ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 21/11/2022 ರಂದು ಬೆಳಿಗ್ಗೆ 10:05 ಗಂಟೆಗೆ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಕೆದಿಂಜೆ ದುರ್ಗಾ ಪ್ಯೂಲ್ ಪೆಟ್ರೋಲ್ ಬಂಕ್ ಎದುರಿನಲ್ಲಿ  ಹಾದು ಹೋಗಿರುವ ಕಾರ್ಕಳ –ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ KA20ME4083 ನೇ ನಂಬ್ರದ ಕಾರಿನ ಚಾಲಕ ರಫಿಕ್ ರವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುವಾಗ ಹತೋಟಿ ತಪ್ಪಿ ಕಾರು ಆತನ ತೀರಾ ಎಡಬಿದಿಗೆ ಚಲಿಸಿ  ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಮೋರಿಯಿಂದ ಕೆಳಗೆ ವಾಹನ ಸಮೇತ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೈಷ್ಣವ್ ನ ತಲೆಗೆ ಗಂಭೀರ ಗಾಯವಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರಿಗೆ ಹಾಗೂ ಇತರರಿಗೆ ಗಾಯವಾಗಿದ್ದು, ಸದರಿ ಪ್ರಕರಣದಲ್ಲಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಂ ಕಾರ್ಕಳ ಇಲ್ಲಿಗೆ ಕರೆದುಕೊಂಡು ಬರುವಾಗ ಗಾಯಾಳುಗಳ ಪೈಕಿ ವೈಷ್ಣವ್ ಈತನು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ. ಅಪರಾಧ ಕ್ರಮಾಂಕ  143//2022 ಕಲಂ: 279, 337,338 ಭಾದಸಂ ಯನ್ನು 304(A) ಭಾ.ದ.ಸಂ ರಂತೆ ಪ್ರಕರಣ ದಾಕಲಿಸಲಾಗಿದೆ.
  • ಕುಂದಾಪುರ: ದಿನಾಂಕ 20/11/2022 ರಂದು ಸಂಜೆ  ಸುಮಾರು 6:45 ಗಂಟೆಗೆ ಕುಂದಾಪುರ ತಾಲೂಕು, ಹಂಗಳೂರು ಗ್ರಾಮದ ಮುಯುದ್ದೀನ ಜುಮ್ಮಾ ಮಸೀದಿಯ  ಎದುರುಗಡೆ ಪಶ್ಚಿಮ ಬದಿಯ  NH66 ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ  ಮೊಹಮ್ಮದ್‌ಎಂಬವರು KA20-EV-1187 ನೇ TVS Jupiter ಸ್ಕೂಟರ್‌‌‌ನಲ್ಲಿ ಅವರ ಪತ್ನಿ ಪಿರ್ಯಾದಿ ಶ್ರೀ ಮತಿ ಅತಿಕಾ    ಪ್ರಾಯ  53    ವರ್ಷ   ಗಂಡ : ಮೊಹಮ್ಮದ್   ವಾಸ:  ಗಣೇಶ ನಗರ  ಮೊಹಮ್ಮದಿಯ ಕ್ಯಾಶ್ಯೂ  ಪ್ಯಾಕ್ಟರಿ ಎದುರುಗಡೆ,  ಕುಂಭಾಶಿ ಎಂಬವರನ್ನು ಸಹ ಸವಾರಾಗಿ ಕುಳ್ಳಿರಿಸಿಕೊಂಡು ಕುಂಭಾಶಿ  ಕಡೆಯಿಂದ ಮಾವಿನಕಟ್ಟೆ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಎದುರುಗಡೆಯಿಂದ ಬಂದ ವಾಹನಗಳನ್ನು ನೋಡಿ ಒಮ್ಮೇಲೆ  ಬ್ರೇಕ್‌ಹಾಕಿದ ಪರಿಣಾಮ, ಸ್ಕೂಟರ್‌ಸ್ಕಿಡ್‌ ಆಗಿ ವಾಹನ ಸಮೇತ ರಸ್ತೆಗೆ ಬಿದ್ದು,  ಪಿರ್ಯಾದಿ ಶ್ರೀಮತಿ ಅತಿಕಾ  ರವರ ಎಡಕೈಗೆ ಒಳಜಕಂ ಗಾಯ ಹಾಗೂ  ಆಪಾದಿತನಿಗೆ ಎಡಕೈ ಹಾಗೂ ಎಡಕಾಲಿಗೆ  ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕುಂದಾಪುರ  ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ  124/2022   ಕಲಂ 279, 337   ಭಾ.ದ.ಸಂ ರಂತೆ ಪ್ರಕರಣ ದಾಕಲಿಸಲಾಗಿದೆ.   

ಇತರ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿ ಶಶಿಕಾಂತ, ಪ್ರಾಯ: 20 ವರ್ಷ, ತಂದೆ: ಗಣೇಶ್‌, ವಾಸ: ಶ್ರೀ ಶಶಿ ಕೃಪಾ ನಿಲಯ, ಪಡುಗೋಪಾಡಿ, ಗೋಪಾಡಿ ಗ್ರಾಮ ಇವರು ತನ್ನ ಸ್ನೇಹಿತ ಮಂಜುನಾಥನೊಂದಿಗೆ ದಿನಾಂಕ: 20.11.2022 ರಂದು ರಾತ್ರಿ 09:30 ಗಂಟೆಗೆ ಕೊರ್ಗಿ ಗ್ರಾಮದ  ಚಾರ್‌ಕೊಟ್ಟಿಗೆ ಅರ್ಚನಾ ಬಾರ್‌ಗೆ ಊಟಕ್ಕೆ ಹೋಗಿದ್ದು ಬಾರ್‌ನ ಗಾರ್ಡನ್‌ ಏರಿಯಾದಲ್ಲಿರುವ ಟೇಬಲ್‌ನಲ್ಲಿ ಕುಳಿತು ಊಟ ಮಾಡುತ್ತಿರುವಾಗ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಮುಖ ಪರಿಚಯವಿರುವ ಕುಂಬಾಶಿ ಗಣೇಶ್‌, ಡೊಂಗ್ರೆ ಶಶಿರಾಜ್‌, ಭರತ್‌ಮತ್ತು ಪ್ರಮೋದ್ ಎಂಬವರು ಪಿರ್ಯಾದಿದಾರರು ಕುಳಿತಿದ್ದಲ್ಲಿಗೆ ಬಂದು ಏನು ಏರು ಧ್ವನಿಯಲ್ಲಿ ಮಾತನಾಡುತ್ತೀದ್ದಿರಲ್ಲಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿದಾರರು ಗಲಾಟೆ ಬೇಡವೆಂದು ಟೇಬಲ್‌ನಿಂದ ಎದ್ದು ಹೊರಟಿದ್ದು ಆಗ ಕುಂಬಾಶಿ ಗಣೇಶ್‌ ಮತ್ತು ಡೊಂಗ್ರೆ ಶಶಿರಾಜ್‌ಪಿರ್ಯಾದಿದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ  ಎಲ್ಲಿಗೆ ಹೋಗುತ್ತೀಯಾ ಎಂದು ಅಲ್ಲಿಯೇ ಇದ್ದ ಒಂದು ಸೋಡಾ ಬಾಟಲಿಯಿಂದ ಡೋಂಗ್ರೆ ಶಶಿರಾಜ್‌ನು ಪಿರ್ಯಾದಿದಾರರ ತಲೆಗೆ ಹೊಡೆದಿದ್ದು, ಕುಂಬಾಶಿ ಗಣೇಶನು ಹೊಡಿ ಎಂದು ಹೇಳಿ ನಂತರ ಆತನ ಕಾಲಿನಿಂದ ಪಿರ್ಯಾದಿದಾರರ ಹೊಟ್ಟೆಗೆ ತುಳಿದಿರುತ್ತಾನೆ. ಆಗ ಪಿರ್ಯಾದಿದಾರರ ಜೊತೆಗಿದ್ದ ಮಂಜುನಾಥನು ಪಿರ್ಯಾದಿದಾರರನ್ನು ಉಪಚರಿಸುತ್ತಿದ್ದಿದ್ದು ಆಗ ಭರತ್‌ಮತ್ತು ಪ್ರಮೋದ್ ಈ ಬಗ್ಗೆ ಪೊಲೀಸ್‌ದೂರು ಕೊಟ್ಟರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂಬುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ  ನಂ: 63/2022, ಕಲಂ: 341,323,324,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.  

ಮನುಷ್ಯ ಕಾಣೆ

  • ಹೆಬ್ರಿ: ಫಿರ್ಯಾಧಿ: ವಾಸ: ವಿರೇಶ್ವರ ನಿಲಯ ಜಡ್ಡುಬೈಲು 38 ಕಳ್ತೂರು ಗ್ರಾಮ ಬ್ರಹ್ಮಾವರ ಇವರ ಗಂಡ ರವಿ ನಾಯ್ಕ ( 38 ವರ್ಷ ) ರವರು ಸುಮಾರು 4-5 ವರ್ಷಗಳಿಂದ ದೊಡ್ಡನಗುಡೆ ಬಾಳಿಗಾ ಆಸ್ಪತ್ರೆಯಲ್ಲಿ ಮಾನಸಿಕ ರೋಗದ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 19/11/2022 ರಂದು ಸಂಜೆ 04:00 ಗಂಟೆಗೆ ಹುಳುಕಜ್ಜಿ ಚಿಕಿತ್ಸೆ ಬಗ್ಗೆ ಹೆಬ್ರಿ ರಾಘವೇಂದ್ರ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 67/2022 ಕಲಂ:ಮನುಷ್ಯ ಕಾಣೆ  ಯಂತೆ ಪ್ರಕರಣ ದಾಕಲಿಸಲಾಗಿದೆ.  

ಕಳವು ಪ್ರಕರಣ

  • ಶಂಕರನಾರಾಯಣ:  ಪಿರ್ಯಾದಿ : ಸಂಪಾ.ಸಿ.  ಶೆಟ್ಟಿಪ್ರಾಯ 64 ವರ್ಷ ಗಂಡ. ದಿ. ಚಂದ್ರ ಮೋಹನ  ಶೆಟ್ಟಿ  ವಾಸ. ರುಕ್ಮಿಣಿ 76 ಹಾಲಾಡಿ ಗ್ರಾಮ ಇವರ  ವಾಸದ  ಮನೆಯಾದ ಕುಂದಾಪುರ  ತಾಲೂಕಿನ  76 ಹಾಲಾಡಿ  ಗ್ರಾಮದ ರುಕ್ಮಿಣಿ  ಎಂಬ ಹೆಸರಿನ ಮನೆಯ  ಬಾಗಿಲನ್ನು ಯಾರೋ  ಕಳ್ಳರು ದಿನಾಂಕ 02.10.2022 ರಿಂದ  ದಿನಾಂಕ 11.11.2022  ರ ಮದ್ಯದ ಅವಧಿಯಲ್ಲಿ  ಮುರಿದು ಒಳ ಪ್ರವೇಶಿಸಿ  1 ಬೆಳ್ಳಿಯ  ಹರಿವಾಣ, 4 ಬೆಳ್ಳಿಯ   ಬೌಲ್ಸ್ 1 ಬೆಳ್ಳಿಯ  ಲೋಟ , 1 ಬೆಳ್ಳಿಯ ಕುಂಕುಮ ಡಬ್ಬ  2 ಬೆಳ್ಳಿಯ  ಚಮಚ  4 ಚಿನ್ನದ  ಸಣ್ಣ ಗುಂಡು  ಅಂದಾಜು  ಸುಮಾರು  2.530 ಗ್ರಾಂ ತೂಕ,  ನಗದು ಹಣ 4000/-  ಇವುಗಳನ್ನು  ಕಳವು  ಮಾಡಿಕೊಂಡು  ಹೋಗಿರುತ್ತಾರೆ. ಕಳವು  ಆದ  ಸೊತ್ತುಗಳ   ಒಟ್ಟು  ಮೌಲ್ಯ  ಸುಮಾರು  30,000 / ಆಗಬಹುದು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 123 /2022  ಕಲಂ: 454,457 , 380   ಭಾ.ಧಂಸಂ  ರಂತೆ ಪ್ರಕರಣ ದಾಕಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 21-11-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080