ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕದಿರಣಗಳು :

 • ಕುಂದಾಪುರ:  ದಿನಾಂಕ 20/11/2021 ರಂದು ಬೆಳಿಗ್ಗೆ  ಸುಮಾರು 9:40 ಗಂಟೆಗೆ, ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಸಂಗಮ್‌ ಜಂಕ್ಷನ್‌ ಬಳಿ, ಪಶ್ಚಿಮ  ಬದಿಯ  NH 66 ರಸ್ತೆಯಲ್ಲಿ, ಆಪಾದಿತ ಡ್ಯಾನಿಶ್‌ ಎಂಬವರು ನೊಂದಣಿ  ನಂಬ್ರ  ಇಲ್ಲದ ಹೊಸ KIA  SELTOS  ಕಾರನ್ನು ಉಡುಪಿ ಕಡೆಯಿಂದ ಬೈಂದೂರು  ಕಡೆಗೆ   ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಬಂದು,   ಅದೇ  ದಿಕ್ಕಿನಲ್ಲಿ  ಚಂದ್ರಶೇಖರ  ಶೆಟ್ಟಿ  ಎಂಬವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA22-EE-3871ನೇ ಬೈಕಿಗೆ   ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ ಚಂದ್ರಶೇಖರ  ಶೆಟ್ಟಿ  ರವರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಅವರ   ತಲೆಗೆ ಒಳಜಖಂ ಗಾಯ ಹಾಗೂ ಮೈ ಕೈಗೆ ತರಚಿದ ಗಾಯವಾಗಿ,  ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಸುಧೀರ್‌  ಪ್ರಾಯ  40    ವರ್ಷ  ತಂದೆ :  ಮೀರಾ    ವಾಸ:  ಬಿ.ಹೆಚ್‌‌ಎಂ ರಸ್ತೆ, ಮಕ್ಕಿ ಮನೆ, ಕಸಬಾ   ಗ್ರಾಮ    ಕುಂದಾಪುರ  ತಾಲೂಕು ಇವರು ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 92/2021 ಕಲಂ 279,338 IPC   ಐಪಿಸಿ  ಯಂತೆ ಪ್ರಕರಣದಾಖಲಿಸಲಾಗಿದೆ. 
 • ಕುಂದಾಪುರ: ದಿನಾಂಕ 20/11/2021  ರಂದು   ಬೆಳಿಗ್ಗೆ ಸುಮಾರು 10:50 ಗಂಟೆಗೆ, ಕುಂದಾಪುರ  ತಾಲೂಕಿನ ಕಸಬಾ  ಗ್ರಾಮದ  ಮಾಸ್ತಿಕಟ್ಟೆ ರಸ್ತೆಯ  ಭರತ್‌‌ ಜ್ಯುವೆಲ್ಲರ್‌‌  ಶಾಪ್‌‌ ಬಳಿ ರಸ್ತೆಯಲ್ಲಿ, ಆಪಾದಿತ  ಶೇಖರ ಎಂಬವರು KA20-W-2268ನೇ ಬೈಕಿನಲ್ಲಿ ಪಿರ್ಯಾದಿದಾರರಾದ  ಅವರ ಮಾವ ಕೊರಗ ಪೂಜಾರಿ  