹನದ  ಚಾಲಕ ಶರತ್  ಎಂಬವರು ತನ್ನ ಬಾಬ್ತು ವಾಹನವನ್ನು ತೀವ್ರ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿಮಾಡಿಕೊಂಡು ಬರುತ್ತಿದ್ದ KA 20 EV-2638 ನೇ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಅಶ್ವಿನಿರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅಶ್ವಿನಿರವರ ಬಲಕಾಲಿನ ಮೂಳೆ ಮುರಿತವಾಗಿದ್ದು ಪಿರ್ಯಾದಿದಾರರ ಎರಡೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಅಶ್ವಿನಿ ರವರು ಉಡುಪಿ ಸಿಟ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಈ ಅಪಘಾತಕ್ಕೆ KA 27 M 3628 ನೇ ಬೊಲೆರೋ ವಾಹನದ  ಚಾಲಕ ಶರತ್  ರವರ ಅತೀ ವೇಗ ಹಾಗೂ ಅಜಗಾರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಅಪಘಾತ ಗೊಳಿಸಿದ ವಾಹನ ಚಾಲಕ ಶರತ್‌ರವರು ವೈದ್ಯಕೀಯ ಚಿಕಿತ್ಸಾವೆಚ್ಚನವನ್ನು ಭರಿಸುವುದಾಗಿ ತಿಳಿಸಿದ್ದು ನಂತರ ವೈದ್ಯಕೀಯ ವೆಚ್ಚವನ್ನುಭರಿಸಲು ನಿರಾಕರಿಸಿದ್ದುದರಿಂದ ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 139/2022 ಕಲಂ 279, 337, 338 ಐಪಿಸಿ ರಂತೆ ಪ್ರಕರಣ ದಾಕಲಿಸಲಾಗಿದೆ.
  • ಕಾಪು: ಪಿರ್ಯಾದಿ ವಿನೋದ್ (37) ತಂದೆ: ದಿ. ಜಯಕರ್ ವಾಸ: ಪದವಿನಂಗಡಿ ಮುಗ್ರೋಡಿ, ಮಂಗಳೂರು ಇವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/12/2022 ರಂದು ಪಿರ್ಯಾದಿದಾರರು ಶೈಲೇಂದ್ರ ಹಾಗೂ ಪ್ರಶಾಂತ್ ಎಂಬವರೊಂದಿಗೆ ಕೆಲಸದ ನಿಮಿತ್ತ ಕಟಪಾಡಿಗೆ ಬಂದಿದ್ದು ಮಧ್ಯಾಹ್ನ ಕಟಪಾಡಿ ಕಾಮತ್ ಹೋಟೆಲ್‌ನಲ್ಲಿ ಊಟ ಮಾಡಿ ಕಟಪಾಡಿಯಲ್ಲಿ ಶಿರ್ವ ಕಡೆಯಿಂದ ರಾಹೆ 66 ಉಡುಪಿ ಮಂಗಳೂರು ಏಕಮುಖ ರಸ್ತೆಯನ್ನು ದಾಟಿ ರಸ್ತೆಯ ಪಶ್ಚಿಮ ಅಂಚಿನಲ್ಲಿರುವಾಗ ಮಧ್ಯಾಹ್ನ 2:00 ಗಂಟೆ ಸುಮಾರಿಗೆ KA 20 AA 0269 ನೇ ಕಾರು ಚಾಲಕ ಯೋಗೇಂದ್ರ ಎಂಬವರು ತನ್ನ ಕಾರನ್ನು ಉಡುಪಿ ಕಡೆಯಿಂದ  ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪ್ರಶಾಂತನಿಗೆ ಡಿಕ್ಕಿಹೊಡೆದಿದ್ದು ಪರಿಣಾಮ ಪ್ರಶಾಂತನು ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ಹಾಗೂ ಬಲಕೈಗೆ ತೀವ್ರ ರಕ್ತಗಾಯವಾಗಿದ್ದು ಅವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಶೈಲೇಂದ್ರರವರು ಒಂದು ರಿಕ್ಷಾದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಅಜ್ಜರಕಾಡು ಅಸ್ಪತ್ರೆಗೆ ಹೋಗಿದ್ದು ನಂತರ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA 20 AA 0269 ನೇ ಕಾರು  ಚಾಲಕ ಯೋಗೇಂದ್ರ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಪಿರ್ಯಾದಿದಾರರು ಹಾಗೂ ಶೈಲೇಂದ್ರರವರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 140/2022 ಕಲಂ 279,338 ಐಪಿಸಿ ರಂತೆ ಪ್ರಕರಣ ದಾಕಲಿಸಲಾಗಿದೆ.


