ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 21.06.2021 ರಂದು ಬೆಳಿಗ್ಗೆ 07:50 ಗಂಟೆಗೆ ಪಿರ್ಯಾದಿದಾರ ದಿನೇಶ್ ಪೂಜಾರಿ ರವರು ಮನೆಯಲ್ಲಿರುವಾಗ ಅವರಿಗೆ ನಡೂರು ಗ್ರಾಮದ ಕಲ್‌ ರಾಶಿ ಬಳಿ ಅವರ ತಮ್ಮನಾದ ಹರೀಶ (ಪ್ರಾಯ: 36 ವರ್ಷ) ಎಂಬವರಿಗೆ ರಸ್ತೆ ಅಪಘಾತವಾಗಿ ತೀವ್ರಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದಾಗಿ ಮಾಹಿತಿ ತಿಳಿದು ಬಂದು, ಕೂಡಲೇ ಅವರು ಸದ್ರಿ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಹರೀಶ್ ರವರು ತೀವ್ರ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದ್ದು ಉಪಚರಿಸಿದಾಗ ಅವರು  ಮಾತನಾಡುವ ಸ್ಥಿತಿಯಲ್ಲಿಇರಲಿಲ್ಲ. ಅಲ್ಲದೇ ಅಲ್ಲಿಯೇ ಬದಿಯಲ್ಲಿ ಹರೀಶ ರವರ ಮೋಟಾರ್ ಸೈಕಲ್ ಜಖಂ ಗೊಂಡು ಬಿದ್ದಿರುತ್ತದೆ. ಹರೀಶ್ ರವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಹರೀಶನು ಮೃತ ಪಟ್ಟಿರುವುದಾಗಿದೆ. ಹರೀಶರವರು ದಿನಾಂಕ: 21.06.2021 ರಂದು ತನ್ನ ಬಾಬ್ತು KA20EN1799 ನೇ ಮೋಟಾರ್ ಸೈಕಲ್‌ನಲ್ಲಿ ಚಾಂತಾರಿನಲ್ಲಿರುವ ಅವರ ಹೆಂಡತಿ ಮನೆಯಿಂದ ನಡೂರಿನಲ್ಲಿರುವ ಅವರ ಮನೆ ಕಡಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 07:45 ಗಂಟೆಗೆ ನಡೂರು ಗ್ರಾಮದ ಕಲ್ ರಾಶಿ ಬಳಿ ಬಾರ್ಕೂರು- ಮಂದಾರ್ತಿ ರಸ್ತೆಯಲ್ಲಿ ಯಾವುದೋ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹರೀಶ್ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾನೆ. ಈ ಅಪಘಾತದಿಂದ ಹರೀಶ್ ರವರು ತೀವ್ರಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ  279, 304(A) ಐಪಿಸಿ  & ಕಲಂ 134(A&B), 187 IMV Act ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 20.06.2021 ರಂದು ಪಿರ್ಯಾದಿದಾರರರಾದ ಮಹೇಶ್ ಕುಂದರ್‌ರವರು ತನ್ನ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಬೆನಗಲ್‌ ಕಡೆಯಿಂದ ಮುಂಡ್ಕಿನ್‌‌ಜೆಡ್ಡು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಂಜೆ 4:45 ಗಂಟೆ ಸುಮಾರಿಗೆ ಚೇರ್ಕಾಡಿ ಗ್ರಾಮದ ಪ್ರಗತಿ ನಗರ ಎಂಬಲ್ಲಿ ಅವರ ಎದುರಿನಲ್ಲಿ  KA20EB6265 ನೇ ಫ್ಯಾಷನ್ ಫ್ರೋ ಮೋಟಾರ್ ಸೈಕಲ್‌ನಲ್ಲಿ ಸವಾರನೊಬ್ಬ ಮುಂಡ್ಕಿನ್‌ಜೆಡ್ಡು ಕಡೆಗೆ ಸವಾರಿ ಮಾಡುತ್ತಿದ್ದು ಅದೇ ಸಮಯ ಸ್ವಲ್ಪ ತಿರುವು ರಸ್ತೆಯಲ್ಲಿ ಅವರ ಎದುರುಕಡೆಯಿಂದ ಅಂದರೆ ಮುಂಡ್ಕಿನ್‌ಜೆಡ್ಡು ಕಡೆಯಿಂದ  KA20B2475 ನೇ ನಂಬ್ರದ ಪಿಕ್‌ಅಪ್ ಗೂಡ್ಸ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆತನ ಬಲಭಾಗಕ್ಕೆ ಚಲಾಯಿಸಿದ್ದು, ಆಗ ಫಿಕ್ ಅಪ್ ವಾಹನದ ಹಿಂದಿನ ಬಲಭಾಗ ಪಿರ್ಯಾದಿದಾರರ ಎದುರಿನಲ್ಲಿ ಹೋಗುತ್ತಿದ್ದ KA20EB6265 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿಹೊಡೆದಿರುವುದಾಗಿದೆ.  ಈ ಅಪಘಾತದಿಂದ ಸದ್ರಿ ಮೋಟಾರ್ ಸೈಕಲ್ ಸಮೇತ ಅದರ ಸವಾರ ದಯಾನಂದ (57 ವರ್ಷ) ಎಂಬವರು ರಸ್ತೆಗೆ ಬಿದ್ದು,  ಅವರ ಬಲಕಾಲಿಗೆ ತೀವ್ರ ಮೂಳೆ ಮುರಿತದ ರಕ್ತಗಾಯ, ಕೈಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ  279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಶಿರ್ವ: ರಿಚರ್ಡ ಡಿಸೋಜ ಪ್ರಾಯ 55 ವರ್ಷರವರು ವಿದೇಶದಿಂದ ಊರಿಗೆ ಬಂದ ಬಳಿಕ ವಾಪಾಸು ವಿದೇಶಕ್ಕೆ ಹೋಗುವರೇ ಆಗದೇ ಇರುವುದರಿಂದ ಇದೇ ವೇದನೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 18/06/2021  ರಂದು ರಾತ್ರಿ 10.45ಗಂಟೆಯಿಂದ ದಿನಾಂಕ:19/06/2021 ರ ಬೆಳಗ್ಗಿನ ಜಾವ 02.00 ಗಂಟೆಯ ಅವಧಿಯಲ್ಲಿ  ಮನೆಯಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಶ್ರೀಮತಿ ಕೆ. ಶಾರದಾ ಪ್ರಾಯ: 73 ವರ್ಷ ಎಂಬವರು ನಿವೃತ್ತ ಶಿಕ್ಷಕಿಯಾಗಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21/06/2021 ರಂದು ಬೆಳಿಗ್ಗೆ 04:30 ಗಂಟೆಯಿಂದ ಬೆಳಿಗ್ಗೆ 07:30 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿ ಇರುವ ಪಿರ್ಯಾದುದಾರರ ಬಾಬ್ತು ಅನಂತ ನಿಲಯ ಎಂಬ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ರಪೀಕ್ ಪ್ರಾಯ: 32 ವರ್ಷ ರವರು   ಈ ಹಿಂದೆ  ಮೂರು – ನಾಲ್ಕು ಬಾರಿ  ಮದ್ಯಪಾನ ಕುಡಿದು ಆತ್ಮ ಹತ್ಯೆ ಗೆ ಪ್ರಯತ್ನಿಸಿದ್ದು ಮನೆಯವರು  ಹಾಗೂ ಅಕ್ಕಪಕ್ಕದ ಮನೆಯವರು ತಪ್ಪಿಸಿರುತ್ತಾರೆ. ದಿನಾಂಕ 21-06-2021 ರಂದು  ಬೆಳಿಗ್ಗೆ 7:00 ಗಂಟೆಗೆ  ರಪೀಕ್  ರವರು ಹಳೆಯ ಮನೆ  ಜುಮ್ಮಾ ಮಸೀದಿ ಹಿಂಭಾಗ ಜೆ ಎಮ್ ರೋಡ್ ಕಂಡ್ಲೂರು, ಕಾವ್ರಾಡಿ ಗ್ರಾಮದಲ್ಲಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-06-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080