ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕುಂದಾಪುರ: ದಿನಾಂಕ 20/07/2021 ರಂದು  ಬೆಳಿಗ್ಗೆ 9:50 ಗಂಟೆಗೆ  ಕುಂದಾಪುರ  ತಾಲೂಕಿನ,  ತಲ್ಲೂರು  ಗ್ರಾಮದ ಪ್ರವಾಸಿ  ಹೊಟೇಲ್‌‌ ಬಳಿ,  ಪಶ್ಚಿಮ ಬದಿಯ NH66 ರಸ್ತೆಯಲ್ಲಿ,  ಪ್ರಶಾಂತ್‌ ಎಂ.ಎಂ ಎಂಬುವವರು  KA-01-AH-4369 ನೇ ಮಹೀಂದ್ರ ಬೊಲೆರೋ ಗೂಡ್ಸ್ ವಾಹನವನ್ನು ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಹೋಗಿ ವಾಹನವವನ್ನು ರಸ್ತೆಯ ತೀರ ಎಡಬದಿಗೆ  ಚಲಾಯಿಸಿ ಅದೇ ದಿಕ್ಕಿನಲ್ಲಿ ಸೈಕಲ್‌‌ ಸವಾರಿ ಮಾಡಿಕೊಂಡು ಹೋಗುತ್ತಿದ್ದ  ವಿಶ್ವನಾಥ ಶೆಟ್ಟಿ ಎಂಬುವವರಿಗೆ ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ  ವಿಶ್ವನಾಥ ಶೆಟ್ಟಿ  ಯವರ   ತಲೆಗೆ,  ಹಾಗೂ ಮೈಗೆ  ಒಳಜಖಂ ಹಾಗೂ ರಕ್ತಗಾಯವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಯಲ್ಲಿ   ದಾಖಲಾಗಿದ್ದವರು   ಚಿಕಿತ್ಸೆ  ಫಲಕಾರಿಯಾಗದೇ  ದಿನಾಂಕ 20/07/2021 ರಂದು ರಂದು 17:50 ಗಂಟೆಗೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಸಂತೋಷ (30), ತಂದೆ: ಶಂಕರ ದೇವಾಡಿಗ, ವಾಸ: ಹೊನ್ನಾರಿ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 20/07/2021 ರಂದು ಬೆಳಿಗ್ಗೆ ಕೋಟ ವಿವೇಕ  ಹೈಸ್ಕೂಲಿಗೆ ತೆರಳಿ ವಾಪಾಸ್ಸು  ಕೋಟ ಮೂರು ಕೈ ಬಳಿಯಿರುವ  ಹೋಟೆಲಿಗೆ  ಚಹಾ ಕುಡಿಯಲು  ಬೆಳಿಗ್ಗೆ 11.00 ಗಂಟೆಗೆ ರಿಕ್ಷಾವನ್ನು ನಿಲ್ಲಿಸಿ  ಕೆಳಗೆ ಇಳಿದಾಗ  ಕೋಟ ಮೂರು ಕೈ ರಿಕ್ಷಾ  ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರ  ಪಶ್ಚಿಮ ಬದಿ ಪಥದ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಹೋಗುವ ಏಖಮುಖ ಡಾಮರು ರಸ್ತೆಯಲ್ಲಿ  Bajaj Company RE  KA-20-C-7610  ನೇ ನಂಬ್ರದ ರಿಕ್ಷಾ  ಚಾಲಕನು  ರಿಕ್ಷಾದಲ್ಲಿ  ಪ್ಯಾಸೆಂಜರ್‌  ಓರ್ವರನ್ನು ಕುಳ್ಳಿರಿಸಿಕೊಂಡು ಸಾಲಿಗ್ರಾಮ ಕಡೆಯಿಂದ ಕೋಟ  ಮೂರಕೈ ಕಡೆಗೆ ಬಂದು ಕೋಟ  ಮೂರಕೈ  ಜಂಕ್ಷನ್‌ನಲ್ಲಿ  ಸೈಬ್ರಕಟ್ಟೆ ಕಡೆಗೆ  ಹೋಗಲು  ರಿಕ್ಷಾವನ್ನು ತಿರುಗಿಸಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ಏಕಮುಖ ಡಾಮಾರು ರಸ್ತೆಯನ್ನು ದಾಟಿ ಸೈಬ್ರಕಟ್ಟೆ ಕಡೆಗೆ ಹೋಗುವ ಡಾಮಾರು ರಸ್ತೆಯ ಹತ್ತಿರ ತಲುಪುಷ್ಟರಲ್ಲಿ  ಕೋಟ  ಕಡೆಯಿಂದ TATA Company Indica Car ನಂಬ್ರ. KA-22-M-9346 ನೇದರ ಚಾಲಕನು  ಆತನ  ಕಾರನ್ನು  ಉಡುಪಿ  ಕಡೆಗೆ ಅತೀ  ವೇಗ  ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ರಿಕ್ಷಾಕ್ಕೆ  ಡಿಕ್ಕಿ  ಹೊಡೆದ ಪರಿಣಾಮ  ರಿಕ್ಷಾ ಚಾಲಕನು  ಹಾಗೂ  ರಿಕ್ಷಾದಲ್ಲಿದ್ದ ಪ್ಯಾಸೆಂಜರ್‌ ಮಹಿಳೆ ರಿಕ್ಷಾದಿಂದ ಹೊರಕ್ಕೆ  ರಸ್ತೆಗೆ ಬಿದ್ದಿರುತ್ತಾರೆ. ಪಿರ್ಯಾದಿದಾರರು  ಹಾಗೂ  ಸ್ಥಳೀಯವರು ಓಡಿ  ಹೋಗಿ  ನೋಡಲಾಗಿ  ರಿಕ್ಷಾದಲ್ಲಿದ್ದ  ಪ್ಯಾಸೆಂಜರ್‌  ಮಹಿಳೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇದ್ದು ಅವರನ್ನು ಉಪಚರಿಸಿ  ನೋಡಿದಲ್ಲಿ ಅವರ ತಲೆಗೆ ತೀವ್ರ  ಸ್ವರೂಪದ ರಕ್ತ  ಗಾಯವಾಗಿರುತ್ತದೆ. ಅವರ ಹೆಸರು ವಡ್ಡರ್ಸೆ ನಿವಾಸಿ ಗುಲಾಬಿ ಪೂಜಾರ್ತಿ ಎಂದು ತಿಳಿಯಿತು. ರಿಕ್ಷಾ  ಚಾಲಕನನ್ನು ನೋಡಿದಲ್ಲಿ ಅವರ ಮೈ  ಕೈಗೆ ರಕ್ತಗಾಯಗಳಾಗಿದ್ದು ಅವರ ಹೆಸರು ಬಾಬು ದೇವಾಡಿಗ ಎಂದು ತಿಳಿಯಿತು. ಡಿಕ್ಕಿ  ಹೊಡೆದ ಕಾರನ್ನು ಅದರ ಚಾಲಕನು ರಸ್ತೆ ಬದಿಯಲ್ಲಿ ಕಾರ್‌ ಚಾಲಕನ  ಹೆಸರು ಬಸವರಾಜ್‌ ಎಂದು ತಿಳಿಯಿತು.  ಕಾರಿನಲ್ಲಿದ್ದ ಯಾರಿಗೂ  ಗಾಯ ಆಗಿರುವುದಿಲ್ಲ. ಗಾಯಗೊಂಡಿದ್ದ  ಗುಲಾಬಿ  ಪೂಜಾರ್ತಿ ಮತ್ತು  ರಿಕ್ಷಾ ಚಾಲಕ ಬಾಬು ದೇವಾಡಿಗ  ರವರನ್ನು ಚಿಕಿತ್ಸೆ ಬಗ್ಗೆ  ಸ್ಥಳೀಯ ಅಂಬುಲೆನ್ಸನಲ್ಲಿ ಪಿರ್ಯಾದಿದಾರರು  ಮತ್ತು  ಸ್ಥಳೀಯರು ಚಿಕಿತ್ಸೆಗೆ  ಮಣಿಪಾಲ  ಕೆ.ಎಮ್‌.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಕಳವು ಪ್ರಕರಣ

