ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸನ್ನಿಧಿ ಶೆಟ್ಟಿ ((23 ,ತಂದೆ: ಕೃಷ್ಣ ಶೆಟ್ಟಿ, ವಾಸ: ನೀರಾಡಿ ಮನೆ, ಜ್ಯೂನಿಯರ್ ಕಾಲೇಜು ಹಿಂಭಾಗ, ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಇವರು ದಿನಾಂಕ 19/11/2022 ರಂದು ಸಂಜೆ ವೇಳೆ ಮನೆಯಲ್ಲಿರುವಾಗ ಸ್ನೇಹಿತ ಗಜೇಂದ್ರ ಫೋನ್ ಮಾಡಿ  ತೆಕ್ಕಟ್ಟೆಗೆ ಬರುವಂತೆ ತಿಳಿಸಿದನು ಅದರಂತೆ  ತೆಕ್ಕಟ್ಟೆಗೆ ಬಂದಾಗ ಗಜೇಂದ್ರನು ತನ್ನ ಮೋಟಾರ್ ಸೈಕಲ್  KA-20-EY-6021 ನೇದರಲ್ಲಿ ಬಂದಿದ್ದು,  ಆತನ ಜೊತೆ ಮಾತನಾಡಿಕೊಂಡು ರಾತ್ರಿ 10:00 ಗಂಟೆಗೆ ಗಜೇಂದ್ರನ ಮೋಟಾರ್ ಸೈಕಲ್ ನಲ್ಲಿ  ಪಿರ್ಯಾದಿದಾರರು ಹಿಂಬದಿ ಸವಾರನಾಗಿ ಬ್ರಹ್ಮಾವರ ಕಡೆಗೆ ಹೊರಟೆವು. ಕುಮ್ರಗೋಡು ತಲುಪಿದಾಗ ಗಜೇಂದ್ರನು ತಡವಾಗುತ್ತದೆ ವಾಪಾಸ್ಸು ಹೋಗುವ ಎಂದು ತಿಳಿಸಿ ಕುಮ್ರಗೋಡು ಯು ಟರ್ನನಲ್ಲಿ ತಿರುಗಿಸಿ ವಾಪಾಸ್ಸು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರಟು ತಡವಾಗಿರುವುದರಿಂದ ಗಜೇಂದ್ರನು ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ಮಾಬುಕಳ ಸೇತುವೆಯ ಮಧ್ಯಭಾಗಕ್ಕೆ ತಲುಪಿದಾಗ ಅತೀವೇಗ ಹಾಗೂ ನಿರ್ಲಕ್ಷತನದಿಂದಾಗಿ ನಿಯಂತ್ರಣ ತಪ್ಪಿ ಸೇತುವೆಯ ಎಡಭಾಗದ ಗಾರ್ಡಗೆ ತಾಗಿ ಮೋಟಾರ್ ಸೈಕಲ್ ಬಲ ಮಗ್ಗುಲಾಗಿ ಬಿತ್ತು,  ಪರಿಣಾಮ ಪಿರ್ಯಾದಿದಾರರ ಎಡಕಾಲು ಮೊಣಗಂಟಿನಲ್ಲಿಚರ್ಮ ಕಿತ್ತು ಹೋದ ರಕ್ತ ಗಾಯ, ತುಟಿಗೆ ದವಡೆಗೆ ರಕ್ತಗಾಯ, ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಜೇಂದ್ರನ ತಲೆಗೆ ತೀವ್ರ ತರಹದ ಗಾಯವಾಗಿರುತ್ತದೆ. ಆಗ ಸಮಯ  ರಾತ್ರಿ11:00 ಗಂಟೆಯಾಗಿದ್ದು ಅಲ್ಲಿ ಸೇರಿದವರು ಪಿರ್ಯಾದಿದಾರರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ   ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದರು. ಗಜೇಂದ್ರನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಆತನು ಮೃತಪಟ್ಟ ವಿಚಾರ ತಿಳಿಯಿತು.