ಇತರ ಪ್ರಕರಣಗಳು

  •  ಬೈಂದೂರು: ದಿನಾಂಕ 20/12/2022 ರಂದು 10.00 ಗಂಟೆಗೆ ಫಿರ್ಯಾದಿ ಲಕ್ಷ್ಮಿಕಾಂತ ಪ್ರಾಯ 20 ವರ್ಷ ತಂದೆ ರಾಮಪೂಜಾರಿ, ವಾಸ ಗೋರ್ಕಲ್ಲ, ಕಾಲ್ತೋಡು ಗ್ರಾಮ, ಇವರು ಬೈಂದೂರಿನಲ್ಲಿ ತನ್ನ ಕೆಲಸ ರಾತ್ರಿ ಮನೆಗೆ ಹೋಗುತ್ತಿರುವ ಸಮಯ  ಫಿರ್ಯಾದಿದಾರರ ಗೆಳೆಯ ಚೇತನ ಎಂಬವರು ಕರೆ ಮಾಡಿ ನಾಗೂರಿನ ಸಾಗರ ಸಭಾಭವನಕ್ಕೆ ಬರುವಂತೆ ತಿಳಿಸಿದ ಮೇರೆಗೆ ಫಿರ್ಯಾಧಿದಾರರು ಮೋಟಾರು ಸೈಕಲಿನಲ್ಲಿ  ನಾಗೂರಿನ ಸಾಗರ ಸಭಾಭವನಕ್ಕೆ ಹೋದಾಗ  ಅಲ್ಲಿ ಫಿರ್ಯಾಧಿದಾರ   ಸ್ನೇಹಿತ ಚೇತನ , ರಾಜೇಶ್, ಹಳಗೇರಿ,ಸುರೇಶ್  ಮ್ಯಾಕೋಡು ಮತ್ತು ಇನ್ನೊಬ್ಬರು ಮದ್ಯ ಸೇವನೆ ಮಾಡುತ್ತಿದ್ದು ಫಿರ್ಯಾದೀದಾರರು ಚೇತನರವರನ್ನು ಮಾತನಾಡಿಸಲು ಹೋದಾಗ  ಕುಳಿತ್ತಿದ್ದವರ  ಪೈಕಿ  ಆರೋಪಿ ರಾಜೇಶ್ ಹಳಗೇರಿ ಎಂಬವನು ಫಿರ್ಯಾದಿದಾರರನ್ನು ಉದ್ದೇಶೀಸಿ ನಡೆ ಆಚೆ  ಎಂಬುದಾಗಿ ಬೈದಿದ್ದು, ಫಿರ್ಯಾಧಿದಾರರು ಅಲ್ಲಿಂದ ಹೊರಗಡೆ ಬಂದಾಗ  ಆರೋಪಿಯು  ಫಿರ್ಯಾದಿದಾರ ಹಿಂದೆ ಬಂದು ತಡೆದು ನಿಲ್ಲಿಸಿ  ನಾನು  ಪರಿಶಿಷ್ದ ಜಾತಿಯವ ನನ್ನನ್ನು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ  ಕೈಯಿಂದ  ಹೊಡೆದಿದ್ದು, ತಪ್ಪಿಸಲು  ಹೋದಾಗ ಆರೋಪಿಯು ಅಲ್ಲೇ ಇದ್ದ  ಮರದ ಕೋಲಿನಿಂದ  ಎಡಕೈಗೆ ಹೊಡೆದು ಹಲ್ಲೆ ಮಾಡಿದ್ದು, ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಜೀವ  ಬೆದರಿಕೆ ಹಾಕಿದ್ದು, ಅಲ್ಲದೇ ಫಿರ್ಯಾಧಿದಾರರ ಬಾಬ್ತು  ಕೆಟ್ಟು ಹೋಗಿ ಬ್ಯಾಟ್ರ  ಹಕ್ಲು  ಕಲ್ಯಾಣಿ ಮನೆ ಎದುರು  ನಿಲ್ಲಿಸಿದ್ದ  ಕೆಎ03ಎಚ್ಎಕ್ಸ್ 5025 ನಂಬ್ರದ ಮೋಟಾರು ಸೈಕಲನ್ನು ರಾಜೇಶ್ ಹಳಗೇರಿ  