ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಶೀನಪ್ಪ ಶೆಟ್ಟಿ  ಇವರು ದಿನಾಂಕ: 20/05/2022 ರಂದು ತನ್ನ ಪತ್ನಿಗೆ ಔಷಧ ತರಲು ಮನೆಯಿಂದ ಹೊರಟು ಕೊಲ್ಲೂರು-ಕುಂದಾಪುರ ರಾಜ್ಯ ಹೆದ್ದಾರಿಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೆಳಗ್ಗೆ 10:30 ಗಂಟೆಯ ಸಮಯಕ್ಕೆ ಚಿತ್ತೂರು  ಗ್ರಾಮದ ಚಿತ್ತೂರಿನ  ಮೂಕಾಂಬಿಕಾ ಕ್ಲಿನಿಕ್ ಬಳಿ  ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಹಾರ್ಮಾಣು ಕಡೆಯಿಂದ ಚಿತ್ತೂರು ಕಡೆಗೆ ಆರೋಪಿ ಆನಂದ ತನ್ನ ಬಾಬ್ತು KA 20 EH 3197  ನೇ   ಮೋಟಾರು ಸೈಕಲ್ ನ್ನು ವೇಗವಾಗಿ ನಿರ್ಲಕ್ಷತನದಿಂದ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಹಣೆಗೆ, ಕುತ್ತಿಗೆಯ ಹಿಂಬದಿ, ಬಲ ಹಾಗೂ ಎಡಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿ ಮತ್ತು ಬಾಯಿಯ ಒಂದು ಹಲ್ಲು ಉದಿರಿಹೋಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್ ಸಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022  ಕಲಂ: 279,  338   ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ದಿನಾಂಕ 20/05/2022 ರಂದು  ಬೆಳಿಗ್ಗೆ ಸುಮಾರು 7:30  ಗಂಟೆಗೆ  ಕುಂದಾಪುರ  ತಾಲೂಕಿನ, ಜಪ್ತಿ  ಗ್ರಾಮದ ಶಾಲೆ ರಸ್ತೆ, ಸುಬ್ಬನಕೆರೆಯ  ಸತೀಶ ಎಂಬವರ ಮನೆಯ ಬಳಿ, ಆಪಾದಿತ  ವಿಜಯ ಕುಮಾರ್‌ ಶೆಟ್ಟಿ  ಎಂಬವರು KA20-EQ-8299ನೇ  TVS JUPITER ಸ್ಕೂಟರ್‌ ನಲ್ಲಿ ಮಗಳಾದ  ಪಿರ್ಯಾದಿ ಕುಮಾರಿ ಆಶಿಕಾ ಎಂಬವಳನ್ನು ಹಿಂಬದಿಯಲ್ಲಿ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಜಪ್ತಿ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬರುತ್ತಿರುವಾಗ, ರಸ್ತೆಗೆ ಅಡ್ಡ ಬಂದ ನಾಯಿಯನ್ನು ನೋಡಿ ಆಪಾದಿತನು ಒಮ್ಮೇಲೆ  ಬ್ರೇಕ್‌ ಹಾಕಿರ ಪರಿಣಾಮ ಸ್ಕೂಟರ್‌ ವಾಲಿದ ಕಾರಣ ಪಿರ್ಯಾದಿದಾರರು ಸ್ಕೂಟರ್‌ ನಿಂದ  ಎಸೆದು ರಸ್ತೆಗೆ ಬಿದ್ದು  ಅವರ ತಲೆಗೆ ಒಳನೋವು, ಎಡಕೈ ಹಾಗೂ ಬಲಕಾಲಿನ ಮುಂಗಾಲು ಗಂಟಿಗೆ ತರಚಿದ ಗಾಯಗಳಾಗಿ ಕೊಟೇಶ್ವರ  ಎನ್. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2022 ಕಲಂ: 279, 337  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಿರ್ವ: ಪಿರ್ಯಾದಿ ಸಾಜು ಕುಮಾರ್ ಇವರ ಪರಿಚಯದ ಸಂತೋಷ್ ಎಸ್, ಪ್ರಾಯ 44 ವರ್ಷರವರು ಕಂಟ್ರಾಕ್ಟರ್ ಮನೋಜ್ ರವರೊಂದಿಗೆ ಬಾವಿಯ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:20/5/2022 ರಂದು ಕಾಪು ತಾಲೂಕಿನ ಬೆಳಪು  ಗ್ರಾಮದ ಕಳತ್ತೂರು ನಳಿನಿ ಎಸ್ ನಾಯ್ಕ ರವರ ಮನೆಯ ಬಾವಿಯ ರಿಂಗ್ ಹಾಕುವ  ಕೆಲಸವನ್ನು ಕೆಲಸಗಾರರಾದ ವಿನು,ಸುನಿಲ್ ಲಿಜು ಮತ್ತು ರಂಜಿತ್ ರವರೊಂದಿಗೆ ಮಾಡಿ ರಾತ್ರಿ ಬಾವಿ ಪಕ್ಕದಲ್ಲಿದ್ದ ಶೆಡ್ ನಲ್ಲಿದ್ದು, ರಾತ್ರಿ ಸಮಯ ಸುಮಾರು 10.00 ಗಂಟೆಗೆ  ಸಂತೋಷ್ ಎಸ್ ರವರಿಗೆ ಒಂದು  ಫೋನ್ ಕರೆ ಬಂದ ಮೇರೆಗೆ ಹೊರಗಡೆ ಹೋಗಿದ್ದು, ವಾಪಾಸು ಬಂದಿರುವುದಿಲ್ಲ. ಈ ದಿನ  ದಿನಾಂಕ:21/5/2022 ರಂದು ಬೆಳಿಗ್ಗೆ 06.00 ಗಂಟೆಗೆ ಸದ್ರಿ  ನಳಿನಿ ಎಸ್ ನಾಯ್ಕ ರವರ ಕಾಮಗಾರಿ ನಡೆಯುತ್ತಿರುವ ಬಾವಿಯಲ್ಲಿ ಸಂತೋಷ್ ಎಸ್ ರವರ ಮೃತದೇಹ ಇರುತ್ತದೆ. ಈ ಘಟನೆಗೆ ಬಾವಿಯ ಕೆಲಸದ ಕಾಂಟ್ರಕ್ಟರ್  ಮನೋಜ್ ಮತ್ತು   ಬಾವಿಯ ಮಾಲಕರಾದ ನಳಿನಿ ಎಸ್ ನಾಯ್ಕ್ ರವರು ಬಾವಿ ನಿರ್ಮಾಣದ ವೇಳೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಾಗಿ ತಡೆಗೋಡೆಯನ್ನು  ನಿರ್ಮಿಸದಿರುವುದೇ  ಸಂತೋಷ್ ಎಸ್  ರವರು ಬಾವಿಗೆ ಬಿದ್ದು, ಸಾಯಲು  ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022, ಕಲಂ 304(A) ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  

 ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾಧಿ ಸುನೀಲ್ ಇವರ ತಮ್ಮ  ಸುದೀರ್ (29) ರವರು ಪೈಟಿಂಗ್ ಕೆಲಸ  ಮಾಡಿಕೊಂಡಿದ್ದು , ವಿಪರೀತ  ಕುಡಿಯುವ ಚಟ ಹೊಂದಿದ್ದು ವಾರದಲ್ಲಿ  2-3 ದಿನ ಕೆಲಸಕ್ಕೆ ಹೋಗಿ ಉಳಿದ ದಿನ ಶರಾಬು ಕುಡಿದು ಮನೆಯಲ್ಲಿಯೆ ಇರುತ್ತಿದ್ದರು. ದಿನಾಂಕ: 19-05-2022 ರಂದು  ಸುಧೀರನು  ಕೆಲಸಕ್ಕೆ ಹೋಗದೆ  ಮನೆಯಲ್ಲಿಯೆ ಇದ್ದು ,ಮಧ್ಯಾಹ್ನ ಊಟ ಮಾಡಿ ಸುಮಾರು  2:00 ಗಂಟೆಗೆ ರೂಮಿನಲ್ಲಿ ಮಲಗಿದ್ದು, 3:30 ಗಂಟೆಗೆ ರೂಮಿಗೆ ಹೋಗಿ ನೋಡುವಾಗ  ಪಿರ್ಯಾದಿದಾರರ ತಮ್ಮ ಸುಧೀರನು ಸೀರೆಯಿಂದ ರೂಮಿನ ಪಕ್ಕಾಸಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು,ಪಿರ್ಯಾದಿದಾರರು ಮತ್ತು ಮನೆಯವರು ಸೇರಿ ಸೀರೆಯನ್ನು ಕಟ್ಟು ಮಾಡಿ ಸುಧೀರ ನನ್ನು   ಕೆಳಗೆ ಇಳಿಸಿ  ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ಅಲ್ಲಿ ಪರೀಕ್ಷಿಸಿದ ವೈದ್ಯರು  ಒಳರೋಗಿಯಾಗಿ ದಾಖಲಿಸಿದ್ದು  ,ಸುಧೀರನು ಚಿಕಿತ್ಸೆ ಫಲಕಾರಿಯಾಗದೆ ಈ ದಿನ ದಿನಾಂಕ:21-05-2022  ರಂದು ಬೆಳಗಿನ ಜಾವ 4:15 ಗಂಟೆಗೆ ಮೃತಪಟ್ಟಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿ ಪ್ರಭಾಕರ ಖಾರ್ವಿ ಇವರ ಅಣ್ಣ ಸುಂದರ ಪ್ರಾಯ: 42 ವರ್ಷ ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ : 20/05/2022 ರಂದು  ಸಂಜೆ 4:45 ಗಂಟೆಗೆ  ಪಡುವರಿ ಗ್ರಾಮದ ಸುಮನಾವತಿ ಹೊಳೆಯಲ್ಲಿ ಪಾತಿ ದೋಣಿಯಲ್ಲಿ  ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ  ಹೊಳೆಯ ನೀರಿಗೆ ಬಿದ್ದು , ನೀರಿನ ರಭಸಕ್ಕೆ  ಕೊಚ್ಚಿಕೊಂಡು ಹೋಗಿ  ಮೃತ ಶರೀರವು ಈ ದಿನ ದಿನಾಂಕ 21-05-2022 ರಂದು ಬೆಳಿಗ್ಗೆ 06:30 ಗಂಟೆಗೆ ಪಡುವರಿ ಗ್ರಾಮದ ಸೇನೇಶ್ವರ ದೇವಸ್ಥಾನದ ಬಳಿ ಅರಬ್ಬಿ ಸಮುದ್ರದ ತೀರದಲ್ಲಿ ಬಂಡೆಕಲ್ಲು ಗಳ ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ದೊರೆತಿರುತ್ತದೆ.  