ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ರಾಮಕೃಷ್ಣ ರವರು ಕಾರ್ಕಳ ಆಭರಣ ಮೋಟಾರ್ಸ ನಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡಿಕೊಂಡಿದ್ದು ದಿನಂಪ್ರತಿ ಅವರ ಬಾಬ್ತು ಸ್ಕೂಟಿಯಲ್ಲಿ ಮನೆಗೆ ಬಂದು ಹೋಗುವುದಾಗಿದೆ. ದಿನಾಂಕ: 19/08/2022 ರಂದು ರಾಮಕೃಷ್ಣ ರವರು ಅವರ ಬಾಬ್ತು KA 20 EU 2034 ನೇ HOnda Activa ಸ್ಕೂಟಿಯನ್ನು ಸವಾರಿ ಮಾಡಿಕೊಂಡು ಕಾರ್ಕಳದಿಂದ ಮುದ್ರಾಡಿ ಕಡೆ ಹೋಗುತ್ತಿರುವಾಗ ಅವರು ಸಮಯ ಸುಮಾರು ರಾತ್ರಿ 09:15 ಗಂಟೆಗೆ ವರಂಗ ಗ್ರಾಮದ ಮುನಿಯಾಲು ವೆಂಕಟರಮಣ ದೇವಸ್ಥಾನ ಎದುರು ತಲುಪಿದಾಗ ಅವರ ಹಿಂದೆಯಿಂದ KA 21 B 5561 ನೇ ಲಾರಿಯನ್ನು  ಅದರ ಚಾಲಕ ಅಶ್ರಫ್.ಬಿ.ಎಸ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಾಮಕೃಷ್ಣ ರವರು ಚಲಾಯಿಸುತ್ತಿದ್ದ ಸ್ಕೂಟಿಗೆ ಹಿಂದೆಯಿಂದ ಢಿಕ್ಕಿ ಪಡಿಸಿದ ಪರಿಣಾಮ ಅವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ಮೇಲೆ ಲಾರಿಯ ಚಕ್ರವು ಹರಿದು ಎಡಕೈ ಜಖಂಗೊಂಡಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 36/2022 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣ

  • ಬ್ರಹ್ಮಾವರ: ದಿನಾಂಕ 20.08.2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಹರೀಶ್‌ ರವರು  ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಮಂದಾರ್ತಿ ಹೈಸ್ಕೂಲ್‌ನ ಮುಂಭಾಗದಲ್ಲಿರುವ ಬ್ರಹ್ಮಾವರಕ್ಕೆ ಹೋಗುವ ಬಸ್ಸ್‌ ನಿಲ್ದಾಣದ ಪಕ್ಕದಲ್ಲಿ ತನ್ನ ಬಾಬ್ತು KA-20-EE-0399 ನೇ BAJAJ DISCOVERY ಮೋಟಾರ್‌ ಸೈಕಲ್‌ ಅನ್ನು ನಿಲ್ಲಿಸಿ ಕಾರಿನಲ್ಲಿ  ವಂಡ್ಸೆಗೆ ಹೋಗಿ ಮಧ್ಯಾಹ್ನ ಸುಮಾರು 1:00 ಗಂಟೆಗೆ ವಾಪಾಸ್ಸು ಬಸ್ಸು ನಿಲ್ದಾಣದ ಬಳಿ ಬಂದು ನೋಡಿದಾಗ ಯಾರೋ ಕಳ್ಳರು ಅವರ ಮೋಟಾರ್‌ ಸೈಕಲ್‌ ಮತ್ತು ಹೆಲ್ಮೆಟ್‌ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಆದ ಮೋಟಾರ್‌ ಸೈಕಲ್‌ನ  ಅಂದಾಜು ಮೌಲ್ಯ ರೂ  25,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 140/2022 ಕಲಂ :379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಇತರ ಪ್ರಕರಣ

  • ಬೈಂದೂರು: ದಿನಾಂಕ 20-08-2022ರಂದು ನಿರಂಜನ್ ಗೌಡ ಬಿ,ಎಸ್ ಪೊಲೀಸ್ ಉಪನಿರೀಕ್ಷಕರು ( ಕಾ&ಸು) ಬೈಂದೂರು ಪೊಲೀಸ್ ಠಾಣೆ ಇವರಿಗೆ  ಸಂಜೆ 9:05 ಗಂಟೆಗೆ ಬೈಂದೂರು ವೃತ್ತ ನಿರೀಕ್ಷಕರು ಕರೆ ಮಾಡಿ ಬಾತ್ಮೀದಾರರು ಕರೆ ಮಾಡಿ ಟಾಟಾ NANO ಕಾರಿನಲ್ಲಿ ಗೋಮಾಂಸ ವನ್ನು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ರಾಹೆ 66 ರಲ್ಲಿ ಸಾಗಾಟ ಮಾಡುತ್ತಿರುವುದಾಗಿಯೂ, ಸದ್ರಿ ಕಾರು ನಾವುಂದ ದಿಂದ ಭಟ್ಕಳ ಕಡೆಗೆ ಸಾಗಿ ಬಂದಿರುವುದಾಗಿ ಮಾಹಿತಿ ನೀಡಿದ್ದು ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ನಂಬ್ರ  ಕೆ ಎ 20 ಜಿ 164 ನೇದರಲ್ಲಿ  