ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಅಭಿಷೇಕ (19), ತಂದೆ: ಅಣ್ಣಪ್ಪ, ವಾಸ: ಅನುಗೃಹ ನಿಲಯ  ಹುಣ್ಸೆಕಟ್ಟೆ ಜಪ್ತಿ ಗ್ರಾಮ ಕುಂದಾಪುರ ತಾಲೂಕು ಇವರು ಎಂದಿನಂತೆ ದಿನಾಂಕ 19/10/2022 ರಂದು ಕಾಲೇಜು ಮುಗಿಸಿ ಅಣ್ಣನೊಂದಿಗೆ ಬೈಕಿನಲ್ಲಿ ಮನೆಗೆ ಹೋಗುತ್ತಿರುವಾಗ ಪಿರ್ಯಾದಿದಾರರ ಸ್ನೇಹಿತ ಕಾರ್ತಿಕ್  ಕೂಡ ತನ್ನ ತಂದೆ ಗಿರೀಶ ಎಂಬುವವರ ಸ್ಕೂಟಿ KA-20-EC-9739 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಹುಣ್ಸೆಮಕ್ಕಿಯಿಂದ ಮನೆಗೆ ಹೊರಟಿದ್ದು , ಸಂಜೆ  4.50 ಗಂಟೆಯ ಸಮಯಕ್ಕೆ ಹೊರ್ನಾಡು ದೊಡ್ಡುಬ್ಬು ಬಳಿ ತಲುಪುವಾಗ  ಗಿರೀಶ ರವರು  ಏಕಾಏಕಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಸ್ಕೂಟಿಯು ಸ್ಕಿಡ್ ಆಗಿ ಬಿದ್ದ ಪರಿಣಾಮ  ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಸವಾರ ಗಿರೀಶ್ ರಿಗೆ  ಬೆನ್ನಿಗೆ ಒಳ ನೋವು ಹಾಗೂ ಸಹ ಸವಾರ ಕಾರ್ತಿಕ್ ನ ಮುಖಕ್ಕೆ ಎಡ ಕೈ ಮತ್ತು ಎಡ ಕಾಲಿಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 180/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಶಿವಕುಮಾರ್ ಬಿಎಸ್ (33), ಪ್ರಭಾರ ಪ್ರಾಂಶುಪಾಲ,  ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶಿನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಬ್ರಹ್ಮಾವರ ತಾಲೂಕು, ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದು, ದಿನಾಂಕ 19/10/2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ  20/10/2022 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಾಲೇಜಿನ ಪ್ರಾಂಶುಪಾಲರ ಕೊಠಡಿ ಹಾಗೂ ಕಛೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳಹೋಗಿ, ಕಛೇರಿಯಲ್ಲಿನ  2 ಕಪಾಟುಗಳ ಬೀಗ ಮುರಿದಿದ್ದು, 5 ಕಪಾಟುಗಳನ್ನು ಹುಡುಕಾಡಿದ್ದು, 3 ಮೇಜು ಡ್ರಾವರುಗಳ ಬೀಗಗಳನ್ನು ಮುರಿದು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಪ್ರಾಂಶುಪಾಲರ ಮೇಜಿನ 2 ಡ್ರಾವರುಗಳನ್ನು ತೆರೆದು ಡ್ರಾವರನ್ನು ಹುಡುಕಾಡಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಪ್ರಾಂಶುಪಾಲರ ಕೊಠಡಿಯಲ್ಲಿನ ಸಿ.ಸಿ.ಟಿ.ವಿ.