 • ಕಾರ್ಕಳ: ದಿನಾಂಕ 20/07/2021 ರಂದು ಬೆಳಿಗ್ಗೆ 11:00 ಗಂಟೆಯಿಂದ 12:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀಮತಿ ಸುಮಿತ್ರಾ ಪೂಜಾರಿ (50), ಗಂಡ: ಷಣ್ಮುಖ ಪೂಜಾರಿ, ವಾಸ: ಲಚ್ಚಿಲ್ ಹೌಸ್, ಬೋರುಗುಡ್ಡೆ ಕುಂಟಾಡಿ ಅಮಚೆ ಕಲ್ಯಾ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಲಚ್ಚಿಲ್ ಹೌಸ್ ಎಂಬ ಮನೆಯ ಮುಂಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಪ್ರವೇಶಿಸಿ ಮನೆಯ ಕೊಠಡಿಯಲ್ಲಿ ಇದ್ದ ಗೊಡ್ರೇಜ್ ಕಪಾಟಿನಲ್ಲಿ ಇರಿಸಿದ್ದ 24  ಗ್ರಾಂ ತೂಕದ ಚಿನ್ನದ ಹಾರ, 08 ಗ್ರಾಂ ತೂಕದ ಸಣ್ಣ ಕರಿಮಣಿ ಸರ-1, 02 ಗ್ರಾಂ ತೂಕದ ಬಂಗಾರದ ಲೇಡಿಸ್ ಉಂಗುರ. ½ ಗ್ರಾಂ ತೂಕದ ಮಗುವಿನ ಬಂಗಾರದ ಉಂಗುರ. 08 ಗ್ರಾಂ ತೂಕದ ಬಂಗಾರದ ಬಳೆ. 06 ಗ್ರಾಂ ತೂಕದ ಕಿವಿಯಬೆಂಡೋಲೆ-01 ಜೊತೆ , ಒಟ್ಟು  2,00,000/- ರೂಪಾಯಿ ಮೌಲ್ಯದ 56 ½ ಗ್ರಾಂ ಚಿನ್ನಾಭರಣಗಳನ್ನು  ಕಳವು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ನಿರ್ಮಲ (28), ಗಂಡ : ಶಂಕರ್, ವಾಸ : ಐ.ಟಿ.ಐ ಕಾಲೇಜಿನ ಹಿಂಬದಿ ಪ್ರಗತಿ ನಗರ, ಅಲೆವೂರು ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ  19/07/2021  ರಂದು ಸಂಜೆ 3:45 ಗಂಟೆಗೆ ಮನೆಯ ಒಳಗೆ ಇರುವಾಗ ಪಿರ್ಯಾದಿದಾರರ ಎದುರು ಮನೆಯ ವಾಸಿಯಾಗಿದ್ದ  ಪುಷ್ಪ ಎಂಬುವವರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾದಿದಾರರ ಬಳಿ ರಸ್ತೆಯನ್ನು ಕ್ಲೀನ್ ಮಾಡಿದ್ದು ಯಾರು ಎಂದು ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು ತನ್ನ ಗಂಡ ಕ್ಲೀನ್ ಮಾಡಿದ್ದು ಅಂತ ಹೇಳಿರುತ್ತಾರೆ. ನಂತರ ಪುಷ್ಪ ರವರು ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಗಂಡನಿಗೆ ಬೈದು ನಿಮ್ಮನ್ನು ಬಿಡುವುದಿಲ್ಲ ಎಂದು ಪಿರ್ಯಾದಿದಾರರ ಬೇಲಿಯಲ್ಲಿದ್ದ ಕೋಲನ್ನು ಕಿತ್ತು  ಮನೆಯೊಳಗಿದ್ದ  ಪಿರ್ಯಾದಿದಾರರನ್ನು ಹೊರಗೆ ಎಳೆದುಕೊಂಡು ಬಂದು ಕೋಲಿನಿಂದ  ಹೊಡೆದು, ನೆಲಕ್ಕೆ ಕೆಡವಿ ಮೈಮೇಲೆ ಕುಳಿತು ಕೈಯಿಂದ ಮುಖ, ತಲೆ, ಕುತ್ತಿಗೆ ಹೊಟ್ಟೆಗೆ ಕೈಯಿಂದ ಗುದ್ದಿದ್ದು, ಕಾಲಿನಿಂದ ತುಳಿದಿರುತ್ತಾರೆ.