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 201/2022 ಕಲಂ: 279, 338,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕುಂದಾಪುರ: ದಿನಾಂಕ 19/11/2022 ರಂದು ರಾತ್ರಿ 11:30 ಗಂಟೆಗೆ ಕುಂದಾಪುರ ತಾಲೂಕು, ಕಾಳಾವರ ಗ್ರಾಮದ ರೈಲ್ವೇ ಸೇತುವೆಯ ಬಳಿ ರಸ್ತೆಯಲ್ಲಿ, ಆಪಾದಿತ ಶಿವರಾಮ KA-20-EA-0832 ನೇ ಬೈಕಿನಲ್ಲಿ ಮಹೇಶ ಎಂಬುವವರನ್ನು ಸಹ ಸವಾರಾಗಿ ಕುಳ್ಳಿರಿಸಿಕೊಂಡು ಸಾಲಿಗ್ರಾಮ ಕಡೆಯಿಂದ ಕೊಟೇಶ್ವರ ಮುಖೇನ ಬಿದ್ಕಲ್‌‌‌ಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ,  ರಸ್ತೆಗೆ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದು ಬೈಕ್‌‌ ಸಮೇತ ರಸ್ತೆಯಲ್ಲಿ ಬಿದ್ದು, ಇಬ್ಬರಿಗೂ ತಲೆಗೆ, ಮುಖಕ್ಕೆ ತೀವ್ರ  ರೀತಿಯ  ರಕ್ತಗಾಯವಾಗಿ ಪ್ರಜ್ಞೆ  ಹೋದವರನ್ನು ಪಿರ್ಯಾದಿದಾರರಾದ ಕಿಶೋರ್‌ (23), ತಂದೆ : ಕುಮಾರ್‌, ವಾಸ:  ಮದಗ, ಎಸ್‌‌‌.ಟಿ  ಕಾಲೋನಿ, ಹಳ್ಳಾಡಿ ಹಳ್ಳಾಡಿ- ಹರ್ಕಾಡಿ ಗ್ರಾಮ  ಬಿದ್ಕಲ್‌‌‌ಕಟ್ಟೆ ಅಂಚೆ  ಕುಂದಾಪುರ  ತಾಲೂಕು   ಹಾಗೂ ಗಣೇಶರವರು ಚಿಕಿತ್ಸೆ ಬಗ್ಗೆ ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಹೇಶರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಗಂಭೀರ ಗಾಯಗೊಂಡ ಶಿವರಾಮ ರವರನ್ನು ಗಣೇಶ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022   ಕಲಂ: 279, 338,  304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  
 • ಹೆಬ್ರಿ: ಪಿರ್ಯಾದಿದಾರರಾದ ಶಶಿಧರ (28), ತಂದೆ: ಬಣಕಾರ ಪಾಲಕ್ಷ, ವಾಸ: ಷಂಶಿಪುರ ಹರಿಹರ ತಾಲೂಕು ದಾವಣಗೆರೆ ಜಿಲ್ಲೆ ಇವರು ಭತ್ತ ಕಟಾವು ಮಷಿನ್‌ ಆಪರೇಟರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 19/11/2022 ರಂದು KA- 22-B-0703 ನೇ ಟಾಟಾ ಎಲ್.ಪಿ.ಟಿ 909 ನೇ ವಾಹನದ ಚಾಲಕರಾದ ಕೃಷ್ಣ.ಕೆ.ಆರ್‌ ರವರು ಭತ್ತ ಕಟಾವು ಮಷಿನ್‌ ನ್ನು ತುಂಬಿಸಿಕೊಂಡು ಸಂತೆಕಟ್ಟೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 11:30 ಗಂಟೆಗೆ ಚಾರ ಗ್ರಾಮದ ಹುತ್ತುರ್ಕೆ  ಪೃಥ್ವಿ ನಿವಾಸದ ಬಳಿ ತಲುಪುವಾಗ ಚಾಲಕ ಕೃಷ್ಣ.ಕೆ.ಆರ್‌ ರವರು ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಎಡಮಗ್ಗುಲಾಗಿ  ಬಿದ್ದ ಪರಿಣಾಮ ವಾಹನದಲ್ಲಿದ್ದ ಭತ್ತ ಕಟಾವು ಮಷಿನ್‌ ಕೆಳಗೆ ಬಿದ್ದಿರುತ್ತದೆ ಈ ಅಪಘಾತದಿಂದ ವಾಹನದಲ್ಲಿದ್ದ ವಿಶ್ವನಾಥನಿಗೆ ಎಡಕಾಲಿನ ಮೊಣಗಂಟಿನ ಬಳಿ ಜಖಂಗೊಂಡಿರುತ್ತದೆ ಪಿರ್ಯಾದಿದಾರರಿಗೆ ತಲೆಯ ಎಡಬದಿಗೆ ಗುದ್ದಿದ ನೋವಾಗಿರುತ್ತದೆ ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕೋಟ: ಪಿರ್ಯಾದಿದಾರರಾದ ಭೀಮಪ್ಪ ಗೌಡ (42), ತಂದೆ: ಬಾಲಪ್ಪ ಗೌಡ, ವಾಸ: ಮೂಕಾಂಬಿಕಾ ಕಂಪೌಂಡ್, ನಿಟ್ಟೂರು ಪೋಸ್ಟ್ ಮತ್ತು ಗ್ರಾಮ, ಉಡುಪಿ ಜಿಲ್ಲೆ ಇವರು ದಿನಾಂಕ 19/11/2022 ರಂದು ಸಾಸ್ತಾನದಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ ತನ್ನ ಮೋಟಾರು ಸೈಕಲ್ ನಂಬ್ರ KA-20-EG-3937 ನೇದರಲ್ಲಿ ಉಡುಪಿ ಕಡೆಗೆ ಹೊರಟು ಸಂಜೆ 06:00 ಗಂಟೆಗೆ ಪಾಂಡೇಶ್ವರ ಗ್ರಾಮ ಪಾಂಡೇಶ್ವರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುವಾಗ ಪಾಂಡೇಶ್ವರ ಕಡೆಯಿಂದ ಸ್ಕೂಟರ ನಂಬ್ರ  KA-20-EK-0563 ನೇದರ ಸವಾರ ದಿನೇಶ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಢಿಕ್ಕಿ ಹೊಡೆದನು. ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಬದಿಯ ತಲೆಗೆ ರಕ್ತ ಗಾಯವಾಗಿದ್ದು, ಬಲಬದಿಯ ಭುಜ, ಮೊಣಕೈ ಗಂಟು ಮತ್ತು ಬಲಬದಿಯ ಕೈ ಹಾಗೂ ಕಾಲು ಬೆರಳಿಗೆ ತರಚಿದ ಗಾಯವಾಗಿರುವುದಲ್ಲದೇ ಎಡಬದಿಯ ಕಾಲಿನ ಮೊಣಗಂಟು ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 202/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಮೊಹಮ್ಮದ್ ಸಮೀರ (30), ತಂದೆ: ಜೈನುಲ್ಲಾ ಅಭಿದಿನ್, ವಾಸ: ತೂದಳ್ಳಿ ರಸ್ತೆ , ಮಾರ್ಕೆಟ್ ಹತ್ತಿರ, ಜುಮ್ಮಾನ ಕಾಂಪ್ಲೆಕ್ಸ್ , ಶಿರೂರು ಗ್ರಾಮ ಬೈಂದೂರು ತಾಲೂಕು ಇವರ ತಂದೆ ಜೈನುಲ್ಲಾ ಅಭಿದಿನ್ (62) ರವರು ದಿನಾಂಕ 14/11/2022 ರಂದು ಬೆಳಿಗ್ಗೆ 6:00 ಗಂಟೆಗೆ ಪಿರ್ಯಾದಿದಾರರ ತಾಯಿಯವರಲ್ಲಿ ಭಟ್ಕಳದ ತಂಗಿಯ  ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ದಿನಾಂಕ 16/11/2022 ರಂದು ಪಿರ್ಯಾದಿದಾರರ ತಂದೆಯ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿರುವುದನ್ನುಕಂಡು ಪಿರ್ಯಾದಿದಾರರು ತಂದೆಯ ತಂಗಿ ಕಂಬ್ರುನ್ ರವರಿಗೆ ಕರೆ ಮಾಡಿ ವಿಚಾರಿಸಿದಲ್ಲಿ  ಜೈನುಲ್ಲಾ ಅಭಿದಿನ್ ರವರು ಮನೆಗೆ ಬಂದಿರುವುದಿಲ್ಲವಾಗಿ ತಿಳಿಸಿದ್ದು. ಪಿರ್ಯಾದಿದಾರರು ಭಟ್ಕಳದಲ್ಲಿರುವ  ಸಂಬಂದಿಕರ ಮನೆಯವರಲ್ಲಿ, ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ  ಪಿರ್ಯಾದಿದಾರರ ತಂದೆಯವರು ಈ ವರೆಗೂ ಪತ್ತೆಯಾಗದೇ ಇದ್ದು, ಜೈನುಲ್ಲಾ ಅಭಿದಿನ್ ರವರು ತಂಗಿ ಮನೆಗೂ ಹೋಗದೇ ,ಮನೆಗೂ ವಾಪಾಸ್ಸು ಬಾರದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 226/2022 ಕಲಂ: ಗಂಡಸು  ಕಾಣೆ    ಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಮಲ್ಪೆ: ಪಿರ್ಯಾದಿರರಾದ ಮಾಲತಿ ಎಂ (38), ಗಂಡ:ವಿಜಯ್ ಶೆಟ್ಟಿ, ವಾಸ: ಪರಿಸರ ಬೆಟ್ಟು ಮನೆ, ಕಕ್ಕುಜೆ, ದೊಂಡೆರಂಗಡಿ,ಕಾರ್ಕಳ,ಉಡುಪಿ ಜಿಲ್ಲೆ ಇವರ  ಗಂಡ ವಿಜಯ ಶೆಟ್ಟಿ(47) ರವರು ಮಂಗಳೂರಿನ ಒಳಚ್ಚಿಲ್ ಎಕ್ಸಪರ್ಟ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಕಳೆದ 11 ತಿಂಗಳಿನಿಂದ ಉದ್ಯೋಗ ಮಾಡಿಕೊಂಡಿದ್ದು ಪಿರ್ಯಾದಿದಾರರು ತನ್ನ ಗಂಡನ ಜೊತೆ ಮಂಗಳೂರಿನ ಮೇರ್ಲಪದವಿನಲ್ಲಿ ಬಾಡಿಗೆ ಮನೆಯಲ್ಲಿ  ವಾಸ್ತವ್ಯವಿದ್ದು, ಪಿರ್ಯಾದಿದಾರರು  ತನ್ನ ಮಗು ಹಿಮಾನ್ವಿಯ ಅನಾರೋಗ್ಯದ ಬಗ್ಗೆ ಚಿಕಿತ್ಸೆ ಕೊಡಿಸಲು ದಿನಾಂಕ 04/11/2022 ರಂದು ತನ್ನ ತಂಗಿಯ ಮನೆಯಾದ ಕೊಡವೂರಿನ ಮಧ್ವನಗರದ ಮೂಡುಬೆಟ್ಟುವಿಗೆ ಬಂದಿದ್ದು, ಪಿರ್ಯಾದಿದಾರ ಗಂಡ ವಿಜಯ ಶೆಟ್ಟಿ ರವರು ದಿನಾಂಕ 05/11/2022 ರಂದು ಪಿರ್ಯಾದಿದಾರರ ತಂಗಿಯ ಮನೆಗೆ  ಬಂದು ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ ದಿನಾಂಕ 06/11/2022ರಂದು ಸಂಜೆ 05:00 ಗಂಟೆಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿರುತ್ತಾರೆ, ನಂತರದ ದಿನಗಳಲ್ಲಿ ದಿನಾಂಕ 06/11/2022 ರಿಂದ 11/11/2022 ರವರೆಗೆ ಪಿರ್ಯಾದಿದಾರ ಗಂಡ ಫೋನ್ ಸಂಪರ್ಕದಲ್ಲಿದ್ದು ನಂತರ ಪಿರ್ಯಾದಿದಾರರಿಗೆ  ಯವುದೇ ಫೋನ್ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ, ಪಿರ್ಯಾದಿದಾರರು  ಅವರ ಗಂಡನಿಗೆ ಫೋನ್ ಕರೆ ಮಾಡಿದರು ಸ್ವೀಕಾರ ಮಾಡಿರುವುದಿಲ್ಲ, ಪಿರ್ಯಾದಿದಾರರು ಮಂಗಳೂರಿನ ಬಾಡಿಗೆ ಮನೆಗೆ ಹೋಗಿ  ನೋಡಿದರು ಅಲ್ಲಿ ಪಿರ್ಯಾದಿದಾರರ ಗಂಡ ಇರುವುದಿಲ್ಲ , ಅವರು  ಕೆಲಸ ಮಾಡುತ್ತಿದ್ದ ಎಕ್ಸಪರ್ಟ್ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ  ವಿಚಾರಿಸಿದಾಗ ಅವರು  ದಿನಾಂಕ 07/11/2022 ರಿಂದ ಕಾಲೇಜಿಗೆ ಬಂದಿರುವುದಿಲ್ಲವಾಗಿ ತಿಳಿಸಿದ್ದು, ಪಿರ್ಯಾದಿದಾರರ  ಗಂಡ ದಿನಾಂಕ 06/11/2022 ರಂದು  ತನ್ನ ತಂಗಿಯ ಮನೆಯಾದ ಮೂಡುಬೆಟ್ಟುವಿನಿಂದ ಮಂಗಳೂರಿನ ಕಾಲೇಜಿಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ  ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಸಂತೋಷ್ ಮೊಗವೀರ (34), ತಂದೆ:ಬಿಳಿಯ ಮೊಗವೀರ, ವಾಸ: ಕಳಿಹಿತ್ಲು ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ಯಕ್ಷಗಾನ ಕಲಾವಿದರಾಗಿದ್ದು ಚಿಕ್ಕ ಮೇಳ ಎಂಬ ಯಕ್ಷಗಾನವನ್ನು ನಡೆಸಿಕೊಂಡಿರುತ್ತಾರೆ. ಇವರು  ಮೇಳದ ಸಾಮಾಗ್ರಿಗಳೊಂದಿಗೆ ಶಿರೂರು ಗ್ರಾಮದ ಶಿರೂರು ಮೇಲ್ಪೆಟೆ ಎಂಬಲ್ಲಿ ಸುಭಾಷ್ ಪ್ರಭು ರವರ ಒಂದು ಕೊಠಡಿಯಲ್ಲಿ ವಾಸವಾಗಿರುತ್ತಾರೆ, ಯಕ್ಷಾಗಾನ ಪ್ರಯುಕ್ತ ಊರೂರು ತಿರುಗಿ ತಮ್ಮ ಕಾರ್ಯಕ್ರಮ  ನಡೆಸಿಕೊಂಡಿರುತ್ತಾರೆ.ಹೀಗಿರುತ್ತಾ ಪಿರ್ಯಾದಿದಾರರಿಗೆ ಆಪಾದಿತ ಗುರುರಾಜ್ ಎಂಬುವವನು ಫೇಸ್ ಬುಕ್ ನಲ್ಲಿ 2 ವರ್ಷದ ಹಿಂದೆಯೆ ಪರಿಚಯವಾಗಿರುತ್ತಾನೆ. ದಿನಾಂಕ 09/11/2022 ರಂದು ಪಿರ್ಯಾದಿದಾರರ ಕೊಠಡಿಗೆ ಬಂದು ಅವರೊಂದಿಗೆ ಉಳಿದುಕೊಂಡಿರುತ್ತಾನೆ. ದಿನಾಂಕ 12/11/2022 ರಂದು ಪಿರ್ಯಾದಿದಾರರು ಚಿಕ್ಕ ಮೇಳ ಕಾರ್ಯಕ್ರಮದ ಪ್ರಯುಕ್ತ ಹೊರಟಾಗ ಅವರೊಂದಿಗೆ ಹೋಗಿದ್ದು ಕುಂದಾಪುರ  ತಾಲೂಕಿನ ಹೆರಿಕುದ್ರು ಎಂಬಲ್ಲಿ ಕಾರ್ಯಕ್ರಮ ನಡೆದಿದ್ದು ಅಲ್ಲಿ  ಪಿರ್ಯಾದುದಾರರಿಂದ ಆಪಾದಿತನು Realme ಕಂಪೆನಿಯ ಮೊಬೈಲ್ ನ್ನು ವಿಡಿಯೋ ಮಾಡಲು ಪಡೆದುಕೊಂಡಿರುತ್ತಾನೆ. ನಂತರ ಅಲ್ಲಿಂದ ಫಿರ್ಯಾದುದಾರರಿಗೆ ತಿಳಿಸದೇ ಶಿರೂರು ಮೇಲ್ಪೆಟೆಗೆ ಬಂದು ಪಿರ್ಯಾದಿದಾರರು ವಾಸ್ಥವ್ಯವಿರುವ ಕೊಠಡಿಯ ಬೀಗವನ್ನು ಒಡೆದು  ಅಲ್ಲಿ ಪಿರ್ಯಾದಿದಾರರು  ಬ್ಯಾಗ್ ನಲ್ಲಿಟ್ಟಿದ್ದ  1) 12 ಗ್ರಾಂ  ತೂಕದ ಚಿನ್ನದ ಕೊರಳಿನ ಚೈನ್ ಮೌಲ್ಯ ರೂಪಾಯಿ 45,000/-,  2) 4 ಗ್ರಾಂ ತೂಕದ ಚಿನ್ನದ ಉಂಗುರ ಮೌಲ್ಯ  ರೂಪಾಯಿ 15,000, 3) ಕಾಣಿಕೆ ಡಬ್ಬಿಯಲ್ಲಿದ್ದ ರೂಪಾಯಿ 10,000/- ನಗದು , 4) ಇನ್ನೊಂದು ಡಬ್ಬಿಯಲ್ಲಿದ್ದ ನಗದು 1000/- ರೂಪಾಯಿ, 5) 14,000 ಮೌಲ್ಯದ Realme ಮೊಬೈಲ್ ಫೋನ್  ನ್ನು ದಿನಾಂಕ 12/11/2022 ರಂದು 19:30 ಗಂಟೆಯಿಂದ ದಿನಾಂಕ 13/11/2022 ರಂದು 02:00 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾನೆ ಕಳುವಾದ ಸ್ವೊತ್ತಿನ ಒಟ್ಟು ಮೌಲ್ಯ 85,000 /- ರೂಪಾಯಿ ಆಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 227/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 21-11-2022 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080