ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಬಿ.ಸುರೇಶ್ ನಾಯ್ಕ (53), ತಂದೆ:ದಿ.ಬಿ ಶ್ರೀನಿವಾಸ, ನಾಯ್ಕ ವಾಸ: ನಾಯ್ಕರ ಮನೆ ಮಯ್ಯಾಡಿ ಪೋಸ್ಟ್ , ಬೈಂದೂರು ಗ್ರಾಮ ಮತ್ತು ತಾಲೂಕು ಇವರು ದಿನಾಂಕ 20/09/2022 ರಂದು ಮಯ್ಯಾಡಿಯಿಂದ ಬೈಂದೂರಿಗೆ ಬರಲು ಮೋಟಾರು ಸೈಕಲ್ ನಲ್ಲಿ ಯಡ್ತರೆ  ಜಂಕ್ಷನ್ ಗೆ ಬಂದು ಪೂರ್ವ ಬದಿಯ ರಸ್ತೆಯಲ್ಲಿ  ರಸ್ತೆ ಕ್ರಾಸ್ ಮಾಡಲು  ಮೋಟಾರು ಸೈಕಲನ್ನು ನಿಲ್ಲಿಸಿಕೊಂಡಿದ್ದಾಗ  4:20 ಗಂಟೆಗೆ ಪಿಯಾದಿದಾರರ ಪರಿಚಯದ ಜಗದೀಶ್ ಪಟ್ವಾಲ್ ರವರು ಅವರ ಹೆಂಡತಿ ಆಶಾ ರವರನ್ನು ಅವರ KA-20-L-9555 ನೇ ಮೋಟಾರು ಸೈಕಲನಲ್ಲಿ ಹಿಂಬದಿ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಬಿಜೂರು ಕಡೆಯಿಂದ ಬಂದು ಕೊಲ್ಲೂರು ರಸ್ತೆ ಕಡೆಗೆ ಹೋಗುವರೇ  ಯಡ್ತರೆ ಜಂಕ್ಷನ್ ಬಳಿ ಮೋಟಾರು ಸೈಕಲ್ ನ ಬಲಬದಿಯ ಇಂಡಿಕೇಟರ್ ಹಾಕಿ ಬಲ ಬದಿಗೆ ತಿರುಗಿಸುವ ಸಮಯ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ  GA-03-AC-4369 ನೇ ಮೋಟಾರು  ಸೈಕಲ್ ಸವಾರ ಮಹಮ್ಮದ್ ಇಬ್ರಾಹಿಂ ಮೋಟಾರು ಸೈಕಲನ್ನು ರಾಷ್ಟ್ರೀಯ ಹೆದ್ದಾರಿ  66ರ ಚತುಷ್ಪಥ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಜಗದೀಶ್ ಪಟ್ವಾಲ್ ರವರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲ್ ಗೆ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಜಗದೀಶ್ ಪಟ್ವಾಲ್ ಹಾಗೂ ಸಹ ಸವಾರಳು ರಸ್ತೆಗೆ ಬಿದ್ದಿದ್ದು ಬಿದ್ದವರನ್ನು ಪಿರ್ಯಾದುದಾರರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಎತ್ತಿ ಉಪಚರಿಸಿದ್ದು ಜಗದೀಶ್ ಪಟ್ವಾಲ್ ರವರಿಗೆ  ಹೊಟ್ಟೆಯ ಭಾಗ , ಸೊಂಟಕ್ಕೆ ಒಳ ನೋವು ಹಾಗೂ ರಕ್ತಗಾಯವಾಗಿದ್ದು , ಆಶಾ ರವರಿಗೆ ತಲೆ , ಬಲಕೈ ಗೆ ರಕ್ತ ಗಾಯವಾಗಿದ್ದು, ಗಾಯಾಳುಗಳನ್ನು ಗುರುಕಿರಣ ಹಾಗೂ ಶ್ರೀಧರ್ ರವರು ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ ಆಶಾರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಜಗದೀಶ್ ಪಟ್ವಾಲ್ ರವರನ್ನು ಪರೀಕ್ಷಿಸಿ ಕರೆ ತರುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 190/2022 ಕಲಂ: 279 , 338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ: ಪಿರ್ಯಾದಿದಾರರಾದ ಎಂ. ಗಣೇಶ ಪ್ರಭು (62), ತಂದೆ: ಕೃಷ್ಣ ಪ್ರಭು, ವಾಸ: ಇಂಡಿಯನ್ ಪೆಟ್ರೋಲ್ ಪಂಪ್ ಹತ್ತಿರ, ಜೋಡುರಸ್ತೆ, ಕುಕ್ಕುಂದೂರು ಅಂಚೆ, ಹಿರ್ಗಾನ ಗ್ರಾಮ,ಕಾರ್ಕಳ ತಾಲೂಕು ಇವರು ದಿನಾಂಕ 20/09/2022 ರಂದು ತನ್ನ KA-20-EH-0831 ನೇ ನೋಂದಣಿ ಸಂಖ್ಯೆಯ ಟಿವಿಎಸ್ ಕಂಪೆನಿಯ ವೇಗೋ ಮಾದರಿಯ ದ್ವಿಚಕ್ರ ವಾಹನದಲ್ಲಿ ಸಹಸವಾರಳಾಗಿ ಮಗಳು ಎಂ. ನಳಿನಿ ಪ್ರಭು (18) ರವರನ್ನು ಕುಳ್ಳಿರಿಸಿಕೊಂಡು ಬೆಳಗ್ಗೆ 08:30 ಗಂಟೆಗೆ ಜೋಡುರಸ್ತೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿರುವಾಗ  ಕಾರ್ಕಳ ತಾಲೂಕು ಕಸಬಾ ಗ್ರಾಮದ ಬಂಡಿಮಠ ಪಿರೋಜ್ ಎಂಬುವರ ಹಣ್ಣಿನ ಅಂಗಡಿ ಬಳಿ ತಲುಪುವಾಗ ಬೆಳಿಗ್ಗೆ 08:45 ಗಂಟೆಗೆ ಕಾರ್ಕಳ ಕಡೆಯಿಂದ ಜೋಡುರಸ್ತೆ ಕಡೆಗೆ KA-21-F-0117 ನೇ ನೊಂದಣಿ ಸಂಖ್ಯೆಯ KSRTC ಬಸ್ಸನ್ನು ಅದರ ಚಾಲಕ ಹುಸೇನ್ ಸಾಬ್ ಯಾವುದೇ ಸೂಚನೆಯನ್ನು ನೀಡದೇ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೆಲೆ ಬಂಡೀಮಠ ಬಸ್ ನಿಲ್ದಾಣದ ಕಡೆ ಚಲಾಯಿಸಿ ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರು ತನ್ನ ಮಗಳು ಎಂ. ನಳಿನಿ ಪ್ರಭು ರವರೊಂದಿಗೆ ಎಡಬದಿ ಡಾಮಾರು ರಸ್ತೆಯ ಮೇಲೆ ಬಿದ್ದಿದ್ದು, ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮರಿತವಾಗಿದ್ದು, ಎಂ. ನಳಿನಿ ಪ್ರಭು ರವರಿಗೆ ಎಡಹಣೆಗೆ, ಎಡತಲೆಗೆ, ಎಡಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತದೆ. ಚಿಕಿತ್ಸೆ ಬಗ್ಗೆ ಕಾರ್ಕಳ ಪ್ರತಿಭಾ ನರ್ಸಿಂಗ್ ಹೋಮ್ ಗೆ ಹೋಗಿದ್ದು, ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಪಿರ್ಯಾದಿದಾರರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂ. ನಳಿನಿ ಪ್ರಭು ರವರು ಪಿರ್ಯಾದಿದಾರರೊಂದಿಗೆ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 121/2022, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಫ್ರೆನ್ಸಿಟಾ ನಜರತ್ (27), ತಂದೆ: ಫೆರಿಕ್ಸ್ ನಜರತ್, ವಾಸ: ಕುದುರೆಬೆಟ್ಟು ಮನೆ, ಪೆರ್ನಾಲ್ ಅಂಚೆ ಸೂಡ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಫೆಲಿಕ್ಸ್ ನಜರತ್ (59) ರವರು 7 ವರ್ಷಗಳಿಂದ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಫಾದರ್ ಮುಲ್ಲ ಆಸ್ಪತ್ರೆ ಮತ್ತು ಆರ್ಯುವೇದ ಔಷದಿಯನ್ನು ಮಾಡುತ್ತಿದ್ದು ಪಿರ್ಯಾದಿದಾರರ ತಾಯಿ ಸಂದಿವಾತ ಖಾಯಿಲೆಯಿಂದ ಬಳಲುತ್ತಿದ್ದು, ತಾಯಿಯವರು ಪಿರ್ಯಾದಿದಾರರ ಅಜ್ಜಿ ಮನೆಯಾದ ಶಿರ್ವಾದಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಮನೆಯಲ್ಲಿ ಪಿರ್ಯಾದಿದಾರರ ತಂದೆ ಒಬ್ಬಂಟಿಯಾಗಿ  ವಾಸ್ತವ್ಯ ಇದ್ದು  ದಿನಾಂಕ 20/09/2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರ ಚಿಕ್ಕಪ್ಪ ಕೋಡ್ಲಿ ನಜರತ್ ರವರು ಕರೆ ಮಾಡಿ ಫೆಲಿಕ್ಸ್  ನಜರತ್ ಮನೆಯ ಅಡುಗೆ ಕೋಣೆಯಲ್ಲಿ ಬಿದ್ದಿದ್ದು ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರುವುದಾಗಿ ತಿಳಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಅವರ ತಾಯಿ ಹಾಗೂ ಶಿರ್ವಾ ಠಾಣೆಯ ಪೊಲೀಸರ ಜೊತೆ ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ ತಂದೆ ಅಡುಗೆ ಕೋಣೆಯಲ್ಲಿ ಬಿದ್ದುಕೊಂಡಿದ್ದು, ಪೊಲೀಸರು ಕಿಟಕಿ ಮುಖಾಂತರ ಕೋಲುಹಾಕಿ ಮುಂಬಾಗಿಲ ಚಿಲಕವನ್ನು ತೆರೆದು ಒಳಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ ತಂದೆಯವರು ನೆಲದ ಮೇಲೆ ಕವುಚಿ ಬಿದ್ದುದ್ದು ಹತ್ತಿರ ಹೋಗಿ ನೋಡಲಾಗಿ ಪಿರ್ಯಾದಿದಾರರ ತಂದೆಯ ದೇಹ ಅದಾಗಲೆ ತಣ್ಣಗಾಗಿದ್ದು,  ಪಿರ್ಯಾದಿದಾರರ ತಂದೆ ಮನೆಯಲ್ಲಿ ಬೆಳಿಗ್ಗೆ ಉಪಹಾರ ಮಾಡಲು ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಮಯ ಅಥವಾ ಅಡುಗೆ ಕೋಣೆಯಲ್ಲಿ ಇತರೆ ಕೆಲಸ ಮಾಡುವಾಗ ಆಯತಪ್ಪಿ ನೆಲದ ಮೇಲೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ಕರರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಟಿ. ಲೀಲಾನಂದ (44), ತಂದೆ: ದಿ. ಎಂ.ಆರ್ ತಿಮ್ಮೇಗೌಡ, ವಾಸ: ಆಹಾರ ನಿರೀಕ್ಷಕರು, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ಆಹಾರ ನಿರೀಕ್ಷಕರಾಗಿದ್ದು, ದಿನಾಂಕ 20/09/2022 ರಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ಸಿ. ಪೂವಯ್ಯ ರವರು ದೂರವಾಣಿ ಕರೆ ಮಾಡಿ ಕಾಪು ತಾಲೂಕು ನಡ್ಸಾಲು ಗ್ರಾಮ ಕನ್ನಂಗಾರ್ ಎಂಬಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ತಲುಪಿ ಕೆ.ಸಿ. ಪೂವಯ್ಯ ಸಿಪಿಐ ಕಾಪು, ಪ್ರಕಾಶ್ ಸಾಲ್ಯಾನ್ ಪಿಎಸ್‌ಐ (ತನಿಖೆ) ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು,  ಕನ್ನಂಗಾರ್‌‌‌‌ನ ಮೊಹಮದ್ ಶಫೀಕ್ ತಂದೆ: ದಿ. ಮೊಹಿದ್ದೀನ್ ಬ್ಯಾರಿ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿ, ಆಪಾದಿತರ ಮನೆಯ ಹೊರಾಂಗಣ ಮತ್ತು ಎದುರು ಇರುವ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯಾಗಿದ್ದು, 50 ಕೆ.ಜಿ ತೂಕದ 33 ಚೀಲ ಬೆಳ್ತಿಗೆ ಅಕ್ಕಿ (ಒಟ್ಟು ತೂಕ 1650 ಕೆ.ಜಿ), 50 ಕೆ ಜಿ ತೂಕದ 192 ಚೀಲ ಕುಚಲಕ್ಕಿ (ಒಟ್ಟು ತೂಕ 9600 ಕೆ.ಜಿ), 20 ಕೆ ಜಿ ತೂಕದ 31 ಚೀಲ ಕುಚಲಕ್ಕಿ (ಒಟ್ಟು ತೂಕ 620 ಕೆ.ಜಿ), 30 ಕೆ.ಜಿ. ತೂಕದ 02 ಚೀಲ ಕುಚಲಕ್ಕಿ (ಒಟ್ಟು ತೂಕ 60 ಕೆ.ಜಿ), ಮತ್ತು ಹೊಲಿಗೆ ಹಾಕದೇ ಇರುವ 10 ಚೀಲ ಕುಚಲಕ್ಕಿ (ಒಟ್ಟು ತೂಕ 303 ಕೆ.ಜಿ) ಸೇರಿದಂತೆ ಒಟ್ಟು 2,87,606/- ರೂಪಾಯಿ ಮೌಲ್ಯದ 13,073 ಕೆ.ಜಿ. ಅಕ್ಕಿ, ರೂಪಾಯಿ 4,000/- ಮೌಲ್ಯದ ತೂಕದಯಂತ್ರ-01, ರೂಪಾಯಿ 5,000/- ಮೌಲ್ಯದ ಚೀಲ ಹೊಲಿಯುವ ಯಂತ್ರ-01 ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ: 3, 7 Essential Commodities Act 1955 ಮತ್ತು ಕಲಂ: 3(2), 18(1) Karnataka Public Distribution& Control Order 2016 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-09-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080