ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 20/08/2021 ರಂದು ರಾತ್ರಿ  ಸುಮಾರು 9:15 ಗಂಟೆ, ಕುಂದಾಪುರ  ತಾಲೂಕಿನ,  ಕೊಟೇಶ್ವರ ಗ್ರಾಮದ  ಹಾಲಾಡಿ ಬೈಪಾಸ್‌ ಹತ್ತಿರದ, ನಾಗಬನ- ಬೊಬ್ಬರ್ಯ ದೈವಸ್ಥಾನದ ಬಳಿ  ರಸ್ತೆಯಲ್ಲಿ, ಆಪಾದಿತ ವಿಜಯೇಂದ್ರ  ಆರ್‌ ಎಂಬವರು, KA16-C-3827ನೇ ಮಹೀಂದ್ರ ಬುಲೆರೋ ಪಿಕಪ್‌‌ ಗೂಡ್ಸ್‌ ವಾಹನವನ್ನು, ಹಾಲಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪಿಕಪ್‌‌ ಗೂಡ್ಸ್‌ ವಾಹನದ ಮುಂದೆ  ಹೋಗುತ್ತಿದ್ದ  ವಾಹನವನ್ನು ಓವರ್‌ಟೇಕ್‌‌ ಮಾಡುತ್ತ ವಾಹನವನ್ನು ರಸ್ತೆಯ ಬಲಬದಿಗೆ ಅಂದರೆ  ಉತ್ತರ  ಬದಿಗೆ  ಚಲಾಯಿಸಿ, ಕೊಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ  ಶಭರೀಶ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EX3198ನೇ ಬೈಕಿಗೆ ಎದುರುಗಡೆಯಿಂದ  ಡಿಕ್ಕಿ ಹೊಡೆದ  ಪರಿಣಾಮ ಶಭರೀಶ್ ರವರ ತಲೆಗೆ ರಕ್ತಗೆ ಸೀಳಿದ ರಕ್ತಗಾಯ ಹಾಗೂ  ಕೈ ಕಾಲುಗಳಿಗೆ  ತರಚಿದ ಗಾಯಗಳಾಗಿ, ಕೊಟೇಶ್ವರ ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ 279, 338   ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ: 20/08/2021ರಂದು ಅಶೋಕ್‌ ಕುಮಾರ್‌ ಪಿ.ಎಸ್.ಐ, ಉಡುಪಿ ನಗರ ಪೊಲೀಸ್ ಠಾಣೆ  ಇವರು  ರೌಂಡ್ಸ್ ನಲ್ಲಿರುವಾಗ್ಗೆ  ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಜಂಕ್ಷನ್‌ ಬಳಿಯ ಆದರ್ಶ ಬೇಕರಿ  ಹತ್ತಿರದ ಕರ್ನೆಲಿಯೋ  ಕಂಪೌಂಡಿನ  ಮನೆಯೊಂದರಲ್ಲಿ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಇರುವ ಸಂದರ್ಭ ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಸಾಂಕ್ರಾಮಿಕ  ರೋಗದ  ತಡೆ ಸಂಬಂಧ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಕೊರೊನಾ ವೈರಸ್‌ ಎಂಬ ಹೆಸರಿನ ಸಾಂಕ್ರಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆತಟ್ಟಲು ನಿರ್ಲಕ್ಷ್ಯ ವಹಿಸಿ, ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಂತೆ ಮೇಲಾಧಿಕಾರಿಯವರ  ಅನುಮತಿ  ಮೇರೆಗೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 