ಮತ್ತು ಸುರೇಶ್  ಮ್ಯಾಕೋಡು  ಎಂಬವರು ಜಖಂ ಗೊಳಿಸಿ ಫಿರ್ಯಾಧಿದಾರರಿಗೆ ರೂ 80,000/- ನಷ್ಟ ಉಂಟು ಮಾಡಿರುತ್ತಾರೆ. ಈ ತಕ್ಷೀರಿಗೆ ಕಾರಣ ಆರೋಪಿತರು ಬಾರ್ ನಲ್ಲಿ ಮದ್ಯ ಸೇವಿಸಿದ ಹಣವನ್ನು ಫಿರ್ಯಾದುದಾರರು ಪಾವತಿಸದೇ ಇದ್ದುದಕ್ಕೆ ಕೋಪಗೊಂಡು  ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ  248/2022 ಕಲಂ. 341. 323. 324, 504, 506, 427, ಜೊತೆಗೆ 34 ಭಾ. ದಂ. ಸಂ. ರಂತೆ ಪ್ರಕರಣ ದಾಕಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ: ರಮೇಶ ಪೂಜಾರಿ ( 43 ವರ್ಷ ) ತಂದೆ; ಕೃಷ್ಣ ಪೂಜಾರಿ ವಾಸ: ಹಂಜ ಮಡಾಮಕ್ಕಿಮಡಾಮಕ್ಕಿ ಗ್ರಾಮ ಇವರ ತಂದೆ ಕೃಷ್ಣ ಪೂಜಾರಿ ಪ್ರಾಯ 65 ವರ್ಷ ರವರು ಕೂಲಿ ಕೆಲಸ ಮಾಡಿಕೊಂಡಿದ್ದುಮಡಾಮಕ್ಕಿ ಗ್ರಾಮದ ಹಂಜ ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ ದಿನಾಂಕ; 20/12/2022 ರಂದು ಬೇಳಂಜೆ ಗ್ರಾಮದ ಬಡಾಬೆಟ್ಟು ಎಂಬಲ್ಲಿರುವ ಅವರ ತಂಗಿ ಅಮ್ಮಣ್ಣಿ ಪೂಜಾರ್ತಿ ರವರ ಮನೆಗೆ ಮಾರಿಪೂಜೆ ಗೆ ಬಂದಿದ್ದು ಸಮಯ ಸುಮಾರು ರಾತ್ರಿ 08:30 ಗಂಟೆಯಿಂದ 10:45 ಗಂಟೆಯ ಮಧ್ಯಾವಧಿಯಲ್ಲಿ  ಮನೆಯಿಂದ ಬೇಳಂಜೆ ಪೇಟೆಗೆ ಕಾಲುದಾರಿಯಲ್ಲಿ ಅನಿಶಾ  ವಿಜೇಂದ್ರ ಶೆಟ್ಟಿ ರವರ ಬಾಬ್ತು ಜಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರು ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ನಂ 35/2022 U/s 174 CRPC ರಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 21-12-2022 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080