ಅಲ್ಲದೆ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 448, 447, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 20/07/2021  ರಂದು ಪಿರ್ಯಾದಿದಾರರಾದ ಮೈಕಲ್ ಡಯಾಸ್ (38), ತಂದೆ:  ಜೋಸೆಪ್  ಡಯಾಸ್, ವಾಸ: ನಯಂಪಳ್ಳಿ, ಕಕ್ಕುಂಜೆ ಶಿವಳ್ಳಿ ಗ್ರಾಮ ಇವರು ಹೆಂಡತಿ ಮಕ್ಕಳೊಂದಿಗೆ  ಬಾಡಿಗೆ  ಮನೆಯನ್ನು  ನೋಡುವ  ವಿಚಾರದಲ್ಲಿ  ಉಡುಪಿ ಸಂತೆಕಟ್ಟೆಗೆ  ಬೆಳಿಗ್ಗೆ 11:30  ಗಂಟೆಗೆ ಬಂದಾಗ ಸಂತೆಕಟ್ಟೆಯಲ್ಲಿ  ಪಿರ್ಯಾದಿದಾರರ ಪರಿಚಯದ  ನಾಗರಾಜ ಲಕ್ಷ್ಮೀನಗರ  ರವರು ಬೇಟಿಯಾಗಿದ್ದು  ಅವರಲ್ಲಿ  ಬಾಡಿಗೆ  ಮನೆ  ವಿಚಾರವನ್ನು  ಕೇಳಿದಾಗ  ಬಾಡಿಗೆ  ಮನೆಯನ್ನು  ತೋರಿಸಿಕೊಡುವುದಾಗಿ  ಪಿರ್ಯಾದಿದಾರರು ಹಾಗೂ ಅವರ  ಮನೆಯವರು ನಾಗರಾಜ್ ರವರೊಂದಿಗೆ  ರಿಕ್ಷಾದಲ್ಲಿ  ಲಕ್ಷ್ಮೀನಗರ  ಜಂಕ್ಷನ್  ಬಳಿ ಹೋದಾಗ ಅಲ್ಲಿ  ಇರುವ  ಜಯಕರ  ಶೆಟ್ಟಿ ಎಂಬುವವರ ಬಾಡಿಗೆ ಮನೆ ಇರುವುದನ್ನು  ತೋರಿಸಿದ್ದು  ಪಿರ್ಯಾದಿದಾರರು  ಅ ಮನೆಯು  ತಮಗೆ  ಇಷ್ಟ  ಇಲ್ಲ  ಎಂದು  ತಿಳಿಸಿದಾಗ  ನಾಗರಾಜ್ ನು  ಪಿರ್ಯಾದಿದಾರರಲ್ಲಿ  ಇದೇ  ಮನೆಯಲ್ಲಿ  ಊಟ ಮುಗಿಸಿ   ಹೋಗಿ  ಎಂದು  ಹೇಳಿದಕ್ಕೆ  ಪಿರ್ಯಾದಿದಾರರ  ಹೆಂಡತಿ  ಊಟ  ತಯಾರಿಸಿ  ಪಿರ್ಯಾದಿದಾರರಿಗೆ  ಊಟ ನೀಡುತ್ತಿರುವಾಗ  ಅಲ್ಲಿಯೇ ಇದ್ದ ನಾಗರಾಜ ಏಕಾಏಕಿ  ವಿನಾ  ಕಾರಣ  ಸಪೂರ  ಕಬ್ಬಿಣದ ರಾಡ್ ನಿಂದ  ಪಿರ್ಯಾದಿದಾರರ  ತಲೆಯ ಹಿಂಭಾಗಕ್ಕೆ  3 ಬಾರಿ  ಹೊಡೆದು  ರಕ್ತ ಗಾಯಗೊಳಿಸಿದ್ದು   ಪಿರ್ಯಾದಿದಾರರು  ಉಡುಪಿ ಸರಕಾರಿ ಆಸ್ಪತ್ರೆಗೆ  ಹೋಗಿ  ಚಿಕಿತ್ಸೆ  ಪಡೆದಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  89/2021 ಕಲಂ:324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-07-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