ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಸುವಿಟ್ ಇವರು ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ  ಕಲ್ಸಂಕ ಬಳಿ ಮನೆಯೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/10/2021 ರಂದು ಬೆಳಿಗ್ಗೆ ಸುಮಾರು 11:45 ಗಂಟೆಗೆ ಅಕೌಂಟೆಟ್ ಅರವಿಂದ ಭಟ್‌ ರವರೊಂದಿಗೆ ಮಾತನಾಡುತ್ತಾ ಕಲ್ಸಂಕ ನಾರಳತ್ತಾಯ ದೇವಸ್ಥಾನ  ಬಳಿ ರಾಹೆ 66 ಬಂದಾಗ ಪಿರ್ಯಾದಿದಾರರ ಸೈಟಿನ ಇಂಜಿನಿಯರ್ ಗಜಾನನ ಹೆಗ್ಡೆಯವರು ಕೆಲಸದ ನಿಮಿತ್ತ ಅವರ ಬಾಬ್ತು KA31ED3369 ನೇ ಮೋಟಾರ್ ಸೈಕಲ್‌ ನಲ್ಲಿ ರಾಹೆ 66 ಕ್ಕೆ ಬಂದವರು, ಮಂಗಳೂರು ಉಡುಪಿ ಏಕಮುಖ ಸಂಚಾರ ರಸ್ತೆಯ ಕಡೆಗೆ ಹೋಗಲು ರಸ್ತೆ ತೆರೆದ ವಿಭಾಜಕದ ಕಡೆಗೆ ಚಲಾಯಿಸಿಕೊಂಡು ಹೋಗುವ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA51MJ5830 ನೇ ನಂಬ್ರದ ಕಾರನ್ನು ಅದರ ಚಾಲಕ ಸೂರಜ್ ಎಂಬವರು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ  ಗಜಾನನ ಹೆಗ್ಡೆಯವರು ಕಾರಿನ ಎದುರಿನ ಗಾಜಿನ ಮೇಲೆ ಬಿದ್ದು ನಂತರ ರಸ್ತೆಗೆ ಬಿದ್ದ ಪರಿಣಾಮ ಗಜಾನನ ಹೆಗ್ಡೆಯವರ ಬಲಕಾಲಿಗೆ ತೀವ್ರ ತರಹದ ಗಾಯ ಮತ್ತು ಬೆನ್ನಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕತ್ಸೆ ಪಡೆಯುತ್ತಿರುವುದಾಗಿದೆ ಹಾಗೂ ಅಪಘಾತಕ್ಕೊಳಗಾದ ಎರಡೂ ವಾಹನಗಳು ಜಖಂಗೊಂಡಿರುತ್ತದೆ. ಈ  ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021 ಕಲಂ 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ದಿನಾಂಕ 19.10.2021 ರಂದು ಪಿರ್ಯಾದಿ ಕೆ. ಅರ್ಚನಾ ನಾಯಕ್, ಇವವರ ಮೊಬೈಲ್ ನಂಬ್ರಕ್ಕೆ  Part-time Job ಬಗ್ಗೆ ಸಂದೇಶ ಬಂದಿದ್ದು, ಅದರಲ್ಲಿದ್ದ ವಾಟ್ಸ್ ಅಪ್ ನಂಬ್ರ ಕ್ಕೆ ಪಿರ್ಯಾದಿದಾರರು ಸಂಪರ್ಕಿಸಿದಲ್ಲಿ ರಿಜಿಸ್ಟರ್ ಮಾಡುವರೆ ಲಿಂಕ್ ಒಂದನ್ನು ಕಳುಹಿಸಿದ್ದು, ಅದರಲ್ಲಿ ಪಿರ್ಯಾದಿದಾರರು ತನ್ನ ಬಯೋಡಾಟಾವನ್ನು ಭರ್ತಿ ಮಾಡಿ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಇದು Indian F-Kmall ಕಂಪೆನಿಯಾಗಿದ್ದು, ಈ ಕಂಪೆನಿಯಲ್ಲಿ ಒಂದು ಸ್ವತ್ತು ಖರೀದಿ ಮಾಡಿ, ಅದನ್ನು ಕಂಪೆನಿಯವರು ಆನ್ ಲೈನ್ ಮುಖೇನ ಮಾರಾಟ ಮಾಡಿದ್ದಲ್ಲಿ ಅಸಲು ಮೊತ್ತ ಹಾಗೂ ಅದಕ್ಕೆ ಕಮಿಶನ್ ಪಡೆಯುವುದು ಟಾಸ್ಕ್ ಆಗಿರುತ್ತದೆ. ಮೊಬೈಲ್ ನಂಬ್ರ +916398485592 ನೇ ಅಪರಿಚಿತ ವ್ಯಕ್ತಿ ತಾನು Indian F-Kmall ಕಂಪೆನಿಯವರೆಂದು ಹೇಳಿ ಟೆಲಿಗ್ರಾಮ್ ಆಪ್ ಮುಖೇನ ಕಂಪೆನಿಯ ವೆಬ್ ಸೈಟ್ ನಲ್ಲಿ ಟಾಸ್ಕ್ ಕಳುಹಿಸಿರುವುದಾಗಿ ಸಂದೇಶ ಮಾಡುತ್ತಿದ್ದು, ಪಿರ್ಯಾದಿದಾರರು ಸದ್ರಿ ಕಂಪೆನಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದ ಯೂಸರ್ ಐ.ಡಿ.ಯನ್ನು ಬಳಸಿ, ಒಟ್ಟು ರೂಪಾಯಿ 1,06,900/= ಸ್ವತ್ತುಗಳನ್ನು ಆನ್ ಲೈನ್ ಮುಖೇನ ಖರೀದಿಸುವರೆ ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಪಿರ್ಯಾದಿದಾರರು ನೀಡಿದ ಹಣ ಹಾಗೂ ಲಾಭಾಂಶವನ್ನು ಕಂಪೆನಿಯವರು ಈ ವರೆಗೂ ನೀಡಿರುವುದಿಲ್ಲ. ಯಾರೋ ಅಪರಿಚಿತ ವ್ಯಕ್ತಿಗಳು ಮೊಬೈಲ್ ನಂಬ್ರಗಳಿಂದ ಸಂದೇಶ ಕಳುಹಿಸಿ Indian F-Kmall ಕಂಪೆನಿಯಲ್ಲಿ Part-time Job ನೀಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ, ರೂ. 1,06,900/= ಹಣವನ್ನು ಪಡೆದು ಮೋಸ ಮಾಡಿರುವುದಾಗಿದೆ.  ಈ  ಬಗ್ಗೆ ಉಡುಪಿ ಸೆನ್‌  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ 66(c), 66(d) ಐ.ಟಿ. ಆಕ್ಟ್  ಮತ್ತು 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಹಲ್ಲೆ ಪ್ರಕರಣ

 • ಬೈಂದೂರು: ಪಿರ್ಯಾದಿ ಅಶ್ವೀಜ್ ಶೆಟ್ಟಿ ಇವರು ಬೈಂದೂರು ತಾಲೂಕು ಶಿರೂರು ಗ್ರಾಮದ  ನೀರಗದ್ದೆಯ ಸಿಲ್ವರ್ ಅರ್ಚ್ ಹೊಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:20/10/2021 ರಂದು ಪಿರ್ಯಾದಿದಾರರು ಬಾರ್ ನಲ್ಲಿ ಕೆಲಸದಲ್ಲಿರುವಾಗ ಸಮಯ ಸುಮಾರು ರಾತ್ರಿ 09:00 ಗಂಟೆಗೆ ಪಿರ್ಯಾದಿದಾರರ ಪರಿಚಯದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬುವವರು ಬಾರ್ ಗೆ  ಬಂದು ಪಿರ್ಯಾದಿದಾರರನ್ನು ಹೊರಗೆ ಕರೆದೊಯ್ದು 20,000/-ರೂ ಹಣ ಕೇಳಿದ್ದು ಪಿರ್ಯಾದಿದಾರರ ಬಳಿ ಹಣ ಇಲ್ಲದ ಕಾರಣ ಬಾಟಲಿಯಿಂದ ಹಲ್ಲೆ ಮಾಡಿ ನಂತರ  ಹಣ ಕೊಡದೇ ಇದ್ದರೆ ನೀವೂ ಬಾರ್ ಹೇಗೆ ನಡೆಸುತ್ತೀರಿ ಎಂದು ಕೊಲೆ ಬೆದರಿಕೆ ಹಾಕಿ ಹೋಗಿದ್ದುದ್ದಲ್ಲದೇ ಮೊಬೈಲ್ ಗೆ ಕರೆ  ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ  ಕೊಲೆ  ಬೆದರಿಕೆ ಹಾಕಿದ್ದು ಕಂಪ್ಲೆಂಟ್ ಕೊಟ್ಟರೆ ಪಿರ್ಯಾದಿದಾರರನ್ನು ಮಾಲೀಕನನ್ನು ಮುಗಿಸಿ ಬಿಡುತ್ತೇನೆ ಹಾಗೂ ಇನ್ನು ಮುಂದೆ ಆ ಹೋಟೇಲ್ ನ್ನು ಹೇಗೆ ನಡೆಸುತ್ತೀಯಾ? ಬೇರೆಯವರ ಹತ್ತಿರ ದಿನಕ್ಕೊಂದು ಜಗಳ ಮಾಡಿಸುತ್ತೇನೆ ಎಂದು ಆಪಾದಿತರಿಬ್ಬರೂ ಬೆದರಿಕೆ ಹಾಕಿರುವುದಾಗಿದೆ. ಈ  ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 165/2021  ಕಲಂ:384. 324.  504. 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ : ಫಿರ್ಯಾದಿ ಕೃಷ್ಣ  ಖಾರ್ವಿ ಇವರ ಮಗ ಕಿರಣ ಕೃಷ್ಣ ಖಾರ್ವಿ ಪ್ರಾಯ 28  ವರ್ಷ  ಇವರು  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಗುಣ ಮುಖವಾಗದೇ ಇದ್ದು ಎಲ್ಲಿಯೂ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದಿದ್ದು,  ಪಿರ್ಯಾದಿದಾರರ ಮನೆಯವರೆಲ್ಲರೂ ಸಿರಸಿಗೆ ಹೋಗಿದ್ದು, ಪಿರ್ಯಾದಿದಾರರ ಮಗ ಮನೆಯಲ್ಲಿ ಒಬ್ಬನೇ ಇದ್ದು ಆತನಿಗಿರುವ ಮಾನಸಿಕ ಖಾಯಿಲೆಯಿಂದ ತನ್ನ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಒಂದು ಚೀಟಿಯಲ್ಲಿ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟು, ದಿನಾಂಕ:20/10/2021ರಂದು ರಾತ್ರಿಯಿಂದ ದಿನಾಂಕ 21/10/2021 ರ ಬೆಳಿಗ್ಗೆ 7.00 ಗಂಟೆಯ ಮಧ್ಯಾವಧಿಯಲ್ಲಿ ನೈಲಾನ್ ಹಗ್ಗದಿಂದ ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 21-10-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080