ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಉದಯ ಕುಮಾರ್ (32), ತಂದೆ: ಶಿವಾಜಿ ಜೋಗಿ, ವಾಸ: ಹುಡ್ಕೋ ಕಾಲೊನಿ, ಕುರ್ತಕೋಟಿ ರಸ್ತೆ, ಹುಲ್ಲಕೋಟಿ ಗ್ರಾಮ, ಗದಗ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 20/06/2022 ರಂದು ಸಂಜೆ ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಮದ್ಮಲ್ ಪಾದೆ ಕ್ರಷ ರ್‌ನಲ್ಲಿ KA-19-AD-4026 ನೇ ನೋದಣಿ ಸಂಖ್ಯೆಯ ಟಿಪ್ಪರ್ ಲಾರಿಯಲ್ಲಿ ಜಲ್ಲಿಯನ್ನು ಲೋಡು ಮಾಡಿಕೊಂಡು ಪಳ್ಳಿಕಡೆಯಿಂದ ಕಾರ್ಕಳ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೊರಟು ಸಂಜೆ 5:15 ಗಂಟೆಗೆ ಪಳ್ಳಿ ಮಾರಿಗುಡಿ ಬಳಿ ತಲುಪಿದಾಗ ಕಾರ್ಕಳ ಕಡೆಯಿಂದ  ಪಳ್ಳಿ ಕಡೆಗೆ KA-27-EN-8535 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲಿನಲ್ಲಿ ಇಬ್ಬರು ಸಹ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಡಿಕ್ಕಿ ಹೊಡೆದ   ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಇಬ್ಬರು ಸಹ ಪ್ರಯಾಣಿಕರು ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಮೋಟಾರ್ ಸೈಕಲ್ ಸವಾರನ ಬಲಕಾಲು ಮೂಳೆ ಮುರಿತಗೊಂಡಿದ್ದು, ಸಹ ಸವಾರ ಒಬ್ಬಾತನ ಬಲ ಕಾಲಿಗೆ ತರಚಿದ ರಕ್ತ ಗಾಯವಾಗಿದ್ದು, ಸಹ ಸವಾರ ಇನ್ನೊಬ್ಬಾತನ ಕೈಗೆ ತರಚಿದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2022  ಕಲಂ: 279,  337,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಪಿಣಿಯಾ ಮೊಗವೀರ  (65), ತಂದೆ: ಬಚ್ಚ ಮೊಗವೀರ, ವಾಸ: ಚಿಕ್ಕದೇವಸ್ಥಾನದ  ಹತ್ತಿರ ಅಸೋಡು ಗ್ರಾಮ ಅಸೋಡು ಪೋಸ್ಟ್ ಕುಂದಾಪುರ ತಾಲೂಕು ಇವರ ತಂದೆ ಬಚ್ಚ ಮೊಗವೀರ (95) ಇವರು ದಿನಾಂಕ 19/06/2022 ರಂದು ರಾತ್ರಿ 20: 00 ಗಂಟೆಗೆ ಮನೆಯವರೊಂದಿಗೆ ಊಟ ಮಾಡಿ ಮನೆಯ ಜಗುಲಿಯಲ್ಲಿ ಮಲಗಿದ್ದು ದಿನಾಂಕ 20/06/2022 ರಂದು ಬೆಳ್ಳಿಗ್ಗೆ 06:00 ಗಂಟೆಗೆ   ನೋಡಿದಾಗ ಮಲಗಿದ್ದಲ್ಲಿ ಇರಲ್ಲಿಲ್ಲ ಮನೆಯ ಬಾಗಿಲು ತೆರೆದಿರುತ್ತದೆ. ಬಾಗಿಲು ತೆರೆದಿದ್ದನ್ನು ನೋಡಿ ಅಕ್ಕಪಕ್ಕದಲ್ಲಿರುವ ಹಾಡಿಯಲ್ಲಿ ಹುಡುಕಾಡುತ್ತಿರುವಾಗ ಮನೆಯ ಪಕ್ಕದಲ್ಲಿ ರುವ ಗೇರು ಮರದ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಆತ್ಮಹತ್ಮೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಮೃತರಿಗೆ 95 ವರ್ಷ ವಯಸ್ಸು ಆಗಿದ್ದು  ಬಿ.ಪಿ ಖಾಯಿಲೆಯಿಂದ ಬಳಲುತ್ತಿದ್ದು ಕುಂದಾಪುರ ವಿನಯ ಆಸ್ವತ್ತ್ರೆಯಿಂದ ಚಿಕೆತ್ಸೆಯನ್ನು ನೀಡುತ್ತಿದ್ದು ಇದರಿಂದ ಮಾನಸಿಕವಾಗಿ ಮನನೊಂದು ಆತ್ಮಹತ್ಮೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಕೊಲ್ಲೂರು: ದಿನಾಂಕ 20/06/2022  ರಂದು ಬೆಳಿಗ್ಗೆ 09:30  ಗಂಟೆಗೆ ಪಿರ್ಯಾದಿದಾರರಾದ ಉದಯ ಕುಮಾರ್ ಶೆಟ್ಟಿ  (52), ತಂದೆ: ಅಣ್ಣಪ್ಪ ಶೆಟ್ಟಿ, ವಾಸ: ಅಡಿಕೆಕೊಡ್ಲು ಮನೆ ವಂಡ್ಸೆ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರಿಗೆ ಶ್ರೀನಿವಾಸ್ ಪೂಜಾರಿ ಎಂಬುವವರು ದೂರವಾಣಿ ಕರೆ ಮಾಡಿ  ವಂಡ್ಸೆ ಗ್ರಾಮದ ಚಕ್ರ ನದಿ ತೀರದ ಕಲ್ಮಾಡಿ ಎಂಬಲ್ಲಿ ಒಂದು ಅಪರಿಚಿತ ಗಂಡಸಿನ ಶವವು ನದಿಯಲ್ಲಿರುವಾಗಿ ತಿಳಿಸಿದಂತೆ ಪಿರ್ಯಾದಿದಾರರು ಸದ್ರಿ ಹೋಗಿ ನೊಡಲಾಗಿ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ನೀರಿನಲ್ಲಿ ತೇಲುತಿದ್ದು ಗ್ರಾಮದಲ್ಲಿ ವಿಚಾರಿಸಲಾಗಿ ಮೃತ ಶರೀರದ ಬಗ್ಗೆ ಮಾಹಿತಿ ದೊರೆತ್ತಿರುವುದಿಲ್ಲ. ಅಪರಿಚಿತ ವ್ಯಕ್ತಿಯು 3-4 ದಿನಗಳ ಹಿಂದೆ ಆಕಸ್ಮಿಕವಾಗಿ  ಕಾಲು ಜಾರಿ  ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಉದಯ (30), ತಂದೆ: ಶೀನ ವಾಸ: ಪಟೇಲರ ಬೆಟ್ಟು ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 20/06/2022 ರಂಧು  ಕೆಲಸ ಮುಗಿಸಿಕೊಂಡು  ಮನೆಗೆ  ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ  ಕುಂದಾಫುರ ತಾಲೂಕು ಗೋಪಾಡಿ ಗ್ರಾಮದ  ಹಳೆ ಪಂಚಾಯತ್ ಕಟ್ಟಡದ ಸಮೀಪ  ತಲುಪುವಾಗ ಸಂಜೆ 5:30  ಗಂಟೆಗೆ  ಅವರ ಸ್ನೇಹಿತನಾದ  ಸುಧೀರ ಭಂಡಾರಿ ರವರು ಅಲ್ಲಿಗೆ  ಬಂದಿದ್ದು ಆ  ಸಮಯ ಪರಿಚಯದ  ಆಪಾದಿತರಾದ 1.ಸುರೇಶ್ ಯಾನೆ  ರಾಜ ಹುಲಿ, 2.ವಿನಯ ಶೆಟ್ಟಿ, 3.ಗೋವರ್ಧನ  ಇವರು ಪಿರ್ಯಾದಿದಾರರನ್ನು  ನೋಡಿ  ಅಲ್ಲಿಗೆ  ಬಂದು  ಏಕಾಏಕಿಯಾಗಿ  ಆಪಾದಿತರೆಲ್ಲರೂ ಸೇರಿಕೊಂಡು  ಪಿರ್ಯಾದಿದಾರರಿಗೆ  ಮತ್ತು ಸುಧೀರ ಭಂಡಾರಿ ಯವರಿಗೆ  ಕೈಯಿಂದ ಹೊಡೆದು ನೆಲಕ್ಕೆ  ದೂಡಿ ಹಾಕಿ ಪಿರ್ಯಾದಿದಾರರ  ಮೊಣಗಂಟಿಗೆ  ಕಾಲಿನಿಂದ  ತುಳಿದು  ಬಲ ಕಪಳಾಕ್ಕೆ  ಕೈಯಿಂದ  ಹೊಡೆದಿದ್ದು  ಅಲ್ಲದೇ ಸುಧೀರ ಭಂಡಾರಿಗೂ ಕೂಡಾ  ಆಪಾದಿತರೆಲ್ಲರೂ ಸೇರಿಕೊಂಡು  ಕಾಲಿನಿಂದ  ಹೊಟ್ಟೆಗೆ  ತುಳಿದು ಆಪಾದಿತರ ಪೈಕಿ  ಗೋವರ್ಧನ ಎಂಬಾತನು  ಸೋಡಾ ಬಾಟಲಿಯಿಂದ  ಸುಧೀರ ಭಂಡಾರಿಯವರ ಎಡಕೈಯ ಕೋಲು ಕೈಗೆ ಹೊಡೆದು ಹಲ್ಲೆ ಮಾಡಿದ್ದು  ಆಗ ಆಪಾದಿತರಲ್ಲಿ ಯಾಕೆ  ಹೀಗೆ  ಹೊಡೆಯುತ್ತೀರಿ ಎಂದು  ಕೇಳಿದ್ದಕ್ಕೆ  ಅವರ  ಪೈಕಿ  ಸುರೇಶ್  ಯಾನೆ  ರಾಜ ಹುಲಿ ಮತ್ತು  ವಿನಯ ಶೆಟ್ಟಿ ಎಂಬುವವರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ  ಹಾಕಿರುತ್ತಾರೆ. ಅಲ್ಲದೇ  ಸುಧೀರ ಭಂಡಾರಿಯವರಿಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ  ಹಾಕಿರುವುದಾಗಿದೆ. ಈ ಹಲ್ಲೆಯಿಂದ ಪಿರ್ಯಾದಿದಾರರು ಮತ್ತು ಸುಧೀರ ಭಂಡಾರಿಯವರು   ಕುಂದಾಫುರ ಸರಕಾರಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022, ಕಲಂ: 323, 324, 504, 506 ಐಪಸಿ & ಕಲಂ: 3 (1) (r) (s), 3(2)(va) SC/ST POA Act 1989  ರಂತೆ ಪ್ರಕರಣ ದಾಖಲಾಗಿರುತ್ತದೆ.          
     

ಇತ್ತೀಚಿನ ನವೀಕರಣ​ : 21-06-2022 02:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080