ಪ್ರಾಯ  70 ವರ್ಷ ತಂದೆ  ದಿ. ಪಂಜು ಪೂಜಾರಿ ವಾಸ:  ಶ್ರೀ  ಮೈಲಾರೇಶ್ವರ  ದೇವಸ್ಥಾನದ ಬಳಿ, ಚಿಕ್ಕನ್‌‌ಸಾಲ್‌‌‌, ಕಸಬಾ  ಗ್ರಾಮ, ಕುಂದಾಪುರ ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು, ಮಾಸ್ತಿಕಟ್ಟೆ  ಕಡೆಯಿಂದ  ಚಿಕ್ಕನ್‌‌ಸಾಲ್‌  ರಸ್ತೆ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ರಸ್ತೆಗೆ  ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುದನ್ನು ತಪ್ಪಿಸಲು ಒಮ್ಮೇಲೆ  ಬ್ರೇಕ್‌‌ ಹಾಕಿದ ಪರಿಣಾಮ  ಬೈಕ್‌‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದಾಗ ಕೊರಗ ಪೂಜಾರಿಯವರ ಬಲಕಾಲು  ಬೈಕಿನ ಚಕ್ರಕ್ಕೆ ಸಿಲುಕಿ ಅವರ ಬಲಕಾಲಿನ ಪಾದದ ಗಂಟಿಗೆ  ಹಾಗೂ ಪಾದದ ಮೇಲೆ  ರಕ್ತಗಾಯ  ಹಾಗೂ ಒಳ ನೋವು  ಉಂಟಾಗಿ ಕುಂದಾಪುರ  ಮಂಜುನಾಥ  ಆಸ್ಪತ್ರೆಯಲ್ಲಿ   ಒಳ ರೋಗಿಯಾಗಿ ದಾಖಲಾಗಿರುತ್ತಾರೆ.  ಈ ಬಗ್ಗೆ  ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 93/2021 ಕಲಂ 279,337 IPC   ಐಪಿಸಿ  ಯಂತೆ ಪ್ರಕರಣದಾಖಲಿಸಲಾಗಿದೆ. 

ದರೋಡೆ ಪ್ರಕರಣಗಳು

 • ಪಡುಬಿದ್ರಿ: ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾದ ಕ್ರಮಾಂಕ  17/2021 ಕಲಂ 392 ಐಪಿಸಿ ಪ್ರಕರಣದ ಕಡತವು ಸರಹದ್ದಿನ ಆಧಾರದ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿರುವ ಪ್ರಕರಣವಾಗಿದ್ದು,  ಪಿರ್ಯಾದುದಾರ ಮನೀಶ್ ಕುಮಾರ್, ಪ್ರಾಯ: 38 ವರ್ಷ, ತಂದೆ: ಸತೇಂದ್ರ ಕುಮಾರ್, ವಾಸ: ಎಸ್.ಬಿ.ಐ, ಸ್ಟಾಫ್ ಕ್ವಾಟ್ರಸ್ ನಂ.ಜಿ-2, ಇಂದಿರಾ ನಗರ, ಚೀಂಬಲ್, ತೀಸ್ವಾಡಿ, ಉತ್ತರ ಗೋವಾ  ಇವರು ದಿನಾಂಕ 22.10.2021 ರಂದು  ತಮ್ಮ ಕುಟುಂಬ ಸಮೇತ ರೈಲು ಗಾಡಿಸಂಖ್ಯೆ 09262, ಪೋರಬಂದರ್–ಕೊಚುವೆಲಿ ಎಕ್ಸ್ ಪ್ರೆಸ್ ರೈಲು ಗಾಡಿಯಲ್ಲಿ  ಮಡಗಾವ್ ರೈಲು ನಿಲ್ದಾಣದಿಂದ ಬೋರ್ಡಿಂಗ್ ಮಾಡಿ, ಎಸ್-7 ಬೋಗಿಯಲ್ಲಿ ಸೀಟ್ ನಂಬ್ರ 1,2,4,10,11,12,17 ಮತ್ತು 18 ನೇ ನಂಬ್ರದ ಸೀಟಿನಲ್ಲಿ ಪ್ರಯಾಣಿಸುತ್ತಾ, ಪಿರ್ಯಾದಿದಾರರ ಹೆಂಡತಿ ಸೀಟ್ ನಂಬ್ರ 1 ರಲ್ಲಿ ಮಲಗಿದ್ದು, ಸದ್ರಿ ರೈಲುಗಾಡಿಯು ಉಡುಪಿ ರೈಲು ನಿಲ್ದಾಣದಿಂದ ಹೊರಟು ದಿನಾಂಕ: 23.10.2021 ರಂದು ಬೆಳಿಗ್ಗಿನ ಜಾವ ಸುಮಾರು 03:20 ಗಂಟೆಯ ವೇಳೆಗೆ ಸುಮಾರು 25-30 ವರ್ಷ  ಪ್ರಾಯದ  ಹಳದಿ ಟೀ-ಶರ್ಟ್‌ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಪಿರ್ಯಾದಿದಾರರ ಹೆಂಡತಿ ಮಲಗಿದ್ದ ಸೀಟಿನ ಬಳಿ ಬಂದು, ಅವರ ಬಳಿ ಇದ್ದ ಪರ್ಪಲ್ ಬಣ್ಣದ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು, ನಿಧಾನವಾಗಿ ಹೋಗುತ್ತಿದ್ದ ರೈಲುಗಾಡಿಯಿಂದ ಹೊರಗೆ ಜಿಗಿದು ಓಡಿ ಹೋಗಿರುತ್ತಾನೆ.   ಸದ್ರಿ ವ್ಯಕ್ತಿಯು ಕಿತ್ತುಕೊಂಡು ಹೋದ ಬ್ಯಾಗಿನಲ್ಲಿ 1] ಆಧಾರ್ ಕಾರ್ಡ್‌ ಗಳು-03, 2] ಪಾನ್ ಕಾರ್ಡ್‌-01, 3] ವೋಟರ್ ಐಡಿ -02, 4] ಎಂಪ್ಲಾಯ್ ಐಟಿ ಕಾರ್ಡ್‌-01, 5] ಸುಮಾರು15,000/- ರೂ ಮೌಲ್ಯದ ಪೋಕೋ ಮೊಬೈಲ್ ಫೋನ್-01, 6] ನಗದು 10,000/- ರೂಪಾಯಿ ಸೇರಿದಂತೆ ಒಟ್ಟು 25,000/- ರೂ ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021 ಕಲಂ 392 ಐಪಿಸಿ  ಯಂತೆ ಪ್ರಕರಣದಾಖಲಿಸಲಾಗಿದೆ. 

ಇತರ ಪ್ರಕರಣಗಳು

 • ಮಲ್ಪೆ:  ಪಿರ್ಯಾಧಿದಾರರಾದ ರಾಜನ್ ಥೋಮಸ್(54) ತಂದೆ: ಎಂ ಎಂ ಥೋಮಸ್ ವಾಸ:  ರಾಯಲ್ ಸೀ ಫುಡ್ ಮಲ್ಪೆ ಹಾಗೂ  ಆರೋಪಿತರುಗಳಾದ 1.ಷಹಾಸ್ ಪಿ ಅಹಮದ್ ಸಿಸಿ 16/1956 ವಾಸ: ಎಡಕೊಚ್ಚಿ  ,ಕೊಚ್ಚಿ 2. ಸಜಲ್ ಮೋನ್  ಕೆ ಎ ವಾಸ: ಎರ್ನಾಕುಲಮ್  ಕೇರಳ  ಇವರುಗಳು 2019 ರಿಂದ ವ್ಯವಹಾರ ಮಾಡಿಕೊಂಡಿದ್ದು , ಪಿರ್ಯಾಧಿದಾರರೊಂದಿಗೆ  ಆರೋಪಿತರುಗಳು ಉತ್ತಮ ವಿಶ್ವಾಸ  ಬೆಳೆಸಿಕೊಂಡಿದ್ದರು  