20:50 ಗಂಟೆಗೆ  ಧಾಳಿ ನಡೆಸಿ,  ಅಂದರ್‌-ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಆರೋಪಿತರಾದ 1) ಕಿಶೋರ್‌ ಕುಮಾರ್‌,  2)  ಭರತ್‌ಕುಮಾರ್‌, 3) ಚೇತನ್‌,  4)  ಸಂದೇಶ ಶೇಟ್‌,  5) ಕೃಷ್ಣಮೂರ್ತಿ6)  ಜಾಹೀದ್‌,  7)  ಹರ್ಷ  ಗಾಣಿಗ, 8)  ಸುಭಾಷ್‌  ಪೂಜಾರಿ, 9)  ಯೋಗೀಶ್‌ ಆಚಾರ್ಯ,   10) ಚಂದ್ರಕುಮಾರ್‌  ಗಾಣಿಗ,11) ಫಯಾಝ್‌12) ರವಿ ಸಾಲ್ಯಾನ್‌ 13) ಪ್ರವೀಣ ಇವರ ಪೈಕಿ 10 ಜನ ಆರೋಪಿತರನ್ನು ವಶಕ್ಕೆ  ಪಡೆದಿದ್ದು, ಇನ್ನು  ಮೂವರು  ಕತ್ತಲಲ್ಲಿ  ಓಡಿ ಹೋಗಿದ್ದು,  ಆರೋಪಿತರಿಂದ  ಆಟಕ್ಕೆ ಬಳಸಿದ  ಒಟ್ಟು ನಗದು ಹಣ 14,700- ರೂಪಾಯಿ,  ಇಸ್ಪೀಟು ಆಟಕ್ಕೆ ಬಳಸಿದ ಹಳೆಯ ಮಾಸಿದ ಬಟ್ಟೆ-1, ಇಸ್ಪೀಟು ಎಲೆಗಳು-52,  ಎಂಟು  ಮೊಬೈಲ್‌  ಫೋನ್‌ಗಳು,  ಒಂದು  ಕಾರು,  ಒಂದು ಮೋಟಾರ್‌  ಬೈಕನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021ಕಲಂ: 269 ಐಪಿಸಿ ಮತ್ತು ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಕಲಂ: 5(1), 5(4) The Karnataka Epidemic Diseases Act-2020  ರಂತೆ   ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ದಿನಾಂಕ: 21/08/2021 ರಂದು 11:25 ಗಂಟೆಗೆ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಪ್ರೆಂಡ್ಸ್ ಹೊಟೇಲ್ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಶಾಂತ ಪ್ರಾಯ 32 ವರ್ಷ  ತಂದೆ: ನರಸಿಂಹ  ವಾಸ: ಕೊಡಲಿಮನೆ ಬೆಟ್ಟು  ಉಳ್ಳೂರು ಜನತಾ ಕಾಲೋನಿ ಮೂಡ್ಲಕಟ್ಟೆ ಕಂದಾವರ ಗ್ರಾಮ ಕುಂದಾಪುರ ತಾಲೂಕು ಈತನು ತನ್ನ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ 00 ಅಂಕೆಯಿಂದ 99 ಅಂಕೆಯೊಳಗೆ ಒಂದು ಅಂಕೆಗೆ ರೂ ಒಂದು ಕಟ್ಟಿದರೆ ರೂ 70 ಕೊಡುವುದಾಗಿ ಹೇಳಿ ಮಟ್ಕಾ  ಚೀಟಿ ಬರದು ಕೊಡುತ್ತಾ ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ನಾಸೀರ್‌ ಹುಸೇನ್‌ , ಉಪ ನಿರೀಕ್ಷಕರು,  ಕೊಲ್ಲೂರು ಪೊಲೀಸ್‌ ಠಾಣೆ  ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್ ಪೆನ್-1 ಮತ್ತು ನಗದು