ತೆರಳಿ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ತೆರಳಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು, ಫಿರ್ಯಾದಿದಾರರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಕಾದುಕೊಂಡು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ರಾತ್ರಿ 9:35 ಗಂಟೆಗೆ ನಾವುಂದ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಟಾಟಾ NANO ಕಾರನ್ನು ನಿಲ್ಲಿಸಲು ಸೂಚಿಸಿದಂತೆ ಸಮವಸ್ತ್ರದಲ್ಲಿದ್ದವರನ್ನು ನೋಡಿ ಕಾರಿನ ಚಾಲಕನು ಕಾರನ್ನು ಸ್ವಲ್ಪ ಹಿಂದೆಯೇ ನಿಲ್ಲಿಸಿದ್ದು, ಆ ಸಮಯ ಸದ್ರಿ ಕಾರಿನ ಚಾಲಕನ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಯು ಕಾರಿನಿಂದ ಇಳಿದು ಓಡಿ ಪರಾರಿಯಾಗಿದ್ದು ಚಾಲಕನ ಸೀಟಿನಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಹೆಸರು ವಿಚಾರಿಸಿಕೊಂಡಲ್ಲಿ ಮಹಮ್ಮದ್ ಗೌಸ್ ಗವಾಯಿ ಪ್ರಾಯ 37 ವರ್ಷ ತಂದೆ: ಮೊಹಿದ್ದೀನ್ ಗವಾಯಿ ವಾಸ: ಗವಾಯಿ ಮಂಜಿಲ್ 6 ನೇ ಅಡ್ಡರಸ್ತೆ ಮುಗ್ದುಂ ಕಾಲೋನಿ ಭಟ್ಕಳ ತಾಲೂಕು ಉತ್ತರಕನ್ನಡ ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ನಜ್ಮುಲ್ ಎಂಬುದಾಗಿದ್ದು. ಸದ್ರಿ ಕಾರನ್ನು ಪರಿಶೀಲಿಸಲಾಗಿ ಟಾಟಾ ಕಂಪೆನಿಯ NANO ಕಾರು ಆಗಿದ್ದು ಅದರ ನಂಬ್ರ KL11BA2264 ಆಗಿರುತ್ತದೆ. ಸದ್ರಿ ಕಾರಿನ ಹಿಂಬದಿಯಲ್ಲಿ ನೀಲಿ ಬಣ್ಣದ ಪಾಲಿಥೀನ್ ಶೀಟ್ ನಲ್ಲಿ ಮಾಂಸ ಇರುವುದು ಕಂಡು ಬಂದಿದ್ದು, ಪಂಚರ ಸಮಕ್ಷಮ ಪರಿಶೀಲಿಸಲಾಗಿ 150 ಕೆಜಿ ಯಷ್ಟು  ಮಾಂಸವಿದ್ದು ( ಅಂದಾಜು ಮೌಲ್ಯ 22 ಸಾವಿರ) ಸದ್ರಿ ಮಾಂಸದ ಬಗ್ಗೆ ವಿಚಾರಿಸಿದಲ್ಲಿ ಕುಂದಾಪುರ ಕಡೆಯಿಂದ ತಂದಿರುವುದಾಗಿಯೂ ಭಟ್ಕಳಕ್ಕೆ ತೆಗೆದುಕೊಂಡು ಹೋಗಿ ಭಟ್ಕಳದ ಮದುವೆ ಕಾರ್ಯಕ್ರಮಕ್ಕೆ ಕೊಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಆಪಾದಿತರು ಎಲ್ಲಿಂದಲೋ ದನಗಳನ್ನು ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡಿ ಪಾಲಿಥೀನ್ ಶೀಟ್ ನಲ್ಲಿ ತುಂಬಿಸಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದು, ಸದ್ರಿ ಮಾಂಸ ವನ್ನು ಹಾಗೂ ಕಾರನ್ನು ಪಂಚರ ಸಮಕ್ಷಮ ಮಹಜರು ಮುಖೇನ ಮುಂದಿನ ತನಿಖೆಯ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 163/2022 ಕಲಂ 379, 429 ಜೊತೆಗೆ 34  ಐಪಿಸಿ ಕಲಂ 4, 12  ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಗಾಂಜಾ ಸೇವನೆ ಪ್ರಕರಣ

  • ಕುಂದಾಪುರ: ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಪಿ.ಎಸ್‌.ಐ ಪವನ್‌ ನಾಯಕ್‌ರವರು ಸಿಬ್ಬಂದಿಯವರ ಜೊತೆ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ 12:30 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿ ಸುದೀಪ್‌, ಈತನನ್ನು ವಿಚಾರಿಸಿ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಆರೋಪಿಯನ್ನು ಪರಿಕ್ಷಿಸಿ ಆರೋಪಿಯು ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು  ದೃಡಪಡಿಸಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 38/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ 20/08/2022 ರಂದು ಸದಾಶಿವ  ಆರ್‌ ಗವರೋಜಿ, ಪಿ.ಎಸ್‌.ಐ (ಕಾ.ಸು), ಕುಂದಾಪುರ ಪೊಲೀಸ್‌ ಠಾಣೆ  ಇವರು ಠಾಣಾ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರೊಬ್ಬರು ಕರೆ ಮಾಡಿ ಕುಂದಾಪುರ ತಾಲೂಕು, ಕುಂದಾಪುರ ಕಸಬ  ಗ್ರಾಮದ ಕೋಡಿ ಬೀಚ್ ಸಮೀಪ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕುಂದಾಪುರ  ಕಸಬ  ಗ್ರಾಮದ ಕೋಡಿ ಬೀಚ್ ಬಳಿ  10.00  ಗಂಟೆಗೆ ಹೋದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಸದ್ರಿ ಅಬ್ದುಲ್ ರೆಹಮಾನ್ ನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಆತನ ಹೆಸರು ವಿಳಾಸ  ವಿಚಾರಿಸಿ ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರ ಇಲ್ಲಿನ ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಆತನನ್ನು   ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ಮಾಹಿತಿ ನೀಡಿದ ಮೇರೆಗೆ ಈ ಬಗ್ಗೆ ಕುಂದಾಪುರ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 89/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ 20.08.2022 ರಂದು ಪ್ರಸಾದ ಕುಮಾರ ಕೆ  ಪಿ.ಎಸ್‌.ಐ (ತನಿಖೆ), ಕುಂದಾಪುರ ಪೊಲೀಸ್‌ ಠಾಣೆ  ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರೊಬ್ಬರು ಕರೆ ಮಾಡಿ ಕುಂದಾಪುರ ತಾಲೂಕು ಹೆಮ್ಮಾಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು,  ಸಿಬ್ಬಂದಿಯವರೊಂದಿಗೆ 12.00  ಗಂಟೆಗೆ ಸ್ಥಳಕ್ಕೆ ತೆರಳಿ  ನೋಡಿದಾಗ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಸದ್ರಿ ನಾಗರಾಜ ಮೊಗವೀರ  ನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖಾಂತರ  ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು,  ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಈ ಬಗ್ಗೆ ಕುಂದಾಪುರ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 90/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ : ದಿನಾಂಕ: 20/08/2022 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 20:00 ಗಂಟೆಗೆ ಹೋಗಿ  ಪರಿಶೀಲಿಸಲಾಗಿ 6 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಆಶಿಶ್, 2) ಅಕ್ಷಿತ್ 3) ನಿಯಾಝ್ 4) ಹರ್ಷವರ್ಧನ್ 5) ವಿಶಾಲ್, 6) ಆದಿತ್ಯ ಬರಂಬೆ ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ  ಇವರುಗಳನ್ನು  ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯಾ ಪರೀಕ್ಷೆಗೊಳಪಡಿಸಿದಾಗ 6 ಜನರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 79/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 21-08-2022 10:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080