ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬ್ರಹ್ಮಾವರ: ದಿನಾಂಕ 19/07/2021 ರಂದು ಪಿರ್ಯಾದಿದಾರರಾದ ಅಚ್ಯುತ್ ಪೂಜಾರಿ (57), ತಂದೆ: ಸಂಜೀವ ಪೂಜಾರಿ, ವಾಸ: ಖ್ಯಾತಿ, ಆಕಾಶವಾಣಿ ಕಂಪೌಂಡ್, ಸ್ವರ್ಣ ನಗರ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಬ್ರಹ್ಮಾವರ ಮಧುವನ ಕಾಂಪ್ಲೆಕ್ಸ್‌ ನಲ್ಲಿರುವ ಎಲ್‌.ಐ.ಸಿ ಕಛೇರಿಯಿಂದ ಊಟ ಮಾಡಲು ತನ್ನ KA-20-EC-0001 ನೇ ಬುಲೆಟ್ ಮೋಟಾರ್ ಸೈಕಲ್‌ನಲ್ಲಿ ಅವರ ಮನೆಗೆ ಹೋಗಿ ವಾಪಾಸ್ಸು ಕಛೇರಿಗೆ ಹೋಗಲು ಕುಂದಾಪುರ – ಉಡುಪಿ ರಾ.ಹೆ 66 ರಲ್ಲಿ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 1:55 ಗಂಟೆಗೆ ಆರೋಪಿ ರತ್ನಾಕರ ಶೆಟ್ಟಿ ಯವರು ಅವರ KA-20-Z-7736 ನೇ ನಂಬ್ರದ ಕಾರನ್ನು ಉಡುಪಿ – ಕುಂದಾಪುರ ರಾ ಹೆ 66 ರಲ್ಲಿ ಚಲಾಯಿಸಿಕೊಂಡು ಬಂದು ವಾರಂಬಳ್ಳಿ ಗ್ರಾಮದ ಮಹೇಶ್ ಆಸ್ಪತ್ರೆಯ ಎದುರು U Turn ನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಯಾವುದೇ ಇಂಡಿಕೇಟರ್ ಹಾಕದೇ ಒಮ್ಮೇಲೆ ಕುಂದಾಪುರ – ಉಡುಪಿ ರಸ್ತೆಗೆ ತಿರುಗಿಸಿದ ಪರಿಣಾಮ ಕಾರಿನ ಎಡಭಾಗಕ್ಕೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬುಲೆಟ್ ತಾಗಿ ಪಿರ್ಯಾದಿದಾರರು ಬುಲೆಟ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎದೆಯ ಬಲಭಾಗ ಹಾಗೂ ಬೆನ್ನಿನ ಬಲಭಾಗದ ಮೂಳೆಗೆ ಒಳ ಜಖಂ ಆಗಿರುತ್ತದೆ. ಅಲ್ಲದೇ ಅವರ ಬುಲೆಟ್ ಮುಂಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ. ನಂತರ ಗಾಯಗೊಂಡ ಪಿರ್ಯಾದಿದಾರರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ನಂತ್ರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿಯೇ ವಿಶ್ರಾಂತಿ ಪಡೆದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ:ಪಿರ್ಯಾದಿದಾರರಾದ ಸಂದೇಶ್ ಕುಮಾರ್ (33), ತಂದೆ: ಮೋಹನ ಪೂಜಾರಿ, ವಾಸ: ಗಾಂಧಿನಗರ, 3 ಸೆಂಟ್ಸ್, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಕೊನೆಯ ತಮ್ಮ ಸಂದೀಪ (28), ಎಂಬವವರು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 21/07/2021 ರಂದು ಬೆಳಿಗ್ಗೆ 09:15 ಗಂಟೆಯಿಂದ ಬೆಳಿಗ್ಗೆ 10:10 ಗಂಟೆಯ ಮಧ್ಯಾವಧಿಯಲ್ಲಿ ವಾಸದ ಮನೆಯ ಮಲಗುವ ಕೋಣೆಯ ಗೋಡೆಗೆ ಅಳವಡಿಸಿದ ಮರದ ಜಂತಿಗೆ ಮನೆಯ ಬಾವಿಯ ನೀರು ಸೇದಲು ಹಾಕಿರುವ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-07-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