ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಅಭಿಷೇಕ್ (31), ತಂದೆ: ಗೋವಿಂದ ಬಿಲ್ಲವ, ವಾಸ: ಅಭಿಲಾಷಾ, ಕರಾವಳಿ ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 19/12/2021 ರಂದು ಮಧ್ಯಾಹ್ನ 2:00 ಗಂಟೆಗೆ ತನ್ನ KA-19-EP-1890 ನೇ ಮೋಟಾರು ಸೈಕಲ್  ನಲ್ಲಿ  ಉಪ್ಪುಂದಕ್ಕೆ ಹೋಗಿ ಸ್ನೇಹಿತನನ್ನು  ಭೇಟಿ ಮಾಡಿ  ವಾಪಾಸ್ಸು  ಉಪ್ಪುಂದದಿಂದ ಕರಾವಳಿ ಶಿರೂರು ಕಡೆಗೆ ಬರುತ್ತಾ ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಬಳಿ ಏರಿನ ತಿರುವು ರಸ್ತೆಯ ಬಳಿ ತಲುಪಿದಾಗ ಆರೋಪಿ ಬಸವರಾಜ್ ತನ್ನ KA-20-B-161 ನೇ ಟಿಪ್ಪರ್ ಲಾರಿಯನ್ನು ಶಿರೂರು ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲ್ ನ ಬಲ ಭಾಗದ ಹ್ಯಾಂಡಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ  ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ಬಲ ಕಾಲಿನ ತೊಡೆಯ ಬಳಿ ತೀವ್ರ ತರಹದ ರಕ್ತ ಗಾಯ , ಬಲಕಾಲಿನ ಪಾದದ ಬಳಿ ಹಾಗೂ ಬಲ ಕೈಯ ಬೆರಳಿನ ತರಚಿದ  ಗಾಯ, ಬಲ ಕೈ ನ ಅಂಗೈ ಬಳಿ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 207/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಸತ್ಯರಂಜನ್  (29), ತಂದೆ: ಎಸ್ ದಿನಕರ ಶೆಟ್ಟಿ, ವಾಸ:ಗುಲ್ವಾಡಿ ದೊಡ್ಮನೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 20/12/2021 ರಂದು ಮಧ್ಯಾಹ್ನ 1:00 ಗಂಟೆಗೆ ಅವರ KA-20- EP-1733 ನೇ ಬುಲೆಟ್ ನಲ್ಲಿ ವಿಕ್ರಾಂತ್ ಶೆಟ್ಟಿಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಶಿರೂರು ಆರ್ಮಕ್ಕಿಯ ಸಂಬಂಧಿಯಾದ ಕಸ್ತೂರಿ ಶೆಡ್ತಿಯವರ ಮನೆ ಯಕ್ಷಗಾನದ ಓತಣಕೂಟಕ್ಕೆ ಬರಲು ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ನಿರ್ಗದ್ದೆ ಬಳಿ ಬರುತ್ತಿರುವಾಗ KA-20-AA-7101 ನೇ ರಿಕ್ಷಾ ಚಾಲಕ ಪಿರ್ಯಾದಿದಾರರ ಪಕ್ಕದಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಯಾವುದೇ ಸೂಚನೆ ನೀಡದೇ ಒಮ್ಮೇಲೇ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿದ್ದು ಪಿರ್ಯಾದಿದಾರರ ಬುಲೆಟ್ ಆಟೋ ರಿಕ್ಷಾದ ಹಿಂಬದಿಯ ಬಂಪರಿಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಸಹ ಸವಾರನೊಂದಿಗೆ  ಮೋಟಾರು ಸೈಕಲ್ ಸಮೇತ  ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಬಲ ಕೈ ಹಾಗೂ ಬಲ ಭುಜಕ್ಕೆ ತರಚಿದ ಗಾಯ , ಸಹ ಸವಾರನಿಗೆ ಬಲ ಕೈಗೆ ರಕ್ತಗಾಯ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ   ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 208/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ರಘು ರಾಮ (42), ತಂದೆ: ದಿ. ಲಚ್ಚ, ವಾಸ: ಮನೆ. ನಂ 4-41, ಜನತಾ ಕಾಲೋನಿ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 20/12/2021 ರಂದು ಬೆಳಿಗ್ಗೆ 8:15 ಗಂಟೆಗೆ ತನ್ನ ಬಾವ ದಿನೇಶ್‌ ರವರ ಮೋಟಾರು ಸೈಕಲ್‌ ನಂಬ್ರ KA-20-U-3300 ನೇದರಲ್ಲಿ ಸಹ ಸವಾರನಾಗಿ ಪ್ರವೀಣ್‌ ಮಡಿವಾಳರವರನ್ನು ಕುಳ್ಳರಿಸಿಕೊಂಡು ಶಿರ್ವ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುತ್ತಿರುವ ಸಮಯ ಳಿಗ್ಗೆ 8:30 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜಂಕ್ಷನ್‌ ತಲುಪುವಾಗ ಎದುರುಗಡೆಯಿಂದ KA-20-C-5432 ನೇ ಶಾಲಾ ಬಸ್‌ ಚಾಲಕ ಸುರೇಶ್‌ ಪೂಜಾರಿ ತಾನು ಚಲಾಯಿಸುತ್ತಿದ್ದ ಬಸ್‌ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಪ್ರವೀಣ್‌ ಮಡಿವಾಳ ರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ಒಳಜಖಂ ಹಾಗೂ ಎಡ ಕಣ್ಣಿನ ಕೆಳಗಡೆ ತರಚಿದ ರಕ್ತ ಗಾಯವಾಗಿರುತ್ತದೆ. ಸಹಸವಾರ ಪ್ರವೀಣ್‌ ಮಡಿವಾಳ ರವರಿಗೆ ಬಲ ಭುಜದ ಬಳಿ ಮೂಳೆ ಮುರಿತದ ಒಳ ಜಖಂ ಆಗಿರುತ್ತದೆ. ಎಡ ಕಾಲಿನ ಮೊಣಗಂಟಿಗೆ ಹಾಗೂ ಬಲ ಕೈಗೆ, ಎಡ ಕಣ್ಣಿನ ಕೆಳಗಡೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021, ಕಲಂ:
   279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯಲತಾ, ಗಂಡ: ರವಿ, ವಾಸ: ಕಳಸ, ಕುದುರೆಮುಖ, ಚಿಕ್ಕಮಗಳೂರು ಇವರ ತಾಯಿ ಗೀತಾ (52) ರವರು 7 ನೇ ಕ್ರಾಸ್  ಲಕ್ಷ್ಮೀನಗರ ದಲ್ಲಿ ವಾಸವಾಗಿದ್ದು ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು ಅವರಿಗೆ  ಶರಾಬು ಕುಡಿಯುವ ಅಭ್ಯಾಸ  ಇದ್ದು ದಿನಾಂಕ 19/12/2021 ರಂದು ರಾತ್ರಿ  ವಿಪರೀತ ಮಧ್ಯಸೇವನೆ  ಮಾಡಿದ್ದು  ರಾತ್ರಿ 09:00 ಗಂಟೆಗೆ  ಮಲಗುವುದಾಗಿ ಕೋಣೆಗೆ  ಹೋಗಿದ್ದು ರಾತ್ರಿ 10:30  ಗಂಟೆಗೆ  ಪಿರ್ಯಾದಿದಾರರು  ಕೋಣೆಗೆ ಹೋದಾಗ ಪಿರ್ಯಾದಿದಾರರ ತಾಯಿ ಚೆಯರ್ ಮೇಲೆ ಕುಳಿತ ಸ್ಥಿತಿಯಲ್ಲಿದ್ದು ,ಕುತ್ತಿಗೆಗೆ ನೈಲಾನ್  ಸೀರೆ ಕಟ್ಟಿ ಪ್ಯಾನ್ ಗೆ ಕಟ್ಟಿ ನೇಣು ಬಿಗಿದು ಕೊಂಡ ಸ್ಥಿತಿಯಲ್ಲಿದ್ದವರನ್ನು ನೇಣಿನಿಂದ ಬಿಡಿಸಿ ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ  ಹೈಟೆಕ್ ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು  ಪರೀಕ್ಷಿಸಿದ  ವೈದ್ಯರು ಈಗಾಗಲೆ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಗೀತಾ ರವರು ವಿಪರೀತ  ಶರಾಬು ಕುಡಿಯುವ  ಅಭ್ಯಾಸ  ಹೊಂದಿದ್ದು  ಅದೇ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆ ಗೊಂಡು ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ನೌಫಲ್ (35), ತಂದೆ:ಅಬ್ದುಲ್ ರಶೀದ್, ವಾಸ: ಅಜರುದ್ದೀನ್ ರಸ್ತೆ  ಮಂಗಳೂರು ಬಂದರು ಮಂಗಳೂರು ಇವರ ಬಾವ ಮೊಹಮ್ಮದ್ ಇಕ್ಬಾಲ್(24) ರವರು ಕೂಲಿ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ದಿನಾಂಕ 20/12/2021 ರಂದು ಪಿರ್ಯಾದಿದಾರರು ಹಾಗೂ ಮೊಹಮ್ಮದ್ ಇಕ್ಬಾಲ್ ಅವರು ಕುಟುಂಬ ಸಮೇತರಾಗಿ ಹೆಬ್ರಿ ಗ್ರಾಮದ ಮಠದಬೆಟ್ಟುವಿನಲ್ಲಿರುವ ಸಂಬಂಧಿಕರಾದ ಮುಸ್ತಫಾ ಎಂಬುವವರ ಮನೆಗೆ ಬಂದಿದ್ದು ಸಂಜೆ 4:30 ಗಂಟೆಗೆ ಪಿರ್ಯಾದಿದಾರರು, ಮೊಹಮ್ಮದ್ ಇಕ್ಬಾಲ್ ಹಾಗೂ ಇಬ್ರಾಹಿಂ ಖಲೀಲ್ ರವರೊಂದಿಗೆ ಮುಸ್ತಫಾ ರವರ ಮನೆ ಬಳಿ ಇರುವ ಸೀತಾನದಿಗೆ ಸ್ನಾನ ಮಾಡಲು ಹೋಗಿದ್ದು, ಪಿರ್ಯಾದಿದಾರರು ಹಾಗೂ ಮೊಹಮ್ಮದ್ ಇಕ್ಬಾಲ್ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿರುವಾಗ ಮೊಹಮ್ಮದ್ ಇಕ್ಬಾಲ್ ರವರು ನೀರಿನ ಆಳ ತಿಳಿಯದೇ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಗಂಗೊಳ್ಳಿ : ದಿನಾಂಕ 20/12/2021 ರಂದು ನಂಜಾನಾಯ್ಕ್‌ ಎನ್‌ , ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್‌ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಆಲೂರು ಗ್ರಾಮದ ಆಲೂರು ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ದೇವರಾಜ ಆಚಾರ್ಯ ಎಂಬಾತ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ದೇವರಾಜ ಆಚಾರ್ಯ (27), ತಂದೆ: ವೆಂಕಟ್ರಮಣ ಆಚಾರಿ, ವಾಸ:ಸರಸ್ವತಿ ನಿಲಯ, ವಂಡ್ಸೆ ಗ್ರಾಮ,ಮತ್ತು ಅಂಚೆ ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿಗೆ ಬಳಸಿದ ಮಟ್ಕಾ ಚೀಟಿ-1, ಬಾಲ್ ಪೆನ್ನು-1 ಹಾಗೂ 830/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2021 