ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕಾರ್ಕಳ: ದಿನಾಂಕ 20/09/2021 ರಂದು 19:15 ಗಂಟೆಗೆ  ಕಾರ್ಕಳ ತಾಲೂಕು, ಈದು ಗ್ರಾಮದ ಹೊಸ್ಮಾರು ಜಯಲಕ್ಷ್ಮೀ ಗೇರು ಬೀಜ ಫ್ಯಾಕ್ಟರಿ  ಬಳಿ  ಮೂಡಬಿದ್ರಿ ಕಡೆಯಿಂದ ಹೊಸ್ಮಾರು ಕಡೆಗೆ  KA18 9096  ನೇ 407 ಟೆಂಪೋ ಚಾಲಕ, ಶರ್ಪುದ್ದೀನ್ ಎಂಬಾತನು ತನ್ನ ಟೆಂಪೋವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಏಕಾ ಏಕಿ ಆತನ ಬಲಬದಿಗೆ ಚಲಾಯಿಸಿ ಹೊಸ್ಮಾರು ಕಡೆಯಿಂದ ಶಿರ್ತಾಡಿ ಕಡೆಗೆ ಹೋಗುತ್ತಿದ್ದ KA21E2538 ನೇ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಕೃಷ್ಣ ಶೆಟ್ಟಿ ವಾಹನ ಸಮೇತ ಡಾಮಾರು ರಸ್ತೆಗೆ  ಬಿದ್ದು, ಆತನ ಗದ್ದಕ್ಕೆ ತರಚಿದ ಗಾಯ ಹಾಗೂ ಬಲಕಾಲಿನ ಕೋಲುಕಾಲಿಗೆ ರಕ್ತಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ:21/09/2021 ರಂದು ಬೆಳಿಗ್ಗೆ 10:00 ಗಂಟೆಗೆ  ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಹಾದು ಹೋಗಿರುವ ಧರ್ಮಸ್ಥಳ-ಬಜಗೊಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕೆ,ಎ20-ಇ,ಎಮ್-7533  ನೇ ನಂಬ್ರದ ಬೈಕ್ ಸವಾರ ಸೊಹೈಲ್ ಖಾನ್ ರವರು ಆತನ ಬಾಬ್ತು ಬೈಕ್ ನ್ನು ನಾರಾವಿ ಕಡೆಯಿಂದ ಬಜಗೊಳಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಬಜಗೊಳಿ ಕಡೆಯಿಂದ ನಾರಾವಿ ಕಡೆಗೆ ಪಿರ್ಯಾದಿ ಜಗದೀಶ ಹೆಗ್ಡೆ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆ,ಎ05-ಎಮ್,ಹೆಚ್-8944 ನೇ ನಂಬ್ರದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಆರೋಪಿ ಬೈಕ್ ಸವಾರ ಸುಹೈಲ್ ಖಾನ್ ಗೆ ಕೈಗೆ ಗಾಯವುಂಟಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ಸೂರಜ್‌ ಇವರು ದಿನಾಂಕ: 08/09/2021 ರಂದು ಬೆಳಿಗ್ಗೆ 11:00 ಗಂಟೆಗೆ ಉಡುಪಿ ಟೌನ್‌ ಹಾಲ್‌ನ ವೆಹಿಕಲ್‌ ಪಾರ್ಕಿಂಗ್‌ ಸ್ಥಳದಲ್ಲಿ ತನ್ನ ಬಾಬ್ತು ಬಜಾಜ್‌ ಪಲ್ಸರ್‌ KA-20-EJ-9967 ದ್ವಿಚಕ್ರ ವಾಹನವನ್ನು ಇಟ್ಟು ಕೆಲಸದ ನಿಮಿತ್ತ ಹೋಗಿದ್ದು ಮನೆಯಲ್ಲಿ ಮದುವೆಯ ಕಾರ್ಯಕ್ರಮ ಇದ್ದುದರಿಂದ ಬೈಕನ್ನು ಉಪಯೋಗಿಸದೇ ಇದ್ದು,  ದಿನಾಂಕ: 21/09/2021 ರಂದು ಬೆಳಿಗ್ಗೆ 10:00 ಗಂಟೆಗೆ ಹೋಗಿ ನೋಡಿದಾಗ ಇಟ್ಟಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ 40,000/- ರೂ. ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಫಿರ್ಯಾದಿ ದಿನೇಶ ಇವರ ಮಗ ಮಹೇಂದ್ರ ಪ್ರಾಯ: 24 ವರ್ಷ ಇವರು ದಿನಾಂಕ:19-09-2021 ರಂದು ಮದ್ಯಾಹ್ನ 12:30 ಗಂಟೆಗೆ ತನ್ನ ಸ್ನೇಹಿತರಾದ ಆಶಿಕ್ ಮತ್ತು ಶರತ್ ರವರೊಂದಿಗೆ ತ್ರಾಸಿ ಗ್ರಾಮದ ಮೊವಾಡಿ ಎಂಬಲ್ಲಿ ಸೌಪರ್ಣಿಕ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದು ಇದನ್ನು ನೋಡಿದ ಆಶಿಕ್  ಆತನನ್ನು ರಕ್ಷಿಸಲು ಪ್ರಯತ್ನಿಸಿದಾಗ ನೀರಿನ ಸೆಳೆತ ಹೆಚ್ಚಾಗಿದ್ದ ಕಾರಣ ರಕ್ಷಣೆ ವಿಫಲವಾಯಿತು. ತಕ್ಷಣ ಆಶಿಕ್ ನು ಸ್ಥಳೀಯರನ್ನು ಕೂಗಿಕೊಂಡಿದ್ದು ನಂತರ ಫಿರ್ಯಾದಿದಾರರ ಮಗಳು ಶೈಲಾಗೆ ಫೋನ್ ಕರೆ ಮಾಡಿ ವಿಚಾರ ತಿಳಿಸಿದ್ದು ಬಳಿಕ ಫಿರ್ಯಾದಿದಾರರು ಹಾಗೂ ಮನೆಯವರು ಮೊವಾಡಿಗೆ ಹೋಗಿ ಸೌಪರ್ಣಿಕಾ ನದಿಯಲ್ಲಿ  ಹುಡುಕಾಡಿದಲ್ಲಿ ಪತ್ತೆಯಾಗದ ಕಾರಣ ಫಿರ್ಯಾದಿದಾರರ ಮಗಳು ಶೈಲಾ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಅ.ಕ್ರ 86/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹೇಂದ್ರರವರ ಮೃತದೇಹವು  ಈ ದಿನ ದಿನಾಂಕ 21-09-2021 ರಂದು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಬಂಟ್ವಾಡಿ ನದಿಯಲ್ಲಿ ಪತ್ತೆಯಾಗಿರುತ್ತದೆ. ಮೃತ ಮಹೇಂದ್ರರವರು ದಿನಾಂಕ: 19-09-2021 ರಂದು ಮದ್ಯಾಹ್ನ 12:30 ಗಂಟೆಯ ನಂತರ ಮೊವಾಡಿ ಸೌಪರ್ಣಿಕಾ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವಾಗ ಆಕಸ್ಮಿಕವಾಗಿ  ಕಾಲುಜಾರಿ ಹೊಳೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-09-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080