ರೂ 620 /-ನ್ನು  ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2020   ಕಲಂ: 78 (i) (iii) KP ACT  ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವ: ಪಿರ್ಯಾದಿ  ಗೀತಾ ಇವರ ಗಂಡ ವಿಜಯ ಪೂಜಾರಿ ಪ್ರಾಯ: 46 ವರ್ಷ ರವರು ಕುಡಿತದ ಚಟ ಹೊಂದಿದ್ದು ಅಲ್ಲದೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು ಅಲ್ಲದೇ ಎರಡು ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದಿದ್ದು ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20.08.2021ರಂದು ರಾತ್ರಿ  11:00 ಗಂಟೆಯಿಂದ ದಿನಾಂಕ 21.08.2021 ರಂದು ಬೆಳಿಗ್ಗೆ 06:00 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಕೋಣೆಯಲ್ಲಿ ಮಾಡಿನ ಮರದ ಜಂತಿಗೆ ನೈಲಾನ್‌  ಶಾಲ್‌ನ್ನು ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮ ಹತ್ಯೆಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಠಾಣಾ ಯು.ಡಿ.ಆರ್‌ ಸಂಖ್ಯೆ 17/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಶಂಕರನಾರಾಯಣ : ಫಿರ್ಯಾದಿ ಪ್ರವೀಣ   ಕುಮಾರ್  ಶೆಟ್ಟಿ  ಇವರ  ಮನೆಯವರಿಗೂ   ಆರೋಪಿತ 1.ಚಂದ್ರಶೇಖರ    ಶೆಟ್ಟಿ  ಚೀನಾಬೇರು  ಸಿದ್ದಾಪುರ  ಗ್ರಾಮ 2.ಗೋವಿಂದ ಶೆಟ್ಟಿ  ಚೀನಾಬೇರು  ಸಿದ್ದಾಪುರ  ಗ್ರಾಮ ಇವರುಗಳ   ಮನೆಯವರಿಗೆ   ಸುಮಾರು ಸಮಯದಿಂದ ಜಾಗದ ತಕರಾರು  ಇದ್ದು, ದಿನಾಂಕ  20.08.2021 ರಂದು   ಸುಮಾರು   7: 15  ಘಂಟೆಗೆ ಫಿರ್ಯಾಧುದಾರರು   ಆರೋಪಿ ಚಂದ್ರ ಶೇಖರ  ಶೆಟ್ಟಿ ಇವರ ಮನೆಯ ಎದುರುಗಡೆ ನಡೆದುಕೊಂಡು    ಹೋಗುತ್ತಿರುವಾಗ  ಸಾರ್ವಜನಿಕ  ರಸ್ತೆಗೆ   ಪೈಪ  ಹಾಕಿ  ಮಣ್ಣು  ಹಾಕದೇ   ಇದ್ದು,  ಈ  ಬಗ್ಗೆ   ವಿಚಾರಿಸಿದಕ್ಕೆ  ಆರೋಪಿ   ಚಂದ್ರ ಶೇಖರ  ಶೆಟ್ಟಿ   ಇವರಲ್ಲಿ  ವಿಚಾರಿಸಿದಕ್ಕೆ  ಅವರು   ಕೋಪಗೊಂಡು    ಅವಾಚ್ಯವಾಗಿ ಬೈದು  ಜೋರು ಮಾಡಿದ್ದು, ಈ ಸಮಯ  ಫಿರ್ಯಾಧುದಾರರು  ನಾನು   ಸಾರ್ವಜನಿಕರ  ಪರವಾಗಿ ಕೇಳಿರುತ್ತೇನೆ ಎಂದು ಹೇಳಿದಾಗ  ಅವರೊಳಗೆ  ಮಾತುಕತೆ ಯಾಗಿದ್ದು, ಈ  ಸಮಯ  ಆರೋಪಿ ಚಂದ್ರ  ಶೇಖರ  ಶೆಟ್ಟಿ ಕೈಯಲ್ಲಿ  ಕಬಿಣ್ಣದ  ರಾಡ್  ಮತ್ತು ಮರದ  ರೀಪ್‌ ತುಂಡನ್ನು   ಹಿಡಿದುಕೊಂಡು   ಬಂದಿದ್ದು, ಈ ಸಮಯ    ಆರೋಪಿ ಗೋವಿಂದ    ಶೆಟ್ಟಿ   ಇವರು   ಪಿರ್ಯಾಧುದಾರನ್ನು  ಅಡ್ಡಗಟ್ಟಿ  ನಿಲ್ಲಿಸಿ  ನಂತರ   ಕೈಯಿಂದ  ಹಾಗೂ   ಕಬಿಣ್ಣದ    ರಾಡ್   ಮರದ  ರೀಪಿನಿಂದ  ಹಲ್ಲೆ  ಮಾಡಿ   ಕೊಲ್ಲುತ್ತೆನೆ   ಎಂದು   ಬೆದರಿಕೆ  ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2021  ಕಲಂ: 341,323,324, 504 506(2), ಜೊತೆಗೆ  34  ಐ.ಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಫಿರ್ಯಾದಿ ಗೋವಿಂದ ಶೆಟ್ಟಿ ಇವರ  ಮನೆಯವರಿಗೂ   ಆರೋಪಿತ 1. ಪ್ರವೀಣ ಕುಮಾರ್  ಶೆಟ್ಟಿ  2. ಶ್ರೀಮತಿ   ಜಾನಕಿ  ಶೆಟ್ಟಿ 3.ಮಹೇಶ 4. ಪಾರ್ವತಿ 5.ಸುಧಾ 6. ಜಯರಾಮ  .7 ಜಲಜ  ಎಲ್ಲರು ಚೀನಾ  ಬೇರು  ಸಿದ್ದಾಪುರ  ಗ್ರಾಮ  ಕುಂದಾಪುರ ತಾಲೂಕು ಇವರುಗಳ  ಮನೆಯವರಿಗೆ   ಸುಮಾರು ಸಮಯದಿಂದ ಜಾಗದ ತಕರಾರು  ಇದ್ದು, ದಿನಾಂಕ  20.08.2021 ರಂದು   ಫಿರ್ಯಾದುದಾರರ  ಅಳಿಯ  ಅವರ  ಜಾಗದಲ್ಲಿ   ಗಿಡ  ನೆಟ್ಟು   ಅದಕ್ಕೆ  ಪೈಪ ಲೈನ್    ಮಾಡಿದ್ದು. ಪೈಪ ಲೈನ್  ಮಾಡಿದ  ಜಾಗದಲ್ಲಿ  ಹಾಕಿದ  ಮಣ್ಣು  ಮಳೆಯ  ನೀರಿನಲ್ಲಿ  ತೊಳೆದು    ಹೋಗಿದ್ದು,  ಈ  ಸಮಯ   ಆರೋಪಿ ಪ್ರವೀಣ   ಫಿರ್ಯಾದುದಾರರ ಅಳಿಯನಿಗೆ ಅವಾಚ್ಯ  ಶಬ್ದದಿಂದ  ಬೈದು   ಹಲ್ಲೆ  ಮಾಡಿ   ಮೊಬೈಲ್   ಪೋನನ್ನು  ಕಸಿದುಕೊಂಡು    ಹೋಗಿರುತ್ತಾನೆ,  ಈ  ಸಮಯ  ಫಿರ್ಯಾದುದಾರರು  ಪ್ರವೀಣನಲ್ಲಿ ಯಾಕೆ  ಅವನಿಗೆ  ಹೊಡೆಯುವುದು   ಎಂದು   ಕೇಳಿದಕ್ಕೆ  ಅವರ  ಕೈ  ಕಾಲಿಗೆ  ಹಲ್ಲೆ  ಮಾಡಿರುತ್ತಾನೆ, ಈ   ಸಮಯ  ಉಳಿದ  ಆರೋಪಿಗಳು ಅಕ್ರಮಕೂಟ ಕೂಡಿಕೊಂಡು ಮನೆಯ  ಗೇಟಿನ  ಒಳಗಡೆ  ಅಕ್ರಮ  ಪ್ರವೇಶ  ಮಾಡಿ   ಕಲ್ಲಿನಿಂದ  ಮರದ  ದೊಣ್ಣೆಯಿಂದ  ಹಲ್ಲೆ ಮಾಡಿ ಮನೆಯವರಿಗೆ ಅವಾಚ್ಯ ಶಬ್ದದಿಂದ ಬೈದಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2021  ಕಲಂ: 143,147, 148,447,323,324,327 504 ಜೊತೆಗೆ 149   ಐ.ಪಿಸಿ   ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-08-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080