ಕಲಂ: 78(I),78(III) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಪಡುಬಿದ್ರಿ: ದಿನಾಂಕ 20/12/2021 ರಂದು ಅಶೋಕ್ ಕುಮಾರ್, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್‌ ಠಾಣೆ ಇವರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮದ  ಬೆಂಗ್ರೆ ರಸ್ತೆಯ ನವರಂಗ  ಬಾರ್ ಹಳೇಯ ಕಟ್ಟಡದ ಬಳಿ ಖಾಲಿ ಜಾಗದಲ್ಲಿ  ಕೆಲವರು ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳಾದ 1] ನಾಗರಾಜ ಪರಸಪ್ಪ ನಾಗಣ್ಣನವರ್, ಪ್ರಾಯ:27 ವರ್ಷ, ತಂದೆ: ಪರಸಪ್ಪ, ವಾಸ; ಜನತಾ ಪ್ಲಾಟ್, ಗಿರಿಯಾಲ ಗ್ರಾಮ, ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲೆ, 2] ಮಂಜುನಾಥ ಕಟ್ಟಿಮುನಿ ಪ್ರಾಯ: 25 ವರ್ಷ, ತಂದೆ: ದಿ. ಬಸಪ್ಪ, ವಾಸ: ಗಿರಿಯಾಳ, ಕಟ್ಟನೂರು ಗ್ರಾಮ,ಹುಬ್ಬಳ್ಳಿ ತಾಲೂಕು, ಹುಬ್ಬಳ್ಲಿ ಜಿಲ್ಲೆ, 3] ಪ್ರಶಾಂತ್ ಭಜಂತ್ರಿ ಪ್ರಾಯ: 22 ವರ್ಷ, ತಂದೆ; ದಿ. ಸಿದ್ದರಾಮ, ವಾಸ: ತಿಮ್ಮಾಪುರ ಗ್ರಾಮ, ಹಾವೇರಿ   ತಾಲೂಕು ಮತ್ತು ಜಿಲ್ಲೆ, 4] ಬಸಪ್ಪ ಗುಡ್ಡಪ್ಪ ಗೋಳಪ್ಪನವರ್ ಪ್ರಾಯ: 28 ವರ್ಷ, ತಂದೆ: ಗುಡ್ಡಪ್ಪ, ವಾಸ: ದೇವಗಿರಿ ಗ್ರಾಮ, ಹಾವೇರಿ ತಾಲೂಕು ಮತ್ತು ಜಿಲ್ಲೆ, 5] ಶಿವಪ್ಪ ಪ್ರಾಯ:45 ವರ್ಷ, ತಂದೆ: ಮಾರ್ತಾಂಡಪ್ಪ, ವಾಸ: ಕಾಟಿನ ಹಳ್ಳಿ, ದೇವಗಿರಿ ಗ್ರಾಮ, ಹಾವೇರಿ ತಾಲೂಕು ಮತ್ತು ಜಿಲ್ಲೆ, 6] ಗುಡ್ಡಪ್ಪ ಪ್ರಾಯ: 28 ವರ್ಷ, ತಂದೆ: ನೀಲಪ್ಪ, ವಾಸ: ಗುಡ್ಡಪ್ಪನವರ್, ಕೂಡ್ಲ ಗ್ರಾಮ, ಹಾನಗಲ್  ತಾಲೂಕು, ಹಾವೇರಿ ಜಿಲ್ಲೆ,  7) ಅಶೋಕ ಬರಮಪ್ಪ ಪ್ರಾಯ:20 ವರ್ಷ, ತಂದೆ: ದಿ. ಬರಮಪ್ಪ ವಾಸ: ಸಾಕಿನನೆರೆಗಲ್ಲು, ನೆರೆಗಲ್ಲು ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ, 8) ರವಿ ಪ್ರಕಾಶ್ ಭಜಂತ್ರಿ ಪ್ರಾಯ:28 ವರ್ಷ, ತಂದೆ: ದಿ: ಪ್ರಕಾಶ್, ವಾಸ: ಕಳಸಾಪುರ ಗ್ರಾಮ, ಕಳಾಸಪುರ  ತಾಲೂಕು. ಗದಗ ಜಿಲ್ಲೆ ಇವರು ಇಸ್ಪೀಟು ಎಲೆಗಳು – 52,  ನಗದು  ರೂಪಾಯಿ 3,020/-,  ಹಳೆಯ  ನ್ಯೂಸ್‌‌‌‌‌‌ ಪೇಪರ್‌‌‌ -2  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021  ಕಲಂ: 87 ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
   
   

ಇತ್ತೀಚಿನ ನವೀಕರಣ​ : 21-12-2021 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080