ಆ ವಿಶ್ವಾಸದಿಂದ ಪಿರ್ಯಾಧಿದಾರರು ಸರಬರಾಜು ಮಾಡುವ ಉತ್ಪನ್ನಗಳ ಶೇಕಡಾ 80 ರಷ್ಟು ಹಣವನ್ನು ವಾರಕ್ಕೊಮ್ಮೆ ನೀಡುವುದಾಗಿ ಮಾತುಕತೆ  ನಡೆಸಿದ್ದು ಅದರಂತೆ  ವ್ಯವಹಾರ ಉತ್ತಮವಾಗಿ ನಡೆಯುತ್ತಿದ್ದು ,ಪಿರ್ಯಾಧಿದಾರರು ಮತ್ತು ಮೂವ ರು ಸ್ನೇಹಿತರು  ಸೇರಿ  ಸಮುದ್ರ ಉತ್ಪನ್ನಗಳ ರಪ್ತು ಮಾಡುವ  ವ್ಯವಹಾರ  ಉದ್ದೇಶದಿಂದ  2021 ರಲ್ಲಿ ರೋಯಲ್ ಸೀ ಫುಡ್  ಎಂಬ ಪಾಲುದಾರಿಕೆ  ಹೊಸ ಸಂಸ್ಥೆ ನಡೆಸಲು ಪ್ರಾರಂಬಿಸಿದ್ದು. ,ಈ ಸಂಸ್ಥೆಯಲ್ಲಿ  ವ್ಯವಹಾರ ಮುಂದುವರಿಸಿದ್ದು , ಆರೋಪಿತರು ಪಿರ್ಯಾಧಿದಾರ ರಿಗೆ ಹೆಚ್ಚು ಹೆಚ್ಚು ಉತ್ಪನ್ನಗಳ ಸರಬರಾಜು ಮಾಡಲು  ಬೇಡಿಕೆ ಇಟ್ಟಂತೆ ಪಿರ್ಯಾಧಿದಾರರು ಬೇರೆಯವರಿಂದ  ಉತ್ಪನ್ನಗಳನ್ನು ಖರೀದಿಸಿ  ಆರೋಪಿತರಿಗೆ ಸರಬರಾಜು ಮಾಡುತ್ತಿದ್ದು , ಆರೋಪಿತರು ಮೊದಮೊದಲು ಪಿರ್ಯಾಧಿದಾರರಿಗೆ ಹಣವನ್ನು ಸರಿಯಾಗಿ ಪಾವತಿಸುತ್ತಿದ್ದು ನಂತರದ ದಿನಗಳಲ್ಲಿ ಸ್ವಲ್ಪ ಸ್ವಲ್ಪ ಹಣ ಕಡಿಮೆ ನೀಡಲು ಪ್ರಾರಂಬಿಸಿದ್ದು,  2021  ರ ಮಾರ್ಚ್ ಸಮಯ ಆರೋಪಿತರು ಪಿರ್ಯಾಧಿದಾರರ ಸಂಸ್ಥೆಗೆ 1,47,33,069 ರೂ ಬಾಕಿ ಉಳಿಸಿಕೊಂಡಿದ್ದು . ಪಿರ್ಯಾಧಿದಾರರು  ಕೂಡಲೇ ಆರೋಪಿತರೊಡನೆ ವ್ಯವಹಾರ ನಿಲ್ಲಿಸಿ ಬಾಕಿ ಇರುವ ಹಣವನ್ನು ಕೇಳಿದಾಗ ಆರೋಪಿತರು ನಮಗೂ ವ್ಯವಹಾರದ ಬಿಲ್ಲಿನ ಬಾಕಿ ಗೂ ಸಂಬಂಧವಿಲ್ಲ  ಎಂದು ಉಡಾಪೆ  ಉತ್ತರ ನೀಡಿರುತ್ತಾರೆ, ಆರೋಪಿತರು ಸಮಾನ ಉದ್ದೇಶದಿಂದ ಪಿರ್ಯಾಧಿದಾರರನ್ನು ನಂಬಿಸಿ ಪಿರ್ಯಾಧಿದಾರರಿಂದ ಉತ್ಪನ್ನಗಳನ್ನು ಖರೀದಿಸಿ ಬಾಕಿ ಹಣ ನೀಡದೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 406,420 ಜೊತೆಗೆ 34  ಐಪಿಸಿ  ಯಂತೆ ಪ್ರಕರಣದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 21-11-2021 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080