ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ದೀಪಕ್ ಶೆಟ್ಟಿ (32), ತಂದೆ; ಚಂದ್ರಶೇಖರ ಶೆಟ್ಟಿ, ವಾಸ; ತಿರ್ಕ ಶೆಟ್ರಮನೆ, ಕರಾವಳಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 20/07/2022 ರಂದು ಮಧ್ಯಾಹ್ನ 4:05 ಗಂಟೆಗೆ ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ನಲ್ಲಿ ಕರ್ತವ್ಯದಲ್ಲಿರುವ ಸಮಯ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-20-AA-6045 ನೇ ಅಂಬುಲೆನ್ಸ್ ಚಾಲಕ ರೋಶನ್ ರೊಡ್ರಿಗಸ್ ಅಂಬುಲೆನ್ಸ್ ನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಶಿರೂರು ಟೋಲ್ ಗೇಟ್ ನ ಲೇನ್ ನಂಬ್ರ 6 ರಲ್ಲಿ ನಿರ್ಲಕ್ಷ್ಯತನದಿಂದ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಅಂಬುಲೆನ್ಸ್ ಚಾಲಕನ ಹತೋಟಿ ತಪ್ಪಿ ಸ್ಕಿಡ್ ಆಗಿ ತಿರುಗಿ ಲೇನ್ ನಂಬ್ರ 6 ರಲ್ಲಿರುವ ಟೋಲ್ ಸಂಗ್ರಹಿಸುವ ಕ್ಯಾಶ್ ಕೌಂಟರ್ ಬಳಿ ಇರುವ ಕಬ್ಬಿಣದ ಗಾರ್ಡ್ ಗೆ ಢಿಕ್ಕಿ ಹೊಡೆದು ನಂತರ ಟೋಲ್ ಸಂಗ್ರಹಿಸುವ  ಕೌಂಟರ್ ಗೆ ಢಿಕ್ಕಿ ಹೊಡೆದು ಬಲ ಮಗ್ಗುಲಾಗಿ ಬಿದ್ದಿದ್ದು, ಅಂಬುಲೆನ್ಸ್ ನ ಹಿಂಬದಿಯ ಡೋರ್ ತೆರೆದುಕೊಂಡು ಅಂಬುಲೆನ್ಸ್ ನ ಹಿಂಬದಿಯಲ್ಲಿದ್ದ ಇಬ್ಬರು ಹೆಂಗಸರು ಹಾಗೂ ಮೂವರು ಗಂಡಸರು ಅಂಬುಲೆನ್ಸ್ ನಿಂದ ಎಸೆಯಲ್ಪಟ್ಟಿದ್ದು, ಚಾಲಕನ ಸೀಟಿನ ಪಕ್ಕದಲ್ಲಿದ್ದ ವ್ಯಕ್ತಿ ಹಾಗೂ ಅಂಬುಲೆನ್ಸ್ ಚಾಲಕ ಅಂಬುಲೆನ್ಸ್ ಒಳಗೆ ಸಿಕ್ಕಿ ಹಾಕಿಕೊಂಡಿದ್ದು, ನಂತರ ಅಲ್ಲಿ ಸೇರಿದವರು ಅಂಬುಲೆನ್ಸ್ ನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಹೊರಗಡೆ ತೆಗೆದಿದ್ದು ಅಲ್ಲದೇ ಟೋಲ್ ಗೆಟ್ ನಲ್ಲಿ ಕರ್ತವ್ಯದಲ್ಲಿದ್ದ ಟೋಲ್ ಗೇಟ್ ಸಿಬ್ಬಂದಿಯಾದ ಸಂಬಾಜಿ ಗೋರ್ಪಡೆ ರವರಿಗೂ ಅಂಬುಲೆನ್ಸ್ ಢಿಕ್ಕಿ ಹೊಡೆದು ಟೋಲ್ ಕೌಂಟರ್ ಬಳಿ ಬಿದ್ದಿದ್ದು , ಪಿರ್ಯಾದಿದಾರರು ಹಾಗೂ ಉಳಿದ ಟೋಲ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸೇರಿ ಗಾಯಾಳು ಗಳನ್ನು ಎತ್ತಿ ಉಪಚರಿಸಿದ್ದು, ಅಂಬುಲೆನ್ಸ್ ನಲ್ಲಿ ಇದ್ದವರಿಗೆ ತಲೆಗೆ ಹಾಗೂ ಮೈ ಕೈಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಟೋಲ್ ಸಿಬ್ಬಂದಿಯಾದ ಸಂಬಾಜಿ ಗೋರ್ಪಡೆ ಗೆ ಎಡ ಬದಿ ದವಡೆಗೆ ರಕ್ತ ಗಾಯ ಹಾಗೂ ಬೆನ್ನಿಗೆ ಒಳಜಖಂ ಉಂಟಾಗಿದ್ದು, ಅಂಬುಲೆನ್ಸ್ ನಲ್ಲಿದ್ದ ಚಾಲಕ ಸೇರಿ 8 ಜನರನ್ನು ಹಾಗೂ ಟೋಲ್ ಸಿಬ್ಬಂದಿಯಾದ ಸಂಬಾಜಿ ಗೋರ್ಪಡೆ ಯವರನ್ನು ಅಂಬುಲೆನ್ಸ್ ಗಳಲ್ಲಿ ಆಸ್ಪತ್ರೆಗೆ ದಾಖಲಿಸಲು ಕಳುಹಿಸಿಕೊಟ್ಟಿದ್ದು  ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಗಾಯಾಳುಗಳಲ್ಲಿ  ಗಜಾನನ ನಾಯ್ಕ, ಮಂಜುನಾಥ ನಾಯ್ಕ  ಮತ್ತು  ಜ್ಯೋತಿ ಎಂಬುವವರು ಹಾಗೂ ಕುಂದಾಪುರ ಆಸ್ಪತ್ರೆಗೆ  ಕರೆದುಕೊಂಡು ಹೋದ ಗಾಯಾಳುಗಳಲ್ಲಿ  ಲೋಕೇಶ್ ನಾಯ್ಕ ರವರು  ಮೃತಪಟ್ಟಿರುತ್ತಾರೆ.  ಹಾಗೂ ಗಾಯಾಳುಗಳಾದ ಗೀತಾ ನಾಯ್ಕ , ಶಶಾಂಕ್ , ಗಣೇಶ್  ಹಾಗೂ ಅಂಬುಲೆನ್ಸ್  ಚಾಲಕ ಮತ್ತು ಟೋಲ್ ಸಿಬ್ಬಂದಿ ಸಂಬಾಜಿ ಗೋರ್ಪಡೆ ಯವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022 ಕಲಂ: 279, 337, 338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 19/07/2022 ರಂದು ಸಂಜೆ 6:35  ಗಂಟೆಗೆ, ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಕೋಸ್ಟಲ್‌‌‌‌‌ ‌ಕ್ರೌನ್‌ (ಬಾರತ್‌ ಸಿನಿಮಾ ಹಾಲ್‌‌)  ಬಳಿ ಪೂರ್ವ ಬದಿಯ  NH  66 ರಸ್ತೆಯಲ್ಲಿ, ಆಪಾದಿತ ಸಂದೀಪ್‌ ಶೆಟ್ಟಿ KA-20-EV-7422ನೇ ಬುಲೆಟ್‌ನಲ್ಲಿ ಸುತೇಶ ಶೆಟ್ಟಿ  ಎಂಬುವವರನ್ನು ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಹೋಗಿ ಮನೆಯವರ ಜೋತೆ ರಸ್ತೆ ದಾಟುತ್ತ ರಸ್ತೆಯ ಅಂಚಿಗೆ ತಲುಪುತ್ತಿದ್ದ 6 ವರ್ಷದ  ಮಗು  ಆಯನ್‌ ‌ಡಿಕ್ಕಿ ಹೊಡೆದ ಪರಿಣಾಮ, ಆಯನ್‌ನ ಮುಖ, ತಲೆ, ರಕ್ತಗಾಯ ಹಾಗೂ ಒಳಜಖಂ ಗಾಯ, ಕೈ ಕಾಲುಗಳಿಗೆ ತರಚಿದ ಗಾಯವಾಗಿ, ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ  ದಾಖಲಾಗಿದ್ದು, ಸಂದೀಪ್‌ಶೆಟ್ಟಿ ಹಾಗೂ ಸುತೇಶ ಶೆಟ್ಟಿಯವರು ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2022  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಧೀರಜ್ (20), ತಂದೆ: ಮಾಧವ, ವಾಸ: ಬಂಗೇರಾ ನಿಲಯ, 12 ನೇ ಕ್ರಾಸ್, ತೆಳ್ಳಾರ್ ರಸ್ತೆ, ಕಸಬಾ ಗ್ರಾಮ,  ಕಾರ್ಕಳ ತಾಲೂಕು ಇವರು ದಿನಾಂಕ 20/07/2022 ರಂದು KA-20-ES-4860 ನೇ ನೋಂದಣಿ ಸಂಖ್ಯೆಯ ಮೋಟರ್ ಸೈಕಲ್ ನಲ್ಲಿ ಭುವನೇಂದ್ರ ಕಾಲೇಜಿನಿಂದ ಅನಂತಶಯನ ಕಡೆಗೆ ಹೊರಟು 12:15 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ರೋಟರಿ ಕ್ಲಬ್ ಬಳಿ ತಲುಪಿದಾಗ ಅನಂತಶಯನ ಕಡೆಯಿಂದ ಭುವನೇಂದ್ರ ಕಾಲೇಜು ಕಡೆಗೆ ದಿಲ್ಲಾನ್ ವಿಶ್ವಾಸ್ ಡಿಸೋಜಾ KA-03-MT-6005 ನೇ ನೋಂದಣಿ ಸಂಖ್ಯೆಯ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟರ್ ಸೈಕಲ್ ಎದುರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈಯ ಕಿರುಬೆರಳಿನ ಮೂಳೆ ತುಂಡಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಅಪಘಾತದಿಂದ ಮೋಟಾರ್ ಸೈಕಲ್ ನ ಹ್ಯಾಂಡಲ್ ಜಖಂಗೊಂಡಿದ್ದು ಹಾಗೂ ಕಾರಿನ ಎಡಬದಿಯ ಬಾಗಿಲು ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ನಿಂಗಮ್ಮ ಆಡಿನ್ (27),ಗಂಡ: ಭೀಮಪ್ಪ ,ವಾಸ: ಸುದರ್ಶನ ಆಚಾರ್ ಎಂಬವರ ಬಾಡಿಗೆ ಮನೆ, ಶ್ರೀನಿವಾಸ ನಗರ, ಸಗ್ರಿ, ಕುಂಜಿಬೆಟ್ಟು ಪೋಸ್ಟ್, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ ಭೀಮಪ್ಪ (31) ಇವರು ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಬೆಳಿಗ್ಗೆ 07:00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಉಡುಪಿಗೆ ಹೋಗಿರುತ್ತಾರೆ. ಮದ್ಯಾಹ್ನ 01:15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಮನೆಯ ಬಳಿಯ ಸುಧಾಕರ ಶೆಟ್ಟಿ ಎಂಬುವವರು ಪಿರ್ಯಾದಿದಾರರ ಮನೆಗೆ ಬಂದು ಶ್ರೀನಿವಾಸ ನಗರ ಬಳಿಯ ಬ್ರಿಡ್ಜ್ ನ ಕೆಳಗಡೆ ನಿಮ್ಮ ಗಂಡನಿಗೆ ರೈಲು ಡಿಕ್ಕಿ ಹೊಡೆದು ರೈಲ್ವೇ ಹಳಿಯ ಬಳಿ ಬಿದ್ದಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಇತರರೊಂದಿಗೆ ರೈಲ್ವೇ ಹಳಿಯ ಬಳಿ ಬಂದು ನೋಡಿದಾಗ  ಮೃತ ಭೀಮಪ್ಪರವರ ತಲೆ ಮತ್ತು ಮುಖದಲ್ಲಿ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದವರನ್ನು ಒಂದು ಅಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆಂದು ಕರೆದುಕೊಂಡು ಬರುವಾಗ ದಾರಿ ಮದ್ಯೆ ಸರಿಯಾಗಿ ಪರಿಶೀಲಿಸಿದಾಗ ಭೀಮಪ್ಪ ರವರು ಮೃತಪಟ್ಟಿರುವುದು ಖಿಚಿತವಾಗಿದ್ದು, ಪಿರ್ಯಾದಿದಾರರ  ಗಂಡ ಭೀಮಪ್ಪರವರು ಮನೆಗೆ ಬರಲು ಹತ್ತಿರವಾಗುತ್ತದೆ ಎಂಬ ಉದ್ದೇಶದಿಂದ ಯಾವಾಗಲು ಶ್ರೀನಿವಾಸ ನಗರ ಬಳಿಯ ಬ್ರಿಡ್ಜ್ ನ ದಾರಿಯಾಗಿ ರೈಲ್ವೇ ಹಳಿಯ ಬಳಿ ನಡೆದುಕೊಂಡು ಬರುತ್ತಿದ್ದವರು ದಿನಾಂಕ 20/07/2022 ರಂದು ಕೂಡ ಕೆಲಸಕ್ಕೆ ಹೋದವರು ಕೆಲಸ ಸಿಗದೇ ವಾಪಾಸು ಮನೆಗೆ ರೈಲ್ವೇ ಹಳಿಯ ಬಳಿ ನಡೆದುಕೊಂಡು ಬರುವಾಗ ಬೆಳಿಗ್ಗೆ 7:00 ಗಂಟೆಯಿಂದ ಮದ್ಯಾಹ್ನ 1:15 ರ ಮಧ್ಯೆ  ಬಾರ್ಕೂರು – ಉಡುಪಿ ಮಧ್ಯೆ ಸಂಚರಿಸುವ ಯಾವುದೋ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಯುಡಿಆರ್‌ ಕ್ರಮಾಂಕ 27/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನಾಗೇಂದ್ರ ಆಚಾರಿ (28), ತಂದೆ; ವಿಶ್ವನಾಥ ಆಚಾರಿ, ವಾಸ; ಜನನಿ ಗೋಳಿಯಾಡಿ, ಕೂರ್ಸಿ, ಕಾಲ್ತೋಡು ಗ್ರಾಮ, ಬೈಂದೂರು ತಾಲೂಕು ಇವರ ತಮ್ಮ ಕಾರ್ತಿಕ್ (26) ರವರು  ದಿನಾಂಕ 20/07/2022 ರಂದು ಮಧ್ಯಾಹ್ನ 12:00 ಗಂಟೆಗೆ ಊಟ ಮುಗಿಸಿ ಗದ್ದೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ಬಾರದೇ ಇದ್ದದ್ದನ್ನು ಕಂಡು ಪಿರ್ಯಾದಿದಾರರು ಅವರ ತಮ್ಮ ರಾಜೇಂದ್ರನೊಂದಿಗೆ ಗದ್ದೆ, ತೋಟದ ಬಳಿ ಹೋಗಿ ಹುಡುಕಾಡುತ್ತಿರುವಾಗ ಗದ್ದೆಯ ಬಳಿ ಇರುವ ಕೆರೆಯಲ್ಲಿ ಕಾರ್ತಿಕನ ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದ್ದನ್ನು ನೋಡಿ ಅನುಮಾನಗೊಂಡು ಅಗ್ನಿಶಾಮಕ ದಳದವರಿಗೆ ತಿಳಿಸಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ಕಾರ್ತಿಕನ ದೇಹ ಕೆರೆಯಲ್ಲಿ 16:00 ಗಂಟೆಗೆ ದೊರಕಿದ್ದು, ಕಾರ್ತಿಕನ  ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಮೃತಪಟ್ಟಿದ್ದು ಕಾರ್ತಿಕನ ಮೃತ ಶರೀರವನ್ನು ಒಂದು ಅಂಬುಲೆನ್ಸ್ ವಾಹನದಲ್ಲಿ ಬೈಂದೂರು ಸಮಯದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ತಂದು ಇರಿಸಿದ್ದಾಗಿದೆ. ಕಾರ್ತಿಕ್ ನು ದಿನಾಂಕ 20/07/2022 ರಂದು ಮದ್ಯಾಹ್ನ 12:00 ಗಂಟೆಯಿಂದ 16:00 ಗಂಟೆಯ ಮಧ್ಯಾವಧಿಯಲ್ಲಿ ಕೃಷಿ ಕೆಲಸದ ಬಗ್ಗೆ ಗದ್ದೆ ಕೆಲಸಕ್ಕೆ ಹೋದವರು ಗದ್ದೆಯ ಬಳಿ ಇರುವ ಕೆರೆಯ ದಡದಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗಲೋ ಅಥವಾ ಬರುತ್ತಿರುವಾಗಲೋ ಆಕಸ್ಮಿಕವಾಗಿ ಕಾಲು ಜಾರಿ, ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 35/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಕರ್ತವ್ಯಕ್ಕೆ ಅಡ್ಡಿ ಪ್ರಕರಣ

  • ಕೋಟ: ದಿನಾಂಕ 20/07/2022 ರಂದು ಪಿರ್ಯಾದಿದಾರರಾದ ಗಣೇಶ, ಹೆಡ್‌ ಕಾನ್ಸಟೇಬಲ್‌, ಕೋಟ ಪೊಲೀಸ್ ಠಾಣೆ ಇವರು ಠಾಣೆಯಲ್ಲಿ  ತನಿಖಾ ಸಹಾಯಕ ಕೆಲಸ ಮಾಡುತ್ತಿರುವಾಗ  ಓರ್ವ ವ್ಯಕ್ತಿ ಇತರ ಇಬ್ಬರು ವ್ಯಕ್ತಿಗಳೊಂದಿಗೆ ಬಂದು ಠಾಣೆಯ ಅರ್ಜಿ ಎನ್ .ಸಿ 146/2022  ರಲ್ಲಿ  ಪಿರ್ಯಾದಿದಾರರು ನೀಡಿದ ಹಿಂಬರಹವನ್ನು ಪಿರ್ಯಾದಿದಾರರ ಮೇಲೆ ಎಸೆದು ಕಾಲಿನ ಮೇಲೆ ಕಾಲು  ಹಾಕಿ ಕುಳಿತುಕೊಂಡು ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಟೇಬಲ್ ನ್ನು ಕುಟ್ಟಿ ಭಯ ಪಡಿಸುವ ರೀತಿಯಲ್ಲಿ ಇದೇನು ಹಿಂಬರಹ ಕೊಟ್ಟಿದ್ದು ನೀನು ಇದು ನಾನು ತಗೊಳ್ಳಲ್ಲ ,  ನೀನು ನನ್ನ ಸರ್ವೆಂಟ್, ನಮ್ಮ ಟ್ಯಾಕ್ಸ ನಲ್ಲಿ ಸಂಬಳ  ತಗೊಳ್ಳುವುದು, ನನಗೆ ಕಾನೂನು ಗೊತ್ತು ಮೇಲಿನ ಉನ್ನತ ಅಧಿಕಾರಿಗಳು ನನಗೆ ಗೊತ್ತು  ,ನಿನ್ನ  ಇದೆಲ್ಲಾ ಬೇಡ ಮೊದಲು ನಾನು ಹೇಳಿದ ಹಾಗೆ ಎಂಡೋರ್ಸಮೆಂಟ್ ಚೇಂಜ್ ಮಾಡಿ ಕೊಡು ಇಲ್ಲ ನೋಡು ನಿನ್ನಂತ ಎಷ್ಟ್ ಪೊಲೀಸ್ ನೋಡಿಲ್ಲ ಎಂಬುವುದಾಗಿ ಉಢಾಪೆಯಿಂದ ಮಾತನಾಡಿ ಕುಳಿತಲ್ಲಿಂದ ಬೇರೆ ಕರ್ತವ್ಯ ನಿರ್ವಹಿಸಲು ಹೋಗಲು ಬಿಡದೇ ಪಿರ್ಯಾದಿದಾರರ ಎದೆಗೆ ಕೈ ಹಾಕಿ ದೂಡಿ ಮುಂದಕ್ಕೆ ಹೋಗದಂತೆ ತಡೆದಿದ್ದು  ಅಲ್ಲದೇ  ನಿಲ್ಲಿಸಿರುತ್ತಾನೆ. ತನಿಖಾ ವಿಭಾಗದ ಪಿ.