ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ  19/05/2023 ರಂದು ರಾತ್ರಿ ಪೇತ್ರಿಯಲ್ಲಿನ ಪಿರ್ಯಾದಿದಾರರಾದ ಶ್ರೀನಿವಾಸ ನಾಯ್ಕ (38) , ತಂದೆ: ದಿ.ಬೊಗ್ಗು ನಾಯ್ಕ, ವಿಳಾಸ: ಪುತ್ತಿಗೆ, ಕದಿಕೆ,ದರ್ಖಾಸು, ಪೆರ್ಡೂರು ಪೋಸ್ಟ್,ಉಡುಪಿ ತಾಲೂಕು ಮತ್ತು ಜಿಲ್ಲೆ  ಇವರ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ಶಬರೀಶ ನಾಯ್ಕ, ದಿನೇಶ್ ಮತ್ತು  ಪಿರ್ಯಾದಿದಾರರು ತಮ್ಮ ತಮ್ಮ ಮೋಟಾರ್ ಸೈಕಲ್‌‌ಗಳಲ್ಲಿ ಕುಕ್ಕೆಹಳ್ಳಿ - ಪೇತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ರಾತ್ರಿ 10:15 ಗಂಟೆ ಸಮಯಕ್ಕೆ ಕುಕ್ಕೆಹಳ್ಳಿ - ಪೇತ್ರಿ ರಸ್ತೆಯಲ್ಲಿ ಕುಕ್ಕೆಹಳ್ಳಿ  ಕಟ್ಟೆಮನೆ  ಶಾಂತಶೆಟ್ಟಿ ಎಂಬುವವರ ಮನೆ ಬಳಿ ಆರೋಪಿ ದಿನೇಶ KA-20-Y-8527  ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಆತನ ಮುಂದಿನಿಂದ  ಶಬರೀಶನು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EY-1555 ನೇ  ಮೋಟಾರ್ ಸೈಕಲ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ  ಪರಿಣಾಮ  ಶಬರೀಶನು  ಆತನ ಮೋಟಾರ್ ಸೈಕಲ್‌ ಸಮೇತ ಚರಂಡಿಗೆ ಬಿದ್ದು ಬಲಕಾಲಿನ ಮೂಳೆಮುರಿತ ಉಂಟಾಗಿದ್ದು ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ತಿಮ್ಮಪ್ಪಯ್ಯ ಭಟ್ ಕೆ (68), ತಂದೆ: ವೆಂಕಟರಮಣ ಭಟ್ ಕೆ, ವಾಸ: 1-48 ಗೋವಿಂದ ದೇವಸ್ಥಾನದ ಹತ್ತಿರ , ಕಂಬದಕೋಣೆ ಗ್ರಾಮ , ಬೈಂದೂರು ತಾಲೂಕು ಇವರು ದಿನಾಂಕ 18/05/2023 ರಂದು ಸಂಜೆ 6:00 ಗಂಟೆಗೆ ಅವರ KA-20-EL-6148 ನೇ ಮೋಟಾರು ಸೈಕಲ್ ನ್ನು ಸವಾರಿಮಾಡಿಕೊಂಡು ಉಪ್ಪುಂದ –ಅಂಬಾಗಿಲಿಗೆ ಹೋಗಿ ಸಾಮಾನು ತೆಗೆದುಕೊಂಡು  ವಾಪಾಸು  ಕಂಬದಕೋಣೆಯ ಮನೆ ಕಡೆಗೆ  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ  ನಂದನವನ ಗ್ರಾಮದ ಮಹಾಬಲೇಶ್ವರ ದೇವಸ್ಥಾನದ ಕ್ರಾಸ್ ಬಳಿ ಮೋಟಾರು ಸೈಕಲ್ ಸವಾರನೊಬ್ಬನು ಅತೀ ವೇಗದಿಂದ ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಅಡ್ಡ ಬಂದ ಕಾರಣ ಪಿರ್ಯಾದಿದಾರರು ಮೋಟಾರು ಸೈಕಲ್ ಗೆ   ಒಮ್ಮೇಲೆ ಬ್ರೇಕ್ ಹಾಕಿದಾಗ ಅವರ ಹಿಂದಿನಿಂದ  ಯಾವುದೋ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲ್ ನ್ನು ಅತೀ  ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು   ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ   ಬಲ ಕಾಲು ಹಾಗೂ ಬಲ ಕೈಗೆ  ಒಳ ಜಖಂ ಆಗಿ ಮೂಳೆ ಮುರಿತ ಉಂಟಾಗಿರುತ್ತದೆ. ಅಲ್ಲಿನ ಸ್ಥಳೀಯರು ಪಿರ್ಯಾದಿದಾರರನ್ನು ಉಪಚರಿಸಿ ರಿಕ್ಷಾ ದಲ್ಲಿ ಮನೆಗೆ  ಕರೆದುಕೊಂಡು ಬಂದಿದ್ದು  ನಂತರ ಪಿರ್ಯಾದಿದಾರರ ಮಕ್ಕಳಾದ  ಕಾವ್ಯಾ ಕೆ ಮತ್ತು ರಮ್ಮ ಕೆ ರವರು ಪಿರ್ಯಾದಿದಾರರನ್ನು  ಕಾರಿನಲ್ಲಿ ಕುಂದಾಪುರದ  ಶ್ರೀ ದೇವಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು  ಅಲ್ಲಿನ ವೈದ್ಯರು  ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ಪಿರ್ಯಾದಿದಾರರನ್ನು ಅಂಬುಲೆನ್ಸ ನಲ್ಲಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ  ಕರೆ ತಂದಿದ್ದು  ಅಲ್ಲಿನ ವೈದ್ಯರು  ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ಅಪಘಾತಪಡಿಸಿದ ಮೋಟಾರು ಸೈಕಲ್ ನಂಬ್ರ ವನ್ನು ನೋಡದೇ ಇದ್ದು  ಸವಾರನು ಮೋಟಾರು ಸೈಕಲ್ ನ್ನು  ನಿಲ್ಲಿಸದೇ  ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2023 ಕಲಂ:279, 338 ಐಪಿಸಿ & 134 A & B IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಯೋಗೀಶ ಭಟ್ (72), ತಂದೆ: ದಿ. ಅರ್ಚಕ ಮುಕುಂದ ಭಟ್, ವಾಸ: ಮುಕುಂದ, ಮನೆ ನಂಬ್ರ: 10-2ಎ-1, ಮಣಿಪಾಲ ಅಡ್ಡರಸ್ತೆ, ಅಂಬಾಗಿಲು, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಮನೆಯಲ್ಲಿ ಇರುವಾಗ ಆಪಾದಿತರಾದ 1) ಜ್ಞಾನೇಶ ಭಕ್ತ, 2) ಮಾಧವ ಗೋಪಾಲ ಭಕ್ತ ಇವರು ಒಂದು ವಾಹನದಲ್ಲಿ ಬಂದು ಪಿರ್ಯಾದಿದಾರರ ಮನೆಯ ಎದುರು ಇರುವ ರಸ್ತೆಯಲ್ಲಿ ನಿಲ್ಲಿಸಿ ತೆಂಗಿನಕಾಯಿ ತುಂಬಿಸುತ್ತಿದ್ದು, ಪಿರ್ಯಾದಿದಾರರ ಹೆಂಡತಿ ಮತ್ತು ಪಿರ್ಯಾದಿದಾರರು ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಲು 17:20 ಗಂಟೆಗೆ ರಸ್ತೆ ಬಳಿಗೆ ಹೋದಾಗ 1ನೇ ಆಪಾದಿತನು ಪಿರ್ಯಾದಿದಾರರನ್ನು ತಡೆದು ಅಡ್ಡಗಟ್ಟಿ ಕೈಯಿಂದ ಹಲ್ಲೆ ಮಾಡಿ, ನೆಲಕ್ಕೆ ಬೀಳಿಸಿ ಗಾಯಗೊಳಿಸಿದ್ದಲ್ಲದೆ, ಇಬ್ಬರು ಆಪಾದಿತರು ಸೇರಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2023 ಕಲಂ: 341, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 22-05-2023 08:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080