ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ 02/05/2021 ರಂದು ಅಶೋಕ್‌ ಕುಮಾರ್‌ ಪಿ.ಎಸ್.ಐ ಉಡುಪಿ ನಗರ ಪೊಲೀಸ್ ಠಾಣೆ ಉಡುಪಿ  ಇವರು  ರೌಂಡ್ಸ್ ನಲ್ಲಿರುವಾಗ  ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಜಂಕ್ಷನ್‌ ಬಳಿಯ ಆದರ್ಶ ಬೇಕರಿ  ಹತ್ತಿರದ ಕರ್ನೆಲಿಯೋ  ಕಂಪೌಂಡಿನ ಮನೆಯೊಂದರಲ್ಲಿ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಇರುವ ಸಂದರ್ಭ ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಸಾಂಕ್ರಾಮಿಕ  ರೋಗದ  ತಡೆ ಸಂಬಂಧ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಕೊರೊನಾ ವೈರಸ್‌ಎಂಬ ಹೆಸರಿನ ಸಾಂಕ್ರಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆತಟ್ಟಲು ನಿರ್ಲಕ್ಷ್ಯ ವಹಿಸಿ, ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಂತೆ ಇವರು, ಮೇಲಾಧಿಕಾರಿಯವರ  ಅನುಮತಿ  ಮೇರೆಗೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 20:50 ಗಂಟೆಗೆ  ಧಾಳಿ ನಡೆಸಿ,  ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಆರೋಪಿತರಾದ ) ಕಿಶೋರ್ ಕುಮಾರ್,  2)  ಭರತ್ಕುಮಾರ್, 3) ಚೇತನ್,  4)  ಸಂದೇಶ ಶೇಟ್,  5) ಕೃಷ್ಣಮೂರ್ತಿ, 6)  ಜಾಹೀದ್, 7)  ಹರ್ಷ  ಗಾಣಿಗ, 8)  ಸುಭಾಷ್  ಪೂಜಾರಿ, 9)  ಯೋಗೀಶ್ ಆಚಾರ್ಯ, 10) ಚಂದ್ರಕುಮಾರ್ ಗಾಣಿಗ, 11) ಫಯಾಝ್ 12) ರವಿ ಸಾಲ್ಯಾನ್, 13) ಪ್ರವೀಣ ಇವರನ್ನು ವಶಕ್ಕೆ ಪಡೆದಿದ್ದು, ಇನ್ನು ಮೂವರು ಕತ್ತಲಲ್ಲಿ ಓಡಿ ಹೋಗಿದ್ದು,ಆರೋಪಿತರಿಂದ ಆಟಕ್ಕೆ ಬಳಸಿದ ಒಟ್ಟು ನಗದು ಹಣ 14,790- ರೂಪಾಯಿ, ಇಸ್ಪೀಟು ಆಟಕ್ಕೆ ಬಳಸಿದ ಹಳೆಯ ಮಾಸಿದ ಬಟ್ಟೆ-1, ಇಸ್ಪೀಟು ಎಲೆಗಳು-52, ಎಂಟು  ಮೊಬೈಲ್‌ ಫೋನ್‌ಗಳು, ಒಂದು ಕಾರು, ಒಂದು ಮೋಟಾರ್‌ ಬೈಕನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: 269 ಐಪಿಸಿ ಮತ್ತು ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಕಲಂ: 5(1), 5(4) The Karnataka Epidemic Diseases Act-2020 ರಂತೆ ಪ್ರಕರಣ ದಾಖಲಾಗಿರುತ್ತದೆ.  

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಡಾ. ಕೃಷ್ಣಮೂರ್ತಿಟಿ. (63) ವೈದ್ಯಾಧಿಕಾರಿ,ಶಿರ್ವ ತಂದೆ: ದಿವಂಗತ. ರತ್ನಾಕರ ವಾಸ: ನಂ.401, ಡೈಮಂಡ್ಬ್ರೀಗೇಡ್ ಅಜ್ಜರಕಾಡು, ಉಡುಪಿ ಇವರು ಶಿರ್ವಾದಲ್ಲಿ ವೈದ್ಯಾಧಿಕಾರಿಯಾಗಿದ್ದು, ಅವರ ಮಗನ ಶಿಕ್ಷಣಕ್ಕಾಗಿ ಹಣದ ಹೊಂದಾಣಿಕೆ ಮಾಡುತ್ತಿರುವಾಗ ಇವರ ಮೊಬೈಲ್‌ಗೆ ಲೋನ್‌ ನೀಡುವುದಾಗಿ ಸಂದೇಶ ಬಂದಿದ್ದು,ಈ ಬಗ್ಗೆ ಗೂಗಲ್ ನ ಲೋನ್‌ಆ್ಯಪ್ ನಲ್ಲಿ  ಹುಡುಕಿದ್ದು, ಅಲ್ಲಿ ಮುದ್ರಾ ಲೋನ್‌ ವೆಬ್‌ಸೈಟ್‌ ಸಿಕ್ಕಿದ್ದು, ಸದ್ರಿ ನಕಲಿ ವೆಬ್‌ಸೈಟ್‌ನ್ನು ಅಸಲಿ ವೆಬ್‌ಸೈಟ್‌ ಎಂದು ನಂಬಿ, ಡಾ. ಕೃಷ್ಣಮೂರ್ತಿಟಿ ರವರು ಅವರ  ಹೆಸರು  ಮತ್ತು ಪೋನ್‌ ನಂಬ್ರ ವನ್ನು ದಾಖಲಿಸಿದ್ದು, ಆಗ ಯಾರೋ ಅಪರಿಚಿತರು 9813024637 ಮತ್ತು 9871668167 ನೇನಂಬರ್‌ನಿಂದ ಕರೆ ಮಾಡಿ ಮುದ್ರಾ ಲೋನ್‌ ಪರವಾಗಿ ಮಾತನಾಡುತ್ತಿರುವುದಾಗಿ ತಿಳಿಸಿ 25 ಲಕ್ಷದ ವರೆಗೆ ಲೋನ್‌ನೀಡುವುದಾಗಿ ನಂಬಿಸಿ ಡಾ. ಕೃಷ್ಣಮೂರ್ತಿಟಿ ರವರ ದಾಖಲಾತಿಗಳನ್ನು ಆನ್ ಲೈನ್‌ಈ ಮೇಲ್ pmegpmudragovt.org@gmail.comನೇ ದರ ಮುಖೇನ ಪಡೆದುಕೊಂಡು ನಂತರ ಪ್ರೋಸೆಸ್‌ ಚಾರ್ಜ್, ಇನ್ಸುರೆನ್ಸ್ ಚಾರ್ಜ ಇತ್ಯಾದಿಗಳಿಗೆ ಹಣ ಕಟ್ಟುವಂತೆ ತಿಳಿಸಿ,ದಿನಾಂಕ 13/07/2021 ರಿಂದ 16/07/2021 ರ ತನಕ ಗೂಗಲ್ ಪೇ ಮುಖೇನ ಹಂತ ಹಂತವಾಗಿ ಒಟ್ಟು 67,650/- ಹಣವನ್ನು ಡಾ. ಕೃಷ್ಣಮೂರ್ತಿಟಿ ರವರಿಂದ ವರ್ಗಾವಣೆ ಮಾಡಿಸಿಕೊಂಡು, ಇವರಿಗೆ ಸಾಲವನ್ನು ನೀಡಿದೇ, ಕಟ್ಟಿದ ಹಣವನ್ನು ನೀಡದೇ ಮೋಸ ಮಾಡಿರುವುದಾಗಿದೆ,  ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-08-2021 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080