ಎಸ್.ಐ  ಶ್ರೀಮತಿ ಪುಷ್ಪಾ ರವರು ಬಂದು ಸಮಾಧಾನ ಪಡಿಸಿದರೂ ಕೇಳದೇ ಅವರಿಗೂ ಸಹ ಉಡಾಫೆಯಿಂದ ನೀನು ಪಿ.ಎಸ್.ಐ ಆದರೆ ಏನಾಯಿತು ನನಗೆ ಕಾನೂನು ಗೊತ್ತಿದೆ ನಿನ್ನದ್ದು ಇದೆಲ್ಲಾ ಬೇಡ ನಿನಗೆ  ಬೇಕಾದ ಹಾಗೆ ಮಾಡುತ್ತೀಯ ಎಂಬುವುದಾಗಿ ತೀರಾ ಕೆಟ್ಟದ್ದಾಗಿ ಮಾತನಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 341, 353, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು:  ಪಿರ್ಯಾದಿದಾರರಾದ ಪ್ರಾನ್ಸಿಸ್ ಕಿರಣ ಲಸ್ರಾದೊ (51), ತಂದೆ : ರಾಬರ್ಟ  ಲಸ್ರಾದೋ,  ವಾಸ : ಮನೆ ನಂಬ್ರ 5-73 ಪಲ್ಲಮಾರ್ ಹೌಸ್, ಮೂಡಬೆಟ್ಟು ಗ್ರಾಮ ಕಟಪಾಡಿ ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಕಾರು ನಂಬ್ರ KA-20-MA-1488 ನೇದನ್ನು ಸ್ನೇಹಿತ ಆರೋಪಿ ಅಮೀರ ಸಾಹೇಬ್  ಗೆ ಆಗಾಗ ಪಿರ್ಯಾದಿದಾರರು ಅವರ ಕಾರು ಕೊಡುತ್ತಿದ್ದು, ಆರೋಪಿಯು  ಮದುವೆ ಕಾರ್ಯಕ್ಕೆ ಹಾಜರಾಗಲು ಪಿರ್ಯಾದಿದಾರರ ಕಾರನ್ನು ಒಂದು ತಿಂಗಳ ಕಾಲ ಬಳಕೆಗಾಗಿ  ಪಡೆದುಕೊಂಡಿದ್ದು,  ಒಂದು ತಿಂಗಳ ನಂತರ ಕಾರಿನ ಬಗ್ಗೆ ಪಿರ್ಯಾದಿದಾರು  ಆರೋಪಿಯ ಬಳಿ ವಿಚಾರಿಸಿದಾಗ, ಆರೋಪಿಯು ಸ್ವಲ್ಪ ಹಣವನ್ನು ನೀಡಿ, ಮುಂಬೈಗೆ ಹೋಗಲು ಕಾರಿನ ಅಗತ್ಯವಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆರೋಪಿಗೆ ಕಾರು ಬಿಟ್ಟುಕೊಟ್ಟಿದ್ದು, ಆರೋಪಿಯು  ಮುಂಬೈನಿಂದ ಬಂದ ನಂತರ  ಪಿರ್ಯಾದಿದಾರರಿಗೆ ಸಂಪರ್ಕಿಸದೇ ಹಾಗೂ ಕಾರು ಸಹ ಹಿಂತಿರುಗಿಸಿರುವುದಿಲ್ಲ.  ನಂತರ ಬೆಂಗಳೂರಿಗೆ ಹೋಗಿದ್ದು ಅಲ್ಲಿಂದ ಬಂದ ನಂತರವೂ ಪಿರ್ಯಾದಿದಾರರಿಗೆ ಕಾರನ್ನು ನೀಡದೇ ಇದ್ದು, ಈ ಬಗ್ಗೆ ಪಿರ್ಯಾದಿದಾರರು ಆರೋಪಿ ಬಳಿ  ವಿಚಾರಿಸಿದಾಗ ಒಂದಲ್ಲ ಒಂದು ಕಾರಣ ನೀಡಿತ್ತಿದ್ದು, ಕಾರನ್ನು ನೀಡದೇ, ಬಳಸಿದ ಹಣವನ್ನು ನೀಡದೇ, ಇದ್ದು, ಆತನಿಗೆ ಕರೆ ಮಾಡಿ ಪಿರ್ಯಾದಿದಾರರು ಕರೆ ಮಾಡಿ  ವಿಚಾರಿಸಿದ್ದಲ್ಲಿ, ಆರೋಪಿಯೂ ಗೆಳೆಯ ಡೇವಿಡ್ ರವರಿಗೆ ನೀಡಿದ್ದು ಆತ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆರೋಪಿಯ ಮಾತು ನಂಬಿದ್ದು, ಎರಡು ತಿಂಗಳ ನಂತರ ಮರಳಿ ಬಂದಿಲ್ಲ ಈ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದ್ದಲ್ಲಿ ಅವರಿಂದ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದು,  ಪಿರ್ಯಾದಿದಾರರು ದಿನಾಂಕ 25/03/2022 ರಂದು ಆರೋಪಿಯ  ಮನೆಗೆ ಹೋಗಿ ವಿಚಾರಿಸಿದ್ದಲ್ಲಿ  ಸಿದ್ದಿಕ್ ಮತ್ತು ಆರೋಫಿಯ ಬಳಿ ಹಣಕಾಸಿನ ವ್ಯವಹಾರವಿದ್ದು, ಹಣ ಪಾವತಿ ಮಾಡದ ಕಾರಣ ಆರೋಪಿಯಿಂದ ಸಿದ್ದಿಕ್ ಕಾರನ್ನು ತೆಗೆದುಕೊಂಡು ಹೋಗಿದ್ದು,  ಕಾರು ಮಂಗಳೂರಿನ ಕೋಟೆಕಾರ್ ಎಂಬಲ್ಲಿ ಸಿದ್ದಿಕ್ ಎಂಬಾತನ ಬಳಿ ಇದೆ  ಆತನ ಹಣ ಪಾವತಿ ಮಾಡಿದ ನಂತರ ಕಾರು ನೀಡುವುದಾಗಿದೆ ಎಂದು ತಿಳಿಸಿರುವುದಾಗಿದೆ.  ಆರೋಪಿ ಮತ್ತು ಸಿದ್ದಿಕ್ ನಡುವೆ ಹಣಕಾಸಿನ ವ್ಯವಹಾರ ವಿದ್ದು, ಅದಕ್ಕಾಗಿ ಆರೋಪಿ ವಾಹನವನ್ನು ವಶಕ್ಕೆ ಪಡೆಯುವಂತಿಲ್ಲ. ಆರೋಪಿ ಮತ್ತು ಸಿದ್ದಿಕ್ ಪಿರ್ಯಾದಿದಾರರ ಕಾರನ್ನು ಇಟ್ಟುಕೊಂಡಿರುವುದಾಗಿದೆ. ಆರೋಪಿಯು ಪಿರ್ಯಾದಿದಾರರಿಂದ ಕಾರನ್ನು ನಂಬಿಕೆಯಿಂದ ಪಡೆದುಕೊಂಡು ಅದನ್ನು ಹಿಂದಿರುಗಿಸುವುದು ಆರೋಪಿ ನಂಬಿಕೆ ದ್ರೋಹ ಮಾಡಿ ಪಿರ್ಯಾದಿದಾರರ ಕಾರನ್ನು ಆರೋಪಿ ಹಾಗೂ ಸಿದ್ಧಿಕ್ ಅವರ ಬಳಿ ಇಟ್ಟುಕೊಂಡು ಕಾರಿನಿಂದ  ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿದ್ದರೆ ಆರೋಪಿ ಹೊಣೆಗಾರನಾಗಿದ್ದು, ಆರೋಪಿಯು ಪಿರ್ಯಾದಿದಾರರ ಕಾರನ್ನು ಕಾನೂನುಬಾಹಿರ ಕೃತ್ಯಗಳಿಗೆ ಬಳಸಿಕೊಂಡು  ಪಿರ್ಯಾದಿದಾರರಿಗೆ ವಂಚಿಸುವ ಉದ್ದೇಶವಿರುತ್ತದೆ. ಪಿರ್ಯಾದಿದಾರರಿಗೆ  ಮೋಸ ಮಾಡಿ ಅಕ್ರಮವಾಗಿ ಕಾರನ್ನು ವಶದಲ್ಲಿಟ್ಟುಕೊಂಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 405, 406, 415, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


       

ಇತ್ತೀಚಿನ ನವೀಕರಣ​ : 21-07-2022 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080