ಯ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಡಿವಿಆರ್‌ನ  ಮೌಲ್ಯ ರೂಪಾಯಿ 7000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 174/2022 ಕಲಂ : 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಉದಯ ಜಿ ಮೇಸ್ತ (41), ತಂದೆ: ಗಣಪತಿ ಮೇಸ್ತ, ವಾಸ: ಮುಳಿಕೊಡ್ಲು , 11/32 , ಗೌರಿ ಗಣೇಶ, ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ಕೊಂಕಣ ರೈಲ್ವೆ  ಇಲಾಖೆಯ ಶಿರೂರು ರೈಲ್ವೇ  ಸ್ಷೇಷನ್ ನಲ್ಲಿ ಪಾಯಿಂಟ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 17/10/2022 ರ  ಸಂಜೆಯಿಂದ ದಿನಾಂಕ 18/10/2022 ರ ಬೆಳಿಗ್ಗೆ 7:00 ಗಂಟೆಯ ಪಾಳಿಯಲ್ಲಿ ಕರ್ತವ್ಯದಲ್ಲಿದ್ದಾಗ  ರಾತ್ರಿ  11:30 ಗಂಟೆಗೆ  ಸ್ಟೇಷನ್ ಮಾಸ್ಟ್ರರ್ ಮಂಜುನಾಥ ಪೂಜಾರಿ ಇವರಿಗೆ ರೈಲ್ವೇ ಗಾಡಿ ಸಂಖೈ10216 ರೈಲ್ವೆ ಚಾಲಕರು ಶಿರೂರು ರೈಲ್ವೇ  ಸ್ಟೇಷನ್ ನ ಪೂರ್ವ ಬದಿಯ ಪ್ಲಾಟ್ ಪಾರ್ಮ ನ ಕಿಮೀ ನಂಬ್ರ 618/7 ರ  ಬಳಿ ಒಬ್ಬ ಅಪರಿಚಿತ ವ್ಯಕ್ತಿಯು  ಬಿದ್ದುಕೊಂಡಿರುವ ಬಗ್ಗೆ ಮಾಹಿತಿ ನೀಡಿದಂತೆ ಮಂಜುನಾಥ ಪೂಜಾರಿಯವರು ಪಿರ್ಯಾದಿದಾರರಿಗೆ ಸ್ಥಳಕ್ಕೆ  ಹೋಗುವಂತೆ ತಿಳಿಸಿದ ಮೇರೆಗೆ  ಪಿರ್ಯಾದಿದಾರರು ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ  ಪ್ರಜ್ಞಾಹೀನ ಸ್ಥಿತಿಯಲ್ಲಿ  ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಫಿರ್ಯಾದಿದಾರರು ಹಾಗೂ ರೈಲ್ವೆ ಗೇಟ್ ಕೆಲಸ ಮಾಡಿಕೊಂಡಿದ್ದ ರಮೇಶ್ ಎಂಬುವವರ ಸಹಾಯದಿಂದ  ಭಟ್ಕಳದ  108 ಅಂಬುಲೆನ್ಸ್ ನಲ್ಲಿ ಹಾಕಿ  ಭಟ್ಕಳ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದ  ವ್ಯಕ್ತಿಯು ಪಳನಿಸ್ವಾಮಿ ಎಂಬುದಾಗಿ ತಿಳಿದು ಬಂದಿದ್ದು, ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 19/10/2022ರಂದು ರಾತ್ರಿ 7:50 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 55/2022 ಕಲಂ:174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಬೈಂದೂರು: ಪಿರ್ಯಾದಿದಾರರಾದ ಸತೀಶ್ ಕುಮಾರ್ ಶೆಟ್ಟಿ (44), ತಂದೆ: ಮಹಾಬಲ ಶೆಟ್ಟಿ, ವಾಸ: ಶ್ರೀ ವಿನಯ  ಉಪ್ರಳ್ಳಿ, 11ನೇ ಉಳ್ಳೂರು ಗ್ರಾಮ ಬೈಂದೂರು ತಾಲೂಕು ಇವರ ಹೆಂಡತಿಯ ಅಕ್ಕ ರೇಖಾ ಜಿ ಶೆಟ್ಟಿ ಯವರು  ನಾವುಂದ  ಗ್ರಾಮದ ಜ್ಯೂನಿಯರ್ ಕಾಲೇಜು  ಹಿಂಬಾಗದ ಗಾಣಿಗರ ಕೇರಿ ರಸ್ತೆಯ ಬಳಿ ಮನೆಯನ್ನು ನಿರ್ಮಿಸಿದ್ದು  ರೇಖಾ ಜಿ ಶೆಟ್ಟಿ ಯವರು ಗಂಡನೊಂದಿಗೆ ಮಂಬೈನಲ್ಲಿ ನೆಲೆಸಿರುವುದರಿಂದ ಮನೆಯಲ್ಲಿ ಫಿರ್ಯಾದಿದಾರರ ಅತ್ತೆ ಇಂದಿರಾ ಶೆಟ್ಟಿ  ಹಾಗೂ ಮಾವ ನಾರಾಯಣ ಶೆಟ್ಟಿ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 12/10/2022 ರಂದು ಪಿರ್ಯಾದಿದಾರರ ಅತ್ತೆ ಹಾಗೂ ಮಾವ ಅವರ ಮೂಲ ಮನೆಯಾದ ಹೇರೂರು ಗ್ರಾಮದ ಯೇರುಕೋಣೆಗೆ ಹೋಗುವ ಸಮಯ ನೆರೆಮನೆಯ ಮುತ್ತಯ್ಯ ಗಾಣಿಗರವರಿಗೆ ಮನೆಯನ್ನು ನೋಡಿಕೊಳ್ಳುವಂತೆ ಹೇಳಿಹೋಗಿದ್ದು  ದಿನಾಂಕ 18/10/2022 ರಂದು ಬೆಳಿಗ್ಗೆ 5:30 ಗಂಟೆಗೆ ಮುತ್ತಯ್ಯ ಗಾಣಿಗ ರವರು ಮನೆಗೆ ಬಂದು ನೋಡಿಕೊಂಡು ಹೋದ ಸಮಯ ಮನೆಯು ಯಥಾ ಸ್ಥಿತಿಯಲ್ಲಿರುತ್ತದೆ.  ದಿನಾಂಕ 20/10/2022 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರ ಅತ್ತೆ ಹಾಗೂ ಮಾವ ನಾವುಂದದ ಮನೆಗೆ ಬಂದು ಎದುರಿನ ಬಾಗಿಲನ್ನು ಮುಟ್ಟಿದ ಸಮಯ ಮನೆಯ ಬಾಗಿಲು ತೆರೆದುಕೊಂಡಿದ್ದು ಮಾಹಿತಿ ತಿಳಿದ ಪಿರ್ಯಾದಿದಾರರು ನಾವುಂದದ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ದಿನಾಂಕ 18/10/2022 ರಂದು ಬೆಳಿಗ್ಗೆ 5:30 ಗಂಟೆಯಿಂದ ದಿನಾಂಕ 20/10/2022 ರಂದು ಬೆಳಿಗ್ಗೆ 8:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಎದುರಿನ ಮುಖ್ಯ ದ್ವಾರವನ್ನು ಯಾವುದೋ ಆಯುಧದಿಂದ ಬಲ ಪ್ರಯೋಗಿಸಿ ತೆರೆದು ಮನೆಯ ಒಳ ಪ್ರವೇಶಿಸಿ ಬೆಡ್ ರೂಂ ನ ಕಪಾಟಿನಲ್ಲಿ ಇಟ್ಟಿದ್ದ ಬಟ್ಟೆ ಬರೆಗಳನ್ನು, ಡ್ರಾವರ್ ಗಳನ್ನು ತೆರೆದು ಹಾಗೂ ದೇವರ ಕೋಣೆಯಲ್ಲಿನ ಸ್ವತ್ತುಗಳನ್ನು ಎಳೆದು ಚೆಲ್ಲಾಪಿಲ್ಲಿ  ಮಾಡಿ ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 211/2022 ಕಲಂ: 454, 457, 380,511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಹಿರಿಯಡ್ಕ: ಕುಂದಾಪುರ ಪೊಲೀಸ್ ಠಾಣಾ ಅಕ್ರ 54/2022 ಕಲಂ: 457,380 ಐಪಿಸಿ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ರಾಹೀಕ್ (22),  ತಂದೆ: ಮೊಹಮದ್ ಗೌಸ್ ಈತನನ್ನು ತನಿಖಾಧಿಕಾರಿಯವರು ದಿನಾಂಕ 19/10/2022 ರಂದು ದಸ್ತಗಿರಿ  ಮಾಡಿ ದಿನಾಂಕ 20/10/2022 ರಂದು ಆತನನ್ನು ಮಾನ್ಯ ಎ.ಸಿ.ಜೆ ಮತ್ತು ಜೆ ಎಂ ಎಪ್ ಸಿ  ನ್ಯಾಯಾಧೀಶರು ಕುಂದಾಪುರ ರವರ ಮುಂದೆ ಹಾಜರುಪಡಿಸುವ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಸಿಬ್ಬಂದಿಯವರು ಆರೋಪಿ ಭದ್ರಿಕೆಯಲ್ಲಿ  ಖಾಸಗಿ ವಾಹನದಲ್ಲಿ ಮಾನ್ಯ ನ್ಯಾಯಾಧೀಶರ  ಮುಂದೆ  ಹಾಜರುಪಡಿಸಿದಾಗ ಮಾನ್ಯ  ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ  ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ ಮೇರೆಗೆ ಕುಂದಾಪುರದಿಂದ ಹೊರಟು ಜಿಲ್ಲಾ ಕಾರಾಗೃಹ ಕಾಜರಗುತ್ತು ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ  ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ಭದ್ರಿಕೆಯಲ್ಲಿದ್ದ ಸಿಬ್ಬಂದಿಯವರನ್ನು ತಳ್ಳಿ ಹಾಕಿ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 353, 224 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತ್ತೀಚಿನ ನವೀಕರಣ​ : 21-10-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080