ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 21/12/2021 ರಂದು ಪಿರ್ಯಾದಿದಾರರಾದ ಗಣೇಶ್ ನಾಯ್ಕ(25), ತಂದೆ: ದಿ. ಸುರೇಂದ್ರ ನಾಯ್ಕ, ವಾಸ: ಶ್ರೀ ಗಣೇಶ ಕೂಡ್ಲಿ ಜನಾರ್ಧನ ದೇವಸ್ಥಾನದ ಬಳಿ, ಹೇರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು  ಬೈಕ್‌ನಲ್ಲಿ ಮಂದಾರ್ತಿ-ಬಾರ್ಕೂರು ಮುಖ್ಯ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೇರಾಡಿ ಗ್ರಾಮದ ಕೂಡ್ಲಿ ದುರ್ಗಾ ಪರಮೇಶ್ವರಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಕ್ರಾಸ್ ಸಮೀಪ  ತಲುಪುವಾಗ ಬೆಳಿಗ್ಗೆ 07:00 ಗಂಟೆಗೆ ಅವರ ಮುಂಭಾಗದಲ್ಲಿ ಬಾರ್ಕೂರು ಕಡೆಗೆ ಆರೋಪಿ ವಿಶ್ವ ಪ್ರಸಾದ್ ರಾವ್ ರವರು KA-20-MD-8343 HUNDAI GRAND i10 ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗದ ಹಾಡಿ ಜಾಗಕ್ಕೆ ಹೋಗಿ ಅಲ್ಲಿದ್ದ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಹಾಡಿ ಜಾಗದಲ್ಲಿ ಬಲ ಮಗ್ಗುಲಾಗಿ ರಸ್ತೆ ಕಡೆ ಮುಖಮಾಡಿ ಜಖಂಗೊಂಡು ನಿಂತುಕೊಂಡಿದ್ದು  ಈ ಅಪಘಾತದ ಪರಿಣಾಮ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಯು.ಬಿ ಪ್ರಭಾಕರ್ ರಾವ್( 80) ರವರ ಬಾಯಲ್ಲಿ ರಕ್ತ ಬರುತ್ತಿದ್ದು ಮಾತನಾಡುತ್ತಿರಲಿಲ್ಲ.  ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅವರ ಹೆಂಡತಿ ಉಷಾ ಪಿ ರಾವ್ ಎಂಬವರ ಎಡ ಭುಜಕ್ಕೆ ಒಳ ಜಖಂ ಉಂಟಾಗಿರುತ್ತದೆ. ಆರೋಪಿ ಮತ್ತು ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಶಿವ ಪ್ರಸಾದ್ ರಾವ್‌ರವರಿಗೆ ಯಾವುದೇ ನೋವು, ರಕ್ತಗಾಯವಾಗಿರುವುದಿಲ್ಲ. ಗಾಯಾಳುಗಳನ್ನು ಕೂಡಲೇ  ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಯು.ಬಿ ಪ್ರಭಾಕರ್ ರಾವ್ ರವರನ್ನು ವೈಧ್ಯರು ಪರೀಕ್ಷಿಸಿ ಈಗಾಗಲೇ ದಾರಿ ಮದ್ಯೆ ಮೃತಪಟ್ಟಿರುವುದಾಗಿ ಬೆಳಿಗ್ಗೆ 07:50 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 207/2021 ಕಲಂ: 279, 337, 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು : ದಿನಾಂಕ 19/12/2021 ರಂದು ಸಂಜೆ 4:30 ಗಂಟೆಗೆ ಪಿರ್ಯಾದಿದಾರರಾದ ಸದಾಶಿವ ಪೂಜರಿ (51), ತಂದೆ: ದಿ. ರಾಜು ಪೂಜಾರಿ, ವಾಸ: ಸಿದ್ಧಿಪ್ರದಾ ಕಡೇಕಾರು ಗ್ರಾಮ  ಉಡುಪಿ ತಾಲೂಕು ಇವರ ಅಣ್ಣನ ಮಗಳು ಪ್ರಕೃತಿ ಎಂಬುವವರು ಗುಡ್ಡೆಯಂಗಡಿ ಸಂಪಿಗೆ ನಗರ ರಸ್ತೆಯಲ್ಲಿ ಕಂಪನ ಬೆಟ್ಟು ಅಂಗನವಾಡಿ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಗುಡ್ಡೆಯಂಗಡಿ ಕಡೆಯಿಂದ  KA-20-MB-9925 ನೇ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪ್ರಕೃತಿ ಯವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರ ಬೆನ್ನಿಗೆ ಗುದ್ದಿದ ನೋವಾಗಿದ್ದು ಕೂಡಲೇ ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಕೆಯನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2021  ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 21/12/2021  ರಂದು  ಬೆಳಿಗ್ಗೆ  06:25  ಗಂಟೆಗೆ ಕುಂದಾಪುರ  ತಾಲೂಕಿನ, ತಲ್ಲೂರು ಗ್ರಾಮದ  ಕುಂತಿ ಕಾಂಪ್ಲೆಕ್ಷ್  ಸಮೀಪ ತಲ್ಲೂರು -ನೇರಳಕಟ್ಟೆ ರಸ್ತೆಯಲ್ಲಿ  ಆಪಾದಿತ ಉದಯ ಕುಮಾರ ಎಂಬುವವರು ತನ್ನ KA-20-MD -1314  ನೇ ಕಾರನ್ನು ತಲ್ಲೂರಿನಿಂದ ನೇರಳಕಟ್ಟೆ ಕಡೆಗೆ ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಸತೀಶ (31), ತಂದೆ :  ಶೀನ , ವಾಸ:  ಕೋಟೆಬಾಗಿಲು ತಲ್ಲೂರು ಗ್ರಾಮದ ಕುಂದಾಪುರ ತಾಲೂಕು ಇವರ ಚಿಕ್ಕಮ್ಮ ಸುಶಿಲ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಿಳಿಸಿದ ಪರಿಣಾಮ ಸುಶೀಲ ರವರ ಹಣೆ , ಕೆಳತುಟಿಗೆ ರಕ್ತಗಾಯ ಉಂಟಾಗಿದ್ದು ,ಎಡ ಕೈ ಮಣಿಗಂಟಿನ ಬಳಿ ತರಚು ಗಾಯ ಹಾಗೂ ಸೊಂಟಕ್ಕೆ ಒಳಜಖಂ ಉಂಟಾಗಿದ್ದು ಚಿಕಿತ್ಸೆಗೆ ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021 ಕಲಂ: 279, ,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಮಣಿಪಾಲ:  ದಿನಾಂಕ 09/11/2018 ರಂದು ಪಿರ್ಯಾದಿದಾರರಾದ ಗೋಪಾಲ್ ಶೆಟ್ಟಿಗಾರ್ (72), ತಂದೆ: ದಿವಂಗತ ಎಸ್ ಎಮ್ ಶೆಟ್ಟಿಗಾರ್,  ವಾಸ: “ ಎಲ್ಜಿ ಕನ್ಸಲ್ಟೆಂಟ್ಸ್” ಆಫೀಸ್, ಬಾಳಿಗಾಟವರ್ , 2ನೇ ಮಹಡಿ . ಉಡುಪಿ ತಾಲೂಕು ಮತ್ತು ಜಿಲ್ಲೆ ಇವರಿಗೆ ಆರೋಪಿಗಳಾದ 1)ನವೀನ್ ಅಮೀನ್ (39), ತಂದೆ: ಸುರೇಶ್ ಶ್ರೀಯಾನ್ , ಫ್ಲಾಟ್ ನಂಬ್ರ 105, ನೆಲಮಹಡಿ, ಮಣಿಪಾಲ ಪೆವಿಲಿಯನ್ ಅಪಾರ್ಟ್ ಮೆಂಟ್ , ವಿ ಪಿ ನಗರ, ಮಣಿಪಾಲ, ಶಿವಳ್ಳಿ ಗ್ರಾಮ, ಉಡುಪಿ ಜಿಲ್ಲೆ, 2) ಟಿ,.ಅನೀಶ್ ಕುಮಾರ್, ತಂದೆ: ಕೆ ಮುರಳೀಧರ, ವಾಸ:6-124ಡಿ, ಮಂಚಿಕುಮೇರಿ, ಕುಂಜಿಬೆಟ್ಟು ಪೋಸ್ಟ್ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಹೆರ್ಗಾ ಗ್ರಾಮದ ಸರ್ವೆ ನಂಬ್ರ 189/12 ರಲ್ಲಿ ಪರಿವರ್ತಿತ 8 ಸೆಂಟ್ಸ್‌ ಆಸ್ತಿಯನ್ನು ಮಾರಾಟ ಮಾಡುವ ಬಗ್ಗೆ ರೂಪಾಯಿ 3,50,000/- ಹಣಕ್ಕೆ ಕರಾರು ಮಾಡಿದ್ದು, ಅದರಂತೆ ರೂಪಾಯಿ 3,00,000/- ಹಣವನ್ನು ಪಿರ್ಯಾದಿದಾರರು ಆರೋಪಿತರಿಗೆ ನಗದಾಗಿ ಪಾವತಿ ಮಾಡಿರುತ್ತಾರೆ. ಅದಕ್ಕೆ ಆರೋಪಿಗಳು ಯಾವುದೇ ದಾಖಲೆ ಪತ್ರಗಳನ್ನು ಪಿರ್ಯಾದಿದಾರರಿಗೆ ನೀಡದೇ ಮಾರಾಟ ಮಾಡುವ ಮೂಲ ದಾಖಲೆಗಳು ಕಳೆದು ಹೋಗಿದೆ ಎಂದು ದಿನಾಂಕ 09/05/2018 ರಂದು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ಸುಳ್ಳು ಪತ್ರಿಕಾ ಪ್ರಕಟನೆ ನೀಡಿ ಅಫಿದಾವಿತ್‌ನಲ್ಲಿ ಸುಳ್ಳು ಮಾಹಿತಿ ದಾಖಲಿಸಿ ಪಿರ್ಯಾದಿದಾರರಿಗೆ ಜಾಗವನ್ನು ನೀಡದೇ, ಪಡೆದುಕೊಂಡ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 169/2021 ಕಲಂ: 420, 417, 419, 467, 468 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-12-2021 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080