ಸುಂದರ ರವರು ಪಾತಿ ದೋಣಿಯಲ್ಲಿ  ಸುಮನಾವತಿ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ  ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಫಿರ್ಯಾದಿ ಹೇಮ ಇವರ ತಮ್ಮ ಮಹೇಶ (45) ಎಂಬಾತನು ಸುಮಾರು 25 ವರ್ಷಗಳ ಹಿಂದೆ ಊರುಬಿಟ್ಟು ನಿಟ್ಟೆ ಕಾಲೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದು 6 ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿರುತ್ತಾರೆ, ಪಿಯಾರ್ದಿದಾರರ ಗಂಡನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಿಯಾರ್ದಿದಾರರ ಗಂಡ 4 ತಿಂಗಳ ಹಿಂದೆ ತೀರಿಹೊಗಿದ್ದು ಇದರಿಂದ  ಪಿರ್ಯಾದಿದಾರರ ತಮ್ಮ ಮನನೊಂದಿದ್ದು ಬಳಿಕ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ,   ದಿನಾಂಕ 20/05/2022 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದುದಾರರ ತಮ್ಮ ವಾಸವಿದ್ದ ರೂಂ ನ ಮಾಲಕ ರವಿರಾಜ್ ರವರು ಫೋನ್ ಮಾಡಿ ನಿಮ್ಮ ತಮ್ಮ ಮಹೇಶನು ಉಳಿದುಕೊಂಡಿದ್ದ ರೂಮಿಗೆ ಬಾಗಿಲು ಹಾಕಿದ್ದು ತಾನು ಇತರರೊಂದಿಗೆ ಬಾಗಿಲನ್ನು ದೂಡಿ ನೋಡಿದಾಗ ಮಹೇಶರವರು ಮನೆಯ ಮಾಡಿನ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು ಬಳಿಕ ಪಿರ್ಯಾದಿದಾರರು ಇತರ ಸಂಬಂದಿಕರೊಂದಿಗೆ ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಮಹೇಶನು ಮಾಡಿನ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿರುತ್ತದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಗಂಡಸು ಕಾಣೆ

  • ಉಡುಪಿ: ಪಿರ್ಯಾದಿ ಪ್ರಮೀಳಾ ಇವರ ತಮ್ಮ ಪ್ರಶಾಂತ ದುರ್ಗ ನಾಯ್ಕ ಪ್ರಾಯ 38 ವರ್ಷ ರವರು ಸತೀಶ್‌ ಕುಮಾರ್‌ ಎಂಬವರ ಬಾಬ್ತು ಲಲಿತ ಇಂಜಿನಿಯರ್ಸ್‌ ನಲ್ಲಿ ಸೂಪರ್‌ವೈಸರ್‌ ಮತ್ತು ಎಲೆಕ್ಟ್ರಿಶಿಯನ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17/05/2022 ರಂದು ಉಡುಪಿಯ ಮೆಸ್ಕಾಂ ಕಛೇರಿ ಬಳಿ ಇರುವ ನ್ಯೂ ವ್ಯವಹಾರ ಕಾಂಪ್ಲೆಕ್ಸ್ ನಲ್ಲಿ ಸಂಜೆ 5:30 ಗಂಟೆ ತನಕ ಕೆಲಸ ನಿರ್ವಹಿಸಿದ್ದು, ತದ ನಂತರ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಇತ್ತೀಚಿನ ನವೀಕರಣ​ : 21-05-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080