ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 19/11/2021 ರಂದು ಪಿರ್ಯಾದಿದಾರರಾದ ವಿದ್ಯಾ ವಿಲ್ಮಾ ಪರಂಬಿಲ್‌‌‌‌ (45), ಗಂಡ : ಅಂತೋನಿ ಫಿಲಿಕ್ಸ್‌‌‌ , ವಾಸ: ಮನೆ ನಂಬ್ರ 6-142 , ಪೆರಂಬಿಲ್‌‌ ಹೌಸ್‌‌ ರೈಸ್‌‌ ಮಿಲ್‌‌‌ ಬಳಿ ನೇಜಾರು, ಕಲ್ಯಾಣಪುರ ಅಂಚೆ ಮೊಡೂತೋನ್ಸೆ ಗ್ರಾಮ ಉಡುಪಿ ತಾಲೂಕು ಇವರು ಗಂಗೊಳ್ಳಿ ಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು 10:15 ಗಂಟೆಗೆ KA-20-EJ-8140 ಡಿಯೋ ಜುಪ್ಟಿರ್‌‌‌ ಸ್ಕೂಟರ್‌‌‌ನಲ್ಲಿ ಸಹಾ ಸವಾರಿಣಿಯಾಗಿ ವಾರಂಬಳ್ಳಿ ಗ್ರಾಮದ ಹೋಲಿ ಪ್ಯಾಮಿಲಿ ಚರ್ಚ್‌ ಎದುರು ರಾ.ಹೆ 66 ರಲ್ಲಿ ಉಡುಪಿ ಕಡೆಗೆ ಬರುತ್ತಿರುವಾಗ ಸ್ಕೂಟರ್‌‌ ಸವಾರ ಅನೂಪ್‌‌‌ ಓಸವಲ್ಡ್‌‌‌ ಪೆರಂಬಿಲ್‌‌‌ರವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವರಿ ಮಾಡಿಕೊಂಡು ಬಂದು ರಸ್ತೆಯಲ್ಲಿ ನಾಯಿಯೊಂದು ಒಮ್ಮೆಲೆ ಅಡ್ಡ ಬಂದಾಗ ಒಮ್ಮೇಲೆ ಬ್ರೇಕ್‌‌ ಹಾಕಿದ್ದ ಪರಿಣಾಮ ವಾಹನ ಆತನ ನಿಯಂತ್ರಣ ತಪ್ಪಿ ಅಡ್ಡ ಬಿದ್ದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಡಿವೈಡರ್‌‌‌ ತಾಗಿ ನಿಂತಿರುತ್ತದೆ. ಈ ಅಪಘಾತದಿಂದ ಸ್ಕೂಟರ್‌‌ನ ಹಿಂಭಾಗ ಕುಳಿತ್ತಿದ್ದ ಪಿರ್ಯಾದಿದಾರರ ಎಡ ಹೆಣೆಗೆ ರಕ್ತ ಗಾಯವಾಗಿರುತ್ತದೆ. ಹಾಗೂ ಎಡ ಕೈ ತೋಳಿನ ಬಳಿ ಹಾಗೂ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ. ಆರೋಪಿತನಿಗೂ ಕೂಡಾ ಎಡಕಾಲಿನ ಮೊಣಗಂಟಿನ ಕೆಳಗೆ ತರಿಚಿದ ಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಹತ್ತಿರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 188 /2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ : ದಿನಾಂಕ 21/11/2021 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿದಾರರಾದ ಪ್ರತಿಮ (45) ,ಗಂಡ: ವೆಂಕಟರಮಣಯ್ಯ, ವಾಸ: ಫ್ಲಾಟ್ ನಂ: 203, ಮಾ ಎನ್‌ಕ್ಲೇವ್, ಕಾವೇರಿ ಕಾಂಪ್ಲಕ್ಸ್ ಬಳಿ, ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ಇವರ ಗಂಡ ವೆಂಕಟರಮಣಯ್ಯ (49) ಎಂಬವವರು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಾ ಎನ್‌ಕ್ಲೇವ್ ಫ್ಲಾಟ್ ಎದುರು ರಾ.ಹೆ 169(ಎ) ರಲ್ಲಿ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA-20-MB-1624 ಓಮಿನಿ ಕಾರು ಚಾಲಕ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ವೆಂಕಟರಮಣಯ್ಯರವರಿಗೆ ಡಿಕ್ಕಿ ಹೊಡೆದ ಪರಿಣಾಮ, ವೆಂಕಟರಮಣಯ್ಯರವರು ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯ ಹಾಗೂ ಬೆನ್ನಿಗೆ ತರಚಿದ ಗಾಯವಾರುತ್ತದೆ . ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ :279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸಿಸಿಲಿಯಾ ಪಿಂಟೋ, ಪ್ರಾಯ: 68 ವರ್ಷ, ಗಂಡ: ದಿವಂಗತ ಜೆರೋಮ್ ಎ ಪಿಂಟೋ, ವಾಸ: ಸುಜಾನ್ನ ವಿಲ್ಲಾ, ದೆಂದೊಟ್ಟು ಶಾಲೆ ಬಳಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಮಗ ರಾಹುಲ್ ಪಿಂಟೋ(32) ಶೇರು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದು ಮನೆಯ ಒಂದನೇ ಮಹಡಿಯಲ್ಲಿ ಕಂಪ್ಯೂಟರ್ ಇಟ್ಟುಕೊಂಡು ಅಲ್ಲಿಯೇ ಕೆಲಸ ಮಾಡಿಕೊಂಡು ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದು, ದಿನಾಂಕ:19/11/2021 ರಂದು ಶುಕ್ರವಾರ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಆತನೇ ಒಟ್ಟು ಮಾಡಿ ಚೀಲದಲ್ಲಿ ತುಂಬಿಸಿ ನಂತರ ಕೊಟ್ಟಿಗೆಯಲ್ಲಿ ತುಂಬಿಸಿದ ನಂತರ ಸುಸ್ತಾಯಿತೆಂದು ಹಾಲ್‌ನಲ್ಲಿ ಕುಳಿತು ವಿಶ್ರಾಂತಿ ಪಡೆದು ಸ್ನಾನ ಮಾಡಿ ಮಧ್ಯಾಹ್ನ 3 ಗಂಟೆಗೆ ಆತನ ಕೊಠಡಿಗೆ ಹೋಗಿದ್ದು ನಂತರ ಮನೆಯಿಂದ ಹೊರಗೆ ಬಂದಿರುವುದಿಲ್ಲ. ದಿನಾಂಕ 21/01/2021ರಂದು ಬೆಳಗ್ಗಿನ ಜಾವ 03:00 ಗಂಟೆಗೆ ಎದ್ದು ಆತನ ರೂಮ್‌ನ ಬಾಗಿಲು ಹಾಕಿಕೊಂಡಿದ್ದು ಕರೆದರೂ ಪ್ರತಿಕ್ರಿಯಿಸದ ಕಾರಣ ಬಲವಂತದಿಂದ ಬಾಗಿಲು ತೆರೆದು ನೋಡಿದಾಗ ನೆಲದಲ್ಲಿ ಅಂಗಾತನೆ ಬೆತ್ತಲೆಯಾಗಿ ಮೃತಪಟ್ಟಿದ್ದು ದೇಹವು ಊದಿಕೊಂಡ ಸ್ಥಿತಿಯಲ್ಲಿದ್ದು ವಾಸನೆ ಬರುವ ಸ್ಥಿತಿಯಲ್ಲಿ ಇರುತ್ತದೆ. ಆತನು ಹೃದಯಾಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಅಶೋಕ ಜೋಗಿ (53), ತಂದೆ: ದಿ. ಜಗನ್ನಾಥ ಜೋಗಿ, ವಾಸ: ಶಾಂತ ನಿಲಯ, ಪುತ್ತಿಗೆ, ಹಿರಿಯಡ್ಕ ಅಂಚೆ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರ ಹೆಂಡತಿ ಪ್ರಿಯ (42) ರವರಿಗೆ 13 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು, ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆ, ಕುಂದಾಫುರ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿದ್ದು, ಪ್ರಸ್ತುತ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಅವರಿಗೆ ಮಾನಸಿಕ ಕಾಯಿಲೆ ಜಾಸ್ತಿಯಾದಾಗ ಮನೆಯಲ್ಲಿ ಗಲಾಟೆ ಮಾಡಿ ಸಂಬಂಧಿಕರ ಮನಗೆ ಹೋಗುತ್ತಿದ್ದರು. ದಿನಾಂಕ 20/11/2021 ರಂದು ಬೆಳಿಗ್ಗೆ 11:00 ಗಂಟೆಯಿಂದ ಮನೆಯಲ್ಲಿ ಇಲ್ಲದೇ ಇದ್ದು ಈ ಬಗ್ಗೆ ಹುಡುಕಾಡುತ್ತಿದ್ದಾಗ ಪಿರ್ಯಾದಿದಾರರ ಮನೆಯ ಸಮೀಪದ ಗಿರೀಶ್ ರವರ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

  • ಶಂಕರನಾರಾಯಣ : ದಿನಾಂಕ 18/11/2021 ರಂದು 12:00 ಗಂಟೆಯಿಂದ ದಿನಾಂಕ 21/11/2021 ರಂದು ಬೆಳಿಗ್ಗೆ 8:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ ಹಾಲಾಡಿ ಮರ್ಲುಚಿಕ್ಕು ದೇವಸ್ಥಾನದ ಬಳಿ ಇರುವ ಪಿರ್ಯಾದಿದಾರರಾದ ಎಸ್ ಶ್ರೀನಿವಾಸ ಶೆಟ್ಟಿ (71), ತಂದೆ: ಕೆ. ತಿಮ್ಮಪ್ಪ ಶೆಟ್ಟಿ, ವಾಸ:ಮರ್ಲು ಚಿಕ್ಕು ದೇನಸ್ಥಾನದ ಬಳಿ 28 ಹಾಲಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಎದುರಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಚೈನ್ ಸರ ಪೆಂಟೆಟ್ ಸಮೇತ-1 . ಕಿವಿಯೋಲೆ -2 ಜೊತೆ ಉಂಗುರ -1 ಕರಿಮಣಿ ಬಳೆ-2 ಚಿನ್ನದ ಪ್ಲೇನ್ ಬಳೆ-4 ಸಣ್ಣ ಕರಿಮಣಿ ಸರ-1 ದೊಡ್ಡ ಕರಿ ಮಣಿ ಸರ -1 ದೊಡ್ಡ ನೆಕ್ಲೇಸ್ -1 ಗಿಡ್ಡ ನೆಕ್ಷೇಸ್ -1 ಅಂದಾಜು ಸುಮಾರು 4,50,000/- ರೂಪಾಯಿ ಮೌಲ್ಯದ 15 ಪವನ್ ತೂಕದ ಚಿನ್ನದ ಆಭರಣ ಹಾಗೂ ನಗದು ಹಣ 50,000/- ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103 /2020 ಕಲಂ: 454, 457 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-11-2021 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080