ಅಭಿಪ್ರಾಯ / ಸಲಹೆಗಳು

ಇಸ್ಪೀಟ್‌ ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 20/06/2021 ರಂದು ಕುಚ್ಚೂರು ಗ್ರಾಮದ ಮಾತ್ಕಲ್ಲು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಮಹೇಶ.ಟಿ.ಎಂ ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯಂತೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣಾ ಸಿಬ್ಬಂದಿಯವರೊಂದಿಗೆ ಮೇಲಿನ ಸ್ಥಳಕ್ಕೆ ಹೋಗಿ ನೋಡಿದಾಗ ಅಪಾದಿತರುಗಳು ಕೋವಿಡ್‌-19 ಕಾಯ್ದೆಯ ನಿಯಂತ್ರಣಕ್ಕಾಗಿ ಮಾನ್ಯ ಜಿಲ್ಲಾಡಳಿತವು ಹೊರಡಿಸಿದ ಆದೇಶದ ಬಗ್ಗೆ ತಿಳಿದಿದ್ದರೂ ಸಹ ಅದನ್ನು ಅವರುಗಳು ಉಲ್ಲಂಘಿಸಿ ಅಂದರ್ ಬಾಹರ್ ಇಸ್ಟೀಟ್ ಎಂಬ ಅಟವನ್ನು ಅಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಮದ್ಯಾಹ್ನ 15:50 ಗಂಟೆಗೆ ದಾಳಿ ಮಾಡಿ ಅಟದಲ್ಲಿ ನಿರತರಾಗಿರುವ 1) ವಸಂತ ಪೂಜಾರಿ (37) ತಂದೆ: ಬಾಬು ಟಿ ಪೂಜಾರಿ ವಾಸ: ಮಣಿಕಂಠ ನಿಲಯ, ಶಾಸ್ತ್ರಿ ನಗರ, ಕುಚ್ಚೂರು ಗ್ರಾಮ, 2) ಕೃಷ್ಣ ಶೆಟ್ಟಿ (52) ತಂದೆ: ರಾಮಣ್ಣ ಶೆಟ್ಟಿ ವಾಸ; ಗಾಂಧಿನಗರ, ಚಾರಾ ಗ್ರಾಮ, 3) ಡೆನ್ನಿಸ್ (56) ತಂದೆ: ಬೋಸ್ತು  ವಾಸ: ಕಾನ್ಬೇಟ್ಟು, ಕುಚ್ಚೂರು ಗ್ರಾಮ,  4) ರಾಘವೇಂದ್ರ (33) ತಂದೆ: ಗೋಪಾಲ ವಾಸ; ಚಿಕ್ಕನಾಡಿಕೂಡ್ಲು, ಬೇಳಂಜೆ ಗ್ರಾಮ, 5) ವಿಕಾಶ ಶೆಟ್ಟಿ (33) ತಂದೆ: ಚಂದ್ರಶೇಖರ ಶೆಟ್ಟಿ ವಾಸ: ಸಳ್ಳೆಕಟ್ಟೆ,ಕುಚ್ಚೂರು ಗ್ರಾಮ, 6) ಆಶೋಕ್ (38) ತಂದೆ: ಬಾಬು ವಾಸ; ಅನಂತಕೃಷ್ಣ ರೆಸಿಡೆನ್ಸಿ, ಹೆಬ್ರಿ ಗ್ರಾಮ,  7) ರವಿ (27) ತಂದೆ: ಶ್ರೀಧರ ನಾಯಕ್ ವಾಸ: ಗಿಲ್ಲಾಳಿ, ಹೆಬ್ರಿ ಗ್ರಾಮ ಇವರನ್ನು ದಸ್ತಗಿರಿ ಮಾಡಿ ಅವರು ಅಟಕ್ಕೆ ಉಪಯೋಗಿಸಿದ ನಗದು ರೂಪಾಯಿ 3,150/-, ಇಸ್ಪೀಟ್ ಎಲೆಗಳು-52, ಎರಡು ಪ್ಲಾಸ್ಟಿಕ್ ಚೀಲ ಮತ್ತು ಕೆಂಪು ಬಣ್ಣದ ಬಟ್ಟೆ-1 ಇವುಗಳನ್ನು ಮಹಜರು ಮೂಲಕ ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2021 ಕಲಂ:,269 ಐಪಿಸಿ ಮತ್ತು 87 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-06-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080